ವೃಷಭ ರಾಶಿಗೆ ಚಂದ್ರ ಸಂಚಾರದಿಂದ ಗಜಕೇಸರಿ ಯೋಗ: ಈ ರಾಶಿಯವರ ಆರ್ಥಿಕ ಪ್ರಗತಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹವನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗ್ರಹ ಸಂಚಾರವು ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಫೆಬ್ರವರಿಯಲ್ಲು ಹಲವು ಗ್ರಹಗಳ ತಮ್ಮ ಸ್ಥಾನ ಬದಲಿಸುತ್ತೆ. ಹಾಗೆ ಇದು ಮುಂದುವರೆದು ಮಾರ್ಚ್‌ನಲ್ಲೂ ಕೂಡ ಗ್ರಹಗತಿಗಳ ಬದಲಾವಣೆ ನಾವು ನೋಡಬಹುದು.

ಇನ್ನು ಈ ತಿಂಗಳ ಮಹಾಶಿವರಾತ್ರಿ ಫೆಬ್ರವರಿ 26ರಂದು ಆಚರಿಸಲಿದ್ದೇವೆ. ಈ ಸಮಯದ ಬಳಿಕ ಹಲವು ಗ್ರಹಗತಿಗಳ ಸಂಚಾರದಲ್ಲಿ ಬದಲಾವಣೆ ನೋಡಬಹುದು. ನಾವಿಂದು ಹಾಗೆ ಮಾರ್ಚ್‌ 5ರಂದು ಚಂದ್ರನು ವೃಷಭ ರಾಶಿಗೆ ಚಲಿಸುತ್ತಿದ್ದಾನೆ. ಶಿವರಾತ್ರಿ ಬಳಿಕ ಚಂದ್ರನ ಈ ರಾಶಿ ಬದಲಾವಣೆಯು ಹಲವು ರಾಶಿಯಗಳಿಗೆ ಲಾಭ ತರುತ್ತಿದೆ. ವಿಶೇಷವಾಗಿ ಈ ಚಂದ್ರನ ಸಂಚಾರ ಗಜಕೇಸರಿ ಯೋಗಕ್ಕೆ ಕಾರಣವಾಗುತ್ತಿದೆ.

Moon Transit To Taurus Leads To Gajakesari Yoga

ವೃಷಭ ರಾಶಿಯಲ್ಲಿ ಈಗಾಗಲೇ ಗುರು ಗ್ರಹದ ಸಂಚಾರವಿದ್ದು, ಆ ರಾಶಿಗೆ ಚಂದ್ರನ ಸಂಚಾರದಿಂದ ಗುರುವಿನ ಜೊತೆಗೆ ಸಂಯೋಗವಾಗುತ್ತಿದೆ. ಹೀಗಾಗಿ ಇದು ಗಜಕೇಸರಿ ಯೋಗಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಈ ಯೋಗದಿಂದಾಗಿ ಯಾವ ರಾಶಿಯವರಿಗೆ ಲಾಭವಾಗುತ್ತಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯ ಎರಡನೇ ಮನೆಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಇದು ಈ ರಾಶಿಯವರಲ್ಲಿ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಈ ರಾಶಿಯವರ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನೋಡಬಹುದು. ತಮ್ಮ ಪ್ರಯತ್ನಗಳು ಹೆಚ್ಚು ಶ್ರಮದಿಂದ ಕೂಡಿದ್ದರೆ ಪ್ರತಿಫಲ ಕೂಡ ಅಚ್ಚರಿಯಂತೆ ಶುಭಕರವಾಗಿಲಿದೆ. ಹಾಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ, ಇದರಿಂದ ನಿಮ್ಮಲ್ಲಿ ನೆಮ್ಮದಿ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ಈ ಸಮಯದಲ್ಲಿ ನಿಮ್ಮ ಸಂತೋಷಕ್ಕೆ ಕಾರಣವಾಗುವ ಹಲವು ಕೆಲಸಗಳನ್ನು ನೀವು ಮಾಡುತ್ತೀರಿ. ದೂರ ಪ್ರಯಾಣಗಳ ಮಾಡಬೇಕಾಗುತ್ತದೆ. ಇದು ನಿಮಗೆ ಒಳಿತಾಗುವ ಪ್ರಕ್ರಿಯೆ ಆಗಲಿದೆ. ಹಳೆಯ ಸಾಲಗಳು, ಹೂಡಿಕೆ ಮಾಡಿದ್ದ ಹಣ, ಉಳಿತಾದ ಹಣ ನಿಮ್ಮ ಕೈಸೇರಲಿದೆ. ಆರೋಗ್ಯದ ವಿಚಾರದಲ್ಲೂ ನಿಮಗೆ ಶುಭವಾಗುತ್ತಿದೆ.

ಕನ್ಯಾ ರಾಶಿ

ಗಜಕೇಸರಿ ಯೋಗವು ಕನ್ಯಾ ರಾಶಿಯವರ 9ನೇ ಮನೆಯಲ್ಲಿ ಉಂಟಾಗುತ್ತಿದೆ. ಹೀಗಾಗಿ ಕನ್ಯಾ ರಾಶಿಯವರ ಅದೃಷ್ಟವೇ ಬದಲಾಗುತ್ತಿದೆ. ಕೆಲಸ ಕಾರ್ಯಗಳಿಗೆ ಸಕಾರಾತ್ಮಕ ಬದಲಾವಣೆಗಳ ನೀವು ಗಮನಿಸಬಹುದು. ಯಾವುದೇ ಕೆಲಸಗಳಲ್ಲಿ ನೀವು ತೊಡಗಿದರು ಕೂಡ ಸುಲಭವಾಗಿ ಮುಗಿಯಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವ ಸಮಯವಿದು. ಅವಿವಾಹಿತರಿಗೆ ಈ ಸಮಯದಲ್ಲಿ ಶುಭ ಸುದ್ದಿಗಳ ಕೇಳಬಹುದು. ಗಜಕೇಸರಿ ಯೋಗವು ನಿಮ್ಮ ವಿವಾಹ ಬಂಧನಕ್ಕೆ ಸಹಕಾರಿಯಾಗಬಹುದು. ಪ್ರೀತಿ, ಪ್ರೇಮದಲ್ಲಿರುವ ಮಂದಿ ಕೂಡ ಈ ಸಮಯದಲ್ಲಿ ಸವಿ ನೆನಪುಗಳ ಪಡೆಯುತ್ತಾರೆ. ಹಲವು ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.

ಕರ್ಕಾ ರಾಶಿ

ಕರ್ಕಾ ರಾಶಿಯ 11ನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ, ಇದು ನಿಮ್ಮಲ್ಲಿ ಅನೇಕ ಬಗೆಯ ಪ್ರಗತಿಗೆ ಕಾರಣವಾಗುತ್ತಿದೆ. ಇದು ಉದ್ಯಮಿಗಳ ಪಾಲಿಗೆ ಅತ್ಯಂತ ಶುಭಕರ ಸಮಯವಾಗಲಿದೆ. ಹೊಸ ವ್ಯಾಪಾರಗಳು ನಿಮ್ಮ ಕೈಹಿಡಿಯಲಿವೆ. ಬಾಕಿ ಇದ್ದ ಸಾಲಗಳು ಮರುಪಾವತಿಯಾಗಬಹುದು. ನಿಮ್ಮ ಮೇಲಿದ್ದ ಜವಾಬ್ದಾರಿಗಳು ಹೆಚ್ಚಾಗಬಹುದುದು. ಹಾಗೆ ಹಳೆಯ ಆರೋಪಗಳಿಂದ ನೀವು ಮುಕ್ತರಾಗುತ್ತೀರಿ. ಸಂಬಂಧಗಳು ಮತ್ತಷ್ಟು ಬಲವಾಗಲಿವೆ. ಸ್ನೇಹಿತರ ಬಳಗದಿಂದ ದೊಡ್ಡ ಹಣಕಾಸು ನೆರವು ನಿಮಗೆ ಸಿಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Moon Transit To Taurus Leads To Gajakesari Yoga Thet Bring Financial Benefits To These Sign

Jupiter is already transiting in Taurus, and the transit of the Moon to that sign is conjunct Jupiter. Thus, this is causing Gajakesari Yoga.
Story first published: Saturday, February 15, 2025, 18:40 [IST]
X
Desktop Bottom Promotion