Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕ್ಷತ್ರಫಲ 2024: ಹೊಸ ವರ್ಷ 27 ನಕ್ಷತ್ರಗಳಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಹೊಸ ವರ್ಷ 27 ನಕ್ಷತ್ರದವರಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಅಶ್ವಿನಿ ನಕ್ಷತ್ರ
2024 ನಿಮಗೆ ತುಂಬಾ ಒಳ್ಳೆಯದು, ಅದರಲ್ಲೂ 20 ಫೆಬ್ರವರಿ 2024 ರಿಂದ ಮಾರ್ಚ್ 06, 2024 ರವರೆಗೆ ತುಂಬಾ ಒಳ್ಳೆಯದು. ನಂತರ ಮೇ ಬಳಿಕ ಅನುಕೂಲಕ ಫಲಿತಾಂಶ ಪಡೆಯುತ್ತೀರಿ.
ಭರಣಿ ನಕ್ಷತ್ರ
ಆರ್ಥಿಕ ಜೀವನ, ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಅವಾಹಿತರಿಗೆ ಮದುವೆಯೋಗ ಕೂಡಿ ಬರಲಿದೆ.
ಕೃತಿಕಾ ನಕ್ಷತ್ರ
ಮಕ್ಕಳ ಅಪೇಕ್ಷಿತ ದಂಪತಿಗೆ ಮಕ್ಕಳ ಭಾಗ್ಯವಿದೆ. ಈ ವರ್ಷ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ.

ರೋಹಿಣಿ ನಕ್ಷತ್ರ
ಮೇ ನಂತರದ ಸಮಯ ತುಂಬಾ ಒಳ್ಳೆಯದಿದೆ. ಹಣ ಗಳಿಸಲು ಸಾಧ್ಯವಾಗುವುದು. ಈ ವರ್ಷ ಅದೃಷ್ಟ ಬೆಂಬಲ ನಿಮಗಿದೆ.
ಮೃಗಶಿರ ನಕ್ಷತ್ರ
ಈ ವರ್ಷ ಹೊಸ ಪ್ರಯತ್ನದಲ್ಲಿ ಯಶಸ್ಸು ಗಳಿಸುತ್ತೀರಿ. ಆದರೆ ಆರೋಗ್ಯದ ಕಡೆಗೆ ತುಂಬಾ ಗಮನಹರಿಸಿ.
ಆರ್ದ್ರಾ ನಕ್ಷತ್ರ
ಆರ್ಥಿಕ ದೃಷ್ಟಿಯಿಂದ ಈ ತಿಂಗಳು ಉತ್ತಮವಾಗಿದೆ. ಪ್ರೇಮಿಗಳಿಗೆ ಅನುಕೂಲಕರವಾಗಿದೆ, ನೀವು ಪ್ರೀತಿಸುತ್ತಿರುವ ವ್ಯಕ್ತಿ ಜೊತೆ ಮದುವೆಯಾಗುವಿರಿ.
ಪುರ್ನವಸು
ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ, ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ವೃತ್ತಿ ಜೀವನದಲ್ಲಿಯೂ ಅನುಕೂಲಕರ ಫಲಿತಾಂಶ ಕಾಣುತ್ತೀರಿ.
ಪುಷ್ಯ ನಕ್ಷತ್ರ
ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುತ್ತೀರಿ, ವೃತ್ತಿ ಜೀವನದ ಬಗ್ಗೆ ತೃಪ್ತಿ ಇರಲಿದೆ. ವೃತ್ತಿ ಬದುಕಿನಲ್ಲಿ ನೀವು ಬಯಸಿದಂತೆ ಎಲ್ಲವೂ ನಡೆಯಲಿದೆ.
ಅಶ್ಲೇಷ ನಕ್ಷತ್ರ
ಸ್ವಂತ ವ್ಯವಹಾರ ಮಾಡುತ್ತಿರುವವರು ಒಳ್ಳೆಯ ಲಾಭ ಗಳಿಸಲು ಸಾಧ್ಯವಾಗುವುದು. ವೈಯಕ್ತಿಕ ಜೀವನ ಚೆನ್ನಾಗಿರಲಿದೆ, ಹೂಡಿಕೆಯಲ್ಲಿಯೂ ಉತ್ತಮ ಲಾಭ ಗಳಿಸುವಿರಿ.
ಮಘಾ ನಕ್ಷತ್ರ
ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಜಾಗ್ರತೆವಹಿಸಬೇಕು, ಸಂಬಂಧದಲ್ಲಿ ಭಿನ್ನಾಭಿಪ್ರಾಯವಿರಲಿದೆ.
ಪೂರ್ವ ಫಲ್ಗುಣಿ ನಕ್ಷತ್ರ
ವೈಯಕ್ತಿಕ ಜೀವನ ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವೃತ್ತಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ದೊರೆಯಲಿದೆ.
ಉತ್ತರ ಫಲ್ಗುಣಿ ನಕ್ಷತ್ರ
2024ರ ಪ್ರಾರಂಭದಲ್ಲಿ ಕೆಲ ಸಮಸ್ಯೆಗಳು ಇರಬಹುದು, ನಂತರ ಎಲ್ಲವೂ ಸರಿಯಾಗಲಿದೆ, ಖರ್ಚುಗಳು ಕಡಿಮೆ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಹಸ್ತ ನಕ್ಷತ್ರ
ಈ ವರ್ಷ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಕೆಲವು ಸಮಸ್ಯೆಗಳನ್ನು ಎದುರಿಸಬಹುದು, ಆದರೆ ಗುರುವಿನ ಸ್ಥಾನವು ಅನುಕೂಲಕರವಾಗಿರುವುದರಿಂದ ಎಲ್ಲಾ ಸಮಸ್ಯೆ ಎದುರಿಸಲು ಸಾಧ್ಯವಾಗುವುದು.
ಸ್ವಾತಿ ನಕ್ಷತ್ರ
ಸ್ವಾತಿ ನಕ್ಷತ್ರದವರಿಗೆ ಏಪ್ರಿಲ್‌ವರೆಗೆ ಸ್ವಲ್ಪ ಕಷ್ಟ, ನಂತರ ವೃತ್ತಿ ಜೀವನದಲ್ಲಿ ಸುಧಾರಣೆ ಕಾಣಬಹುದು. ಮೇ ನಂತರ ಹಣದ ವಿಚಾರದಲ್ಲಿ ಉತ್ತವಾಗಿದೆ.
ಚಿತ್ರ ನಕ್ಷತ್ರ
ವೃತ್ತಿ ಜೀವನದಲ್ಲಿ ಬೆಳೆಯುತ್ತೀರಿ. ಪೂರ್ವಜರ ಆಸ್ತಿಯಿಂದ ಅನಿರೀಕ್ಷಿತ ಲಾಭ ಗಳಿಸುತ್ತೀರಿ.
ಅನುರಾಧ ನಕ್ಷತ್ರ
ಹಣದ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸದಿದ್ದರೆ ಕಷ್ಟ, ಅದೃಷ್ಟ ನಂಬಿ ಕೂರಬೇಡಿ.
ವಿಶಾಖ ನಕ್ಷತ್ರ
ಕೆಲಸದಲ್ಲಿ ಯಶಸ್ಸು ಪಡೆಯಲು ತುಂಬಾ ಶ್ರಮ ಪಡಬೇಕು. ಈ ವರ್ಷದಲ್ಲಿ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಜ್ಯೇಷ್ಠ ನಕ್ಷತ್ರ
ಅಕ್ಟೋಬರ್ ನಂತರದ ಸಮಯ ನಿಮಗೆ ತುಂಬಾ ಒಳ್ಳೆಯದಿದೆ, ಸ್ವಂತ ವ್ಯವಹಾರ ಮಾಡುವವರು ಒಳ್ಳೆಯ ಲಾಭ ಗಳಿಸುತ್ತೀರಿ.
ಮೂಲ ನಕ್ಷತ್ರ
ಈ ವರ್ಷ ಯಶಸ್ಸು ಕಾಣುವಿರಿ, ನಿಮ್ಮ ಸಂಪತ್ತು ಹೆಚ್ಚಾಗಲಿದೆ, ಗುರು ಸಂಚಾರದ ಬಳಿಕ ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುವಿರಿ.
ಪೂರ್ವ ಆಷಾಢ ನಕ್ಷತ್ರ
ಈ ವರ್ಷ ಈ ನಕ್ಷತ್ರದ ಮಹಿಳೆಯರಿಗೆ ತುಂಬಾ ಒಳ್ಳೆಯದು. ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ವೃತ್ತಿ ಜೀವನದಲ್ಲಿ ತೃಪ್ತಿ ಇರಲಿದೆ.
ಉತ್ತರ ಆಷಾಢ ನಕ್ಷತ್ರ
ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ತುಂಬಾ ಒಳ್ಳೆಯದಿದೆ, ವೃತ್ತಿಪರ ಜೀವನ ಅನುಕೂಲಕರವಾಗಿದೆ.
ಶ್ರವಣ ನಕ್ಷತ್ರ
ಮೇವರೆಗೆ ಖರ್ಚು ಅಧಿಕವಿರಲಿದೆ, ಆರ್ಥಿಕ ವಿಷಯದಲ್ಲಿ ತುಂಬಾ ಜಾಗ್ರತೆವಹಿಸಿ, ಖರ್ಚು ಅಧಿಕ ಮಾಡಲು ಹೋಗಬೇಡಿ.
ಧನಿಷ್ಠ ನಕ್ಷತ್ರ
ಜೂನ್-ಜುಲೈ ನಿಮಗೆ ಅದೃಷ್ಟದ ತಿಂಗಳಾಗಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಸಿಗುವ ಸಾಧ್ಯತೆ ಇದೆ.
ಶತಾಭಿಷ ನಕ್ಷತ್ರ
ಹೊಸ ವರ್ಷ ಆರ್ಥಿಕ ಆರ್ಥಿಕವಾಗಿ ಒಳ್ಳೆಯದಿದೆ. ಏಪ್ರಿಲ್‌ವರೆಗೆ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸಿ.
ಪೂರ್ವ ಭಾದ್ರಪದ ನಕ್ಷತ್ರ
ಈ ವರ್ಷ ನೀವು ಸಾಲವನ್ನು ಮಾಡದಿರುವುದು ಒಳ್ಳೆಯದು, ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳನ್ನು ತಾಳ್ಮೆಯಿಂದ ಎದುರಿಸಿ, ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ.
ಉತ್ತರ ಭಾದ್ರಪದ ನಕ್ಷತ್ರ
ಈ ವರ್ಷ ಸ್ವಲ್ಪ ಸವಾಲುಗಳು ಎದುರಾಗಲಿದೆ, ಆದರೆ ನಿರಾಸೆ ಪಡಬೇಕಾಗಿಲ್ಲ, ಜೂನ್ 2024ರ ನಂತರ ಯಶಸ್ಸು ಸಾಧಿಸಲು ಸಾಧ್ಯವಾಗುವುದು. ವ್ಯಾಪಾರಿಗಳು ಲಾಬ ಗಳಿಸುವಿರಿ.
ರೇವತಿ ನಕ್ಷತ್ರ
ಗುರು ನಿಮಗೆ ಧನಾತ್ಮಕ ಫಲಿತಾಂಶ ನೀಡಲಿದ್ದಾನೆ.ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿ ಯಶಸ್ಸು ಕಾಣುವಿರಿ. ವೈಯಕ್ತಿಕ, ವೃತ್ತಿ ಜೀವನ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications