Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಮಂಗಳನ ಸಂಚಾರದಿಂದ ನವಪಂಚಮ ಯೋಗ: ಈ ರಾಶಿಯವರ ಜೀವನ ಬದಲು, ಹುಡುಕಿ ಬರಲಿದೆ ಅದೃಷ್ಟ
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿ ಬದಲಾಯಿಸುತ್ತದೆ, ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಇಂತಹ ಗ್ರಹ ಚಲನೆಯಿಂದಾಗಿ ಹಾಗೆ ಸಂಯೋಗವು ಶುಭ ಹಾಗೂ ಅಶುಭ ಯೋಗಕ್ಕೆ ಕಾರಣವಾಗುತ್ತವೆ. ಗ್ರಹಗಳಿಗೆ ಅಧಿಪತಿ ಎಂದು ಪರಿಗಣಿಸಲಾಗುವ ಮಂಗಳ ಸಹ ಪ್ರತಿ 45 ದಿನಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ.
ಮಂಗಳ ಪ್ರಸ್ತುತ ಶನಿಯ ರಾಶಿಯಾದ ಮಕರ ರಾಶಿಯಲ್ಲಿದೆ, ಅಲ್ಲಿ ಅದು ಸೂರ್ಯ, ಬುಧ ಮತ್ತು ಶುಕ್ರ ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಹಾಗೆ ಇಲ್ಲಿ ನವಪಂಚಮ ರಾಜಯೋಗಕ್ಕೂ ಕಾರಣವಾಗುತ್ತಿದೆ. ಗ್ರಹಗಳು ಪರಸ್ಪರ 9ನೇ ಮತ್ತು ಐದನೇ ಮನೆಗಳಲ್ಲಿ ನೆಲೆಗೊಂಡಾಗ ನವಪಂಚಮ ರಾಜಯೋಗ ರೂಪುಗೊಳ್ಳುತ್ತದೆ.

ಜನವರಿ 15 ರಂದು ಶುಕ್ರ ಮತ್ತು ನೆಪ್ಚೂನ್ ನವಪಂಚಮ ಯೋಗವನ್ನು ಸೃಷ್ಟಿಸಿದವು, ಹಾಗೆ ಜನವರಿ 19 ರಂದು ಬುಧ ಮತ್ತು ಯುರೇನಸ್ ಸೇರಿ ಈ ಯೋಗವನ್ನು ರೂಪಿಸುತ್ತವೆ, ಆದರೆ ಜನವರಿ 20 ರಂದು ಮಂಗಳ ಮತ್ತು ಯುರೇನಸ್ ಈ ಶುಭ ಯೋಗವನ್ನು ರೂಪಿಸುತ್ತವೆ. ಈ ಯೋಗದಿಂದ ಯಾವ ರಾಶಿ ಜನರಿಗೆ ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಜನವರಿ 20 ರಂದು ಬೆಳಗ್ಗೆ 11:23 ಕ್ಕೆ, ಯುರೇನಸ್ ಮತ್ತು ಮಂಗಳ ಪರಸ್ಪರ 120 ಡಿಗ್ರಿಗಳಲ್ಲಿದ್ದು, ನವ ಪಂಚಮ ರಾಜ ಯೋಗವನ್ನು ಸೃಷ್ಟಿಸುತ್ತದೆ. ಪರಿಣಾಮವಾಗಿ ಈ ರಾಶಿ ಜನರಲ್ಲಿ ಹಲವು ರೀತಿ ಪ್ರಯೋಜನಗಳ ನೋಡಬಹುದು. ಹಾಗಾದ್ರೆ ಯಾರಿಗೆ ಲಾಭಕರ ನೋಡಿ.
ಕನ್ಯಾ ರಾಶಿ
ಮಂಗಳವು ಕನ್ಯಾ ರಾಶಿಯ ಐದನೇ ಮನೆಯಲ್ಲಿ ಸಂಚರಿಸಲಿದೆ. ಹೀಗಾಗಿ ನಿಮ್ಮ ಕೆಲಸ ಕಾರ್ಯಗಳು ಅದೃಷ್ಟದಿಂದ ಕೂಡಿರಲಿದೆ. ಉನ್ನತ ಶಿಕ್ಷಣವನ್ನು ಪಡೆಯುವ ಅವರ ಕನಸುಗಳು ಈಡೇರಬಹುದು. ಹನ್ನೆರಡನೇ ಮನೆಯ ಮೇಲಿನ ಸೂರ್ಯನ ದೃಷ್ಟಿಯು ಈ ರಾಶಿಯವರಿಗೆ ವಿದೇಶ ಪ್ರವಾಸ ಅಥವಾ ಐಷಾರಾಮಿ ಜೀವನದ ಕಡೆ ಒಲವು ಹೆಚ್ಚಾಗುವಂತೆ ಮಾಡಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀವು ಮಾಡುವ ಕೆಲಸಗಳು ಶುಭವಾಗಲಿವೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣಕಾಸಿನ ವಿಚಾರದಲ್ಲಿ ಶುಭವಿದೆ.
ಕರ್ಕ ರಾಶಿ
ಮಂಗಳ ಮತ್ತು ಯುರೆನೆಸ್‌ನಿಂದ ಉಂಟಾಗಿರುವ ನವಪಂಚಮ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಬಹುದು. ನಿಮಗೆ ಆರೋಗ್ಯದಲ್ಲಿನ ಏರುಪೇರುಗಳು ನಿವಾರಣೆಯಾಗಲಿದೆ. ಹಾಗೆ 7ನೇ ಮನೆಯಲ್ಲಿ ಈ ಯೋಗ ರೂಪಿತವಾಗುವುದು ವ್ಯವಹಾರ ಸಂಬಂಧಿತ ವಿಚಾರಗಳಲ್ಲಿ ಶುಭವಾಗಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಿಮ್ಮ ಮುಂದಿನ ದಿನಗಳಲ್ಲಿ ಲಾಭದಾಯಕವಾಗಲಿದೆ.
ಪಾಲುದಾರಿಕೆ ವ್ಯವಹಾರಗಳು ಗಮನಾರ್ಹ ಲಾಭ ತರಲಿವೆ. ಶುಕ್ರನ ಆಶೀರ್ವಾದದಿಂದಾಗಿ ಹೊಸ ಆದಾಯ ಮೂಲಗಳು ತೆರೆದುಕೊಳ್ಳಲಿದೆ. ಉದ್ಯೋಗಸ್ಥರಲ್ಲಿ ಇದ್ದ ಒತ್ತಡಗಳು ನಿವಾರಣೆಯಾಗುವ ಸಮಯವೂ ಹೌದು.
ಕುಂಭ ರಾಶಿ
ಮಂಗಳ ಮತ್ತು ಯುರೆನೆಸ್‌ನ ಸಂಯೋಗದಿಂದ ಉಂಟಾದ ನವಪಂಚಮ ಯೋಗವು ಈ ರಾಶಿ ಜನರಲ್ಲಿ ಶುಭಕರವಾಗುತ್ತಿದೆ. ವೈದ್ಯಕೀಯ ಖರ್ಚುಗಳು ಕಡಿಮೆಯಾಗಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ಶುಭವಿದೆ. ಮಂಗಳ ಗ್ರಹವು ಮೂರನೇ ಮತ್ತು ಹತ್ತನೇ ಮನೆಗಳ ಅಧಿಪತಿಯಾಗಿರುವುದರಿಂದ ನಿಮ್ಮ ಹೂಡಿಕೆಗಳು, ಮಾತುಗಾರಿಕೆಯ ಮೂಲಕ ಲಾಭ ಗಳಿಸುವ ಸಾಧ್ಯತೆ ಹೆಚ್ಚಾಗುತ್ತಿದೆ. ಮನೆ ಕುರಿತಾಗಿ ಬಹಳ ಸಮಯದಿಂದ ಇದ್ದಂತಹ ದೊಡ್ಡ ವಿಚಾರಗಳು ಅದ್ರಲ್ಲೂ ಹೊಸ ಮನೆ ನಿರ್ಮಾಣ, ಆಸ್ತಿ ವಿಭಜನೆ ಅಥವಾ ಮಾರಾಟದಂತಹ ವಿಚಾರದಲ್ಲಿ ಲಾಭ ಗಳಿಸುವ ಸಮಯ ಇದಾಗುತ್ತಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications