Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025: ಹೊಸ ವರ್ಷ ಭವಿಷ್ಯ ಪ್ರಕಾರ ವೃತ್ತಿ ಬದುಕು ಹೇಗಿರಲಿದೆ?
2025ರ ವರ್ಷಫಲ ಪ್ರಕಾರ ಇಡೀ ವರ್ಷ ನಿಮ್ಮ ವೃತ್ತಿ ಬದುಕು ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರ ವರ್ಷ ಫಲ ನೋಡಿದಾಗ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ನೀವು ಹಣಕಾಸಿನ ಪ್ರಗತಿಯನ್ನು ಗಳಿಸುತ್ತೀರಿ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ವ್ಯಾಪರಸ್ಥರು ಈ ವರ್ಷ ಉತ್ತಮ ಧನ ಲಾಭ ಪಡೆಯಲು ಸಾಧ್ಯವಾಗುವುದು.

ವೃಷಭ ರಾಶಿ
ವೃಷಭ ರಾಶಿಯವರಿಗೆ 2025ರ ವರ್ಷವು ಆರ್ಥಿಕವಾಗಿ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಣದ ಸಮಸ್ಯೆ ಉಂಟಾಗುವುದಿಲ್ಲ. ಮನೆ ಕಟ್ಟುತ್ತಿದ್ದರೆ ಅಥವಾ ಗಾಡಿ ಖರೀದಿಗೆ ಮನಸ್ಸು ಮಾಡಿದ್ದರೆ ಈ ಅವಧಿಯಲ್ಲಿ ಸಾಧ್ಯವಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಹೊಸ ವರ್ಷದಲ್ಲಿ ಸ್ವಲ್ಪ ಮಿಶ್ರಫಲ. ಮೇ ತಿಂಗಳವರೆಗೆ ಸಮಸ್ಯೆಯಿಲ್ಲ, ನಂತರ ಕೆಲಸದಲ್ಲಿ ಕೆಲ ಬದಲಾವಣೆ ಕಂಡು ಬರಬಹುದು, ಇದರಿಂದ ಕೆಲಸದಲ್ಲಿ ಅತೃಪ್ತಿ ಉಂಟಾಗಬಹುದು. ಕೆಲಸ ಹುಡುಕುತ್ತಿರುವವರೆಗೆ ಈ ವರ್ಷವು ಅನುಕೂಲಕರವಾಗಿದೆ. ಇನ್ನು ಕೆಲಸ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ 2024ರ ವರ್ಷವು ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ನೀವು ಉತ್ತಮ ಅವಕಾಶ ಪಡೆಯುತ್ತೀರಿ. ಇನ್ನು ಈ ವರ್ಷ ನೀವು ಕೆಲಸದಲ್ಲಿ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಈ ವರ್ಷವು ಅನುಕೂಲಕರವಾಗಿದೆ. ವ್ಯಾಪಾರಿಗಳು ಕೂಡ ಈ ವರ್ಷ ಕೆಲಸದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ.
ಸಿಂಹ ರಾಶಿ
ಮೇಷ ರಾಶಿಯವರು ಬದುಕಿನಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು. ಹೊಸ ವರ್ಷದಲ್ಲಿ ಕೆಲಸದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಆದರೆ ನಿಮ್ಮ ಶ್ರಮಕ್ಕೆ ಮಾರ್ಚ್ ನಂತರ ಉತ್ತಮ ಫಲ ಸಿಗಲಿದೆ. ಗುರುವಿನ ಸ್ಥಾನ ನಿಮಗೆ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳು ಲಾಭ ಗಳಿಸಲು ಮಾರ್ಚ್ ತಿಂಗಳವರೆಗೆ ಕಾಯ ಬೇಕಾಗುತ್ತದೆ. ಇನ್ನು ಈ ವರ್ಷ ವ್ಯಾಪಾರದಲ್ಲಿ ಯಾವುದೇ ದೊಡ್ಡ ರಿಸ್ಕ್ ತೆಗೆದುಕೊಳ್ಳದಂತೆ ಜಾಗ್ತತೆವಹಿಸಿ.
ಕನ್ಯಾ ರಾಶಿ
ವೃತ್ತಿ ಜೀವನದಲ್ಲಿ 2025ನೇ ವರ್ಷವು ಮಿಶ್ರಫಲ ನೀಡಲಿದೆ. ವೃತ್ತಿ ಬದುಕಿನಲ್ಲಿ ಏರಳಿತವಿರಬಹುದು. ರಾಹುವಿನಿಂದ ಕೆಲ ಸಮಸ್ಯೆಗಳು ಬರಬಹುದು, ಆದರೆ ಶನಿಯ ಸ್ಥಾನ ನಿಮಗೆ ಅನುಕೂಲಕರವಾಗಿರಲಿದೆ. ಈ ವರ್ಷ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಿಗಳು ಇರುವ ವ್ಯವಹಾರ ಚೆನ್ನಾಗಿ ನಡೆಸಿಕೊಂಡು ಹೋಗಲು ಪ್ರಯತ್ನಿಸಬೇಕು, ಹೊಸದಾಗಿ ದೊಡ್ಡ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು.
ತುಲಾ ರಾಶಿ
ತುಲಾ ರಾಶಿಯವರಿಗೆ ವೃತ್ತಿ ಬದುಕು ಚೆನ್ನಾಗಿರಲಿದೆ, ನೀವು ಕೆಲಸ ಬದಲಾವಣೆಯ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಮಾರ್ಚ್ ನಂತರ ಅವಧಿ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ಕೆಲಸ ಹುಡುಕುತ್ತಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳು ಕೂಡ ವರ್ಷದ ಆರಂಭದಲ್ಲಿ ಜಾಗ್ರತೆವಹಿಸಬೇಕು. ಮಾರ್ಚ್ ನಂತರದ ಅವಧಿ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ಶನಿಯ ಸ್ಥಾನ 6ನೇ ಮನೆಯಲ್ಲಿರುವುದರಿಂದ ಕೆಲಸ ಜೀವನದಲ್ಲಿ ಅತೃಪ್ತಿ ಇರಲಿದೆ. ನೀವು ಕೆಲಸದಲ್ಲಿ ಏನಾದರು ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದರೆ ಮಾರ್ಚ್ ನಂತರದ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಮಿಶ್ರಫಲ. ನೀವು ಯಾವುದೇ ದೊಡ್ಡ ಹೂಡಿಕೆಯನ್ನು ವರ್ಷದ ಆರಂಭದಲ್ಲಿ ಮಾಡಲು ಹೋಗಬೇಡಿ, ಮಾಡುವುದಾದರೆ ಮೇ ನಂತರದ ಅವಧಿಯಲ್ಲಿ ಮಾಡಿ.
ಧನು ರಾಶಿ
ಹೊಸ ವರ್ಷದಲ್ಲಿ ನೀವು ಕೆಲಸದಲ್ಲಿ ಬದಲಾವಣೆ ಮಾಡುವುದಾದರೆ ಮೇ ತಿಂಗಳವರೆಗೆ ಕಾಯಿರಿ. ಒಂದು ಕೆಲಸ ಸಿಕ್ಕ ಬಳಿಕವಷ್ಟೇ ನೀವು ಇರುವ ಕೆಲಸವನ್ನು ಬಿಡಬೇಕು. ವೃತ್ತಿ ಬದುಕಿನಲ್ಲಿ ಬಡ್ತಿಯ ನಿರೀಕ್ಷೆಯಲ್ಲಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಮಾರ್ಚ್‌ವರೆಗೆ ವ್ಯಾಪಾರ ಸ್ವಲ್ಪ ನಿಧಾನವಾಗಿರಲಿದೆ ಆದರೆ ನಂತರ ಬೆಳವಣಿಗೆ ಕಂಡು ಬರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ 2025ರ ವರ್ಷದಲ್ಲಿ ಮಿಶ್ರಫಲ. ಮೇ ತಿಂಗಳಿನಲ್ಲಿ ಗುರು ಸಂಚಾರವಿದೆ, ಆದರೆ ರಾಹು 2ನೇ ಮನೆಯಲ್ಲಿದ್ದು ತೊಂದರೆಯನ್ನು ನೀಡುತ್ತಾನೆ, ನೀವು ಉದ್ಯೋಗಕ್ಕೆ ಸಂಬಂಧಿಸಿದ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳು ಮಾರ್ಚ್ ಬಳಿಕ ತಮ್ಮ ವ್ಯಾಪಾರದಲ್ಲಿ ಸುಧಾರಣೆ ಕಂಡು ಬರಲಿದೆ. ವರ್ಷದ ದ್ವಿತೀಯಾರ್ಧ ನಿಮಗೆ ಅನುಕೂಲಕರವಾಗಿದೆ, ಆದರೆ ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರ ವೃತ್ತಿ ಬದುಕು 2024ಕ್ಕಿಂತ ಹೆಚ್ಚು ಅನುಕೂಲಕರವಾಗಿದೆ. ನೀವು ಉದ್ಯೋಗ ಬದಲಾಯಿಸಲು ಪ್ರಯತ್ನಿಸಿದರೆ ನಿಮಗೆ ಅನುಕೂಲಕರವಾಗಿದೆ, ಗುರು ಸಂಚಾರದ ಬಳಿಕ ನೀವು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು ಕೂಡ ಈ ಅವಧಿಯ ಬಳಿಕ ಉತ್ತಮ ಫಲಿತಾಂಶ ಪಡೆಯುತ್ತಾರೆ.
ಮೀನ ರಾಶಿ
ವೃತ್ತಿ ಜೀವನದ ದೃಷ್ಟಿಯಿಂದ ಹೊಸ ವರ್ಷವು ನಿಮಗೆ ಮಿಶ್ರಫಲ. ಕೆಲಸದಲ್ಲಿ ಏರಳಿತವಿರಲಿದೆ, ಕೆಲ ಮಾಸ ಅನುಕೂಲಕರವಾಗಿದೆ, ಇನ್ನು ಕೆಲ ಮಾಸ ಸವಾಲುಗಳು ಬರಬಹುದು. ನೀವು ಹಣದ ಉಳಿತಾಯದ ಕಡೆಗೆ ಹೆಚ್ಚು ಗಮನಹರಿಸಬೇಕು. ವ್ಯಾಪಾರಸ್ಥರು ಹೆಚ್ಚು ಹಣ ಹೂಡಿಕೆ ಮಾಡಬೇಡಿ. ಶನಿಯು ನಿಮ್ಮ ಲಗ್ನ ಮನೆಯಲ್ಲಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











