Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಚಂದ್ರ-ಶನಿಯ ಸಂಯೋಗದಿಂದ ಸರ್ವ ಸಿದ್ಧಿ ಯೋಗ..! ಯಾರಿಗೆಲ್ಲಾ ಲಾಭ ಗೊತ್ತಾ?
2025ರಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುತ್ತಿದೆ. ಹಲವು ಗ್ರಹಗಳು ತಮ್ಮ ಚಲನೆಯ ದಿಕ್ಕು, ರಾಶಿ ಬದಲಾಯಿಸುತ್ತಿವೆ. ಹಾಗೆ ಚಂದ್ರನು ಕೂಡ ತನ್ನ ರಾಶಿ ಬದಲಿಸುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನಿಗೆ ಬಹಳ ಮಹತ್ವ ಹೊಂದಿರುವ ಗ್ರಹವಾಗಿದೆ. ಹಾಗೆ ಈಗ ಚಂದ್ರನು ಕುಂಭ ರಾಶಿಗೆ ಚಲಿಸಲಿದ್ದಾನೆ. ಆದರೆ ಕುಂಭ ರಾಶಿಯಲ್ಲಿ ಈಗಾಗಲೇ ಶನಿ ಗ್ರಹ ಇರುವುದು ಕೂಡ ಒಂದು ಯೋಗಕ್ಕೆ ಕಾರಣವಾಗುತ್ತದೆ.
ಚಂದ್ರ ಹಾಗೂ ಶನಿ ಕುಂಭರಾಶಿಯಲ್ಲಿ ಸಂಯೋಗ ಆಗುತ್ತಿರುವುದು ವಿಶೇಷ ಯೋಗಕ್ಕೆ ಕಾರಣವಾಗುತ್ತಿದೆ. ಈ ಸಮಯದಲ್ಲಿ ಸರ್ವ ಸಿದ್ಧಿ ಯೋಗ ಉಂಟಾಗುತ್ತಿರುವುದು ಹಲವು ರಾಶಿಯವರಿಗೆ ಲಾಭದಾಯಕವಾಗಲಿದೆ. ಹಲವು ರಾಶೀಯವರಲ್ಲಿ ಲಾಭದಾಯಕ ಅಂಶ ನೋಡಬಹುದು. ಜೀವನದಲ್ಲಿ ಶಾಂತಿ, ಆರ್ಥಿಕ ಲಾಭ ಸೇರಿ ಹಲವು ಲಾಭ ನಿಮ್ಮದಾಗಲಿದೆ.

ಹಾಗಾದ್ರೆ ಈ ಚಂದ್ರ ಹಾಗೂ ಶನಿಯ ಸಂಯೋಗವು ಯಾವ ರಾಶಿಯವರಿಗೆ ಲಾಭ ತರಲಿದೆ, ಯಾವ ರೀತಿಯ ಪ್ರಯೋಜನ ಪಡೆಯಲಿದ್ದಾರೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಯಾರಿಗೆ ಇದು ಸಂತೃಪ್ತಿ ತರಲಿದೆ ಅನ್ನೋದನ್ನು ನೋಡೋಣ.
ಮಿಥುನ ರಾಶಿ
ಮಿಥುನ ರಾಶಿಯವರು ಸಿದ್ಧಿ ಯೋಗದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಚಂದ್ರನ ಪ್ರಭಾವದಿಂದಾಗಿ ಲಾಭವಾಗುತ್ತಿದೆ. ನೀವು ಅಂದುಕೊಂಡಂತೆ ನಿಮ್ಮ ಬಯಕೆಯಂತೆ ಕೆಲಸ ಹುಡುಕಿ ಬರಲಿದೆ. ಹಲವು ರೀತಿಯ ಜವಾಬ್ದಾರಿಗಳ ಒಪ್ಪಿಕೊಳ್ಳಬೇಕಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಏಕಾಏಕಿ ಸುಧಾರಿಸಲಿದೆ. ಹಲವು ಮೂಲದಿಂದ ನಿಮಗೆ ಹಣ ಲಾಭವಿರುವ ಸಂಭವವಿದೆ. ನಿಮ್ಮ ವ್ಯಾಪಾರ ವ್ಯವಹಾರದ ಕ್ಷೇತ್ರ ಬಿಟ್ಟು ಬೇರೆ ಮೂಲದಿಂದ ನಿಮಗೆ ಲಾಭವಾಗಬಹುದು. ಆತುರದ ನಿರ್ಧಾರ ಅಥವಾ ಆಲೋಚಿಸದೆ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ.
ಧನು ರಾಶಿ
ಧನು ರಾಶಿಯವರು ತಮ್ಮ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ನಿಮ್ಮ ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುವ ಕಾಲವಿದು. ಹಣದ ಒಳಹರಿವು ಹೆಚ್ಚಾಗುತ್ತದೆ ಮತ್ತು ವ್ಯಾಪಾರದಲ್ಲಿ ಸಣ್ಣ ಲಾಭವನ್ನು ಪಡೆಯಬಹುದು. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಹಾಗೆ ಈ ರಾಶಿಯವರಲ್ಲಿ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಂತಸವಿರಲಿದೆ. ಅವಿವಾಹಿತರಿಗೆ ಹೆಚ್ಚು ಲಾಭದಾಯಕವಾಗಲಿದೆ. ನಿಮ್ಮ ಮುಂದಿನ ಕೆಲಸಗಳ ಮೇಲೆ ಹೆಚ್ಚು ಗಮನವಿಡಿ. ಇದು ನಿಮ್ಮ ಭವಿಷ್ಯದ ಕನಸಿನ ಸಾಕಾರಕ್ಕೆ ನೆರವಾಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಸಿದ್ಧಿ ಯೋಗವು ಅನೇಕ ಲಾಭಗಳ ತರಲಿದೆ. ವ್ಯಾಪಾರದಲ್ಲಿ ನಿಮಗೆ ಲಾಭದಾಯಕ ದಿನಗಳಿವೆ, ಹಳೆಯ ಸಾಲಗಳು ಮರುಪಾವತಿಯಾಗುವ ಸಾಧ್ಯತೆ ಇದೆ. ನಿಮ್ಮ ಆಸ್ತಿ, ಸಂಪತ್ತಿನಲ್ಲಿ ದಿಢೀರ್ ಎರಿಕೆಯಾಗಬಹುದು. ನೀವಂದುಕೊಂಡ ಹಲವು ವಿಚಾರಗಳು ಅಡೆತಡೆಯಿಲ್ಲದೆ ನಡೆಯಲಿದೆ. ವೈವಾಹಿಕ ಜೀವನದಲ್ಲಿ ನಿಮಗೆ ನೆಮ್ಮದಿ ಇರಲಿದೆ. ಪಾಲುದಾರಿಕೆ ವ್ಯವಹಾರಗಳು, ಸ್ನೇಹಿತರಿಂದ ನೀವು ಹಣಕಾಸು ನೆರವು ಅಪೇಕ್ಷಿಸಿದ್ದರೆ ನಿಮ್ಮ ಆಸೆ ಈಡೇರಲಿದೆ.
ವೃಶ್ಚಿಕ ರಾಶಿ
ಸಿದ್ಧಿ ಯೋಗವು ವೃಶ್ಚಿಕ ರಾಶಿಯವರಿಗೆ ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿರುತ್ತದೆ. ಕೆಲಸದ ಸ್ಥಳದಲ್ಲಿ ಅನೇಕ ಮನ್ನಣೆಗಳನ್ನು ಪಡೆಯುತ್ತಾರೆ. ನಿಮ್ಮ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿ ನಿಮಗೆ ಆರ್ಥಿಕ ಪ್ರಗತಿ ತರಲಿದೆ. ಯಾರಿಗಾದರು ಹಣಕಾಸಿನ ನೆರವು ನೀಡುವ ಮುನ್ನ ಎಚ್ಚರಿಕೆ ವಹಿಸಿ. ಮನೆಯಲ್ಲಿ ನಿಮ್ಮಿಂದ ಶುಭ ಕಾರ್ಯ ನಡೆಯಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











