Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರ ಜೂನ್ ಮಾಸ ಭವಿಷ್ಯ: ಈ ತಿಂಗಳು ಯಾರಿಗೆಲ್ಲಾ ಧನಲಾಭ? ಯಾರಿಗಿದೆ ಅದೃಷ್ಟ?
ಜೂನ್ 2025ರ ನಿಮ್ಮ ಮಾಸಿಕ ರಾಶಿಫಲ
ಮೇಷ ರಾಶಿ
ಮೇಷ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿಲಿದೆ. ಗ್ರಹಗಳ ಸಂಚಾರದಲ್ಲಿ ಬಹಳ ಅನುಕೂಲಕರವಾಗಿರುವುದರಿಂದ ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ. ಹಠಾತ್ ಅದೃಷ್ಟ ಮತ್ತು ಹಣಕಾಸು ವಿಚಾರವಾಗಿ ನಿಮಗೆ ಅನುಕೂಲಕರವಾಗಿರಲಿದೆ. 5ನೇ ಮನೆಯಲ್ಲಿ ಕೇತು ಸಂಚಾರದಿಂದ ಕೊಂಚ ಮಟ್ಟಿನ ಅಡೆತಡೆ ಇರುವುದು ನೋಡಬಹುದು. ಆದ್ರೆ ಹೊಸ ಪ್ರಯತ್ನಗಳಲ್ಲಿ ನಿಮಗೆ ಶುಭವಾಗುವುದು ನೋಡಬಹುದು. ಇನ್ನು ಆರೋಗ್ಯದ ವಿಚಾರವಾಗಿಯೂ ಕೂಡ ನಿಮಗೆ ಉತ್ತಮ ದಿನಗಳಿವೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಈ ತಿಂಗಳಲ್ಲಿ ಬಹಳ ಧನಾತ್ಮಕ ಕೆಲಸಗಳ ಮಾಡುವ ತಿಂಗಳಾಗಿದೆ. ನಿಮ್ಮ ಕೆಲಸದ ಕಾರ್ಯಗಳಲ್ಲಿನ ಯಶಸ್ಸು ನಿಮಗೆ ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ. ಇದರಿಂದಾಗಿ ನಿಮ್ಮ ಹಣಕಾಸು ಒಪ್ಪಂದಗಳು, ಭರವಸೆಗಳು ಈಡೇರಲಿವೆ. ಹಾಗೆ ನೀವು ಬಯಸಿದಂತಹ ಸಮಯದಲ್ಲಿ ಹಣ ಒಲಿಯುವ ಕಾರಣ ಒತ್ತಡ ಕೂಡ ಕಡಿಮೆಯಾಗಲಿದೆ. ನೀವು ನೀಡಿರುವ ಸಾಲವು ಈ ತಿಂಗಳಿನಲ್ಲಿ ಮರಳಿ ಬರಲಿದೆ. ನಿಮ್ಮ ಸಂಬಂಧಗಳಲ್ಲಿ ಯಾವುದಾದರು ಸಮಸ್ಯೆಗಳು ಉದ್ಭವಿಸಿದ್ದರೆ ಈ ಸಮಯದಲ್ಲಿ ಅದು ನಿವಾರಣೆಯಾಗಲಿದೆ. ದೂರ ಪ್ರಯಾಣದಂತಹ ಕೆಲಸಳಲ್ಲಿ ನೀವು ಹೆಚ್ಚಾಗಿ ಭಾಗಿಯಾಗುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿ ಮಂದಿಗೆ ಈ ಜೂನ್ ತಿಂಗಳಲ್ಲಿ ಮಿಶ್ರಫಲಗಳ ನೋಡಬಹುದು. ನಿಮ್ಮಲ್ಲಿನ ಶುಕ್ರ ಸಂಚಾರವು ಎಲ್ಲಾ ವ್ಯವಹಾರಗಳು, ವ್ಯಾಪಾರಗಳು, ಕೆಲಸಗಳಲ್ಲಿ ಲಾಭ ತರಬಹುದು. ಹಾಗೆ ಬುಧ, ಸೂರ್ಯ, ಗುರುವಿನ ಸಂಯೋಗವು ಲಾಭದಾಯಕವಾಗಲಿದೆ. ಆದ್ರೆ ಉತ್ತಮ ಕೆಲಗಳಲ್ಲಿ ನೀವ ಮಾಡಿರುವ ಹೂಡಿಕೆ ಲಾಭ ನೀಡುವುದು ತಡವಾಗಬಹುದು. ಕೆಲವು ಸಣ್ಣ ಪುಟ್ಟ ಅಡೆತಡೆಗಳನ್ನು ನೀವು ಎದುರಿಸಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರು ಈ ತಿಂಗಳಲ್ಲಿ ಸವಾಲುಗಳ ಎದುರಿಸಿದರು ಅದರಿಂದ ಉತ್ತಮ ಫಲಿತಾಂಶಗಳ ಪಡೆಯಬಹುದು. ತ್ವರಿತವಾಗಿ ವೆಚ್ಚ ಮಾಡಬೇಕಾದ ಹಲವು ಸ್ಥಿತಿ ಎದುರಿಸುತ್ತೀರಿ. ವ್ಯಾಪಾರಿಗಳಿಗೆ ಪ್ರಗತಿ ಇದೆ. ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಲಾಭದಾಯಕ ಹುದ್ದೆ ಪಡೆಯಬಹುದು. ಸರ್ಕಾರಿ ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳು ಬಡ್ತಿ, ವರ್ಗಾವಣೆಯ ಸಂಬಂಧವಾಗಿ ಕಾಯುತ್ತಿದ್ದರೆ ಈ ಸಮಯದಲ್ಲಿ ಬಹಳಷ್ಟು ಉತ್ತಮ ದಿನಗಳ ನೋಡುವಿರಿ. ಸಮಸ್ಯೆಗಳಿಂದ ಮುಕ್ತರಾಗಲು ಪ್ರಯತ್ನಿಸುತ್ತೀರಿ. ಆರೋಗ್ಯದಲ್ಲಿಯೂ ಸುಧಾರಣೆ ಕಾಣುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ತಿಂಗಳಲ್ಲಿ ಹೊಸದಾಗಿ ಯಾವುದೇ ಕೆಲಸ ಆರಂಭಿಸಿದರು ಅದರಲ್ಲಿ ಶುಭವಾಗುತ್ತದೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಸಂಬಂಧಿ ವಿಚಾರಗಳು ಅನುಕೂಲಕರವಾಗಿರಲಿದೆ. ನೀವು ಸರ್ಕಾರಿ ಉದ್ಯೋಗ ಪಡೆಯಲು ಬಹಳಷ್ಟು ಸಮಯದಿಂದ ಕಷ್ಟಪಡುತ್ತಿದ್ದರೆ ಈ ವೇಳೆ ಅದರಲ್ಲಿ ಲಾಭ ನೋಡುತ್ತೀರಿ. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳಿಂದ ಯಾವುದಾದರು ಸಮಸ್ಯೆ ಎದುರಿಸುತ್ತಿದ್ದರೆ ಅದರಿಂದ ಮುಕ್ತರಾಗುತ್ತೀರಿ. ದೀರ್ಘಕಾಲದ ಹೂಡಿಕೆಗಳಿಗೆ ನೀವು ಮುಂದಾಗಹುದು. ಸಮಸ್ಯೆಗಳಿಂದ ದೂರವಿರಲು ನೀವು ಬಯಸಿದರೂ ಕೂಡ ನಿಮಗೆ ವಾಹನ ಸಂಬಂಧಿ ಸಮಸ್ಯೆಗಳು ಎದುರಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಜೂನ್ ತಿಂಗಳು ಅದೃಷ್ಟ ಪರೀಕ್ಷೆಯ ಸಮಯ ಎನ್ನಬಹುದು. ನಿಮ್ಮ ಹಲವು ಪ್ರಯತ್ನಗಳಲ್ಲಿ ನಿಮಗೆ ಅಡ್ಡಿಗಳು ಎದುರಗಬಹುದು. ಶುಭ ಕಾರ್ಯಗಳಲ್ಲಿ ವಿಳಂಬ ಹಣಕಾಸು ವಿಚಾರದಲ್ಲಿ ತಳಮಳಕ್ಕೆ ನೀವು ಒಳಗಾಗಬಹುದು. ಹಲವು ಸಮಯದಿಂದ ನೀವು ಹಣಕಾಸು ವಿಚಾರವಾಗಿ ಎದುರಿಸಿದ್ದ ಕಷ್ಟದ ದಿನಗಳು ಕಳೆದು ಹೋದರು ಅದರ ಪರಿಣಾಮವಾಗಿ ನೀವು ಒತ್ತಡದಲ್ಲಿರುತ್ತೀರಿ. ಹೊಸದಾಗಿ ನೀವು ವ್ಯಾಪಾರ ಆರಂಭಿಸಲು ಆಲೋಚಿಸಿದ್ದರೆ ಉತ್ತಮ ಸಲಹೆಯೊಂದಿಗೆ ಆರಂಭಿಸಿ ಮುನ್ನಡೆಯಬಹುದು. ಆತುರದ ನಿಧಾರ ತೆಗೆದುಕೊಳ್ಳಬೇಡಿ.
ತುಲಾ ರಾಶಿ
ಶುಕ್ರ ರಾಶಿಯ ಮಂದಿಗೆ ಜೂನ್ ತಿಂಗಳ ಹೊಸ ಉದ್ಯೋಗಗಳ ಹುಡುಕಲು ಉತ್ತಮ ಸಮಯ. ನೀವು ಬಯಸಿದಂತೆ ಕನಸಿನ ಕೆಲಸ ಅಥವಾ ಸೂಕ್ತ ಹುದ್ದೆಗಳ ಅಪೇಕ್ಷಿಸುತ್ತಿದ್ದರೆ ಈ ಸಮಯದಲ್ಲಿ ಲಾಭದಾಯಕವಾಗಿರಲಿದೆ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗುವ ಸಮಯವಿದು. ನೀವು ಮನೆಗಾಗಿ ಚಿನ್ನಾಭರಣ ಖರೀದಿಗೆ ಆಲೋಚಿಸಿದ್ದರೆ ಈ ತಿಂಗಳ ಬಹಳ ಸೂಕ್ತವಾಗಿದೆ. ಆದಾಯ ಹೆಚ್ಚಾಗುವಂತಹ ಕೆಲಸಗಳು ನಿಮ್ಮ ಕೈ ಹಿಡಿಯಲಿವೆ. ದುಂದು ವೆಚ್ಚದಿಂದ ಹಿಂದೆ ಸರಿದರೆ ಈ ಇಡೀ ತಿಂಗಳು ನಿಮಗೆ ಆರ್ಥಕ ಸಮಸ್ಯೆ ಕಾಡುವುದಿಲ್ಲ.
ವೃಶ್ಚಿಕ ರಾಶಿ
ಮಂಗಳನ ಆಶೀರ್ವಾದದಿಂದಾಗಿ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಅನುಕೂಳಕರ ದಿನಗಳಿವೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ನೀವು ಮನೆ, ಆಸ್ತಿ, ಜಮೀನು ಖರೀದಿಯ ಆಲೊಚನೆಯಲ್ಲಿದ್ದರೆ ಈ ತಿಂಗಳಲ್ಲಿ ಬಹಳ ದೊಡ್ಡ ಹೆಜ್ಜೆ ಇಡುತ್ತೀರಿ. ಇದರಿಂದ ನಿಮಗೆ ಬಹಳ ಸಂತೋಷದಾಯಕ ದಿನಗಳು ಕಾದಿವೆ. ಶುಕ್ರ 6ನೇ ಮನೆಯಲ್ಲಿ ಚಲಿಸುವುದರಿಂದ ಹಣದ ವಿಚಾರದಲ್ಲಿ ಜಾಗರೂಕರಾಗಿರಿ, ನೀವು ಸಾಲ ನೀಡುವ ಮುನ್ನ ಷರತ್ತುಗಳು ಸೇರಿ ಆಲೋಚನೆ ಮಾಡುವುದು ಉತ್ತಮ. ಆಹಾರದ ವಿಚಾರವಾಗಿಯೂ ನೀವು ಎಚ್ಚರಿಕೆಯಿಂದಿರಿ.
ಧನು ರಾಶಿ
ಧನು ರಾಶಿ ಜನರಿಗೆ ಈ ಜೂನ್ ಬಹಳ ಅನುಕೂಲಕರ ದಿನಗಳ ತರಲಿದೆ. ನೀವು ಬಹಳಷ್ಟು ಸಮಯ ಪ್ರಯಾಣದಲ್ಲಿ ಕಳೆಯಬೇಕಾಗಬಹುದು. ಕುಟುಂಬಸ್ಥರೊಂದಿಗೆ ಪ್ರವಾಸ ಅಥವಾ ಆಪ್ತರೊಂದಿಗೆ ವಿಶೇಷ ಸ್ಥಳಗಳಿಗೆ ತೆರಳಬಹುದು. ನಿಮ್ಮ ಮಾನಸಿಕ ಕಿರಿಕಿರಿ ಕಾರಣವಾಗಿದ್ದ ಕೆಲಸವೊಂದು ಗುರುವಿನ ಆಶೀರ್ವಾದದಿಂದಾಗಿ ನಿವಾರಣೆಯಾಗಲಿದೆ. ಆರೋಗ್ಯದ ವಿಚಾರವಾಗಿ ನೀವು ಬಹಳ ನಿರ್ಲಕ್ಷ್ಯ ಮಾಡಬೇಡಿ. ಸಂಬಂಧಗಳು ಈ ಸಮಯಲ್ಲಿ ಬಹಳ ಚೆನ್ನಾಗಿರಲಿದೆ.
ಮಕರ ರಾಶಿ
ಮಕರ ರಾಶಿಯಲ್ಲಿ ಸೂರ್ಯನು 5 ನೇ ಮನೆಯಲ್ಲಿ ಚಲಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮಗೆ ಉತ್ತಮ ಫಲಿತಾಂಶಗಳ ಪಡೆಯುವ ಸಮಯ. ದಾಂಪತ್ಯದಲ್ಲಿದ್ದ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಕುಟುಂಬದಲ್ಲಿ ಉಂಟಾಗಿದ್ದ ಹಣಕಾಸು ವಿಚಾರದಲ್ಲಿನ ಒತ್ತಡವೊಂದು ನಿವಾರಣೆಯಾಗಲಿದೆ. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿ ಆಗುತ್ತಿದ್ದ ವಿಚಾರದಲ್ಲಿ ಧನಾತ್ಮಕ ಬದಲಾವಣೆ ನೋಡಲಿದ್ದೀರಿ. ಗೃಹಿಣಿಯರಲ್ಲಿ ಕೆಲಸದ ಹೊರೆ ಹಾಗೂ ಒತ್ತಡ ತುಸು ಹೆಚ್ಚಾಗಬಹುದು. ಹೊಸ ಉದ್ಯೋಗ ಹುಡುಕುವವರಿಗೆ ಇದು ಶುಭ ಕಾಲ. ಆರೋಗ್ಯದಲ್ಲಿಯೂ ಚೇತರಿಕೆ ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ಜೂನ್ ತಿಂಗಳಲ್ಲಿ ದೊಡ್ಡ ಒಪ್ಪಂದಗಳು, ಭವಿಷ್ಯದ ಕಾರಣಕ್ಕಾಗಿ ಹಲವು ನಿರ್ಧಾರಗಳಿಗೆ ಕಾರಣವಾಗಬಹುದು. ನೀವು ಬಯಸಿದಂತೆ ವರ್ಗಾವಣೆ, ಬಡ್ತಿ, ಒತ್ತಡ ನಿವಾರಣೆಯಲ್ಲಿ ಸಮಯ ನಿಮ್ಮ ಪರವಾಗಿ ಇರಲಿದೆ. ವಿವಾಹ ಸಂಬಂಧಿ ಕಾರ್ಯದಲ್ಲಿ ನಿಮಗೆ ಶುಭಕರ. ತಿಂಗಳ ಉತ್ತರಾರ್ಧದಲ್ಲಿ 5 ನೇ ಮನೆಗೆ ಸೂರ್ಯ ಸ್ಥಳಾಂತರಗೊಳ್ಳುವುದು ನಿಮಗೆ ಹಲವು ಕಾರ್ಯದಲ್ಲಿ ಪ್ರಯೋಜನಕಾರಿಯಾಗಲಿದೆ. ನಿಮ್ಮ ಗುರಿಯ ಕಡೆಗೆ ಉತ್ತಮ ಮನೋಬಲ ಹೊಂದಬಹುದು.
ಮೀನ ರಾಶಿ
ಜೂನ್ ತಿಂಗಳು ಮೀನ ರಾಶಿಯವರಿಗೆ ಬಹಳ ಅನುಕೂಲಕರ ದಿನಗಳ ತರಲಿದೆ. ರಾಜಕೀಯ ರಂಗದಲ್ಲಿರುವವರು ಈ ತಿಂಗಳಲ್ಲಿ ಬಹುದೊಡ್ಡ ಹುದ್ದೆ ಪಡೆಯಬಹುದು. ನೀವು ವಾಹನಗಳ ಮೂಲಕ ಆದಾಯ ಪಡೆಯುವವರಾಗಿದ್ದರೆ ಈ ತಿಂಗಳ ಆರಂಭದಲ್ಲಿ ಲಾಭಾಂಶ ಏರಿಕೆ ನೋಡಬಹುದು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುವುದು ಆಧ್ಯಾತ್ಮಕವಾಗಿ ನಮಗೆ ಶುಭ ತರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಮನೆ ಖರೀದಿ, ಅಥವಾ ನೂತನ ಮನೆ ನಿರ್ಮಾಣ ಸಂಬಂಧವಾಗಿ ನಿಮಗೆ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯುವ ಸಾಧ್ಯತೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು)



Click it and Unblock the Notifications











