Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಂಹ ರಾಶಿಯಲ್ಲಿ ಚಂದ್ರ-ಮಂಗಳನ ಸಂಯೋಗ: ಜೂನ್ 29ರಿಂದ ಇವರಿಗೆ ಜಾಕ್‌ಪಾಟ್!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮಂಗಳನ ಆಶೀರ್ವಾದ ಇದ್ದರೆ ಎಲ್ಲಾ ಗ್ರಹಗಳಿಗೂ ಶುಭ ಗಳಿಗೆ ಆರಂಭದ ಸೂಚನೆ ಆಗಲಿದೆ. ಹಾಗೆ ಮಂಗಳನನ್ನು ಆಸ್ತಿ, ಐಶ್ವರ್ಯ, ಸಂಪತ್ತು, ಧನ ಲಾಭ ತರುವಂತಹ ಗ್ರಹ ಎಂದು ಪರಿಗಣಿಸಲಾಗಿದೆ. ಮಂಗಳನು 45 ದಿನಗಳ ಕಾಲ ಒಂದೇ ರಾಶಿಯಲ್ಲಿ ಚಲಿಸಲಿದ್ದಾನೆ. ಪ್ರಸ್ತುತ ಮಂಗಳನು ಸಿಂಹ ರಾಶಿಯಲ್ಲಿ ಚಲಿಸುತ್ತಿದ್ದಾನೆ.
ಆದರೆ ಈಗ ಮಂಗಳನ ಜೊತೆಗೆ ಚಂದ್ರ ಕೂಡ ಸಿಂಹ ರಾಶಿಗೆ ಚಲಿಸುತ್ತಿರುವುದು ಹಲವು ರೀತಿಯ ಲಾಭಕ್ಕೆ ಕಾರಣವಾಗುತ್ತಿದೆ. ಇದೇ ಜೂನ್ 29ರಂದು ಚಂದ್ರನು ಕೂಡ ಸಿಂಹ ರಾಶಿಗೆ ಚಲಿಸುತ್ತಾನೆ. ಇದರಿಂದ ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಚಂದ್ರನ ಸಂಯೋಗವಾಗಲಿದೆ. ಇದರಿಂದ ಹಲವರಲ್ಲಿ ಹಲವು ರೀತಿಯ ಯೋಗ ನೋಡಬಹುದು.

ಸಿಂಹ ರಾಶಿಯಲ್ಲಿನ ಈ ಸಂಯೋಗವು ಮಹಾಲಕ್ಷ್ಮಿ ರಾಜಯೋಗಕ್ಕೆ ಕಾರಣವಾಗುತ್ತಿದೆ. ಇದು ಅಪರೂಪಕ್ಕೆ ರೂಪುಗೊಳ್ಳುವ ಯೋಗವಾಗಿದ್ದು, ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿವೆ. ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಯೋಗಗಳಲ್ಲಿ ಒಂದು ಈ ಮಹಾಲಕ್ಷ್ಮಿ ರಾಜಯೋಗ. ಈ ರಾಜಯೋಗವು ಲಕ್ಷ್ಮಿ ದೇವಿಗೆ ಸಂಬಂಧಿಸಿದ ಯೋಗವಾಗಿದೆ.
ಈ ಸಮಯದಲ್ಲಿ ಲಕ್ಷ್ಮಿಯ ಅನುಗ್ರಹದಿಂದಾಗಿ ಹಲವು ರೀತಿಯ ಲಾಭಗಳಿಗೆ ನೀವು ಒಳಗಾಗುತ್ತೀರಿ. ಹಾಗಾದ್ರೆ ಈ ಅಪರೂಪದ ಮಹಾಲಕ್ಷ್ಮಿ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಅನುಕೂಲಕರ ದಿನಗಳು ಕಾದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯ 3 ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಇದು ಮಿಥುನ ರಾಶಿಯವರಿಗೆ ಬಹಳ ಲಾಭದಾಯಕವಾಗಲಿದೆ. ನಿಮ್ಮ ಹೊಸ ಉದ್ಯೋಗಗಳು ನಿಮಗೆ ಲಾಭದಾಯಕವಾಗಲಿದೆ. ಇದರಿಂದ ನಿಮಗೆ ಹಣಕಾಸು ವಿಚಾರವಾಗಿ ಯಾವುದೇ ಸಮಸ್ಯೆ ಕಾಡದೆ ಇರಬಹುದು. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ, ನೀವು ಬಯಸಿದ್ದಂತೆ ಪ್ರವಾಸಗಳಲ್ಲಿ ಭಾಗಿಯಾಗುತ್ತೀರಿ. ಕೌಟುಂಬಿಕ ವಿಚಾರಗಳಲ್ಲಿ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ತುಲಾ ರಾಶಿ
ತುಲಾ ರಾಶಿಯ 11ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗ ಉಂಟಾಗಲಿದೆ. ಇದರಿಂದಾಗಿ ಬಾಕಿ ಇರುವ ಕೆಲಸಗಳು ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸರ್ಕಾರಿ ಕೆಲಸದಲ್ಲಿದ್ದವರು ಬಹಳ ಸಮಯದಿಂದ ನೀವು ವರ್ಗಾವಣೆ, ಬಡ್ತಿ, ಸಂಬಳದಂತಹ ವಿಚಾರದಲ್ಲಿ ಅಡ್ಡಿ ಎದುರಿಸಿದ್ದರೆ ಈ ಸಮಯದಲ್ಲಿ ಬಗೆಹರಿಯಲಿದೆ. ಕುಟುಂಬ ಜೀವನದಲ್ಲಿ ಸಂತಸ ನೋಡುವಿರಿ. ಹಾಗೆ ಮನೆಗಾಗಿ ದುಬಾರಿ ವಸ್ತು ಇಲ್ಲವೆ ಅಗತ್ಯ ವಸ್ತುವಿನ ಬಯಕೆಯನ್ನು ಈಡೇರಿಸಿಕೊಳ್ಳಲಿದ್ದೀರಿ. ನಿಮ್ಮ ಬಹುಕಾಲದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ.
ಮೀನ ರಾಶಿ
ಮೀನ ರಾಶಿಯ 6ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತದೆ. ಉದ್ಯಮಿಗಳಿಗೆ ಈ ಸಮಯದಲ್ಲಿ ಬಹಳ ಲಾಭದಾಯಕ ದಿನಗಳಾಗಿರಲಿವೆ. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗಲಿದೆ. ವಾಹನ ಖರೀದಿಸುವ ನಿಮ್ಮ ಬಹಳ ಸಮಯದ ಕನಸನ್ನು ನನಸಾಗಿಸಬಹುದು. ವ್ಯಾಪಾರಿಗಳಿಗೆ ಉತ್ತಮ ಸಮಯ ಆಗಿರಲಿದೆ. ನೀವು ಅಂದುಕೊಂಡಂತೆ ವ್ಯವಹಾರಗಳು ಕೈಗೂಡಲಿವೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ಮನೆಯಲ್ಲಿ ಶುಭ ಕಾರ್ಯ ಸಂಬಂಧ ಚರ್ಚೆ ಇರಲಿದೆ. ಗೃಹಿಣಿಯರ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶಗಳು ಒಲಿದುಬರಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










