Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಏಪ್ರಿಲ್ 2025ರ ಮಾಸ ಭವಿಷ್ಯ: ಈ ತಿಂಗಳು ಯಾವೆಲ್ಲಾ ರಾಶಿಯವರಿಗೆ ಶುಭ ಸಂಕೇತ ನೋಡಿ.!!
ಏಪ್ರಿಲ್ ತಿಂಗಳ ಮಾಸಿಕ ರಾಶಿಫಲ..
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಏಪ್ರಿಲ್ ತಿಂಗಳು ಬಹಳಷ್ಟು ಜವಾಬ್ದಾರಿ ಹಾಗೆ ಲಾಭಗಳ ಹೊತ್ತು ತರುತ್ತಿದೆ. ಏಪ್ರಿಲ್ ತಿಂಗಳು ಹೊಸ ಅವಕಾಶಗಳ ಬಾಗಿಲು ತೆರೆಯುವುದರ ಜೊತೆಗೆ ಹೊಸ ಸವಾಲುಗಳನ್ನು ಕೂಡ ತರಲಿದೆ. ತಿಂಗಳ ಆರಂಭವು ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ. ಈ ನೀವು ನಿರುದ್ಯೋಗಿಗಳಾಗಿದ್ದರೆ ಈ ತಿಂಗಳಲ್ಲಿ ಹೊಸ ಉದ್ಯೋಗ ನಿಮ್ಮ ಕೈ ಹಿಡಿಯಲಿದೆ. ಹಾಗೆ ದಾಂಪತ್ಯ ಜೀವನದಲ್ಲಿ ಇದ್ದ ದೊಡ್ಡ ಅಡ್ಡಿ ಅಥವಾ ಸಮಸ್ಯೆ ನಿವಾರಣೆಯಾಗುತ್ತಿದೆ. ನಿಮ್ಮ ವಿದೇಶ ಪ್ರವಾಸ ಅಥವಾ ಕುಟುಂಬಸ್ಥರೊಂದಿಗೆ ಪ್ರವಾಸ ಕೈಗೊಳ್ಳುವ ಆಸೆಯೊಂದು ನೆರವೇರಲಿದೆ. ಹಣಕಾಸು ಸ್ಥಿತಿ ಸುಧಾರಿಸುತ್ತದೆ. ಆದರೆ ಖರ್ಚು ಕೂಡ ಹೆಚ್ಚಾಗುವುದು ನೋಡಬಹುದು. ಆರೋಗ್ಯದ ಕಡೆಗೆ ಗಮನ ಇಟ್ಟರೆ ಒಳಿತು. ವಿದ್ಯಾರ್ಥಿಗಳಿಗೆ ಈ ತಿಂಗಳ ಉತ್ತರಾರ್ಥದಿಂದ ಶುಭ ಫಲ ಸಿಗುವ ನಿರೀಕ್ಷೆಗಳಿವೆ.

ವೃಷಭ ರಾಶಿ
ಏಪ್ರಿಲ್ ತಿಂಗಳ ಆರಂಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗಳಿಂದ ನಿಮಗೆ ಹಲವು ರೀತಿ ಅಡೆತಡೆ ಎದುರಿಸಬೇಕಾಗಬಹುದು, ನಿಮ್ಮ ದೈನಂದಿನ ಕೆಲಸಗಳಲ್ಲಿ ತಿಂಗಳ ಮಧ್ಯದವರೆಗೂ ಅಡೆತಡೆ ನೋಡಬೇಕಾಗುತ್ತದೆ. ಆದರೆ ಉತ್ತರಾರ್ಧದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗುವುದು ನೋಡಬಹುದು. ಈ ತಿಂಗಳಲ್ಲಿ ನಿಮ್ಮ ದೊಡ್ಡ ಕನಸೊಂದು ನನಸಾಗಬಹುದು. ಹಾಗೆ ಅವಿವಾಹಿತರಲ್ಲಿ ಮದುವೆ ಕುರಿತಾದ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿ ಪರರಲ್ಲಿ ಒತ್ತಡ ಹೆಚ್ಛಾಗಬಹುದು ಆದರೆ ಅದನ್ನು ಹೇಗೆ ಬಗೆಹರಿಸಬೇಕು ಎಂಬುದನ್ನು ನೀವು ಅರಿಯಬಹುದು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ಕಡತಗಳು, ದಾಖಲಾತಿಗಳು, ಪತ್ರ ವ್ಯವಹಾರ ನಡೆಸುತ್ತಿದ್ದರೆ ನಿಮ್ಮ ಪರವಾದ ಕೆಲಸಗಳು ಮುಗಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ತಿಂಗಳಲ್ಲಿ ಮಿಶ್ರ ಫಲ ನೋಡಬಹುದು. ಹಣಕಾಸಿನ ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು. ಹಾಗೆ ವ್ಯಾಪಾರಿಗಳು ತಿಂಗಳ ಅಂತ್ಯದವರೆಗೂ ಉತ್ತಮ ದಿನಗಳ ನೋಡಲಿದ್ದಾರೆ. ಆದರೆ ಅವರಲ್ಲಿ ಖರ್ಚುಗಳು ಸಹ ಹೆಚ್ಚಾಗುತ್ತದೆ. ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಯಾವುದೇ ವಿಚಾರದಲ್ಲಿ ನೀವು ತರಾತುರಿಯ ನಿರ್ಧಾರಗ ತೆಗೆದುಕೊಳ್ಳಲು ಮುಂದಾಗಬೇಡಿ. ನಿಮ್ಮ ಕಠಿಣ ಶ್ರಮಕ್ಕೆ ಈ ತಿಂಗಳಲ್ಲಿ ಫಲಿತಾಂಶ ನೋಡಬಹುದು. ಕೆಲಸದ ಸ್ಥಳದಲ್ಲಿನ ಬಹಳಷ್ಟು ಬದಲಾವಣೆಗಳಿಗೆ ಹೊಂದಿಕೊಳ್ಳಲು ನಿಮಗೆ ಕಷ್ಟವಾಗಬಹುದು. ವೈರಸ್ ಸಮಸ್ಯೆಗೆ ನೀವು ಒಳಗಾಗಬಹುದು. ಸಾಲ ತೀರಿಸುವ ಮನಸ್ಸು ಮಾಡಿದರೆ ಅದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.
ಕರ್ಕ ರಾಶಿ
ಏಪ್ರಿಲ್ ತಿಂಗಳಲ್ಲಿ ಕರ್ಕಾಟಕ ರಾಶಿ ಜನರು ಆತ್ಮ ವಿಶ್ವಾಸ ಕುಗ್ಗಿಸುವ ಹಲವು ವಿಚಾರಗಳು, ಘಟನೆಗಳ ಎದುರಿಸಬೇಕಾಗುತ್ತದೆ. ತಿಂಗಳ ಆರಂಭವು ನಿಮಗೆ ಶುಭವಾಗುವ ಬದಲಾಗಿ ತಿಂಗಳ ಅಂತ್ಯದಲ್ಲಿ ಹಲವು ಶುಭ ಗಳಿಗೆಗಳು ನಿಮ್ಮ ಹುಡುಕಿ ಬರಬಹುದು. ನಿಮ್ಮ ಆಲೋಚನೆಗಳನ್ನು ಬೆಂಬಲಿಸುವ ಹಲವು ಕೆಲಸಗಳ ನೀವು ಮಾಡುತ್ತೀರಿ. ವಾಹನ ಖರೀದಿಯಂತಹ ಕೆಲಸಕ್ಕೆ ನೀವು ಮುಂದಾದರೆ ಶುಭವಾಗಲಿದೆ. ನಿಮ್ಮ ಕೆಲವು ಬೇಡಿಕೆಗಳಿಗೆ ಕುಟುಂಬಸ್ಥರಿಂದ ಬೆಂಬಲ ಇರಲಿದೆ. ವ್ಯಾಪಾರಿಗಳು ಈ ತಿಂಗಳಲ್ಲಿ ಮಿಶ್ರಫಲ ನೋಡಲಿದ್ದೀರಿ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳ ಮುಗಿಸುವುದು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಬಹಳಷ್ಟು ವಿಚಾರಗಳಲ್ಲಿ ನೀವು ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಬಹಳ ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರು ಈ ಏಪ್ರಿಲ್ ತಿಂಗಳಿನಲ್ಲಿ ಹಲವು ರೀತಿಯ ಅದೃಷ್ಟಕ್ಕೆ ತೆರೆದುಕೊಳ್ಳಲಿದ್ದಾರೆ. ನಿಮ್ಮ ಪ್ರೀತಿ ಪಾತ್ರರ ಭೇಟಿಯಾಗಬಹುದು. ಪ್ರವಾಸಗಳು, ವಿಶ್ರಾಂತಿಯ ಕಡೆಗೆ ನಿಮ್ಮ ಒಲವು ಇರಲಿದೆ. ಬಹಳ ದಿನಗಳ ಆಸೆಗಳು ಈಡೇರಿಸಿಕೊಳ್ಳುವಂತಹ ಸಮಯ ಇದಾಗಿರಲಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಈ ಸಮಯ ಬಹಳ ಶುಭಕರವಾಗಿರಲಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಲಾಭದಾಯಕ ದಿನಗಳ ನೋಡಲಿದ್ದಾರೆ. ಕುಟುಂಬಸ್ಥರ ಜೊತೆಗೆ ಬಹಳಷ್ಟು ಸಮಯ ಕಳೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಜವಾಬ್ದಾರಿಗಳು ಬದಲಾಗಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ. ತಿಂಗಳ ಉತ್ತರಾರ್ಧದಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಈ ಏಪ್ರಿಲ್ ತಿಂಗಳಲ್ಲಿ ಹಲವು ರೀತಿಯ ಹೊಸತಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಹಾಳಾದ ವಸ್ತುಗಳನ್ನು ದುರಸ್ತಿ ಮಾಡಲು ನೀವು ಪ್ರಯತ್ನಿಸಬಹುದು. ವೈಯಕ್ತಿಕ ಜೀವನ ಹಾಗೂ ದಾಂಪತ್ಯ ಜೀವನದಲ್ಲಿ ಸುಖ ನಿಮ್ಮದಾಗಲಿದೆ. ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜನರೊಂದಿಗೆ ನಿಕಟತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಪ್ರಗತಿ ನೋಡುತ್ತೀರಿ. ಕೆಲಸದ ಸ್ಥಳದಲ್ಲಿ ಜನರು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮೆಚ್ಚುತ್ತಾರೆ. ನಿಮ್ಮ ಮನಸ್ಸು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ತಿಂಗಳ ಉತ್ತರಾರ್ಧದಲ್ಲಿ ನಿಮ್ಮ ಹಿತೈಷಿಗಳು ಮತ್ತು ಹಿರಿಯರ ಸಲಹೆಯಂತೆ ನಡೆಯುವುದು ಬಹಳ ಮುಖ್ಯ.
ತುಲಾ ರಾಶಿ
ತುಲಾ ರಾಶಿ ಜನರು ಏಪ್ರಿಲ್ ತಿಂಗಳು ಮೊದಲಿಗಿಂತ ಹೆಚ್ಚು ಆರ್ಥಿಕವಾಗಿ ಬಲಗೊಳ್ಳುತ್ತಾರೆ. ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗಿದ್ದ ದೊಡ್ಡ ಸವಾಲೊಂದನ್ನು ನೀವು ನಿವಾರಿಸಲಿದ್ದೀರಿ. ಈ ತಿಂಗಳು ನೀವು ನಿಮ್ಮ ವೃತ್ತಿ ಮತ್ತು ವ್ಯವಹಾರದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ವ್ಯಾಪಾರ ಪ್ರವಾಸಗಳು ಯಶಸ್ವಿಯಾಗುತ್ತವೆ ಮತ್ತು ಲಾಭದಾಯಕವಾಗುತ್ತವೆ. ತಿಂಗಳ ಮಧ್ಯದಲ್ಲಿ ನಿಮಗೆ ದೊಡ್ಡ ತಿರುವು ಕಾದಿದೆ. ನಿಮ್ಮ ಜೀವನದ ಬಹುದೊಡ್ಡ ನಿರ್ಧಾರ ನೀವು ತೆಗೆದುಕೊಳ್ಳುವ ಸಂದರ್ಭ ಬರಬಹುದು. ವಿವಾಹಿತರಲ್ಲಿ ಖರ್ಚು ಹೆಚ್ಚಾಗಲಿದೆ. ನಿಮ್ಮ ಉಳಿತಾಯ, ಹೂಡಿಕೆಗಳಲ್ಲಿ ನಷ್ಟ ಸಂಭವಿಸಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಈ ತಿಂಗಳು ಬಹಳಷ್ಟು ಸವಾಲುಗಳ ಎದುರಿಸಬೇಕಾಗಬಹುದು, ನಿಮ್ಮ ಅಮೂಲ್ಯವಾದ ವಸ್ತುಗಳ ಕುರಿತು ಬಹಳ ಜಾಗೃತೆ ಇಡಬೇಕು. ಮಕ್ಕಳ ಭವಿಷ್ಯದ ಕುರಿತಂತೆ ನಿಮಗೆ ಚಿಂತೆ ಕಾಡಬಹುದು. ಸಂಬಂಧಿಕರಿಂದ ಈ ಸಮಯದಲ್ಲಿ ಶುಭ ಸುದ್ದಿ ಕೇಳಬಹುದು, ಪ್ರವಾಸಕ್ಕೆ ನೀವು ಮುಂದಾಗಬಹುದು. ಹಣದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ತಿಂಗಳ ಮಧ್ಯದಲ್ಲಿ ನಿಮ್ಮ ಮಗುವಿಗೆ ಸಂಬಂಧಿಸಿದ ಯಾವುದೋ ಸಮಸ್ಯೆಯ ಬಗ್ಗೆ ನಿಮ್ಮ ಮನಸ್ಸು ಚಿಂತಿತವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ಧನು ರಾಶಿ
ಧನು ರಾಶಿ ಜನರಿಗೆ ಏಪ್ರಿಲ್ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ. ಈ ತಿಂಗಳು ನೀವು ಕೆಲವೊಮ್ಮೆ ಸಂತೋಷ ಮತ್ತು ಕೆಲವೊಮ್ಮೆ ದುಃಖದ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಹಲವು ಪೂರ್ವ ನಿಯೋಜಿತ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ಬಹಳ ಸಮಯದಿಂದ ನೀವು ಬಯಸಿದ್ದ ದೊಡ್ಡ ಕನಸನ್ನು ಮುಟ್ಟಬಹುದು. ದುಬಾರಿ ವಸ್ತು ಖರೀದಿಸಬಹುದು. ಆರ್ಥಿಕವಾಗಿ ನೀವು ಬಲಗೊಳ್ಳಲು ಸ್ಮೇಹಿತರು ಅಥಾವಾ ಆತ್ಮೀಯರಿಂದ ಸಹಕಾರ ಪಡೆಯಲಿದ್ದೀರಿ. ಬ್ಯಾಂಕಿಂಗ್ ವಲಯದಲ್ಲಿನ ನಿಮ್ಮ ಕೆಲಸಗಳು ಧನಾತ್ಮಕವಾಗಿ ಬದಲಾಗಲಿದೆ. ಕುಟುಂಬದೊಂದಿಗೆ ಸಂತಸದ ಕ್ಷಣ ನಿಮ್ಮದಾಗಲಿದೆ. ನಿಮ್ಮ ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು.
ಮಕರ ರಾಶಿ
ಏಪ್ರಿಲ್ ತಿಂಗಳು ಮಕರ ರಾಶಿಯವರಿಗೆ ಸಾಮಾನ್ಯವಾಗಿ ಫಲಪ್ರದವಾಗಿರಲಿದೆ. ಈ ತಿಂಗಳು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ. ನೀವು ಹಣಕಾಸು ವಹಿವಾಟು ಮಾಡುವಾಗ ಬಹಳ ಜಾಗರೂಕರಾಗಿರಬೇಕು. ತಿಂಗಳ ಎರಡನೇ ವಾರದಿಂದ ಶುಭ ಫಲಗಳ ನೀಡಲು ಮುಂದಾಗುತ್ತೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ವ್ಯಾಪಾರಿಗಳಿಗೂ ಈ ತಿಂಗಳು ಶುಭಕರವಾಗಲಿದೆ. ನಿಮ್ಮ ಮಾತಿನಿಂದ ಈ ಸಮಯದಲ್ಲಿ ಹಲವು ಸಮಸ್ಯೆಗಳನ್ನು ನೀವು ತಂದುಕೊಳ್ಳಬಹುದು ಹೀಗಾಗಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ
ಕುಂಭ ರಾಶಿಯ ಜನರು ಈ ತಿಂಗಳಿನ ಆರಂಭದಲ್ಲಿ ಸ್ವಲ್ಪ ವ್ಯವಹಾಕ್ಕೆ ಸಂಬಂಧಿಸಿದ್ದ ಸಮಸ್ಯೆಗಳ ಎದುರಿಸಬಹುದು ಆದರೆ ನಂತರದ ಸಮಯದಲ್ಲಿ ಸಮಸ್ಯೆಗಳು ದೂರಾಗಲಿದೆ. ಪಂಚೇಂದ್ರಿಯಕ್ಕೆ ಸಂಬಂಧಿಸಿದ್ದ ಅನಾರೋಗ್ಯಕ್ಕೆ ನೀವು ಒಳಗಾಗಿದ್ದರೆ ಈ ಸಮಯದಲ್ಲಿ ನಿವಾರಣೆ ಆಗಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ತಿಂಗಳಲ್ಲಿ ನಿಮ್ಮ ಬಯಕೆಯ ಕೆಲಸ ಒಲಿಯಹುದು. ಅವಿವಾಹಿತರಲ್ಲಿ ಧನಲಾಭ ನೋಡಬಹುದು. ಈ ರಾಶಿಯವರಿಗೆ ಯಾವುದೇ ಕೆಲಸ ಮಾಡುವಾಗ ಅಡ್ಡಿಯಾಗುತ್ತಿದ್ದ ಅನಾರೋಗ್ಯ ಸಮಸ್ಯೆ ನಿವಾರಣೆ ಆಗುವ ನಿರೀಕ್ಷೆ ಇದೆ. ಕುಟುಂಬದಲ್ಲಿ ನಿಮ್ಮಿಂದಾಗಿ ಸಂತಸ ಇರಲಿದೆ. ನಿಮ್ಮ ಯೋಜನೆಗಳಿಗೆ ಅಗತ್ಯ ಬೆಂಬಲವು ಸಿಗಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಇಡೀ ಏಪ್ರಿಲ್ ತಿಂಗಳು ಶುಭ ಫಲವಿದೆ. ನಿಮ್ಮ ಬಹುದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಈಗ ಪೂರ್ಣವಾಗಲಿವೆ. ಬಹುಕಾಲದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ದೂರಾಗಲಿದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಆದಾಯದಲ್ಲಿ ಪ್ರಗತಿ ನೋಡಬಹುದು. ಅನಿರೀಕ್ಷಿತವಾಗಿ ಲಾಭದಾಯಕ ದಿನಗಳು ನಿಮಗೆ ಎದುರಾಗಲಿವೆ. ತಿಂಗಳ ಅಂತ್ಯದಲ್ಲಿ ಒತ್ತಡ ಹೆಚ್ಚಾಗಬಹುದು, ಹಾಗೆ ಉದ್ಯೋಗ ಸಂಬಂಧಿ ಆತಂಕಗಳು ಕಾಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











