Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 26ರಿಂದ ನವಪಂಚಮ ರಾಜಯೋಗ: ವ್ಯವಹಾರ, ಹಣಕಾಸಿನ ವಿಚಾರದಲ್ಲಿ ಹೊಸ ದಿಕ್ಕು..!
ಶನಿ ಗ್ರಹವನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಅದ್ರಲ್ಲೂ ಶನಿಯನ್ನು ಪಾಪ ಕರ್ಮದ ಗ್ರಹವೆಂದು ಕರೆಯಲಾಗಿದೆ. ವ್ಯಕ್ತಿಯೊಬ್ಬನ ಜೀವನದಲ್ಲಿ ಶನಿ ಚಲನೆಯು ಬಹಳ ಮುಖ್ಯ ಎಂದು ಹೇಳಲಾಗಿದೆ. ಹಾಗೆ ಶುಕ್ರನನ್ನು ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಶುಕ್ರನು ಯಾರ ಜಾತಕದಲ್ಲಿ ಶುಭ ಮನೆಯಲ್ಲಿ ಇರುತ್ತಾನೋ ಅವರಲ್ಲಿ ಶುಕ್ರದೆಸೆ ಎನ್ನಬಹುದು.
ವ್ಯಕ್ತಿಯೊಬ್ಬರ ಜಾತಕದಲ್ಲೂ ಶುಕ್ರನ ಸಂಚಾರ ಫಲಪ್ರದವಾಗಿರಲಿದೆ. ಹೀಗಾಗಿ ಜಾತಕದಲ್ಲಿ ಶನಿ ಹಾಗೂ ಶುಕ್ರನ ಸಂಚಾರವು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಎರಡೂ ಗ್ರಹಗಳ ಸ್ಥಾನವು ವ್ಯಕ್ತಿಯ ವೃತ್ತಿಜೀವನದ ಮೇಲೆ ಮಾತ್ರವಲ್ಲದೆ ಅವನ ಭೌತಿಕ ಸಂತೋಷದ ಮೇಲೂ ಪರಿಣಾಮ ಬೀರುತ್ತದೆ.

ಪ್ರಸ್ತುತ ಶನಿ ಮೀನ ಮತ್ತು ಶುಕ್ರ ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾರೆ. ಆದ್ರೆ ಈ ಎರಡು ಗ್ರಹಗಳು ಬೇರೆ ಗ್ರಹಗಳೊಂದಿಗೆ ಸಂಯೋಗ ನಡೆಸುತ್ತಿವೆ.
ಆಗಸ್ಟ್ 26 ರಂದು ಬೆಳಗ್ಗೆ 6:23 ಕ್ಕೆ, ಶುಕ್ರ-ಶನಿ ಪರಸ್ಪರ 120 ಡಿಗ್ರಿ ಕೋನದಲ್ಲಿ ಸಂಚರಿಸುತ್ತಾರೆ. ಈ ಸ್ಥಿತಿಯಲ್ಲಿ ಎರಡು ಗ್ರಹಗಳ ಕಾರಣ ನವಪಂಚಮ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗವು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ.
ಹಾಗೆ ಶುಕ್ರನು ಕರ್ಕ ರಾಶಿ ಪ್ರವೇಶಿಸಿದಾಗ ಹಾಗೆ ಬುಧನೊಂದಿಗೆ ಲಕ್ಷ್ಮಿ ನಾರಾಯಣ ಯೋಗವನ್ನು ರೂಪಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಮಯವು ಕೆಲವು ರಾಶಿ ಜನರಿಗೆ ಬಹಳ ವಿಶೇಷ ಲಾಭಗಳ ತರಲಿದೆ. ಹಾಗಾದ್ರೆ ಈ ನವಪಂಚಮ ಯೋಗದಿಂದ ಯಾರಿಗೆಲ್ಲಾ ಶುಭ ದಿನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ನವಪಂಚಮ ರಾಜಯೋಗವು ನಿಮಗೆ ಶುಭಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ, ಪ್ರವಾಸ, ದೇವಾಲಯ ಭೇಟಿಯಂತಹ ಆಧ್ಯಾತ್ಮಿಕ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವುದು ನೋಡಬಹುದು. ವ್ಯವಹಾರ ಹಾಗೂ ವ್ಯಾಪಾರ ಸಂಬಂಧವಾಗಿ ನಿಮ್ಮಲ್ಲಿ ಹೊಸ ರೀತಿಯ ಆಲೋಚನೆಗಳು ಬರಲಿವೆ. ಈ ತಿಂಗಳು ನೀವು ಮಾಡಿರುವ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಪ್ರತಿಫಲಕ್ಕೆ ಕಾರಣವಾಗಲಿದೆ. ಆರೋಗ್ಯದ ವಿಚಾರವಾಗಿಯೂ ಈ ಸಮಯ ಬಹಳ ಉತ್ತಮವಾಗಿರಲಿದೆ. ಹಣಕಾಸಿನ ವಿಚಾರವಾಗಿ ನೀವು ಬಹಳ ಎಚ್ಚರಿಕೆಯ ಹೆಜ್ಜೆಯ ಇಡಬೇಕು. ವೃತ್ತಿಪರತೆಯಲ್ಲಿ ಸಂತಸ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸಮಯವು ಪ್ರಯೋಜನಕಾರಿಯಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಅಚ್ಚರಿಯ ರೀತಿಯಲ್ಲಿ ಬಗೆಹರಿಯಲಿದೆ. ನಿಮಗೆ ಬರಬೇಕಿದ್ದ ಬಾಕಿ ಸಾಲಗಳು ಮರುಪಾವತಿಯಾಗಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ. ನಿಮ್ಮ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ನಿಮ್ಮ ಪ್ರವಾಸ ಸಂಬಂಧದ ವಿಚಾರಗಳು ಧನಾತ್ಮಕವಾಗಲಿದೆ. ಆಪ್ತರೊಬ್ಬರನ್ನು ಭೇಟಿಯಾಗುವುದು ನಿಮ್ಮಲ್ಲಿ ಸಂತಸ ತರಲಿದೆ. ನಿರುದ್ಯೋಗಿಗಳಿಗೆ ಸೂಕ್ತ ವೇತನದ ಕೆಲಸ ಸಿಗಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ಕೂಡ ಪಡೆಯಲಿದ್ದೀರಿ. ಕೌಟುಂಬಿಕ ವಿಚಾರವಾಗಿ ಬಹಳ ಉತ್ತಮ ಸಮಯ ಆಗಿರಲಿದೆ.
ಮೀನ ರಾಶಿ
ಮೀನ ರಾಶಿಯ ಜನರು ವೃತ್ತಿ-ವ್ಯವಹಾರಕ್ಕೆ ಬಂಧಿಸಿದಂತೆ ಸಾಕಷ್ಟು ಲಾಭಗಳಿವೆ. ನಿಮ್ಮ ಕೌಟುಂಬಿಕ ಜೀವನ ಆಹ್ಲಾದಕರ ವಾಗಿರಲಿದೆ. ವಾಹನ ಲಾಭದ ನಿರೀಕ್ಷೆ ಇಡಬಹುದು. ಬಹಳ ವರ್ಷಗಳಿಂದ ಕಾಯುತ್ತಿದ್ದ ನಿಮ್ಮ ಬಯಕೆಯೊಂದನ್ನು ಈಡೇರಿಸಿಕೊಳ್ಳಬಹುದು. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದವರಿಗೆ ಲಾಭದಾಯಕ ಸಮಯ ಇದು. ಹಲವು ಸಂದರ್ಭಗಳು ನಿಮಗೆ ಉತ್ತಮ ಪ್ರತಿಫಲರ ತರಲಿವೆ. ಪಿತ್ರಾರ್ಜಿತ ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮಗೆ ದೊಡ್ಡ ಲಾಭವಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿರುವವರಿಗೆ ಬಹಳ ಲಾಭದಾಯಕ ದಿನಗಳಿವೆ.
(ಹಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಗ್ರಂಥಗಳು, ಅಂತರ್ಜಾಲದಲ್ಲಿನ ಮಾಹಿತಿ ಇತ್ಯಾದಿಗಳನ್ನು ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿಯ ನಿಖರತೆ, ಸಂಪೂರ್ಣತೆ ಮತ್ತು ಪ್ರಯೋಗಗಳನ್ನು ಬೋಲ್ಡ್ ಸ್ಕೈ ಕನ್ನಡ ಪ್ರಮಾಣಿಕರಿಸುವುದಿಲ್ಲ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications