ವೃಶ್ಚಿಕ ರಾಶಿಗೆ ಚಂದ್ರ ಸಂಚಾರ: ಈ 4 ರಾಶಿಯವರಿಗೆ ಲಕ್ಷ್ಮಿ ಯೋಗ..ಧನಲಾಭ!!

ನವಗ್ರಹಗಳಲ್ಲಿ ಅತ್ಯಂತ ವೇಗವಾಗಿ ರಾಶಿಗಳನ್ನು ಬದಲಾಯಿಸುವ ಗ್ರಹ ಅಂದರೆ ಅದು ಚಂದ್ರ. ಹಾಗೆ ಚಂದ್ರ ಅತ್ಯಂತ ಪ್ರಭಾವಶಾಲಿ ಗ್ರಹವಾಗಿದೆ, ಚಂದ್ರನ ಸಂಚಾರವು ಹಲವು ರಾಶಿಯವರ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನಿಗೆ ವಿಶೇಷ ಸ್ಥಾನ ನೀಡಲಾಗಿದೆ. ಚಂದ್ರ ಒಂದೇ ಗ್ರಹದಲ್ಲಿ ಎರಡೂವರೆ ದಿನಗಳ ಕಾಲ ಮಾತ್ರ ಸಂಚರಿಸಲಿದೆ.

ಈಗ ಚಂದ್ರನು ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಹೀಗಾಗಿ ಕೆಲವೊಂದು ರಾಶಿಯವರ ಮೇಲೆ ಇದರ ಪರಿಣಾಮ ನಾವು ನೋಡಬಹುದು. ದ್ರಯೋದಸಿ ಮತ್ತು ಕೃಷ್ಣ ಪಕ್ಷ ಕೂಡ ಇರುವುದರಿಂದಾಗಿ ಈ 4 ರಾಶಿಯವರಿಗೆ ಲಕ್ಷ್ಮಿ ಯೋಗ ಒಲಿಯಲಿದೆ. ಈ ಲಕ್ಷ್ಮಿ ಯೋಗದಿಂದಾಗಿ ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ. ಅದರಲ್ಲೂ ಕೆಲವರಿಗೆ ಇನ್ನು 2 ದಿನಗಳ ಧನಲಾಭದ ನಿರೀಕ್ಷೆ ಇಡಬಹುದು.

Moon Transit To Scorpio Will Bring Luck For These 4 Zodiac Sign

ಹಾಗಾದ್ರೆ ಚಂದ್ರನು ವೃಶ್ಚಿಕ ರಾಶಿಗೆ ಚಲಿಸುತ್ತಿರುವುದರಿಂದಾಗಿ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಮುಂದಿನ ಎರಡು ದಿನಗಳ ಕಾಲ ಅದ್ಭುತ ಲಾಭ ಒಲಿಯಲಿದಯಂತೆ. ಅವರು ಆರ್ಥಿಕ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಹಾಗೆ ಯಾವುದೇ ಹಣಕಾಸಿನ ಕೆಲಸಗಳನ್ನು ಕೂಡ ನೀವು ಆರಾಮವಾಗಿ ಮಾಡಬಹುದು. ಯಾವುದೇ ಅಡೆತಡೆಯಿಲ್ಲದೆ ವ್ಯವಹಾರ ಮುಗಿಸಬಹುದು. ಹಾಗೆ ನಿಮ್ಮ ಬ್ಯಾಂಕ್, ಆಸ್ತಿ ಹೀಗೆ ಹಲವು ಲಾಭದಾಯಕ ಕೆಲಸಗಳು ಬಹುಬೇಗ ಮುಕ್ತಾಯಗೊಳ್ಳಬಹುದು. ಹಾಗೆ ನಿಮಗೆ ಈ ಎರಡು ದಿನಗಳು ಅತ್ಯಂತ ಅದೃಷ್ಟದಾಯಕವಾಗಿರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ಅವಧಿಯಲ್ಲಿ ಭಾರೀ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಅದರಲ್ಲೂ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ. ಹೊಸ ಲಾಭದ ದಾರಿಗಳು ನಿಮಗೆ ಒಲಿಯಲಿದೆ. ಹಾಗೆ ಹಳೆಯ ಸಾಲಗಳು ಮರುಪಾವತಿಯಾಗಲಿದೆ. ದೂರದ ಸಂಬಂಧಿಕರಿಂದ ನಿಮಗೆ ಲಾಭ ಹೆಚ್ಚಾಗಲಿದೆ. ಹೂವು ಹಾಗೂ ಹಣ್ಣಿನ ವ್ಯಾಪಾರಸ್ಥರಿಗೆ ಎಲ್ಲಿಲ್ಲದ ಲಾಭವಿದೆ.

ವೃಶ್ಚಿಕ ರಾಶಿ

ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವುದರಿಂದಾಗಿ ಲಕ್ಷ್ಮಿ ಯೋಗದಲ್ಲಿ ನಿಮಗೆ ಲಾಭದಾಯಕ ದಿನಗಳು ಬರಲಿದೆ. ಈ ಎರಡು ದಿನದಲ್ಲಿ ನಿಮಗೆ ಆರ್ಥಿಕ ಲಾಭ ಹುಡುಕಿಕೊಂಡು ಬರಲಿದೆ. ಅದರಲ್ಲೂ ನೀವು ನೌಕರರಾಗಿದ್ದರೆ ಹೊಸ ನೌಕರಿ ನಿಮ್ಮ ಕೈ ಸೇರಬಹುದು. ಇದು ನಿಮಗೆ ಲಾಭ ತರಬಹುದು. ಈ ಎರಡು ದಿನದಲ್ಲಿ ಹಸುಗೆ ಆಹಾರ ನೀಡುವುದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ನಿಮ್ಮಿಂದ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ.

ಕುಂಭ ರಾಶಿ

ಚಂದ್ರನ ಸಂಚಾರದಿಂದ ಕುಂಭ ರಾಶಿಯವರಿಗೆ ಈ ಲಕ್ಷ್ಮೀ ಯೋಗದಿಂದ ಆರ್ಥಿಕ ಲಾಭವಾಗಲಿದೆ. ಕೆಲಸದ ಸ್ಥಳ ಸೇರಿ ನಿಮಗೆ ಮನೆಯಲ್ಲೂ ಲಾಭ ಗಳಿಸಬಹುದು. ನಿಮ್ಮ ವ್ಯವಹಾರಗಳು ಅಡ್ಡಿ ಇಲ್ಲದೆ ನಡೆಯುತ್ತದೆ. ಬಹಳ ಕಾಲದಿಂದ ಬಾಕಿ ಉಳಿದಿದ್ದ ಕೆಲವು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮಗೆ ಸಲ್ಲಬೇಕಿದ್ದ ಗೌರವ ಪಡೆಯಲಿದ್ದೀರಿ. ನಿಮ್ಮ ಕೈಗೆ ಹಣ ಸೇರುವುದರಿಂದ ನಿಮ್ಮ ಅದೃಷ್ಟ ಬದಲಾಗಲಿದೆ, ಹಾಗೆ ಖರ್ಚು ಕೂಡ ಬದಲಾಗಬಹುದು. ಮನೆಗೆ ಹೊಸ ವಸ್ತು ಖರೀದಿಸುವ ನಿಮ್ಮ ಆಸೆಗೆ ಈ ಎರಡು ದಿನದಲ್ಲಿ ಧನಾತ್ಮಕ ಬೆಳವಣಿಗೆ ನೋಡಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Moon Transit To Scorpio Will Bring Luck For These 4 Zodiac Sign

The Moon is about to move into Scorpio. So we can see its effect on some zodiac signs. Due to the presence of Dryodasi and Krishna Paksha, Lakshmi Yoga will be beneficial for these 4 zodiac signs.
Story first published: Friday, November 29, 2024, 18:59 [IST]
X
Desktop Bottom Promotion