Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ಸಂಖ್ಯೆಗೆ ಮಾರ್ಚ್ ತಿಂಗಳು ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ಸಂಖ್ಯೆಗೆ ಮಾರ್ಚ್ ತಿಂಗಳು ಹೇಗಿರಲಿದೆ? ನೀವು ಯಾವ ದಿನಾಂಕದಂದು ಜನಿಸಿದ್ದೀರೋ ಅದರ ಲೆಕ್ಕಾಚಾರದ ಮೇಲೆ ಸಂಖ್ಯಾಶಾಸ್ತ್ರ ಭವಿಷ್ಯ ನೀಡಲಾಗಿದೆ ನೋಡಿ:
ಸಂಖ್ಯೆ 1 ( ಜನ್ಮ ದಿನಾಂಕ 1, 10, 19, 28 )
ಮಾರ್ಚ್‌ನಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ಕೆಲಸದ ಸ್ಥಳದಲ್ಲಿ ನೀವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಯಾರಿಗೂ ಅನ್ಯಾಯವಾಗದಂತೆ ಎಚ್ಚರವಹಿಸಿ. ವೈಯಕ್ತಿಕ ಜೀವನದಲ್ಲಿ ತಪ್ಪು ತಿಳುವಳಿಕೆ ಸಮಸ್ಯೆ ಹೆಚ್ಚಿಸಬಹುದು, ಈ ಬಗ್ಗೆ ಜಾಗ್ರತೆವಹಿಸಿ.

ಸಂಖ್ಯೆ 2( ಜನ್ಮ ದಿನಾಂಕ 2, 11, 20)
ಈ ಸಂಖ್ಯೆಯವರಿಗೆ ಮಾರ್ಚ್ ತಿಂಗಳು ಮಂಗಳಕರವಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ದೊಡ್ಡ ಪ್ರಗತಿಯನ್ನು ಪಡೆಯಬಹುದು. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಹೊಸ ಮನೆ ಖರೀದಿಸುವ ಅನೇಕ ಜನರ ಕನಸು ನನಸಾಗುತ್ತದೆ. ಹೊಸ ವ್ಯಾಪಾರ ಆರಂಭಿಸಲು ಈ ತಿಂಗಳು ಉತ್ತಮವಾಗಿದೆ. ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ.
ಸಂಖ್ಯೆ 3 ( ಜನ್ಮ ದಿನಾಂಕ 3, 12, 21 )
ಕೆಲಸದ ವಿಷಯದಲ್ಲಿ ಈ ತಿಂಗಳು ಉತ್ತಮವಾಗಿದೆ, ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಪಡೆಯುತ್ತೀರಿ. ಈ ತಿಂಗಳು ಆರ್ಥಿಕವಾಗಿ ಉತ್ತಮವಾಗಿರಲಿದೆ, ವೈಯಕ್ತಿಕ ಜೀವನವೂ ಚೆನ್ನಾಗಿರಬಹುದು. ಇನ್ನು ಆಸ್ತಿ ಖರೀದಿ ಮಾಡಲು ಬಯಸುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಸಂಖ್ಯೆ 4 (ಜನ್ಮ ದಿನಾಂಕ 4, 13, 22 )
ಸಂಖ್ಯೆ 4ರವರಿಗೆ ಈ ತಿಂಗಳು ಉತ್ತಮವಾಗಿರಲಿದೆ, ನೀವು ನಿಮ್ಮ ಗುರಿಗಳ ಮೇಲೆ ನೀವು ಗಮನಹರಿಸುತ್ತೀರಿ, ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಪ್ರಯತ್ನಿಸುತ್ತಿರಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಗಮನಹರಿಸಿ.
ಸಂಖ್ಯೆ 5( ಜನ್ಮ ದಿನಾಂಕ 5, 14 , 23)
ಮಾರ್ಚ್ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಕೆಲ ಬದಲಾವಣೆಗಳಾಗುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುವವರಿಗೆ ಉತ್ತಮ ಸಮಯ. ಆದರೆ ಉದ್ಯೋಗವನ್ನು ಬದಲಾಯಿಸುವ ಮೊದಲು ಸ್ವಲ್ಪ ಸಮಯ ಕಾಯುವುದು ಉತ್ತಮ. ಇನ್ನು ಮದುವೆಗೆ ಸಂಬಂಧ ಹುಡುಕುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಸಂಖ್ಯೆ 6 (ಜನ್ಮ ದಿನಾಂಕ 6, 15, 24 )
ಕೆಲಸದ ದೃಷ್ಟಿಯಿಂದ ಈ ತಿಂಗಳು ಶುಭವಾಗಿದೆ, ನಿಮ್ಮ ಕೆಲಸದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮದುವೆಯಾಗದವರಿಗೆ ಒಳ್ಳೆಯ ಪ್ರಪೋಸ್ ಬರಬಹುದು. ಈ ತಿಂಗಳು ನಿಮ್ಮ ಗೌರವ ಹೆಚ್ಚಾಗಲಿದೆ.
ಸಂಖ್ಯೆ 7 ( ಜನ್ಮ ದಿನಾಂಕ 7, 16, 25 )
ಈ ತಿಂಗಳು ನೀವು ಅನಗ್ಯತ ವಿಷಯಗಳ ಕಡೆ ಗಮನಹರಿಸದೆ ನಿಮ್ಮ ಕೆಲಸದತ್ತ ಗಮನಹರಿಸುವುದು ಒಳ್ಳೆಯದು. ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವ ಬದಲು, ನಿಮಗೆ ಸಂತೋಷದ ಕಡೆಗೆ ಗಮನಹರಿಸಿ. ಇಲ್ಲದಿದ್ದರೆ ವ್ಯಕ್ತಿಯು ಖಿನ್ನತೆಗೆ ಒಳಗಾಗಬಹುದು. ಮನಸ್ಸಿಗೆ ಖುಷಿ ನೀಡುವ ವಿಚಾರಗಳತ್ತ ಗಮನಹರಿಸಿ.
ಸಂಖ್ಯೆ 8 ( ಜನ್ಮ ದಿನಾಂಕ 8, 17, 26)
ಈ ತಿಂಗಳು ನೀವು ಖರ್ಚಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಈ ತಿಂಗಳಿನಲ್ಲಿ ಹಣಕಾಸಿನ ಲಾಭವೂ ಇರಬಹುದು. ಜನರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಚರ್ಚಿಸುತ್ತಾರೆ. ವೈಯಕ್ತಿಕ ಜೀವನಕ್ಕೂ ಸಮಯ ಮೀಸಲಿಡಿ. ಕುಟುಂಬ ಜೀವನ ಚೆನ್ನಾಗಿರಲಿದೆ.
ಸಂಖ್ಯೆ 9 ( ಜನ್ಮ ದಿನಾಂಕ 9, 18, 27)
ಈ ಸಂಖ್ಯೆಯವರು ಮಾರ್ಚ್ ತಿಂಗಳಲ್ಲಿ ಜಾಗರೂಕರಾಗಿರಬೇಕು, ಹೊಸ ಕೆಲಸವನ್ನು ಆತುರದಿಂದ ಪ್ರಾರಂಭಿಸುವ ಬದಲಿಗೆ ಸ್ವಲ್ಪ ಕಾಯಬೇಕು. ಸಮಯವು ನಿಮಗೆ ಹೊಸ ಅವಕಾಶಗಳು ಮತ್ತು ಜವಾಬ್ದಾರಿಗಳನ್ನು ತರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಕೋಪ ನಿಯಂತ್ರಣದಲ್ಲಿಡಿ. ಆದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications