Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕ್ಷತ್ರ ಫಲ 2024: ಶತಾಭಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ರೇವತಿ ನಕ್ಷತ್ರಗಳಿಗೆ ಹೊಸ ವರ್ಷ ಹೇಗಿರಲಿದೆ?
ಹೊಸ ವರ್ಷ ಬರುತ್ತಿದೆ, ಹೊಸ ವರ್ಷದಲ್ಲಿ ನಕ್ಷತ್ರಗಳು ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ, ಇಲ್ಲಿ ಶತಾಭಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ರೇವತಿ ನಕ್ಷತ್ರಗಳ 2024ರ ನಕ್ಷತ್ರ ಫಲ ನೀಡಲಾಗಿದೆ ನೋಡಿ:
ಶತಾಭಿಷ ನಕ್ಷತ್ರ
ವ್ಯಾಪಾರಸ್ಥರಿಗೆ 2024ರ ವರ್ಷವು ಅನುಕೂಲಕರವಾಗಿದೆ. ಹೊಸ ವರ್ಷದಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನೀವು ಮೇ 2024 ರ ನಂತರ ನೀವು ಮತ್ತಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ, 2024 ರ ಅಂತ್ಯದ ವೇಳೆಗೆ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ವರ್ಷದ ಮೊದಲ ಭಾಗದಲ್ಲಿ ಅಂದರೆ ಏಪ್ರಿಲ್ 2024 ರವರೆಗೆ, ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಪೂರ್ವ ಭಾದ್ರಪದ ನಕ್ಷತ್ರ
ಪೂರ್ವ ಭಾದ್ರಪದ ನಕ್ಷತ್ರದವರಿಗೆ ಏಪ್ರಿಲ್ 2024 ರವರೆಗೆ ಮಿಶ್ರ ಫಲಿತಾಂಶ. ಹಣಕಾಸಿನ ಪರಿಸ್ಥಿತಿ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ನೀವು ಸಾಲವನ್ನು ತೆಗೆದುಕೊಳ್ಳಲು ಅಥವಾ ಯಾವುದೇ ಹೊಸ ಹೂಡಿಕೆಯನ್ನು ಮಾಡಲು ಯೋಚಿಸದಿರುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಲಿದೆ. ಏಪ್ರಿಲ್ 2024 ರವರೆಗೆ, ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಆದ್ದರಿಂದ ತಾಳ್ಮೆಯಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ನೀವು ಏಪ್ರಿಲ್ 2024 ರವರೆಗೆ ನಿಮ್ಮ ಆರೋಗ್ಯದ ಬಗ್ಗೆ ತುಂಬಾನೇ ಗಮನಹರಿಸಬೇಕು.
ಉತ್ತರ ಭಾದ್ರಪದ ನಕ್ಷತ್ರ
2024 ರ ಮೇ ತಿಂಗಳವರೆಗಿನ ಸಮಯವು ನಿಮಗೆ ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಈ ಸಮಯದಲ್ಲಿ, ನಿಮ್ಮ ಕೆಲಸದ ಹೊರೆ ಹೆಚ್ಚಾಗಬಹುದು. ನೀವು ಬಯಸಿದಂತೆ ಫಲಿತಾಂಶ ದೊರೆಯುವುದು ಕಷ್ಟ, ಆದರೆ ನಿರಾಸೆಪಡಬೇಕಾಗಿಲ್ಲ. ಏಕೆಂದರೆ ಜೂನ್ 2024 ರ ನಂತರ, ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ವ್ಯಾಪಾರಿಗಳಿಗೆ 2024ರಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು.
ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗೃತರಾಗಿರಬೇಕು . ನಿಮ್ಮ ಆರೋಗ್ಯದ ಬಗ್ಗೆ ನೀವು ಅಸಡ್ಡೆ ಮನೋಭಾವ ತಾಳಿದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುವುದ. ಏಕೆಂದರೆ ಕಾಲು ನೋವು ಮತ್ತು ಬೆನ್ನುನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.
ರೇವತಿ ನಕ್ಷತ್ರ
ರೇವತಿ ನಕ್ಷತ್ರದವರು ಏಪ್ರಿಲ್‌ನವರೆಗೆ ಕೆಲವು ಸಮಸ್ಯೆ ಎದುರಿಸಬಹುದು, ನಂತರ ಪ್ರಯೋಜನಗಳನ್ನು ಪಡೆಯಬಹುದು ಏಕೆಂದರೆ ಈ ಅವಧಿಯಲ್ಲಿ ಗುರುವು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ. ಆಗಸ್ಟ್ 2024 ರ ನಂತರ, ನೀವು ದೂರದ ಪ್ರಯಾಣವನ್ನು ಮಾಡುವ ಸಾಧ್ಯತೆಯಿದೆ ಮತ್ತು ಈ ಸಮಯದಲ್ಲಿ ನೀವು ಯಾವುದೇ ಹೆಜ್ಜೆ ಇಟ್ಟರೂ ಅಥವಾ ಕೆಲಸ ಮಾಡಿದರೂ ಫಲಿತಾಂಶಗಳು ನಿಮ್ಮ ಪರವಾಗಿರುತ್ತವೆ. ಮೇ 2024 ರ ನಂತರ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಸಾಧ್ಯವಾಗುವುದು. ನಿಮ್ಮ ಜೀವನದಲ್ಲಿ ಸಂತೋಷ ಇರಲಿದೆ, ಸಮೃದ್ಧಿ ಹೆಚ್ಚಾಗಲಿದೆ, ನಿಮ್ಮ ವೈಯಕ್ತಿಕ, ವೃತ್ತಿ ಜೀವನ ಚೆನ್ನಾಗಿರಲಿದೆ. ನೀವು ಧಾರ್ಮಿಕ ಚಟುವಟಿಕೆಗಳ ಕಡೆಗೆ ಒಲವು ತೋರುತ್ತೀರಿ .
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications