Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಸಿಂಹನಲ್ಲಿ ಚಂದ್ರ-ಕೇತು ಸಂಗಮ: ಬೇಡವೆಂದರು ಬರಲಿದೆ ಸಂಪತ್ತು, ಬಯಸಿದಾಗೆಲ್ಲಾ ಸಿಗಲಿದೆ ಹಣ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯು ಒಂದೊಂದು ರೀತಿಯ ಬದಲಾವಣೆಗಳ ತರಲಿದೆ. ಗ್ರಹಗಳ ನಿರಂತರ ಚಲನೆಯು ಹಲವು ರೀತಿಯಲ್ಲಿ ಶುಭದಾಯಕವಾಗುತ್ತದೆ. ಹಾಗೆ ಹಲವು ಗ್ರಹಗಳ ಸಂಯೋಗ ಕೂಡ ಹಲವು ರೀತಿಯಲ್ಲಿ ಶುಭವಾಗುತ್ತದೆ. ಗ್ರಹಗಳ ಸಂಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.
ಸದ್ಯ ಈಗ ಚಂದ್ರನ ಚಲನೆಯಲ್ಲಿನ ಬದಲಾವಣೆಯಿಂದಾಗಿ ಹಲವು ಸಂಯೋಗ ಉಂಟಾಗುತ್ತಿದೆ. ಚಂದ್ರನು ವೇಗವಾಗಿ ಚಲಿಸುವ ಗ್ರಹವಾಗಿದ್ದು, ಈಗ ಚಂದ್ರನೊಂದಿಗೆ ಕೇತುವಿನ ಸಂಯೋಗವಾಗುತ್ತಿದೆ. ಅಕ್ಟೋಬರ್ 16 ರಂದು ಸಿಂಹ ರಾಶಿಯಲ್ಲಿ ಚಂದ್ರ ಹಾಗೂ ಕೇತುವಿನ ಸಂಯೋಗವಾಗುತ್ತಿದೆ. ಈ ಸಂಯೋಗವು ಹಲವು ರಾಶಿಗಳ ಪಾಲಿಗೆ ಅದೃಷ್ಟ ತರಲಿದೆ.

ಕೇತು ಕೆಡುಕು ತರುವ ಗ್ರಹ ಎಂದು ನಂಬಲಾಗಿದ್ದರೂ ಚಂದ್ರನೊಂದಿಗೆ ಆತನ ಸಂಯೋಗವು ಹಲವು ರೀತಿಯ ಶುಭ ಫಲಗಳಿಗೆ ಕಾರಣವಾಗಲಿದೆ ಅದ್ರಲ್ಲೂ ಸೂರ್ಯ ಅಧಿಪತ್ಯ ಇರುವ ಸಿಂಹ ರಾಶಿಯಲ್ಲಿನ ಸಂಯೋಗ ಅಪರೂಪ ವಿದ್ಯಮಾನ ಎಂಬುದಾಗಿದೆ. ಹಾಗಾದ್ರೆ ಚಂದ್ರ ಹಾಗೂ ಕೇತುವಿನ ಸಂಯೋಗವು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ? ಯಾರಿಗೆ ಇದು ಶುಭ ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಕೇತು ಚಂದ್ರನ ಅಪರೂಪದ ಸಂಯೋಗದಿಂದ ಮೇಷ ರಾಶಿಯ ಜನರಲ್ಲಿ ದೊಡ್ಡ ಲಾಭಗಳ ನೋಡಬಹುದು. ಮೇಷ ರಾಶಿಯ 5ನೇ ಮನೆಯಲ್ಲಿ ಈ ಸಂಯೋಗ ಚಲಿಸುವುದರಿಂದ ನಿಮ್ಮ ಮಕ್ಕಳು, ಕುಟುಂಬ ಕುರಿತಾದ ಉತ್ತಮ ಸುದ್ದಿಗಳನ್ನೇ ಕೇಳುವಿರಿ. ನಿಮ್ಮ ಮನದಲ್ಲಿದ್ದ ಬಹು ದಿನದ ದುಗುಡ ನಿವಾರಣೆಯಾಗಲಿದೆ. ನೀವು ಬಯಸಿದಂತಹ ವಸ್ತು ನಿಮ್ಮನ್ನು ಹುಡುಕಿ ಬರಲಿದೆ. ಇದುವರೆಗೆ ಎದುರಿಸಿದ್ದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ನೀವು ನಿಯೋಜಿತ ಕೆಲಸ ಕಾರ್ಯಗಳಲ್ಲಿ ಶುಭವನ್ನು ಅನುಭವಿಸುವಿರಿ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಗಳಲ್ಲಿ ಇದು ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದಂತಹ ಶುಭಕರ ವಿಚಾರಗಳಿಗೆ ಕಾರಣವಾಗುವ ಯೋಗವಾಗಿದೆ. ಅವಿವಾಹಿತರ ಅನಾರೋಗ್ಯ ಸಮಸ್ಯೆ ದೂರಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯ 3ನೇ ಮನೆಯಲ್ಲಿ ಕೇತುವಿನ ಸಂಚಾರವು ಅವರ ಧೈರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಗ್ರಹಗಳ ಸಂಯೋಗವು ಅವರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ತರಬಹುದು. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವಂತಹ ಹಲವು ಕೆಲಸಗಳನ್ನು ನೀವು ಮಾಡುವಿರಿ. ಮನೆಯಲ್ಲಿನ ನೆಮ್ಮದಿಯನ್ನು ನೀವು ಮತ್ತಷ್ಟು ಹೆಚ್ಚಿಸುವಿರಿ. ಆದಾಯ ಗಳಿಕೆಯ ಹೊಸ ದಿಕ್ಕು ನಿಮಗೆ ಸಿಗಬಹುದು. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ಸಮಯ ಅತ್ಯುತ್ತಮ ಲಾಭ ತರಲಿದೆ.
ಕರ್ಕ ರಾಶಿ
ಕೇತುವು ನಿಮ್ಮ ಕರ್ಕ ರಾಶಿಯ 2ನೇ ಮನೆಯಲ್ಲಿ ಸಾಗುತ್ತಿದ್ದು, ನಿಮ್ಮ ಜೀವನದಲ್ಲಿ ದೊಡ್ಡ ಸಕಾರಾತ್ಮಕ ವಿಚಾರಗಳು ನೋಡಬಹುದು. ನಿಮ್ಮ ಹಲವು ಆಲೋಚನೆಗಳನ್ನು ಜಾರಿ ಮಾಡಲು ಉತ್ತಮ ಸಮಯ ಆಗಿರಲಿದೆ. ಹಲವು ಸಮಯದ ನಿಮ್ಮ ಸಾಲದ ಸಮಸ್ಯೆಯೊಂದು ಬಗೆಹರಿಯಲಿದೆ. ವಿಧ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲು ನೆರವುಗಳ ಪಡೆಯುವಿರಿ. ವ್ಯಾಪಾರ ವಲಯದಲ್ಲಿ ಪ್ರಗತಿ ನೋಡಬಹುದು. ವೈವಾಹಿಕ ಸಮಸ್ಯೆಗಳು ದೂರಾಗಲಿದೆ. ಆಸ್ಪತ್ರೆ ಸಂಬಂಧಿತ ಖರ್ಚುಗಳು ಕಡಿಮೆಯಾಗಲಿದೆ. ಮಾನಸಿಕ ಆರೋಗ್ಯ ಸುಧಾರಿಸುವ ಸಮಯ.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











