ಮಾಸ ಭವಿಷ್ಯ: ಡಿಸೆಂಬರ್‌ ಮಾಸ ದ್ವಾದಶ ರಾಶಿಗಳ ರಾಶಿಫಲ

ಗ್ರಹಗತಿಗಳ ಸ್ಥಾನದ ಪ್ರಕಾರ ಡಿಸೆಂಬರ್‌ ಮಾಸ ದ್ವಾದಶ ರಾಶಿಗಳಿಗೆ ಹೇಗಿರಲಿದೆ, ನೋಡೋಣ ಬನ್ನಿ:


ಮೇಷ ರಾಶಿ

ವೃತ್ತಿ ಜೀವನ:ಈ ಮಾಸ ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮಲ್ಲಿರುವ ಕೌಶಲ್ಯಕ್ಕೆ ಮನ್ನಣೆ ಸಿಗಲಿದೆ, ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ. ವ್ಯಾಪಾರಿಗಳಿಗೂ ತುಂಬಾ ಚೆನ್ನಾಗಿರಲಿದೆ
ಆರ್ಥಿಕ ಬದುಕು: ಆರ್ಥಿಕ ಜೀವನದ ದೃಷ್ಟಿಯಿಂದಲೂ ಈ ಮಾಸ ನಿಮಗೆ ಅನುಕೂಲಕರವಾಗಿದೆ
ಆರೋಗ್ಯ: ಈ ಮಾಸ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು, ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಸಂಬಂಧ: ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಮನಸ್ತಾಪ ಬಂದರೆ ಬಗೆಹರಿಸಲು ಪ್ರಯತ್ನಿಸಿ.

Monthly Horoscope


ವೃಷಭ ರಾಶಿ:

ವೃತ್ತಿ ಬದುಕು: ವಷಭ ರಾಶಿಯವರು ಡಿಸೆಂಬರ್‌ ಮಾಸದ ಮೊದಲಾರ್ಧದಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು, ನೀವು ಯೋಚಿಸಿದಂತೆ ಯಾವುದೂ ಆಗುತ್ತಿಲ್ಲ ಎಂಬ ಚಿಂತೆ ಕಾಡಬಹುದು, ಆದರೆ ಹೆಚ್ಚು ಚಿಂತೆ ಮಾಡಬೇಡಿ, ನಂತರ ಎಲ್ಲವೂ ಸರಿಯಾಗಲಿದೆ, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಆರ್ಥಿಕ ಜೀವನ:ಹಣಕಾಸಿನ ದೃಷ್ಟಿಯಿಂದ ಈ ದಿ ಉತ್ತಮವಲ್ಲ, ಹೆಚ್ಚು ಖರ್ಚು ಬರುವ ಸಾಧ್ಯತೆ ಇದೆ, ಅನಗ್ಯತ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು.

ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಈ ಮಾಸ ಧಾರ್ಮಿಕ ಕಾರ್ಯಗಳಕಡೆಗೆ ಒಲವು ಹೆಚ್ಚಲಿದೆ.
ಕುಟುಂಬ ಜೀವ: ಕುಟುಂಬ ಬದುಕು ಸರಾಸರಿಯಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಸಮಸ್ಯೆ ದೊಡ್ಡದು ಮಾಡಲು ಹೋಗಬೇಡಿ.

ಮಿಥುನ ರಾಶಿ

ವೃತ್ತಿ ಜೀವನ: ವೃತ್ತಿ ಬದುಕಿನ ದೃಷ್ಟಿಯಿಂದ ಈ ಮಾಸ ನಮಗೆ ಅನುಕೂಲಕರವಾಗಿರಲಿದೆ. ಈ ವರ್ಷದಲ್ಲಿ ಮುಗಿಸಬೇಕಾಗಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗುವುದು
ಆರ್ಥಿಕ ಜೀವನ: ವರ್ಷದ ಕೊನೆಯ ತಿಂಗಳು ಹಣಕಾಸಿನ ದೃಷ್ಟಿಯಿಂದಲೂ ನಿಮಗೆ ಉತ್ತಮವಾಗಿದೆ
ಆರೋಗ್ಯ: ಈ ಮಾಸ ಆರೋಗ್ಯ ಜೀವನ ಚೆನ್ನಾಗಿರಲಿದೆ.
ಸಂಬಂಧ: ಸಂಬಂಧದ ವಿಷಯದಲ್ಲಿ ನೀವು ಜಾಗ್ರತೆವಹಿಸಬೇಕು, ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಿ, ಇಲ್ಲದಿದ್ದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು.

ಕರ್ಕ ರಾಶಿ

ವೃತ್ತಿ ಜೀವನ: ಈ ಮಾಸ ನೀವು ಕೆಲಸ ಕಾರ್ಯದಲ್ಲಿ ಹೆಚ್ಚಿನ ಗಮನಹರಿಸಬೇಕು, ಅನಗ್ಯತ ವಿಷಯಗಳ ಕಡೆಗೆ ಗಮನಹರಿಸಬೇಡಿ.
ಆರ್ಥಿಕ ಜೀವನ: ಪೂರ್ವಜರ ಆಸ್ತಿಯಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬರಬಹುದು, ಈ ಸಮಯದಲಲಿ ಯಾವುದೇ ಆಸ್ತಿ ವ್ಯವಹಾರ ಮಾಡಲು ಹೋಗದಿದ್ದರೆ ಒಳ್ಳೆಯದು, ವ್ಯಾಪಾರಿಗಳಿಗೆ ಪ್ರಾರಂಭದಲ್ಲಿ ಏರಳಿತದ ಪರಿಸ್ಥಿತಿ ಇರಬಹುದು. ಆದರೆ ನಂತರ ಲಾಭ ಗಳಿಸುತ್ತೀರಿ.
ಆರೋಗ್ಯ: ಆರೋಗ್ಯ ಚೆನ್ನಾಗಿರಲಿದೆ.
ಸಂಬಂಧ: ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಬದುಕಿನಲ್ಲಿ ಪ್ರೀತಿ, ಹೊಂದಾಣಿಕೆ ಇರಲಿದೆ.

ಸಿಂಹ ರಾಶಿ

ವೃತ್ತಿ ಬದುಕು: ಸಿಂಹ ರಾಶಿಯವರಿಗೆ ಡಿಸೆಂಬರ್‌ ಮಾಸ ತುಂಬಾನೇ ಅನುಕೂಲಕರವಾಗಿರಿದೆ,ಕೆಲಸದ ಜಾಗದಲ್ಲಿ ನೀವು ಪ್ರಗತಿ ಕಾಣುವಿರಿ
ಆರ್ಥಿಕ ಜೀವನ: ಆರ್ಥಿಕ ಬದುಕು ಕೂಡ ತುಂಬಾ ಚೆನ್ನಾಗಿರಲಿದೆ, ವ್ಯಾಪಾರಸ್ಥರಿಗೆ ಲಾಭ ಗಳಿಸಲು ಸಾಧ್ಯವಾಗುವುದು.
ಆರೋಗ್ಯ: ಆರೋಗ್ಯ ಚೆನ್ನಾಗಿರಲಿದೆ
ಸಂಬಂಧ: ಈ ಅವಧಿಯಲ್ಲಿ ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು, ಮನೆಯಲ್ಲಿ ಕೆಲ ಶುಭ ಕಾರ್ಯಗಳು ನಡೆಯಲಿದೆ.

ಕನ್ಯಾ ರಾಶಿ

ವೃತ್ತಿ: ಈ ಸಮಯದಲ್ಲಿ ನೀವು ವೃತ್ತಿ ಬದುಕಿನ ಕಡೆಗೆ ಗಮನಹರಿಸಬೇಕು, ಲಾಭದ ಆಸೆಗೆ ಅಡ್ಡ ಮಾರ್ಗ ಹಿಡಿದರೆ ಮತ್ತಷ್ಟು ನಷ್ಟ ಅನುಭವಿಸುವಂತಾಗುವುದು, ಕಾನೂನುಬಾಹಿರ ಚಟುವಟಿಕೆಯಿಂದ ದೂರವಿರಿ.
ಆರ್ಥಿಕ ಜೀವನ: ಈ ಅವಧಿ ಆರ್ಥಿಕವಾಗಿ ಅಷ್ಟೊಂದು ಅನುಕೂಲಕರವಲ್ಲ, ಯಾವುದೇ ದೊಡ್ಡ ಹೂಡಿಕೆ ಅಥವಾ ರಿಸ್ಕ್‌ ತೆಗೆದುಕೊಳ್ಳಲು ಈ ಸಮಯ ಸೂಕ್ತವಲ್ಲ.
ಆರೋಗ್ಯ: ಅತಿಯಾದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು.
ಸಂಬಂಧ: ಕೆಲಸದ ಒತ್ತಡ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು, ನಿಮ್ಮ ಹಾಗೂ ಸಂಗಾತಿಯ ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನ ಹಾಕಬೇಕು.

ತುಲಾ ರಾಶಿ

ವೃತ್ತಿ ಬದುಕು:ವೃತ್ತಿ ಜೀವನದ ದೃಷ್ಟಿಯಿಂದ ಮಿಶ್ರಫಲ. ಡಿಸೆಂಬರ್‌ ಮಾಸದ ಆರಂಭದಲ್ಲಿ ಕೆಲ ಸಮಸ್ಯೆ ಎದುರಿಸಬೇಕಾಗಬಹುದು. ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಆರ್ಥಿಕ ಜೀವನ: ಈ ಸಮಯ ಸವಾಲಿನಿಂದ ಕೂಡಿರಲಿದೆ, ಹೆಚ್ಚು ಖರ್ಚುಗಳು ಬರಬಹುದು, ನೀವು ಬಜೆಟ್‌ ಪ್ಲ್ಯಾನ್‌ ಮಾಡಿ ಅದರಂತೆ ಖರ್ಚು ಮಾಡಿ
ಆರೋಗ್ಯ: ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಸಂಬಂಧ: ಈ ಅವಧಿಯಲ್ಲಿ ನಿಮ್ಮ ವರ್ತನೆ ಬಗ್ಗೆ ಪ್ರೀತಿ ಪಾತ್ರರು ಅಸಮಧನ ವ್ಯಕ್ತಪಡಿಸಬಹುದು, ನಿಮ್ಮ ನಡುವೆ ಅಂತರ ಹೆಚ್ಚಾಗಬಹುದು, ನೀವು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಮಾಸ ಮಿಶ್ರಫಲ, ಹಾಗಾಗಿ ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕಠಿಣ ಪರಿಶ್ರಮ ಹಾಕಿದರೆ ಮಾತ್ರ ಯಶಸ್ಸು ಸಿಗಲಿದೆ, ವೃತ್ತಿ ಜೀವನಕ್ಕೆ ಸಂಬಂಧಿಸಿದ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ.
ಆರ್ಥಿಕ ಜೀವನ: ನೀವು ದಾಖಲೆಗಳಿಗೆ ಸಂಬಂಧಿಸಿದ ವಿಷಯದ ಕಡೆಗೆ ಗಮನಹರಿಸಿ, ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿರಲಿದೆ, ಆದರೆ ಅದರ ಬಗ್ಗೆ ಸಂಪೂರ್ಣ ತಿಳಿದ ಬಳಿಕವಷ್ಟೇ ಮಾಡಿ.
ಆರೋಗ್ಯ: ಆರೋಗ್ಯ ಚೆನ್ನಾಗಿರಲಿದೆ.
ಸಂಬಂಧ: ನಿಮ್ಮ ಪ್ರೀತಿ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.

ಧನು ರಾಶಿ

ವೃತ್ತಿ ಬದುಕು:ಧನು ರಾಶಿಯವರಿಗೆ ಈ ಅವಧಿ ಏರಳಿತದಿಂದ ಕೂಡಿರಲಿದೆ, ನೀವು ಬಯಸಿದ ಫಲ ಪಡೆಯಲು ಹೆಚ್ಚಿನ ಶ್ರಮ ಹಾಕುವುದು ಒಳ್ಳೆಯದು
ಆರ್ಥಿಕ ಜೀವನ: ಆರ್ಥಿಕ ಜೀವನ ತುಂಬಾ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ಹಣವನ್ನು ಉಳಿತಾಯ ಮಾಡಲು ಕೂಡ ಸಾಧ್ಯವಾಗುವುದು.
ಆರೋಗ್ಯ: ಆರೋಗ್ಯದ ದೃಷ್ಟಿಯಿಂಲೂ ಈ ಅವಧಿ ತುಂಬಾ ಅನುಕೂಲಕರವಾಗಿರಲಿದೆ.
ಸಂಬಂಧ:ಸಂಬಂಧದ ವಿಷಯದಲ್ಲಿಯೂ ಮಿಶ್ರಫಲ, ಕೆಲವೊಮ್ಮೆ ತುಂಬಾ ಪ್ರೀತಿ, ಕೆಲವೊಮ್ಮೆ ಜಗಳ ಈ ರೀತಿ ಓಡುತ್ತಿರುತ್ತದೆ, ನೀವು ಸಂಗಾತಿಯ ಭಾವನೆಯನ್ನು ಗೌರವಿಸುವುದು ಒಳ್ಳೆಯದು.


ಮಕರ ರಾಶಿ

ವೃತ್ತಿ ಬದುಕು: ಮಕರ ರಾಶಿಯವರಿಗೆ ಈ ಮಾಸ ಪ್ರತಿಕೂಲಕರವಾಗಿರಲಿದೆ. ನಿಮಗೆ ನೀಡಿರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.
ಆರ್ಥಿಕ ಬದುಕು: ಹಣಕ್ಕೆ ಸಂಬಂಧಿಸಿದಂತೆ ಪ್ರತಿಕೂಲ ಪರಿಸ್ಥಿತಿ ಎದುರಿಸಬಹುದು, ಖರ್ಚು ಹೆಚ್ಚಿರಲಿದೆ, ಬಜೆಟ್‌ ಪ್ಲ್ಯಾನ್‌ ಮಾಡುವುದು ಒಳ್ಳೆಯದು. ಆದರೆ ಹಠಾತ್ ಆರ್ಥಿಕ ಲಾಭ ಗಳಿಸುವ ಸಾಧ್ಯತೆ ಇದೆ.
ಕುಟುಂಬ ಜೀವನ: ಕುಟುಂಬ ಜೀವನ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ.
ಆರೋಗ್ಯ: ಚಿಕ್ಕ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಬೇಡ.

ಕುಂಭ ರಾಶಿ

ವೃತ್ತಿ ಜೀವನ: ಕುಂಭ ರಾಶಿಯವರಿಗೆ ಸವಾಲಿನಿಂದ ಕೂಡಿರಲಿದೆ. ವ್ಯಾಪಾರಸ್ಥರು ವ್ಯವಹಾರದ ಕಡೆಗೆ ಗಮನಹರಿಸಿ.
ಆರ್ಥಿಕ ಜೀವನ: ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಈ ಅವಧಿಯಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ. ದೊಡ್ಡ ಲಾಭದ ನಿರೀಕ್ಷೆಯಲ್ಲಿ ಚಿಕ್ಕ ಲಾಭ ನಿರ್ಲಕ್ಷ್ಯ ಮಾಡಬೇಡಿ.
ಆರೋಗ್ಯ: ಅತಿಯಾದ ಮಾನಸಿಕ ಒತ್ತಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಸಂಬಂಧ: ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಅದು ಹೆಚ್ಚಾಗಲು ಬಿಡಬೇಡಿ.

ಮೀನ ರಾಶಿ

ವೃತ್ತಿ ಜೀವನ: ಮೀನ ರಾಶಿಯವರಿಗೆ ಡಿಸೆಂಬರ್‌ ಮಾಸ ಮಿಶ್ರಫಲ, ಉದ್ಯೋಗಿಗಳು ಈ ಬಗ್ಗೆ ಜಾಗ್ರತೆವಹಿಸಿ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ , ನೀವು ಖರ್ಚು ವೆಚ್ಚಗಳ ಕಡೆಗೆ ಗಮನಹರಿಸಿ.
ಆರೋಗ್ಯ: ಆರೋಗ್ಯದ ವಿಷಯದಲ್ಲಿ ಮಿಶ್ರಫಲ
ಸಂಬಂಧ: ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಗಟ್ಟಿಯಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Monthly Horoscope : December Month Prediction For 12 Zodiac Signs In Kannada

December Month Horoscope: As per astrology howit effects on 12 zodiac signs read on
Story first published: Tuesday, November 26, 2024, 16:01 [IST]
X
Desktop Bottom Promotion