Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
September 2025 Horoscope: ಈ ತಿಂಗಳು ಅದೃಷ್ಟದ ಬಾಗಿಲು ತೆರೆಯೋದು ಯಾರಿಗೆ?
ಸೆಪ್ಟೆಂಬರ್ 2025ರ ನಿಮ್ಮ ಮಾಸಿಕ ರಾಶಿಫಲ
ಮೇಷ ರಾಶಿ
ಸೆಪ್ಟೆಂಬರ್ ತಿಂಗಳು ಮೇಷ ರಾಶಿಯವರಿಗೆ ಉತ್ತಮ ಉತ್ಸಾಹದಾಯಕ ಹಾಗೆ ಆತ್ಮ ವಿಶ್ವಾಸ ಹೆಚ್ಚಿಸುವ ತಿಂಗಳು. ವೃತ್ತಿ ಬದಲಾವಣೆ ಹಾಗೆ ಹೊಸದಾಗಿ ಉದ್ಯೋಗ ಹುಡುಕುವ ಮಂದಿಗೆ ಈ ತಿಂಗಳು ಬಹಳ ಅನುಕೂಲಕರ ವಾತಾವರಣ ಇರಲಿದೆ. ಕುಟುಂಬದಲ್ಲಿ ಶಾಂತಿಗೆ ಕಾರಣಾಗುವಂತಹ ಹಲವು ವಿಚಾರಗಳು ನಡೆಯಲಿವೆ. ಅದ್ರಲ್ಲೂ ಶುಭ ಕಾರ್ಯಗಳ ಸಂಬಂಧವಾಗಿ ಪೂರ್ವ ತಯಾರಿ ನಡೆಯಲಿದೆ. ನಿಮ್ಮ ಅನೇಕ ಕೆಲಸಗಳಿಗೆ ಈ ತಿಂಗಳಲ್ಲಿ ಅನುಮೋದನೆ ಹಾಗೂ ಶುಭಕರ ಆರಂಭ ಸಿಗುವುದು ನೋಡಬಹುದು. ವಿದೇಶ ಪ್ರವಾಸ ಹಾಗೆ ಕುಟುಂಬಸ್ಥರೊಂದಿಗೆ ಪ್ರವಾಸ ತೆರಳಬಹುದು. ಹಳೆಯ ಸ್ನೇಹಿತರನ್ನು ಸಂಪರ್ಕಿಸಲು ಮತ್ತು ಹೊಸ ಸಂಬಂಧಗಳನ್ನು ಮಾಡಿಕೊಳ್ಳಲು ಇದು ಶುಭ ಸಮಯ.
ವೃಷಭ ರಾಶಿ
ಈ ತಿಂಗಳು ಸಾಮಾಜಿಕ ಮತ್ತು ಕುಟುಂಬ ಜೀವನದಲ್ಲಿ ಸಂತೋಷದ ಸಮಯ. ಕುಟುಂಬ ಸದಸ್ಯರ ಯಶಸ್ಸಿನಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಹೂಡಿಕೆಗಳಿಂದ ನೀವು ಪ್ರಯೋಜನಗಳ ಪಡೆಯಬಹುದು. ಔದ್ಯೋಗಿಕ ಲಾಭಗಳ ಪಡೆಯಬಹುದು ಅದ್ರಲ್ಲೂ ವೇತನ ಹೆಚ್ಚಳದ ಶುಭವಿದೆ. ನೀವು ಬಹಳ ಸಮಯದಿಂದ ವಾಹನ ಖರೀದಿಯ ಆಲೋಚನೆಯಲ್ಲಿದ್ದರೆ ಈ ತಿಂಗಳು ಅದಕ್ಕೆ ಮುನ್ನುಡಿ ಬರೆಯಬಹುದು. ಪ್ರಯಾಣಗಳು ಸುಖಕರವಾಗಿರಲಿದೆ. ವ್ಯಾಪಾರಿಗಳಿಗೆ ಉತ್ತಮ ಸಮಯ ಆಗಿರಲಿದೆ. ವಿವಾಹಿತರಿಗೆ ದುಂದು ವೆಚ್ಚ ಇರಲಿದೆ.

ಮಿಥುನ ರಾಶಿ
ಸೆಪ್ಟೆಂಬರ್ ತಿಂಗಳು ಮಿಥುನ ರಾಶಿಯ ಜನರಿಗೆ ಅತ್ಯುತ್ತಮ ದಿನ ಆಗಿರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಪರಿಶ್ರಮ ಎದ್ದು ಕಾಣಲಿದೆ. ನಿಮ್ಮ ಹಣಕಾಸು ಕುರಿತಾದ ಸಮಸ್ಯೆಗಳಿಗೆ ತಿಂಗಳ ಕೊನೆಯಲ್ಲಿ ಪರಿಹಾರ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಸುದೀರ್ಘ ಪ್ರಯಾಣಗಳ ಮಾಡುವಿರಿ. ವಿಶೇಷವಾಗಿ ವ್ಯವಹಾರದ ದೃಷ್ಟಿಕೋನದಿಂದ. ಈ ಸಮಯವು ಆರ್ಥಿಕ ದೃಷ್ಟಿಕೋನದಿಂದ ಸಾಮಾನ್ಯವಾಗಿರುತ್ತದೆ, ಆದರೆ ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಉತ್ತಮ. ತಿಂಗಳ ಮಧ್ಯದಲ್ಲಿ ಆಸ್ಪತ್ರೆ, ಅನಾರೋಗ್ಯ ವಿಚಾರವಾಗಿ ಒತ್ತಡ ಇರಲಿದೆ. ದಾಂಪತ್ಯದಲ್ಲಿ ಮನಸ್ತಾಪಗಳಿರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ತಿಂಗಳು ಬಹಳ ಅನುಕೂಲವಿದೆ. ನಿಮ್ಮ ಬಹುದೊಡ್ಡ ಆಸೆಯೊಂದನ್ನು ಈಡೇರಿಸಿಕೊಳ್ಳು ಇದು ಶುಭ ತಿಂಗಳು. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಶಾಂತಿಗೆ ಕಾರಣವಾಗುವಂತಹ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ಹೊಸ ಕೆಲಸಗಳ ಹುಡುಕುತ್ತಿದ್ದರೆ ಅಚ್ಚರಿಯ ಫಲಿತಾಂಶ ನಿಮ್ಮದಾಗಲಿದೆ. ವೃತ್ತಿ ಪರ ಲಾಭಗಳು ನಿಮ್ಮದಾಗಲಿವೆ. ಯಾವುದೇ ಹಳೆಯ ವಿವಾದವನ್ನು ಪರಿಹರಿಸಲು ಸಾಧ್ಯವಾಗಿಸುತ್ತದೆ. ಕಠಿಣ ಪರಿಶ್ರಮದಿಂದ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಮತ್ತು ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆಯಿದೆ.
ಸಿಂಹ ರಾಶಿ
ಸೆಪ್ಟೆಂಬರ್ ಸಿಂಹ ರಾಶಿಯವರಿಗೆ ಮಿಶ್ರ ಫಲದ ದಿನಗಳಿವೆ. ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಲಾಭವಿದ್ದರೂ ಖರ್ಚು ಕೂಡ ಹೆಚ್ಚಾಗಿರಲಿದೆ. ನಿಮ್ಮ ಆಪ್ತರೊಬ್ಬರಿಗೆ ನೀಡಿದ್ದ ಹಣ ನಿಮ್ಮ ಕೈ ಸೇರಲಿದೆ. ಹಾಗೆ ಅಗತ್ಯ ಸಮಯದಲ್ಲಿ ನಿಮಗೆ ಹಣ ಬಂದು ಸೇರಬಹುದು. ನಿಮ್ಮ ವಾಹನ ಖರೀದಿಯ ಕನಸಿಗೆ ಈ ತಿಂಗಳಿನಲ್ಲಿ ಒಂದು ಹೆಜ್ಜೆ ಮುಂದಿಡುತ್ತೀರಿ. ಶುಭ ಕಾರ್ಯಗಳ ಸಂಬಂಧ ಖರ್ಚು ಇದೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮ್ಮ ನಡೆ ಧನಾತ್ಮಕವಾಗಲಿದೆ. ದಾಂಪತ್ಯ ಸುಖಕರವಾಗುತ್ತಿದೆ. ಸರ್ಕಾರಿ ನೌಕರರಿಗೆ ಉತ್ತಮ ಸಮಯ ಆಗಿರಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಸುಧಾರಣೆಯಾಗಲಿದೆ.
ಕನ್ಯಾ ರಾಶಿ
ಈ ತಿಂಗಳು ನಿಮಗೆ ಮಿಶ್ರ ಫಲ. ಗೃಹಿಣಿಯರು ಈ ತಿಂಗಳಲ್ಲಿ ಬಹಳಷ್ಟು ಓಡಾಟ ಹಾಗೂ ಹೊಸ ಜವಾಬ್ದಾರಿಗಳ ಹೊಂದುವುದು ನೋಡಬಹುದು.
ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ. ಕುಟುಂಬದೊಂದಿಗೆ ಸಮನ್ವಯ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ನಿಮ್ಮ ಅನಾರೋಗ್ಯ ವಿಚಾರವಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ. ವ್ಯಾಪಾರ ಪ್ರಗತಿಗೆ ಅವಕಾಶವಿದೆ. ದೂರ ಪ್ರಯಾಣಗಳ ಮಾಡುವಿರಿ. ಸಜ್ಜನರ ಸಂಘ ಮಾಡುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ತಿಂಗಳು ಬಹಳ ಅನುಕೂಲವಿದೆ. ನಿಮ್ಮ ಕನಸುಗಳ ಈಡೇರಿಸಿಕೊಳ್ಳಲು ಈ ಸಮಯದಲ್ಲಿ ಶುಭವಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಯೋಜನಕಾರಿ ಅವಕಾಶಗಳ ಪಡೆಯಬಹುದು. ಹಳೆಯ ಯೋಜನೆಗಳ ಮೇಲೆ ಕೇಂದ್ರೀಕರಿಸುವುದು ಉತ್ತಮ ಫಲಿತಾಂಶಗಳ ನೀಡುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಸಮಯ ಅನುಕೂಲಕರವಾಗಿದೆ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕುಟುಂಬ ಜೀವನದಲ್ಲಿ ಸಮತೋಲನ ಇರಲಿದೆ. ಆರೋಗ್ಯ ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ವಾಹನಗಳಲ್ಲಿ ಪ್ರಯಾಣ ಮಾಡುವಾಗ ಮತ್ತಷ್ಟು ಎಚ್ಚರಿಕೆ ಇರಲಿ. ನವ ವಿವಾಹಿತರಿಗೆ ಈ ಸಮಯದಲ್ಲಿ ಕಷ್ಟಗಳು ಬರಬಹುದು.
ವೃಶ್ಚಿಕ ರಾಶಿ
ನಿಮಗೆ ಸೆಪ್ಟೆಂಬರ್ ತಿಂಗಳು ಹೋರಾಟ ಮತ್ತು ಕಠಿಣ ಪರಿಶ್ರಮದ ಫಲ ಅನುಭವಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯತೆ ಇದೆ, ಆದರೆ ದೊಡ್ಡ ಖರ್ಚುಗಳನ್ನು ತಪ್ಪಿಸಿ. ಕುಟುಂಬದೊಂದಿಗೆ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ನಿಮ್ಮದಲ್ಲದ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಇಲ್ಲವೆ ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ನಿಮ್ಮ ವ್ಯವಹಾರ ಒಪ್ಪಂದಗಳಲ್ಲಿ ಸಕಾರಾತ್ಮಕ ಪರಿಸ್ಥಿತಿ ಇರಲಿದೆ. ಅನಾರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರ ಉದ್ದೇಶಗಳಿಂದ ನೀವು ಪ್ರಯಾಣ ಮಾಡಬೇಕಬಹುದು, ತಿಂಗಳ ಅಂತ್ಯದಲ್ಲಿ ನಿಮ್ಮಲ್ಲಿ ಹಣಕಾಸಿನ ವಿಚಾರವಾಗಿ ಒತ್ತಡ ಎದುರಾಗಬಹುದು.
ಧನು ರಾಶಿ
ಈ ತಿಂಗಳು ಧನು ರಾಶಿಯವರಿಗೆ ಸಕಾರಾತ್ಮಕ ಶಕ್ತಿ ಮತ್ತು ಯಶಸ್ಸನ್ನು ಸೂಚಿಸುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಧನಾತ್ಮಕ ವಿಚಾರಗಳಿವೆ. ವಿಶೇಷವಾಗಿ ಹೊಸ ಯೋಜನೆಗಳ ತಯಾರಿಯಲ್ಲಿದ್ದರೆ ಆರ್ಥಿಕ ಸಹಾಯ ಪಡೆಯುತ್ತೀರಿ, ನಿಮ್ಮ ಬ್ಯಾಂಕಿಂಗ್, ಫೈನಾನ್ಸ್ ವಿಚಾರದಲ್ಲಿ ಶುಭವಿದೆ. ಆಪ್ತರೊಬ್ಬರ ಜೊತೆಗಿನ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಸ್ಥಿರವಾದ ನಿಮ್ಮ ಆರ್ಥಿಕ ಪರಿಸ್ಥಿತಿಯು ನಿಮಗೆ ನೆಮ್ಮದಿ ತರಲಿದೆ. ದೂರ ಪ್ರಯಾಣಗಳಲ್ಲಿ ನೀವು ಭಾಗಿಯಾಗುತ್ತೀರಿ.
ಮಕರ ರಾಶಿ
ಸೆಪ್ಟೆಂಬರ್ ತಿಂಗಳು ಮಕರ ರಾಶಿಯವರಿಗೆ ಸವಾಲಿನದ್ದಾಗಿರುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಈ ತಿಂಗಳ ಫಲದಾಯಕವಾಗುತ್ತಿದೆ. ನಿಮ್ಮ ಕುಟುಂಬದೊಂದಿಗಿನ ವ್ಯವಹಾರಗಳು ಸುಗಮವಾಗುತ್ತವೆ. ಆರ್ಥಿಕ ದೃಷ್ಟಿಕೋನದಲ್ಲಿ ಈ ತಿಂಗಳು ನಿಮಗೆ ಸವಾಲು ತರಬಹುದು. ಹಲವು ಕಾರಣದಿಂದಾಗಿ ನಿಮ್ಮ ಕೆಲಸಗಳಲ್ಲಿ ಅಡ್ಡಿ ಆತಂಕ ಎದುರಾಗಬಹುದು. ಮಾನಸಿಕ ಒತ್ತಡ ಸಹ ಇರಲಿದೆ. ಕುಟುಂಬಸ್ಥರಿಂದ ಹಣಕಾಸಿನ ಸಹಾಯ ಪಡೆಯುವ ನಿಮ್ಮ ಬಯಕೆ ಈಡೇರದೆ ಇರಬಹುದು.
ಕುಂಭ ರಾಶಿ
ಸೆಪ್ಟೆಂಬರ್ ತಿಂಗಳು ಕುಂಭ ರಾಶಿಯವರಿಗೆ ಹೊಸ ಅವಕಾಶಗಳಿಗೆ ದಾರಿಯಾಗುತ್ತಿದೆ. ಕೌಟುಂಬಿಕ ವಿಚಾರವಾಗಿದ್ದ ಕಲಹಗಳು ನಿವಾರಣೆಯಾಗಲಿವೆ. ನಿಮ್ಮ ಹೊಸ ವ್ಯವಹಾರಗಳು ನಿಮಗೆ ಆದಾಯ ತರಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ. ಮನೆಯಲ್ಲಿ ಹಣಕಾಸಿನ ವಿಚಾರವಾಗಿ ನಿಮಗೆ ಒತ್ತಡ ಇರಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಅಥವಾ ಬಾಹ್ಯ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ವಿಚಾರವಾಗಿ ನಿಮ್ಮಲ್ಲಿ ಚಿಂತೆಯೊಂದು ಮೂಡಬಹುದು. ವಾಹನ ಸಂಬಂಧ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ.
ಮೀನ ರಾಶಿ
ಮೀನ ಜನರಿಗೆ ಈ ತಿಂಗಳು ಮಿಶ್ರ ಫಲದ ದಿನ. ನಿಮ್ಮ ಬಹಳ ವರ್ಷದ ಕೆಲಸಗಳು ಈ ತಿಂಗಳು ಪೂರ್ಣ ಆಗುವುದು ನೋಡಬಹುದು. ನಿಮ್ಮ ಮನೆ ನಿರ್ಮಾಣ, ನವೀಕರಣ ವಿಚಾರವಾಗಿ ಈ ತಿಂಗಳಿನಲ್ಲಿ ಬಹಳಷ್ಟು ಖರ್ಚು ಇರಬಹುದು. ದೂರ ಪ್ರಯಾಣಗಳ ಮಾಡಬೇಕಾಗಿ ಬರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುತ್ತೀರಿ. ಸಲ ಪಾವತಿ ಕೂಡ ಮಾಡಬಹುದು. ಬ್ಯಾಂಕಿಂಗ್ ವಿಚಾರದಲ್ಲಿ ಲಾಭವಿದೆ. ಉಳಿತಾಯ ಹೆಚ್ಚಳವಾಗುತ್ತದೆ.



Click it and Unblock the Notifications











