2025ರಲ್ಲಿ ಯಾವ 7 ರಾಶಿಗಳು ಆರ್ಥಿಕವಾಗಿ ಮತ್ತಷ್ಟು ಬೆಳೆಯಲಿದ್ದೀರಿ?

ಇನ್ನೇನು ಕೆಲವೇ ದಿನಗಳಲ್ಲಿ ಬಾಕಿ ಹೊಸ ಕ್ಯಾಲೆಂಡರ್‌ನ ಹೊಸ ಪುಟಗಳು ಶುರುವಾಗಲು, ಹೊಸ ವರ್ಷದಲ್ಲಿ ನಮ್ಮಲ್ಲಿ ಹಲವಾರು ಯೋಜನೆಗಳಿರುತ್ತದೆ ಅಲ್ವಾ? ಆದರೆ ಎಲ್ಲದಕ್ಕೂ ಕಾಲವೂ ಕೂಡಿ ಬರಬೇಕು ಎಂಬುವುದನ್ನು ನಂಬುತ್ತೇವೆ ಅಲ್ವಾ? 2025ನೇ ಹೊಸ ವರ್ಷದ ಕಾಲ 12 ರಾಶಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಏನು ಭವಿಷ್ಯ ಹೇಳಿದೆ, ಗ್ರಹಗಳ ಸ್ಥಾನವು ಯಾವೆಲ್ಲಾ ರಾಶಿಗಳ ಆರ್ಥಿಕ ಸ್ಥಿತಿ ಬದಲಾಯಿಸಲಿದೆ ಎಂದು ನೋಡೋಣ ಬನ್ನಿ:

Financial Prediction

ಮೇಷ ರಾಶಿ
ಹೊಸ ವರ್ಷ ಮೇಷ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡುವುದಾದರೆ ಹೊಸ ವರ್ಷ ವೃತ್ತಿ ಹಾಗೂ ಆರ್ಥಿಕ ಬದುಕಿನ ದೃಷ್ಟಿಯಿಂದ ಈ ಸಮಯ ಅನುಕೂಲಕರವಾಗಿರಲಿದೆ. ರಾಹು, ಶನಿಯ ಸಂಚಾರವಿದ್ದರೂ ನಿಮ್ಮ ಬೆಳವಣಿಗೆಗೆ ಅಡ್ಡ ಆಗುವುದಿಲ್ಲ, ನಿಮ್ಮ ಆರ್ಥಿಕ ಬದುಕಿನಲ್ಲಿ ತುಂಬಾನೇ ಪ್ರಗತಿ ಕಾಣುತ್ತೀರಿ. ಸಂಬಂಧದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿರಲಿದೆ. ವೃತ್ತಿ ಬದುಕಿನಲ್ಲಿ ನೀವು ಪ್ರಗತಿ ಪಡೆಯುತ್ತೀರಿ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಉತ್ತಮ ಉದ್ಯೋಗವಕಾಶ ದೊರೆಯಲಿದೆ.

ವೃಷಭ ರಾಶಿ
ವೃಷಭ ರಾಶಿಯವರು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುತ್ತೀರಿ, ಶನಿಯು ನಿಮಗೆ ಪ್ರಗತಿಯನ್ನು ನೀಡಲಿದೆ, ಆರ್ಥಿಕವಾಗಿ ತುಂಬಾ ಪ್ರಯೋಜನ ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೂ 2025ನೇ ವರ್ಷ ಅನುಕೂಲಕರವಾಗಿರಲಿದೆ. ನೀವು ಯಾವುದಾದರೂ ಹೊಸ ಕಾರ್ಯಕ್ಕೆ ಕೈ ಹಾಕಿದರೆ ಅದರಲ್ಲಿಗ್ರಹಗಳ ಸ್ಥಾನ ಅನುಕೂಲಕರವಾಗಿರುವುದರಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೂಡ 2015ನೇ ವರ್ಷ ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿ ಬೆಳವಣಿಗೆಯಾಗುವುದರಿಂದ ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ಯಾವುದೇ ಕೆಲಸವನ್ನು ಯೋಜನೆ ಪ್ರಕಾರ ಮಾಡಿದರೆ ಈ ಅವಧಿ ಅನುಕೂಲಕರವಾಗಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಸಂಚಾರ ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದಿದೆ. ವೃತ್ತಿ,ಆರ್ಥಿ ಜೀವನ, ಸಂಬಂಧ, ಆರೋಗ್ಯ ಹೀಗೆ ಎಲ್ಲಾ ರೀತಿಯಲ್ಲಿಯೂ ಒಳ್ಳೆಯದಿದೆ. ರಾಹು ಮತ್ತು ಶನಿಯ ಸಂಚಾರ ನಿಮಗೆ ಅನುಕೂಲಕರವಾಗಿರಲಿದೆ, ವೃತ್ತಿ ಹಾಗೂ ಆರ್ಥಿಕ ಬದುಕಿನಲ್ಲಿ ನವು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಣದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು.

ಸಿಂಹ ರಾಶಿ
ವರ್ಷದ ಆರಂಭದ ತಿಂಗಳಿನಲ್ಲಿ ವೃತ್ತಿ ಹಾಗೂ ಆರ್ಥಿಕ ಬದುಕು, ಸಂಬಂಧದ ಮೇಲೆ ಪರಿಣಾಮ ಬರಬಹುದು, ಆದರೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಅಥವಾ ಹೊಸ ಉದ್ಯಮ ನಿಮಗೆ ಯಶಸ್ಸು ನೀಡಲಿದೆ, ಮೇ ನಂತರದ ತಿಂಗಳಿನಲ್ಲಿ ನೀವು ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆದರೆ ನೀವು ಆರೋಗ್ಯದ ಕಡೆಗೆ ಹೆಚ್ಚಿನಜ ಗಮನಹರಿಸಬೇ ಕು.

ಕನ್ಯಾ ರಾಶಿ
ವರ್ಷದ ಆರಂಭದ ತಿಂಗಳು ನಿಮಗೆ ಸವಾಲಿನಿಂದ ಕೂಡಿರಲಿದೆ, ವೃತ್ತಿ ಬದುಕಿನಲ್ಲಿಯೂ ಅನೇಕ ಸವಾಲುಗಳು ಬರುವುದು, ನೀವು ಹಣಕಾಸಿನ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು, ಯಾವುದೇ ಹಣದ ಹೂಡಿಕೆ ಮಾಡುವುದಾದರೂ ಆಲೋಚಿಸಿ ಮಾಡುವುದು ಒಳ್ಳೆಯದು. ಖರ್ಚಿಗೆ ಕಡಿವಾಣ ಹಾಕಿದರೆ ತುಂಬಾ ಒಳ್ಳೆಯದು.

ತುಲಾ ರಾಶಿ
ನಿಮ್ಮ ಆರ್ಥಿಕ ಸ್ಥಾನ ತುಂಬಾ ಚೆನ್ನಾಗಿರಲಿದೆ. ಗುರುವಿನ ಕೃಪೆಯಿಂದಾಗಿ ನೀವು ಹೂಡಿಕೆಯಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ, ಅರ್ಧ ವರ್ಷದ ಬಳಿಕ ವೃತ್ತಿ ಬದುಕಿನಲ್ಲಿ ಪ್ರಗತಿ ದೊರೆಯಲಿದೆ ಆದರೆ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ನಡುವೆ ಸಮತೋಲನ ಕಾಪಾಡಲು ಪ್ರಯತ್ನ ಮಾಡಬೇಕು. ಆಸ್ತಿ ಖರೀದಿ, ಗಾಡಿ ಖರೀದಿ ಈ ಬಗೆಯ ಆಸೆಯಿದ್ದರೆ ಹೊಸ ವರ್ಷದಲ್ಲಿ ನಿಮ್ಮಾಸೆ ನೆರವೇರುವ ಸಾಧ್ಯತೆ ಬಲವಾಗಿದೆ.

ವೃಶ್ಚಿಕ ರಾಶಿ
ವೃತ್ತಿ ಬದುಕಿನಲ್ಲಿ, ವ್ಯಾಪಾರಸ್ಥರಿಗೆ ಹೊಸ ಅವಕಾಶಗಳು ದೊರೆಯಲಿದೆ, ಅದರಲ್ಲಿಯೂ ಮೇ ನಂತರದ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ವರ್ಷದ ಆರಂಭದಲ್ಲಿ ಕೆಲ ಸವಾಲುಗಳು ಬಂದರೂ ನಂತರದ ಸಮಯ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಧನು ರಾಶಿ
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ನೀವು ಪ್ರಗತಿ ಕಾಣುವುದರಿಂದ ಆರ್ಥಿಕ ಜೀವನ ತುಂಬಾ ಚೆನ್ನಾಗಿರಲಿದೆ. ನೀವೇನಾದರೂ ಕೆಲಸದ ಬದಲಾವಣೆ ಅಥವಾ ವ್ಯಾಪಾರದಲ್ಲಿ ಬದಲಾವಣೆ ಬಗ್ಗೆ ಆಲೋಚಿಸುತ್ತಿದ್ದರೆ ಈ ಬದಲಾವಣೆ ಆರ್ಥಿಕ ಪ್ರಗತಿಗೆ ತುಂಬಾನೇ ಅನುಕೂಲಕರವಾಗಿದೆ.

ಮಕರ ರಾಶಿ
ಮಕರ ರಾಶಿಯವರು ಬೆಳವಣಿಗೆ ಕಾಣುವಿರಿ, ಬದಲಾವಣೆ ಕಾಣುವಿರಿ, ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ಬರಲಿದೆ, ಆದರೆ ಈ ವರ್ಷ ನೀವು ಹೆಚ್ಚಿನ ಶ್ರಮ ಹಾಕಬೇಕು ಹಾಗೂ ತಾಳ್ಮೆಯಿಂದ ಕಾಯಬೇಕು, ಆವಾಗ ವರ್ಷದ ಕೊನೆಯಲ್ಲಿ ನೀವು ಊಹಿಸಿದಂತೆಯೇ ಅದ್ಭುತ ಪ್ರಯೋಜನ ಪಡೆಯಲು ಸಾಧ್ಯವಾಗುವುದು.

ಕುಂಭ ರಾಶಿ
ವೃತ್ತಿ ಬದುಕಿನಲ್ಲಿ ನೀವು ಹೆಚ್ಚಿನ ಶ್ರಮ ಹಾಕಬೇಕು, ಆದರೆ ಚಿಂತಿಸಬೇಡಿ, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದೇಶದಲ್ಲಿ ಓದಲು
ಬಯಸುವವರಿಗೆ ಬರುವ ಹೊಸ ವರ್ಷ ಅನುಕೂಲಕರವಾಗಿರಲಿದೆ. ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ ಜಯ ನಿಮ್ಮದಾಗುವುದು.

ಮೀನ ರಾಶಿ
ನೀವು ನಿಮ್ಮ ನಿರ್ಧಾರಗಳ ಬಗ್ಗೆ ಆಲೋಚನೆ ಮಾಡುವುದು ಒಳ್ಳೆಯದು, ಪ್ರಾರಂಭದಲ್ಲಿ ಹಣಕಾಸಿನ ಸವಾಲುಗಳು ಬರಬಹುದು, ವೃತ್ತಿ ಬದುಕಿನಲ್ಲಿಯೂ ಅನೇಕ ಸವಾಲುಗಳು ಬರಬಹುದು, ಹೊಸ ವರ್ಷ ಮಿಶ್ರಫಲ, ಶನಿಯ ವಕ್ರದೃಷ್ಟಿ ಸವಾಲುಗಳನ್ನು ಹೆಚ್ಚಿಸಲಿದೆ, ನೀವು ವೃತ್ತಿ ಬದುಕಿನ ಸಮಸ್ಯೆಯನ್ನು ತಾಳ್ಮೆಯಿಂದ ನಿಭಾಯಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

New Year 2025 Financial Prediction: Here Is Finance Prediction For 12 Zodiac Signs In Kannada

New Year 2025 Financial Prediction: Here how new year effects on your financial life read on....
Story first published: Wednesday, November 20, 2024, 14:05 [IST]
X
Desktop Bottom Promotion