Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ನಕ್ಷತ್ರ ಫಲ 2024: ಚಿತ್ರ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ ನಕ್ಷತ್ರಗಳಿಗೆ ಹೊಸ ವರ್ಷ ಹೇಗಿರಲಿದೆ?
ಹೊಸ ವರ್ಷ ಬರುತ್ತಿದೆ, ಹೊಸ ವರ್ಷದಲ್ಲಿ ನಕ್ಷತ್ರಗಳು ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ, ಇಲ್ಲಿ ಚಿತ್ರ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ ನಕ್ಷತ್ರಗಳ 2024ರ ನಕ್ಷತ್ರ ಫಲ ನೀಡಲಾಗಿದೆ ನೋಡಿ:
ಹಸ್ತ ನಕ್ಷತ್ರ
ಹಸ್ತ ನಕ್ಷತ್ರದವರು ಉದ್ಯೋಗದಲ್ಲಿ ಸಮಸ್ಯೆಗಳು, ಆರ್ಥಿಕ ಬಿಕ್ಕಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ವರ್ಷ ಕೇತಯವಿನ ಸ್ಥಾನ ಹಸ್ತ ನಕ್ಷತ್ರದವರಿಗೆ ಅನುಕೂಲಕರವಲ್ಲ. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಕಂಡು ಬರುವುದು. ನಿದ್ರಾಹೀನತೆ ಕಾಡಬಹುದು, ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕೇತು ನಿಮ್ಮ ಸಂಬಂಧದ ಮೇಲೂ ಪ್ರಭಾವ ಬೀರುವುದು. ಆದರೆ ಮೇ 2024 ರ ನಂತರ ಗುರುವಿನ ಸಾಗಣೆಯು ನಿಮಗೆ ಪರಿಹಾರ ನೀಡಲಿದೆ. ನಿಮ್ಮ ಆತ್ಮವಿಶ್ವಾಸ ಮರಳಿ ಬರುತ್ತದೆ.

ಸ್ವಾತಿ ನಕ್ಷತ್ರ
ಸ್ವಾತಿ ನಕ್ಷತ್ರದವರಿಗೆ ಮೇ 2024 ರ ನಂತರದ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಈ ವರ್ಷ, ಗುರುವು ತನ್ನ ರಾಶಿ ಬದಲಾವಣೆ ಮಾಡಿದಾಗ ಅದು ನಿಮಗೆ ಧನಾತ್ಮಕ ಫಲಿತಾಂಶ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ, ಪರಿಣಾಮವಾಗಿ, ನೀವು ಜೀವನದಲ್ಲಿ ಸ್ಥಿರತೆಯನ್ನು ಸಾಧಿಸುವಿರಿ.
ಏಪ್ರಿಲ್‌ವರೆಗೆ ನೀವು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಗತಿಯನ್ನು ಪಡೆಯಲು ಕಷ್ಟವಾಗಬಹುದು ಮತ್ತು ಸಂಬಂಧವು ಅತೃಪ್ತಿಕರವಾಗಿರುತ್ತದೆ.
ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಅಂದರೆ ಏಪ್ರಿಲ್ 2024 ರವರೆಗೆ, ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೀವು ಸಾಕಷ್ಟು ಪ್ರಯತ್ನ ಮಾಡಬೇಕಾಗುವುದು. ನಂತರ ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದು. ನೀವು ನಿಮ್ಮ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ, ಆದರೆ ಅವರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುವುದು, ಆರ್ಥಿಕವಾಗಿ, ಈ ನಕ್ಷತ್ರದವರು ಮೇ 2024 ರ ನಂತರ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದು. ಹಣ ಉಳಿತಾಯ ಮಾಡುತ್ತೀರಿ.
ಚಿತ್ರ ನಕ್ಷತ್ರ
ಚಿತ್ರ ನಕ್ಷತ್ರದ ಅಧಿಪತಿ ಮಂಗಳನು 01 ಜೂನ್ 2024 ರಿಂದ 12 ಜುಲೈ 2024 ರವರೆಗೆ ಮೇಷ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಮಂಗಳನ ಈ ಸ್ಥಾನದಿಂದಾಗಿ, ನೀವು ನಿಮ್ಮ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಮತ್ತು ಪರಿಣಾಮವಾಗಿ, ನೀವು ಉತ್ತಮ ಹಣವನ್ನು ಸಹ ಗಳಿಸುವಿರಿ. ಅಲ್ಲದೆ, ಈ ಅವಧಿಯಲ್ಲಿ, ಪೂರ್ವಜರ ಆಸ್ತಿ ಇತ್ಯಾದಿ ಅನಿರೀಕ್ಷಿತ ಮೂಲಗಳಿಂದ ನೀವು ಪ್ರಯೋಜನಗಳನ್ನು ಪಡೆಯುವ ಅವಕಾಶಗಳನ್ನು ಹೊಂದಿರಬಹುದು.
ಅನುರಾಧ ನಕ್ಷತ್ರ
ಹಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀವು ಹೂಡಿಕೆ ಮಾಡುವಾಗ ಜಾಗರೂಕರಾಗಿರಿ, ಚಿಕ್ಕ ತಪ್ಪು ನಿಮ್ಮ ಆರ್ಥಿಕ ಸ್ಥಿಥಿಯ ಮೇಲೆ ದೊಡ್ಡ ಹೊಡೆತ ಬೀಳಬಹುದು. ಆದ್ದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ನೀವು ಜಾಗರೂಕರಾಗಿರಬೇಕು. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಓದುತ್ತಿದ್ದರೆ, ನೀವು ಏಪ್ರಿಲ್ 2024 ರವರೆಗೆ ಬಹಳ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ, ನೀವು ಹೆಚ್ಚಿನ ಶ್ರಮಹಾಕಬೇಕು.
ವಿಶಾಖ ನಕ್ಷತ್ರ
ಏಪ್ರಿಲ್ 2024 ರವರೆಗೆ, ನೀವು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಗತಿಯನ್ನು ಪಡೆಯಲು ಕಷ್ಟವಾಗಬಹುದು, ಸಂಬಂಧದಲ್ಲಿಯೂ ಕೆಲ ಸಮಸ್ಯೆಗಳಿರಬಹುದು. ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಅಂದರೆ ಏಪ್ರಿಲ್ 2024 ರವರೆಗೆ, ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುವುದು. ಏಪ್ರಿಲ್ 2024 ರ ನಂತರ, ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ಈ ಅವಧಿಯಲ್ಲಿ ನೀವು ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಜ್ಯೇಷ್ಠ ನಕ್ಷತ್ರ
ಜೂನ್ 14, 2024 ರಿಂದ ಜೂನ್ 29, 2024 ರವರೆಗೆ ನಿಮಗೆ ತುಂಬಾ ಅದೃಷ್ಟದ ಸಮಯ. ನಿಮ್ಮ ನಕ್ಷತ್ರದ ಅಧಿಪತಿ ಬುಧವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ. ಬುಧವು 23 ಸೆಪ್ಟೆಂಬರ್ 2024 ರಿಂದ 10 ಅಕ್ಟೋಬರ್ 2024 ರವರೆಗೆ ಉಚ್ಛಸ್ಥಾನದಲ್ಲಿರುತ್ತಾನೆ, ಇದರಿಂದಾಗಿ ಪರಿಣಾಮವಾಗಿ, ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಸ್ವಂತ ವ್ಯವಹಾರವನ್ನು ಮಾಡುವವರು ಗರಿಷ್ಠ ಲಾಭವನ್ನು ಗಳಿಸುತ್ತೀರಿ.
ವೃತ್ತಿ ಕ್ಷೇತ್ರದ ಬಗ್ಗೆ ಹೇಳುವುದಾದರೆ 2024 ರ ವರ್ಷವು ನಿಮಗೆ ಉತ್ತಮ ಫಲಿತಾಂಶ ನೀಡಲಿದೆ. ಈ ಸಮಯದಲ್ಲಿ ನಿಮ್ಮ ಕಾರ್ಯ ಸಾಮರ್ಥ್ಯವು ಉತ್ತಮವಾಗಿರುತ್ತದೆ, ಈ ಅವಧಿಯಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುವುದು. ವ್ಯಾಪಾರಿಗಳು ಈ ಅವಧಿಯಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸಲು ನಿರ್ಧರಿಸಬಹುದು , ಅದು ನಿಮಗೆ ಫಲಪ್ರದವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











