Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾಸಿಕ ರಾಶಿಫಲ: ಸೆಪ್ಟೆಂಬರ್ ಮಾಸ 12 ರಾಶಿಗಳಿಗೆ ಹೇಗಿರಲಿದೆ?
ವೈದಿಕಶಾಸ್ತ್ರದ ಪ್ರಕಾರ ಸೆಪ್ಟೆಂಬರ್ ಮಾಸ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ನೀವು ನಿಮ್ಮ ಗುರಿಯ ಕಡೆಗೆ ಗಮನಹರಿಸಬೇಕು, ಅನಗ್ಯತ ವಿಷಯಗಳ ಬಗ್ಗೆ ಚಿಂತೆ ಮಾಡದೆ, ನಕಾರಾತ್ಮಕತೆಯು ನಿಮ್ಮನ್ನು ಮೀರಿಸಲು ಬಿಡದೆ ಪ್ರಮುಖ ವಿಷಯಗಳ ಕಡೆಗೆ ಗಮನಹರಿಸುವುದು ಒಳ್ಳೆಯದು. ಆರ್ಥಿಕವಾಗಿ ನೋಡುವುದಾದರೆ ಹಣಕಾಸಿನ ಬಗ್ಗೆ ನೀವು ಜಾಗ್ರತೆವಹಿಸಬೇಕು. ವೈವಾಹಿಕ ಬದುಕಿನಲ್ಲಿಯೂ ಕೆಲ ಎರಳಿತಗಳಿರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆರೋಗ್ಯದ ಕಡೆಗೆ ಗಮನಹರಿಸಬೇಕು.

ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಮಂಗಳ
ಅದೃಷ್ಟದ ಸಂಖ್ಯೆಗಳು: 11, 25, 39, 45, 50
ಶುಭ ದಿನಗಳು: ಗುರುವಾರ, ಭಾನುವಾರ, ಮಂಗಳವಾರ, ಬುಧವಾರ
ಅದೃಷ್ಟದ ಬಣ್ಣಗಳು: ನೀಲಿ, ಕಡು ಕೆಂಪು, ಕಂದು, ಬಿಳಿ
ವೃಷಭ ರಾಶಿ
ಈ ಮಾಸ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಶ್ರಮಕ್ಕೆ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಉದ್ಯಮಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಇನ್ನು ಕುಟುಂಬದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ. ನಿಮ್ಮ ಅಪ್ತರ ಜೊತೆಗೆ ಏನಾದರು ಭಿನ್ನಾಬಿಪ್ರಾಯವಿದ್ದರೆ ಎಲ್ಲವೂ ಸರಿಯಾಗಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ಆರೋಗ್ಯ ಸಂಬಂಧಿತ ಸಮಸ್ಯೆ ಎದುರಿಸುತ್ತಿದ್ದರೆ ಈ ಸಮಯದಲ್ಲಿ ಸುಧಾರನೆ ಕಂಡು ಬರುವುದು.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 4, 18, 29, 32, 49, 57
ಶುಭ ದಿನಗಳು: ಭಾನುವಾರ, ಗುರುವಾರ, ಬುಧವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಹಸಿರು, ಕೆಂಗಂದು, ಆಕಾಶ ನೀಲಿ, ಗುಲಾಬಿ, ಬಿಳಿ
ಮಿಥುನ ರಾಶಿ
ಈ ಸೆಪ್ಟೆಂಬರ್ ಮಾಸ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುವುದು. ವೃತ್ತಿ ಬದುಕಿನ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ. ವೈವಾಹಿಕ ಬದುಕಿನಲ್ಲಿ, ಪ್ರೀತಿಯ ಬದುಕಿನಲ್ಲಿ ಸಾಮರಸ್ಯ ಕಕಾಪಾಡಲು ನೀವು ಅವರ ಭಾವನೆಗಳನ್ನು ಹೆಚ್ಚು ಗೌರವಿಸಬೇಕು. ಏನಾದರು ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2, 18, 26, 31, 44, 57
ಶುಭ ದಿನಗಳು: ಬುಧವಾರ, ಮಂಗಳವಾರ, ಭಾನುವಾರ, ಸೋಮವಾರ
ಅದೃಷ್ಟದ ಬಣ್ಣಗಳು: ಕಡು ನೀಲಿ, ಕೆಂಪು, ಕಂದು, ಬಿಳಿ
ಕರ್ಕ ರಾಶಿ
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಉದ್ಯಮಿಗಳು, ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯುತ್ತೀರಿ. ವೈವಾಹಿಕ ಜೀವನದ ಕಡೆಗೆ ತುಂಬಾನೆ ಗಮನಹರಿಸಬೇಕು. ಅವಾಹಿತರಿಗೆ ಈ ಅವಧಿಯಲ್ಲಿ ಮದುವೆ ಪ್ರಸ್ತಾಪ ಬರಬಹುದು. ಆರೋಗ್ಯ ಚೆನ್ನಾಗಿರಲಿದೆ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಚಂದ್ರ
ಅದೃಷ್ಟದ ಸಂಖ್ಯೆಗಳು: 5, 17, 24, 30, 45, 54
ಶುಭ ದಿನಗಳು: ಬುಧವಾರ, ಗುರುವಾರ, ಭಾನುವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಆಕಾಶ ನೀಲಿ, ಕೆಂಪು, ಹಳದಿ, ಕೆನೆ
ಸಿಂಹ ರಾಶಿ
ಕೆಲಸದಲ್ಲಿ ಹೆಚ್ಚಿನ ಗಮನಹರಿಸಬೇಕು, ಕೆಲಸದಲ್ಲಿ ತಪ್ಪುಗಳಾಗದಂತೆ ಜಾಗ್ರತೆವಹಿಸಿ. ಉದ್ಯಮಿಗಳು,ವ್ಯಾಪಾರಿಗಳು ತಮ್ಮ ಆಹಾರದ ಕಡೆಗೆ ಗಮನಹರಿಸಿ.
ನೀವು ಕುಟುಂಬ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ನಡುವಿನ ಭಿನ್ನಾಭಿಪ್ರಾಯ ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಹಣದ ವಿಷಯದಲ್ಲಿ ಈ ಮಾಸ ಮಿಶ್ರಫಲ. ಉಳಿತಾಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ
ಕನ್ಯಾ ರಾಶಿ
ಕನ್ಯಾರಾಶಿಯವರಿಗೆ ಸೆಪ್ಟೆಂಬರ್ ಮಾಸ ಸಾಧಾರಣವಾಗಿರಲಿದೆ, ವೃತ್ತಿಪರ ಜೀವನದಲ್ಲಿ ಯಾವುದೇ ಮಹತ್ವದ ಬದಲಾವಣೆಗಳಿಲ್ಲ,ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗುತ್ತವೆ. ನೀವು ಕೆಲಸದ ಕಡೆಗೆ ತುಮಬಾನೇ ಗಮನಹರಿಸಿ. ಭಾವನಾತ್ಮಕವಾಗಿ, ಈ ಅವಧಿಯಲ್ಲಿ ನೀವು ತುಂಬಾ ದುರ್ಬಲರಾಗುತ್ತೀರಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ನೀವು ಅದನ್ನು ಬಗೆಹರಿಸಲು ಪ್ರಯತ್ನಿಸಿ. ಆರ್ಥಿಕವಾಗಿ ಉತ್ತಮವಾಗಿದೆ, ಸಾಲ ಮರುಪಾವತಿಸಲು ಪ್ರಯತ್ನಿಸಬೇಕು. ಆರೋಗ್ಯದಲ್ಲಿ ಏರಳಿತಗಳಿರಬಹುದು, ಅರೋಗ್ಯ ನಿರ್ಲಕ್ಷ್ಯ ಮಾಡಬೇಡಿ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 1, 15, 22, 35, 40, 57
ಶುಭ ದಿನಗಳು: ಮಂಗಳವಾರ, ಗುರುವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಹಳದಿ, ಕೆಂಪು, ಕೆಂಗಂದು, ಬಿಳಿ
ತುಲಾ ರಾಶಿ
ಈ ಮಾಸ ನಿಮ್ಮ ಮನಸ್ಥಿತಿಯಲ್ಲಿ ಸ್ವಲ್ಪ ಗೊಂದಲವಿರುತ್ತದೆ, ನಕಾರಾತ್ಮಕತೆಯು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು. ನೀವು ವೃತ್ತಿಪರ ಜೀವನದಲ್ಲಿ ಹೆಚ್ಚು ಗಮನ ಹರಿಸಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ಸರಾಸರಿಯಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ , ಆರೋಗ್ಯದಲ್ಲಿ ಸುಧಾರಣೆ ಕಂಡು ಬರಬಹುದು.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 6, 14, 29, 33, 40, 56
ಶುಭ ದಿನಗಳು: ಭಾನುವಾರ, ಮಂಗಳವಾರ, ಗುರುವಾರ, ಸೋಮವಾರ
ಅದೃಷ್ಟದ ಬಣ್ಣಗಳು: ಬಿಳಿ, ಕಂದು, ಹಳದಿ, ಕೆನೆ
ವೃಶ್ಚಿಕ ರಾಶಿ
ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಆಗಬಹುದು. ನೀವು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ ಈ ಅವಧಿ ಉತ್ತಮವಾಗಿದೆ. ಈ ರಾಶಿಯ ನಿರುದ್ಯೋಗಿಗಳು ಕೆಲಸವನ್ನು ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ನ್ಯಾಯಾಲಯದಲ್ಲಿ ಏನಾದರು ಪ್ರಕರಣವಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ. ಮನೆಯಲ್ಲಿ ಯಾವುದೇ ವಿವಾಹಿತ ಸದಸ್ಯರಿದ್ದರೆ ಸಂಬಂಧ ಸುಧಾರಿಸಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಮಂಗಳ ಮತ್ತು ಪ್ಲುಟೊ
ಅದೃಷ್ಟದ ಸಂಖ್ಯೆಗಳು: 5, 19, 20, 31, 40, 56
ಶುಭ ದಿನಗಳು: ಗುರುವಾರ, ಸೋಮವಾರ, ಶನಿವಾರ, ಬುಧವಾರ
ಅದೃಷ್ಟದ ಬಣ್ಣಗಳು: ಮರೂನ್, ಕೆಂಪು, ಗುಲಾಬಿ, ಆಕಾಶ ನೀಲಿ
ಧನು ರಾಶಿ
ಧನು ರಾಶಿಯವರಿಗೆ ಈ ಮಾಸ ಉತ್ತಮವಾಗಿರಲಿದೆ. ವ್ಯಾಪಾರಿಗಳು ಯಾವುದೇ ನಷ್ಟವನ್ನು ಸರಿದೂಗಿಸಲು ಅವಕಾಶವನ್ನು ಪಡೆಯಬಹುದು. ಈ ಅವಧಿಯಲ್ಲಿ, ನೀವು ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ಉತ್ತಮ ಪ್ರಯೋಜನ ಪಡೆಯಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ಆರೋಗ್ಯ ಉತ್ತಮವಾಗಿರಲಿದೆ.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಗುರು
ಅದೃಷ್ಟದ ಸಂಖ್ಯೆಗಳು: 1, 7, 14, 21, 38, 49
ಶುಭ ದಿನಗಳು: ಭಾನುವಾರ, ಶನಿವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕಡು ಕೆಂಪು, ಹಸಿರು, ಗುಲಾಬಿ, ನೇರಳೆ
ಮಕರ ರಾಶಿ
ಸೆಪ್ಟೆಂಬರ್ ಮಾಸದಲ್ಲಿ ಮಕರ ರಾಶಿಯವರು ಕುಟುಂಬದ ಕಡೆಗೆ ಗಮನಹರಿಸಿ. ಕುಟುಂಬದಲ್ಲಿ ಪರಿಸ್ಥಿತಿ ಏರಳಿತವಿರಬಹುದು. ಕೆಲವು ಕುಟುಂಬದ ಸದಸ್ಯರ ನಡವಳಿಕೆಯು ನಿಮಗೆ ಒತ್ತಡವನ್ನು ಉಂಟುಮಾಡಬಹುದು, ಇಂಥ ಸಮಯದಲ್ಲಿ ನೀವು ಬುದ್ಧಿವಂತಿಕೆಯಿಮದ ನಿರ್ಧರಿಸಬೇಕು. ವೃತ್ತಿ ಜೀವನದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಹೆಚ್ಚಿನ ಕೆಲಸದ ಹೊರೆಯಿಂದಾಗಿ ನೀವು ಹೆಚ್ಚಿನ ಒತ್ತಡವನ್ನು ಅನುಭವಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹಣದ ವ್ಯವಹಾರದಲ್ಲಿ ಜಾಗ್ರತೆವಹಿಸಬೇಕು. ಸಾಲ ತೆಗೆದುಕೊಳ್ಳಬೇಡಿ, ಈ ಅವಧಿಯಲ್ಲಿ ಯಾವುದೇ ಹಣಕಾಸಿನ ವಹಿವಾಟು ಮಾಡಬೇಡಿ. ತಿಂಗಳ ಕೊನೆಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 6, 18, 24, 36, 44, 54
ಶುಭ ದಿನಗಳು: ಸೋಮವಾರ, ಗುರುವಾರ, ಮಂಗಳವಾರ, ಶನಿವಾರ
ಅದೃಷ್ಟದ ಬಣ್ಣಗಳು: ಕೆನೆ, ನೇರಳೆ, ಕೆಂಪು, ಕೇಸರಿ
ಕುಂಭ ರಾಶಿ
ಕೆಲಸದ ವಿಷಯದಲ್ಲಿ ಈ ಅವಧಿ ಉತ್ತಮವಾಗಿರುತ್ತದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ನಿಮಗೆ ಉತ್ತಮ ಪ್ರಗತಿಯ ಸಾಧ್ಯತೆಯಿದೆ. ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯಲು ಬಯಸುವವರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ಆದಾಯ ಉತ್ತಮವಾಗಿರಲಿದೆ.
ಆಸ್ತಿ ಸಂಬಂಧಿಸಿದ ವಿಷಯ ಕೋರ್ಟ್‌ನಲ್ಲಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ. ಈ ಸಮಯವು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ./
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 4, 11, 26, 35, 44, 54
ಶುಭ ದಿನಗಳು: ಬುಧವಾರ, ಭಾನುವಾರ, ಗುರುವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಹಳದಿ, ಗುಲಾಬಿ, ನೇರಳೆ, ಬಿಳಿ, ಕಿತ್ತಳೆ
ಮೀನ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಉತ್ತಮವಾಗಿದೆ, ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಅವಕಾಶವನ್ನು ಪಡೆಯುತ್ತಾರೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಸಮಯವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಪ್ರೇಮಿಗಳಿಗೆ ಈ ಅವಧಿ ವಿಶೇಷವಾಗಿರಲಿದೆ. ನಿಮ್ಮ ಮದುವೆಗೆ ಮನೆಯವರ ಒಪ್ಪಿಗೆ ದೊರೆಯಲಿದೆ. ಹಣಕಾಸಿನ ವಿಷಯಗಳಲ್ಲಿ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಈ ಅವಧಿಯಲ್ಲಿ, ನೀವು ವಾಹನವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ನೆಪ್ಚೂನ್, ಗುರು
ಅದೃಷ್ಟದ ಸಂಖ್ಯೆಗಳು: 2,10, 20, 36, 45, 51
ಶುಭ ದಿನಗಳು: ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಕೆಂಪು, ಹಳದಿ, ನೀಲಿ, ಗುಲಾಬಿ, ಹಸಿರು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











