Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಹುಣ್ಣಿಮೆಯ ದಿನ ಚಂದ್ರ ರಾಶಿ ಬದಲಾವಣೆ: ಮನೆ ಬಾಗಿಲಿಗೆ ಒಲಿದು ಬರಲಿದೆ ಅದೃಷ್ಟ..!!
ನವೆಂಬರ್‌ನಲ್ಲಿ ಹಲವು ಗ್ರಹಗಳ ಸಂಚಾರ ವಿಶೇಷ ಎನಿಸಲಿದೆ. ಹಾಗೆ ನವೆಂಬರ್‌ನಲ್ಲಿ ಚಂದ್ರನ ಸ್ಥಾನಪಲ್ಲಟ ಕೂಡ ಈ ಗ್ರಹಗಳ ಸಂಚಾರದಲ್ಲಿ ಬಹಳ ಮುಖ್ಯ ವಿದ್ಯಮಾನ ಎಂದು ಕರೆಯಲಾಗಿದೆ. ನವೆಂಬರ್ 5ರಂದು ಸೂಪರ್ ಮೂನ್ ವಿದ್ಯಮಾನ ಸಂಭವಿಸುತ್ತಿದೆ. ಸಾಮಾನ್ಯಕ್ಕಿಂತಲೂ ದೊಡ್ಡದಾಗಿ ಚಂದ್ರನು ಕಾಣಿಸಲಿದ್ದಾನೆ.
ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ದೇವ್ ದೀಪಾವಳಿ ಆಚರಿಸಲಾಗುತ್ತದೆ. ಈ ದಿನದಂದು, ವಿಷ್ಣು, ಲಕ್ಷ್ಮಿ ಮತ್ತು ಶಿವನನ್ನು ಪೂಜಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ನವೆಂಬರ್ 4ರಂದು ಚಂದ್ರ ಗೋಚರ ವಿದ್ಯಮಾನ ನಡೆಯಲಿದೆ. ಅದ್ರಲ್ಲೂ ಚಂದ್ರ ಇಂದು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸಲಿದ್ದಾನೆ.

ನವೆಂಬರ್ 5ರಂದು ಕಾರ್ತಿಕ ಹುಣ್ಣಿಮೆ ಆಗಿದೆ. ಈ ದಿನದಂದು ಚಂದ್ರನ ಸಂಚಾರದಲ್ಲಿ ಬದಲಾವಣೆ ಆಗುವುದು ಹಲವರಿಗೆ ಶುಭದಾಯಕ ಆಗಲಿದೆ. ಶಿವನ ಸಂಕೇತವೆಂದು ನಂಬಲಾದ ಈ ಚಂದ್ರ ಸಂಚಾರವು ಹಲವು ರಾಶಿಗಳ ಜನರಿಗೆ ವಿಶೇಷ ಆಶೀರ್ವಾದಗಳನ್ನು ನೀಡುತ್ತದೆ. ವೈಕುಂಠ ಚತುರ್ದಶಿಯಂದು ಈ ಚಂದ್ರ ಸಂಚಾರವು ಮಿಥುನ ಮತ್ತು ಮೀನ ರಾಶಿಯವರಿಗೆ ಅತ್ಯಂತ ಶುಭವಾಗಿದೆ.
ಚಂದ್ರನು ನವೆಂಬರ್ 4 ಮಂಗಳವಾರ, ವೈಕುಂಠ ಚತುರ್ದಶಿಯಂದು ಮಧ್ಯಾಹ್ನ 12:34 ಕ್ಕೆ ಸಾಗುತ್ತಾನೆ. ಈ ಸಮಯದಲ್ಲಿ ಮೀನ ರಾಶಿಯಿಂದ ಮೇಷ ರಾಶಿಗೆ ಸಾಗುತ್ತದೆ. ಎರಡು ದಿನಗಳ ಕಾಲ ಮೇಷ ರಾಶಿಯಲ್ಲಿದ್ದ ನಂತರ, ಚಂದ್ರನು ವೃಷಭ ರಾಶಿಗೆ ಸಾಗುತ್ತದೆ. ಈ ಸಂಚಾರವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ಸಂಭವಿಸುವುದರಿಂದ, ಧಾರ್ಮಿಕ ದೃಷ್ಟಿಕೋನದಿಂದ ಇದರ ಪರಿಣಾಮಗಳು ಅತ್ಯಂತ ಶುಭವಾಗಿರುತ್ತದೆ.
ಮಿಥುನ ರಾಶಿ
ಮೇಷ ರಾಶಿಗೆ ಚಂದ್ರನ ಪ್ರವೇಶವು ಮಿಥುನ ರಾಶಿ ಜನರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತದೆ. ಚಂದ್ರನ ಸ್ಥಾನ ಬದಲಾವಣೆಯಿಂದಾಗಿ ನಿಮ್ಮ ಹಲವು ಕೆಲಸಗಳು ಪೂರ್ಣವಾಗಲಿದೆ. ಬಹಳ ಸಮಯದಿಂದ ಇದ್ದಂತಹ ಅಡ್ಡಿಯೊಂದು ನಿವಾರಣೆಯಾಗಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ತು, ಹಣ ನಿಮ್ಮ ಕೈ ಸೇರುವ ಸಮಯ ಆಗಿರಲಿದೆ. ದಾಂಪತ್ಯವು ಮಧುರವಾಗಲಿದೆ. ನಿಮ್ಮ ಸಂಪತ್ತು ಪ್ರಗತಿಗೆ ಹಲವು ಅವಕಾಶಗಳು ಒಲಿಯಲಿದೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಉತ್ತಮ ಅವಕಾಶಗಳು ಹಾಗೆ ಉತ್ತಮ ಫಲಿತಾಂಶಗಳು ಒಲಿದು ಬರಲಿದೆ. ದೇವಾಲಯ ಭೇಟಿ ಅಥವಾ ಶಿವನಿಗೆ ಹಾಲು ಅರ್ಪಿಸುವುದು ನಿಮ್ಮ ಅದೃಷ್ಟ ದುಪ್ಪಟ್ಟಾಗಿಸಲಿದೆ.
ಧನು ರಾಶಿ
ಚಂದ್ರನ ಸಂಚಾರದಿಂದಾಗಿ ನಿಮ್ಮಲ್ಲಿ ಹಲವು ರೀತಿಯ ಶುಭಗಳ ನೋಡಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ ಮತ್ತು ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ವ್ಯಾಪಾರ ಹಾಗೂ ವ್ಯವಹಾರ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ಅನೇಕ ವಿಚಾರಗಳನ್ನು ನೀವು ಯಶಸ್ಸಿನ ಹಾದಿಗೆ ತೆಗೆದುಕೊಂಡು ಹೋಗಬಹುದು. ಬ್ಯಾಂಕ್, ಆಸ್ತಿ ಸಂಬಂಧಿತ ಓಡಾಟಗಳು ಕಡಿಮೆಯಾಗಲಿದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಶನಿ ದೋಷ ನಿವಾರಣೆಯ ಸಂಭವವಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಚಂದ್ರ ಸಂಚಾರದಿಂದ ಹಲವು ರೀತಿಯಲ್ಲಿ ಲಾಭದಾಯಕ. ಆರ್ಥಿಕ ಸ್ಥಿತಿ ಬಲಗೊಳ್ಳುವ ಜೊತೆಗೆ ನಿಮ್ಮಲ್ಲಿದ್ದ ಅನಾರೋಗ್ಯ ಸಮಸ್ಯೆಗೆ ಮುಕ್ತಿ ಪಡೆಯಬಹುದು. ನೀವು ಹೊಸದಾಗಿ ವ್ಯವಹಾರ ಆರಂಭಿಸುವ ಕುರಿತಾಗಿ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ನಿಮಗೆ ಶುಭದಾಯಕ ವಿಚಾರಗಳು ಬರಲಿವೆ. ವಾಹನ ಸಂಬಂಧಿತ ಲಾಭವಿದೆ. ನಿಮ್ಮ ಪ್ರಯಾಣಗಳು ಸುಖಕರವಾಗಲಿವೆ. ಸ್ವಂತ ಉದ್ಯೋಗ ಮಾಡುತ್ತಿದ್ದ ಮಂದಿಯಲ್ಲಿ ಈ ಸಮಯ ಅದೃಷ್ಟ ತರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











