Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ 3 ಶುಭಯೋಗವಿರುವುದರಿಂದ ನವರಾತ್ರಿ 3ನೇ ದಿನ ತುಂಬಾನೇ ಅದೃಷ್ಟದ ದಿನ
ನವರಾತ್ರಿಯ 9 ದಿನಗಳೂ ತುಂಬಾನೇ ಶುಭವಾಗಿರುವುದರಿಂದ ಯಾವುದೇ ಶುಭಕಾರ್ಯಗಳನ್ನು ಈ ದಿನದಲ್ಲಿ ಮಾಡಬಹುದು. ಹೊಸ ಆಸ್ತಿ ಖರೀದಿಸಬೇಕು, ಮನೆ ಗೃಹಪ್ರವೇಶ, ಹೊಸ ವಾಹನ ಖರೀದಿಸಬೇಕು ಎಂದು ಬಯಸುವವರಿಗೆ ಈ ಸಮಯ ತುಂಬಾನೇ ಒಳ್ಳೆಯದಿದೆ. ಅದರಲ್ಲೂ ಈ ಸಮಯದಲ್ಲಿ ನವರಾತ್ರಿಯ ಸಮಯದಲ್ಲಿ ಅನೇಕ ಶುಭ ಯೋಗಗಳು ಇವೆ, ಇದರಿಂದ ಈ ದಿನಗಳೂ ಇನ್ನೂ ವಿಶೇಷವಾಗಿದೆ. ನೀವು ವಾಹನ, ಮನೆ ಖರೀದಿಸಲು ಬಯಸಿದರೆ ಈ ಸಮಯದಲ್ಲಿ ಖರೀದಿಸಿದರೆ ನಿಮ್ಮ ಸಂಪತ್ತು ಮತ್ತಷ್ಟು ಹೆಚ್ಚಾಗುವುದು.

ಪಂಚಾಂಗದ ಪ್ರಕಾರ, ಶಾರದೀಯ ನವರಾತ್ರಿಯ ತೃತೀಯಾ ತಿಥಿಯು ಅಕ್ಟೋಬರ್ 18 ರಂದು ತಡರಾತ್ರಿ 01:26 ರವರೆಗೆ ಇರುತ್ತದೆ. ಇದಾದ ನಂತರ ಚತುರ್ಥಿ ತಿಥಿ ಆರಂಭವಾಗಲಿದೆ. ಅಂದಹಾಗೆ, ಅಕ್ಟೋಬರ್ 17 ರಂದು ದಿನವಿಡೀ ತೃತೀಯಾ ತಿಥಿ ಇದೆ. ಈ ಕೆಳಗಿನ ಶುಭ ಯೋಗಗಳು ಮನೆ, ಆಸ್ತಿ, ವಾಹನ ಈ ಬಗೆಯ ಸಂಪತ್ತು ಖರೀದಿಸಲು ತುಂಬಾನೇ ಒಳ್ಳೆಯದಿದೆ ನೋಡಿ:
ಪ್ರೀತಿ ಯೋಗ
ಶಾರದೀಯ ನವರಾತ್ರಿಯ ಮೂರನೇ ದಿನದಂದು ಅಪರೂಪದ ಪ್ರೀತಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಬೆಳಗ್ಗೆ 09.22 ರವರೆಗೆ ಇರುತ್ತದೆ. ಈ ಯೋಗದಲ್ಲಿ ದುರ್ಗೆಯನ್ನು ಆರಾಧಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಆದಾಯ ಹೆಚ್ಚಾಗುತ್ತದೆ.
ಆಯುಷ್ಮಾನ್ ಯೋಗ
ಶಾರದೀಯ ನವರಾತ್ರಿಯ ಮೂರನೇ ದಿನದಂದು ಅಪರೂಪದ ಆಯುಷ್ಮಾನ್ ಯೋಗ ರೂಪುಗೊಳ್ಳುತ್ತಿದೆ. ಈ ಯೋಗ ಅಕ್ಟೋಬರ್ 18 ರಂದು ಬೆಳಿಗ್ಗೆ 08:19 ರವರೆಗೆ ಇರುತ್ತದೆ. ಈ ಯೋಗವೂ ಶುಭಕಾರ್ಯಕ್ಕೆ ತುಂಬಾನೇ ಯೋಗ್ಯವಾಗಿದೆ. ಆಯುಷ್ಮಾನ್ ಯೋಗದಲ್ಲಿ ದುರ್ಗಾದೇವಿಯನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ರವಿ ಯೋಗ
ನವರಾತ್ರಿಯ ಮೂರನೇ ದಿನ ರವಿಯೋಗವೂ ರೂಪುಗೊಳ್ಳುತ್ತಿದೆ. ಈ ಯೋಗವು ಸಂಜೆ 08:31 ರಿಂದ ಮರುದಿನ ಬೆಳಿಗ್ಗೆ 06:23 ರವರೆಗೆ ಇರುತ್ತದೆ. ಈ ಯೋಗದಲ್ಲಿ ತಾಯಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದು.
ನೀವು ಈ ಮೂರು ಯೋಗದಲ್ಲಿ ವಸ್ತುಗಳನ್ನು ಖರೀದಿಸಿದರೆ ನಿಮ್ಮ ಸಂಪತ್ತು ಹೆಚ್ಚಾಗುವುದು, ಅಲ್ಲದೆ ನೀವು ಖರೀದಿಸಿದ ಹೊಸ ಗಾಡಿಗೆ ಪೂಜೆ ಸಲ್ಲಿಸಲು ಕೂಡ ಈ ಸಮಯವು ತುಂಬಾ ಒಳ್ಳೆಯದಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
