Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Navratri 2025: ಶಕ್ತಿ ದೇವತೆ ಆಶೀರ್ವಾದ ಪಡೆಯುವ ರಾಶಿಗಳಿವು..! ಅದೃಷ್ಟವೇ ಮನೆ ಬಾಗಿಲಿಗೆ
ನವರಾತ್ರಿ ಹಿಂದೂಗಳಿಗೆ ಬಹಳ ಪ್ರಮುಖ ಹಬ್ಬ ಆಗಿರಲಿದೆ. ಸೆಪ್ಟೆಂಬರ್ 22ರಿಂದ ನವರಾತ್ರಿ ಆರಂಭವಾಗುತ್ತಿದ್ದು, ದುರ್ಗೆಯ 9 ಅವತಾರಗಳನ್ನು ಪೂಜಿಸುವುದು ಈ ನವರಾತ್ರಿಯ ವಿಶೇಷಗಳಲ್ಲಿ ಒಂದಾಗಿರಲಿದೆ. ಇನ್ನು ಈ ಹಬ್ಬದಲ್ಲಿಯೇ ಹಲವು ಗ್ರಹಗಳ ಬದಲಾವಣೆಗಳ ನೋಡಬಹುದಾಗಿದೆ. ದುರ್ಗೆಯ ಪೂಜೆಯೊಂದಿಗೆ ಗ್ರಹಗಳ ಬದಲಾವಣೆಯ ಲಾಭ ಪಡೆಯಲು ಇದು ಸೂಕ್ತ ಸಮಯ ಆಗಿರಲಿದೆ.
ದುರ್ಗಾ ದೇವಿಯ ನವದುರ್ಗಾ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಭಕ್ತರು ಉಪವಾಸ ಮಾಡುವುದು ಹೇಗೆ ಹಲವು ರೀತಿಯಾಗಿ ದೇವಿಯ ಆಶೀರ್ವಾದ ಪಡೆಯಲು ಮುಂದಾಗುತ್ತಾರೆ. ಆದ್ರೆ ಗ್ರಹಗತಿಗಳ ಆಧಾರದ ಮೇಲೆ ಈ ನವರಾತ್ರಿಯ ಸಮಯದಲ್ಲಿ ದೇವಿ ಕೆಲವ ರಾಶಿ ಜನರಿಗೆ ವಿಶೇಷ ಆಶೀರ್ವಾದ ನೀಡುವುದು ನೋಡಬಹುದು.

ನವರಾತ್ರಿಯನ್ನು ಶಕ್ತಿಯ ಆರಾಧನೆಯ ಶ್ರೇಷ್ಠ ಹಬ್ಬವೆಂದು ಪರಿಗಣಿಸಲಾಗುತ್ತದೆ, ಅಲ್ಲಿ ಭಕ್ತರು ತಮ್ಮ ಆಸೆಗಳನ್ನು ಈಡೇರಿಸಲು ಮತ್ತು ಅವರ ಕುಟುಂಬಗಳ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಜ್ಯೋತಿಷಿಗಳ ಪ್ರಕಾರ ನವರಾತ್ರಿಯ ಪ್ರತಿ ದಿನವೂ ಎಲ್ಲಾ ಜನರಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೀಗಾಗಿ ಬಹುತೇಕರು ಈ ಸಮಯದಲ್ಲಿ ಹೊಸ ಜೀವನ ಆರಂಭಿಸುತ್ತಾರೆ. ಹೊಸ ವಸ್ತು, ಹೊಸ ಕೆಲಸಗಳ ಮಾಡಲು ಮುಂದಾಗುತ್ತಾರೆ.
ನವರಾತ್ರಿಯ ಸಮಯದಲ್ಲಿ ಬ್ರಹ್ಮ ಯೋಗ, ಶುಕ್ಲ ಯೋಗ ಮತ್ತು ಮಹಾಲಕ್ಷ್ಮಿ ರಾಜ ಯೋಗ ಸೇರಿದಂತೆ ಹಲವಾರು ಶುಭ ಸಂಯೋಗಗಳು ಸಂಭವಿಸಲಿವೆ. ಇದು ದೇವಿಯ ಕೃಪೆ ಉಂಟು ಮಾಡಲಿದೆ. ಈ ನವರಾತ್ರಿಯಲ್ಲಿ ದೇವಿಯ ಆಶೀರ್ವಾದ ಪಡೆಯಲಿರುವ ಕೆಲವು ರಾಶಿಗಳು ಯಾವುದು ಅನ್ನೋದನನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ನವರಾತ್ರಿ ಬಹಳ ಶುಭವಾಗಿರುತ್ತದೆ. ನಿಮ್ಮ ಹಲವು ರೀತಿಯ ಒತ್ತಡಗಳನ್ನು ನಿವಾರಿಸಲಿದೆ. ಹಾಗೆ ಹೊಸದನ್ನು ಆರಂಭಿಸಲು ನಿಮಗೆ ಉತ್ತಮ ದಿನಗಳಿವೆ. ಹೊಸ ವೃತ್ತಿ, ವಾಹನ, ಆಸ್ತಿ, ವ್ಯವಹಾರಕ್ಕೆ ಈ ಸಮಯ ಸೂಕ್ತವಾಗಿರಲಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗಲಿವೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಬೇಗನೆ ಪೂರ್ಣಗೊಳ್ಳುತ್ತವೆ. ಹೊಸ ವೃತ್ತಿ ಅವಕಾಶಗಳು ಉದ್ಭವಿಸಬಹುದು ಮತ್ತು ವ್ಯವಹಾರ ವಿಸ್ತರಣೆ ಸಾಧ್ಯವಾಗುತ್ತದೆ. ದುರ್ಗಾ ದೇವಿಯ ಆಶೀರ್ವಾದದಿಂದ, ಕುಟುಂಬದಲ್ಲಿ ಹೆಚ್ಚಿನ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗುವುದು ನೋಡಬಹುದು.
ಸಿಂಹ ರಾಶಿ
ನವರಾತ್ರಿಯು ಸಿಂಹ ರಾಶಿಯವರಿಗೆ ಸುವರ್ಣ ಅವಧಿಯನ್ನು ಪ್ರಾರಂಭಿಸುತ್ತದೆ. ಈ ಸಮಯವು ಅಸಾಧಾರಣ ಅದೃಷ್ಟವನ್ನು ತರುತ್ತದೆ. ಭೂಮಿ, ವಾಹನ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭ ಇರಲಿದೆ. ಹೊಸ ವಾಹನ ಖರೀದಿಗೆ ಇದು ಶುಭಕಾಲ. ಕೌಟುಂಬಿಕ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ವೈವಾಹಿಕ ಜೀವನ ಸಂತಸದಿಂದ ಕೂಡಿರಲಿದೆ. ನಿಮ್ಮ ಹಲವು ಇಷ್ಟಗಳು ಈಡೇರಿಸಿಕೊಳ್ಳಬಹುದು. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು. ಮಾನಸಿಕ ನೆಮ್ಮದಿ ಪಡೆಯುವ ದಿನಗಳಿವೆ.
ಧನು ರಾಶಿ
ಧನು ರಾಶಿಯವರಿಗೆ ನವರಾತ್ರಿ ಆರ್ಥಿಕ ಪ್ರಗತಿಯ ಸಮಯ. ವ್ಯಾಪಾರಿಗಳು, ನಿತ್ಯ ಹಣ ಪಡೆಯುವ ಕಾರ್ಮಿಕರಿಗೆ ಅತ್ಯಂತ ಶುಭಕಾಲ. ನಿಮ್ಮ ಆದಾಯದಲ್ಲಿ ಹೆಚ್ಚಳ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಬಗಬೇಕಿದ್ದ ಹಣ ಕೈ ಸೇರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಬಗೆಹರಿಯಲಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications









