ನಕ್ಷತ್ರ ಫಲ 2024: ಅಶ್ವಿನಿ , ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರ್ದ್ರ ನಕ್ಷತ್ರಗಳಿಗೆ ಹೊಸ ವರ್ಷ ಹೇಗಿರಲಿದೆ?

ಹೊಸ ವರ್ಷ ಬರುತ್ತಿದೆ, ಹೊಸ ವರ್ಷದಲ್ಲಿ ನಕ್ಷತ್ರಗಳು ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ, ಇಲ್ಲಿ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರ್ದ್ರ ನಕ್ಷತ್ರಗಳ 2024ರ ನಕ್ಷತ್ರ ಫಲ ನೀಡಲಾಗಿದೆ ನೋಡಿ:

ಅಶ್ವಿನಿ ನಕ್ಷತ್ರ
ಅಶ್ವಿನಿ ನಕ್ಷತ್ರದವರಿಗೆ 2024 ವರ್ಷತುಂಬಾ ಒಳ್ಳೆಯದು. ಅದೇ ಸಮಯದಲ್ಲಿ, 20 ಫೆಬ್ರವರಿ 2024 ರಿಂದ ಮಾರ್ಚ್ 06, 2024 ರವರೆಗೆ, ಕೇತುವು ಕನ್ಯಾರಾಶಿಯಲ್ಲಿರುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ರೇವತಿ ನಕ್ಷತ್ರದ ಅಧಿಪತಿ ಬುಧನ ಸ್ಥಾನವು ಅನುಕೂಲಕರವಾಗಿರುತ್ತದೆ. ಆದ್ದರಿಂದ ಈ ಅವಧಿ ತುಂಬಾ ಒಳ್ಳೆಯದು. 2023ರಲ್ಲಿ ಇದ್ದ ಸಮಸ್ಯೆಗಳು 2024ರಲ್ಲಿ ಇರುವುದಿಲ್ಲ. ಹೊಸ ವರ್ಷದಲ್ಲಿ ಮೇ 2024 ರ ನಂತರ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

Ashwini Nakshatra Phala 2024

ಭರಣಿ ನಕ್ಷತ್ರ
ಆರ್ಥಿಕ ಲಾಭ ಹೆಚ್ಚಾಗಲಿದೆ, ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಬಲವಾಗುವುದು. ವೃತ್ತಿ ಬದುಕಿನಲ್ಲಿ ಈ ಅವಧಿ ಅನುಕೂಲಕರವಾಗಿದೆ. 2024ರಲ್ಲಿ ಐಷಾರಾಮಿ ಜೀವನವನ್ನು ಆನಂದಿಸುವಿರಿ. 19 ಮೇ 2024 ರಿಂದ 12 ಜೂನ್ 2024 ರ ಅವಧಿಯಲ್ಲಿ, ಅವಾಹಿತ ಮಹಿಳೆಯರು ತಮ್ಮ ಮದುವೆಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು, ಮಕ್ಕಳ ಅಪೇಕ್ಷಿತ ವಿವಾಹಿತರಿಗೆ ಈ ಅವಧಿ ಶುಭವಾಗಿದೆ.

ಕೃತಿಕಾ ನಕ್ಷತ್ರ
ವೃತ್ತಿ ಜೀವನ ಅನುಕೂಲಕರವಾಗಿದೆ. ಅವಾಹಿತರಿಗೆ ಈ ವರ್ಷ ಕಂಟಣಬಲ ಕೂಡಿಬರಲಿದೆ. ಸೆಪ್ಟೆಂಬರ್‌ವರೆಗಿನ ಸಮಯವು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ವರ್ಷ ಮಕ್ಕಳ ಯಶಸ್ಸು ನಿಮಗೆ ಖುಷಿ ನೀಡಲಿದೆ. ಬೆಟ್ಟಿಂಗ್ ಮೂಲಕ ಲಾಭ ಪಡೆಯಲು ಬಯಸುವವರಿಗೆ, ಈ ಅವಧಿಯು ಯಶಸ್ಸು ತರಲಿದೆ. ಕೃತ್ತಿಕಾ ನಕ್ಷತ್ರ ಪುರುಷರು ಮತ್ತು ಮಹಿಳೆಯರು ತಮ್ಮ ಜೀವನದಲ್ಲಿ ತೃಪ್ತಿಯನ್ನು ಹೊಂದುತ್ತಾರೆ.

ರೋಹಿಣಿ
ಮೇ 2024 ರ ನಂತರದ ಸಮಯವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ವೃತ್ತಿ ಅಥವಾ ಹಣಕ್ಕೆ ಸಂಬಂಧಿಸಿದ ಕೆಲಸದ ಕಾರಣದಿಂದಾಗಿ ನೀವು ದೂರದ ಪ್ರವಾಸಗಳಿಗೆ ಹೋಗಬಹುದು. ಮೇ 2024 ರ ನಂತರ ಗುರುವಿನ ಸ್ಥಾನವು ನಿಮಗೆ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ಹಣವನ್ನು ಗಳಿಸಲು ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ವೃತ್ತಿಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ ಸೂಕ್ತ ಸಮಯ. ಈ ಸಮಯದಲ್ಲಿ, ಅದೃಷ್ಟ ನಿಮ್ಮ ಬೆಂಬಲಕ್ಕೆ ಇರುವುದರಿಂದ ಈ ಅವಧಿ ಅನುಕೂಲಕರವಾಗಿದೆ. ಮೇ 2024 ರ ನಂತರ ವಿವಾಹಿತರು ಮಗುವನ್ನು ಹೊಂದುವ ಆಶೀರ್ವಾದವನ್ನು ಪಡೆಯಬಹುದು.

ಮೃಗಶಿರ ನಕ್ಷತ್ರ
2024 ರ ವರ್ಷವು ನಿಮಗೆ ಉತ್ತಮವಾಗಿರುತ್ತದೆ, ಮಂಗಳದ ಈ ಸ್ಥಾನವು ನೀವು ಸಾಧಿಸಲು ಬಯಸುವ ಎಲ್ಲವನ್ನೂ ನಿಮಗೆ ನೀಡಲು ಕೆಲಸ ಮಾಡುತ್ತದೆ. ಅಲ್ಲದೆ, ಈ ಅವಧಿಯಲ್ಲಿ ನೀವು ಯಾವುದೇ ಪ್ರಯತ್ನಗಳನ್ನು ಮಾಡಿದರೂ, ಫಲಿತಾಂಶಗಳು ನಿಮ್ಮ ಪರವಾಗಿರುತ್ತವೆ ನೀವು ವೃತ್ತಿ ಮತ್ತು ಹಣಕಾಸಿನ ಕ್ಷೇತ್ರಗಳಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಗ್ಯೂ, ಜೂನ್ 1, 2024 ರಿಂದ ಜುಲೈ 12, 2024 ರ ಅವಧಿಯಲ್ಲಿ, ನೀವು ಸಾಮಾಜಿಕ ಸೇವಾ ಕಾರ್ಯಗಳ ಕಡೆಗೆ ಒಲವು ತೋರಬಹುದು. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಬೇಕು, ಉಳಿದಂತೆ ನಿಮ್ಮ ಆತ್ಮವಿಶ್ವಾಸ ತುಂಬಾ ಚೆನ್ನಾಗಿರಲಿದೆ.

ಆದ್ರ ನಕ್ಷತ್ರ
2024ರಲ್ಲಿ ಹಣಕಾಸು, ವೃತ್ತಿ ಮತ್ತು ಪ್ರೀತಿಯ ಜೀವನದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿಯಲ್ಲಿ ಬಡ್ತಿ ಪಡೆಯಬಹುದು. ಈ ವರ್ಷ ವೃತ್ತಿ ಕ್ಷೇತ್ರದಲ್ಲಿ ಅನೇಕ ಹೊಸ ಅವಕಾಶಗಳು ದೊರೆಯಲಿದೆ, ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ನೀವು ಬಯಸಿದ ವ್ಯಕ್ತಿಗಳೊಂದಿಗೆ ಮದುವೆಯಾಗಬಹುದು. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Nakshatra Phala 2024: Ashwini,Bharani,Kritika, Rohini,Mrigashira, Ardra Nakshatra Prediction In Kannada

Nakshatra Phala 2024: Here are Ashwini,Bharani,Kritika, Rohini,Mrigashira Ardra Nakshatra horoscope of 2024, read on..
Story first published: Wednesday, December 27, 2023, 14:02 [IST]
X
Desktop Bottom Promotion