2025ರ ಜುಲೈ ಮಾಸ ಭವಿಷ್ಯ: ಈ ತಿಂಗಳು ಯಾರಿಗೆಲ್ಲ ಶುಭಕರ? ಯಾರಿಗೆ ಧನಪ್ರಾಪ್ತಿ?

ಜುಲೈ 2025ರ ನಿಮ್ಮ ಮಾಸಿಕ ರಾಶಿಫಲ

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಜುಲೈ ತಿಂಗಳು ಬಹಳ ಅನುಕೂಲಕರ ತಿಂಗಳಾಗಲಿದೆ. ನಿಮ್ಮ ಹಲವು ಯೋಜನೆಗಳಲ್ಲಿ ಲಾಭದಾಯಕ ಸ್ಥಿತಿ ಇರಲಿದೆ. ಉತ್ತಮ ಲಾಭದಾಯಕ ತಿಂಗಳು ಎನ್ನಬಹುದು. ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ಸಾಧನೆಯ ತಿಂಗಳು ಎನ್ನಬಹುದು. ಈ ತಿಂಗಳು ನಿಮಗೆ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಬಹುದು. ಅದರಲ್ಲೂ ನಿಮ್ಮಲ್ಲಿ ಆರ್ಥಿಕ ಸಮಸ್ಯೆಗಳ ವಿಚಾರವಾಗಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ರಾಜಕೀಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಹಾಯ ಪಡೆಯಬಹುದು. ಮೊದಲ ಮತ್ತು ಮೂರನೇ ವಾರ ಆಹ್ಲಾದಕರವಾಗಿರುತ್ತದೆ. ಎರಡನೇ ವಾರದಲ್ಲಿ ನೀವು ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡುವಿರಿ.

ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 9, 18, 27

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ತಿಂಗಳು ಬಹಳ ಅನುಕೂಳ ನೋಡಬಹುದು. ನಿಮ್ಮ ವ್ಯವಹಾರಗಳು ನೀವು ಅಂದುಕೊಂಡಂತೆ ನಡೆಯಬಹುದು. ನೀವು ಸಾಲವಾಗಿ ನೀಡಿದ್ದ ಹಣವು ಈ ತಿಂಗಳಲ್ಲಿ ಮರಳಿ ಪಡೆಯಬಹುದು. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿ ಈ ತಿಂಗಳಲ್ಲಿ ಅದ್ಭುತ ಅವಕಾಶ ಪಡೆಯಬಹುದು. ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ನೀವು ತೊಂದರೆಗೊಳಗಾಗುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರು ನಷ್ಟ ಅನುಭವಿಸಬಹುದು. ಕೀಲು ಮತ್ತು ಮೊಣಕಾಲು ನೋವು ಸಂಬಂಧ ಸಮಸ್ಯೆ ಇರಬಹುದು. ತಿಂಗಳ ದ್ವಿತಿಯಾರ್ಧದಲ್ಲಿ ನಿಮ್ಮ ದಾಂಪತ್ಯ ಅಥವಾ ಕೌಟುಂಬಿಕ ವಿಚಾರದಲ್ಲಿ ಸಮಸ್ಯೆ ಕಾಡಬಹುದು.

July 2025 Monthly Horoscope In Kannada

ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 6, 15, 24

ಮಿಥುನ ರಾಶಿ

ತಿಂಗಳ ಎರಡನೇ ವಾರದಲ್ಲಿ ಹಣಕಾಸಿನ ಕಾರಣಗಳಿಂದ ಸ್ಥಗಿತಗೊಂಡ ಯೋಜನೆಗಳು ವೇಗ ಪಡೆಯುತ್ತವೆ. ನಿಮ್ಮ ಕೆಲಸಗಳಲ್ಲಿನ ಪ್ರಗತಿಯಿಂದ ನಿಮಗೆ ನೆಮ್ಮದಿ ಇರಲಿದೆ. ಆಧ್ಯಾತ್ಮಿಕ ವಿಚಾರವಾಗಿ ನೀವು ಬಹಳ ಬಲವಾಗುತ್ತೀರಿ. ಹೂಡಿಕೆಗಳು, ಉಳಿತಾಯಗಳು ಹೆಚ್ಚಾಗಬಹುದು. ಅವಿವಾಹಿತರಲ್ಲಿ ಈ ಸಮಯ ಬಹಳ ಅನುಕೂಲಗಳು ಉಂಟಾಗಬಹುದು. ತಿಂಗಳ ಕೊನೆಯ ವಾರದಲ್ಲಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರ ಸಂಬಂಧಿ ಅಡೆತಡೆಯು ದೂರಾಗಲಿದೆ. ಬ್ಯಾಂಕಿಂಗ್ ವಿಚಾರಗಳು, ಆಸ್ತಿ ಸಂಬಂಧಿತ ವಿಚಾರಗಳು, ಸರ್ಕಾರಿ ಕೆಲಸಗಳಲ್ಲಿ ನಿಮಗೆ ಶುಭಕರ ಲಾಭವಿದೆ.

ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 5, 14

ಕರ್ಕ ರಾಶಿ

ಕರ್ಕ ರಾಶಿಯವರು ಈ ತಿಂಗಳಲ್ಲಿ ಮಿಶ್ರ ಫಲಗಳ ನೋಡುವಿರಿ. ದಾಂಪತ್ಯದಲ್ಲಿ ಸಂತಸದ ದಿನಗಳು ಇರಲಿವೆ. ಈ ತಿಂಗಳು ನೀವು ಕೃಷಿ ಕೆಲಸದಿಂದ ಸಾಕಷ್ಟು ಹಣ ಪಡೆಯಬಹುದು. ಕಲಾವಿದರಿಗೆ ಈ ತಿಂಗಳ ಬಹಳ ಉತ್ತಮ ಸಮಯ. ವ್ಯಾಪಾರಿಗಳಿಗೆ ಈ ತಿಂಗಳು ದೊಡ್ಡ ಲಾಭವಿಲ್ಲದೆ ಇದ್ದರೂ ವ್ಯವಹಾರಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ನಿಮ್ಮ ದೀರ್ಘಕಾಲದ ಅನಾರೋಗ್ಯವೊಂದು ಈ ಸಮಯದಲ್ಲಿ ಸುಧಾರಣೆ ಆಗಲಿದೆ. ಗೃಹಿಣಿಯರಿಗೆ ಈ ಸಮಯದಲ್ಲಿ ಲಾಭದಾಯಕವಾಗಲಿದೆ, ನಿಮ್ಮ ಬಹುದಿನದ ಕನಸೊಂದು ಈಡೇರಲಿದೆ. ಆದಾಯದಷ್ಟೇ ಖರ್ಚು ಕೂಡ ಇರಬಹುದು.

ಅದೃಷ್ಟ ಬಣ್ಣ: ಬೆಳ್ಳಿ ಬಿಳಿ
ಅದೃಷ್ಟ ಸಂಖ್ಯೆ: 2, 20

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಡೀ ತಿಂಗಳು ಶುಭಕರ ಲಾಭಗಳಿವೆ. ನಿಮ್ಮ ಹಣಕಾಸು ಸಂಬಂಧಿತ ಏರಿಳಿತಗಳು ಬಗೆಹರಿಯಬಹುದು. ಕೆಲಸದ ಸ್ಥಳದಲ್ಲಿ ಒತ್ತಡವು ಮುಂದುವರೆಯಲಿದೆ. ಹೊಸ ಉದ್ಯೋಗ ಆರಂಭಿಸುವ ನಿಮ್ಮ ಕನಸಿಗೆ ಈ ತಿಂಗಳು ಲಾಭದಾಯಕ ವಿಚಾರಗಳು ಸೇರಿಕೊಳ್ಳಲಿವೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ವೈದ್ಯಕೀಯ ಮತ್ತು ಔಷಧ ಕ್ಷೇತ್ರದಲ್ಲಿ ಉತ್ತಮ ಪ್ರಯೋಜನಗಳ ಪಡೆಯಬಹುದು. ಆರೋಗ್ಯದ ವಿಚಾರವಾಗಿ ನಿಮಗೆ ಸಮಸ್ಯೆಗಳು ಕಾಡಬಹುದು. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ.

ಅದೃಷ್ಟ ಬಣ್ಣ: ಗೋಲ್ಡನ್ ಹಳದಿ
ಅದೃಷ್ಟ ಸಂಖ್ಯೆ: 1, 10

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ತಿಂಗಳಲ್ಲಿ ಬಹಳ ಅನುಕೂಲಕರ ದಿನಗಳಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಕಾರ್ಯ ಮಾಡಲಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬಹಳ ಉತ್ತಮ ಸಮಯ. ವಾಹನ ಖರೀದಿಗೆ ಉತ್ತಮ ಸಮಯ. ನೀವು ವಿವಾಹಿತರಾಗಿದ್ದರೆ ಖರ್ಚು ಹೆಚ್ಚಾಗಬಹುದು. ಮಕ್ಕಳ ಭವಿಷ್ಯ ಕುರಿತಾದ ಚಿಂತೆ ದೂರಾಗಬಹುದು. ಸರ್ಕಾರಿ ಕೆಲಸ ಸಂಬಂಧ ಇದ್ದ ತೊಡಕು ನಿವಾರಣೆಯಾಗಬಹುದು. ತಿಂಗಳ ದ್ವಿತಿಯಾರ್ಧವು ಹಣಕಾಸಿನ ವಿಚಾರದಲ್ಲಿ ನಿಮಗೆ ಒತ್ತಡ ತರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡಬೇಕಾದ ಒತ್ತಡದಲ್ಲಿ ಸಿಲುಕಬಹುದು. ವ್ಯಾಪಾರ ಪ್ರಗತಿ ನೋಡುವಿರಿ.

ಅದೃಷ್ಟ ಬಣ್ಣ: ಗಾಢ ಹಸಿರು
ಅದೃಷ್ಟ ಸಂಖ್ಯೆ: 23

ತುಲಾ ರಾಶಿ

ಈ ತಿಂಗಳು ತುಲಾ ರಾಶಿಯವರಲ್ಲಿ ದೊಡ್ಡ ಆದಾಯ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಹೂಡಿಕೆಗಳು, ಉಳಿತಾಯಗಳು ಹೆಚ್ಚಾಗಲಿವೆ. ನೀವು ಮನರಂಜನೆಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಖರ್ಚು ಮಾಡಬೇಕಾಗಿ ಬರಬಹುದು. ಕಠಿಣ ಪರಿಶ್ರಮದ ಅರ್ಥಪೂರ್ಣ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಮದುವೆ ಇತ್ಯಾದಿಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ತಿಂಗಳ ದ್ವಿತೀಯಾರ್ಧದಲ್ಲಿ ವ್ಯಾಪಾರಿ ವಲಯದ ಮಂದಿಗೆ ಲಾಭದಾಯಕ ದಿನಗಳಿವೆ. ನೀವು ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದರೆ ಈ ತಿಂಗಳು ಸುಧಾರಣೆ ನೋಡುವಿರಿ. ಷೇರುಗಳ ಮೇಲಿನ ಹೂಡಿಕೆಯಲ್ಲಿ ನಷ್ಟವಾಗುವ ಭೀತಿ ಇದೆ. ಬ್ಯಾಂಕಿಂಗ್ ವ್ಯವಹಾರಗಳು ಶುಭವಾಗಲಿವೆ.

ಅದೃಷ್ಟ ಬಣ್ಣ: ಬಿಳಿ ಬಣ್ಣ
ಅದೃಷ್ಟ ಸಂಖ್ಯೆ: 6

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲದ ದಿನ ಎನ್ನಬಹುದು. ಈ ತಿಂಗಳಲ್ಲಿ ಬಹುದೊಡ್ಡ ಕೆಲಸಗಳು ನಿಮ್ಮ ಪರವಾಗಿ ಒಲಿಯಲಿವೆ. ಆದ್ರೆ ಅದರ ಫಲಿತಾಂಶವು ನಿಮಗೆ ತೃಪ್ತಿ ತರದೆ ಇರಬಹುದು. ತಿಂಗಳ ಎರಡನೇ ಹದಿನೈದು ದಿನಗಳಲ್ಲಿ ಸೂರ್ಯನು ಪ್ರವೇಶಿಸುವುದರಿಂದ ನಿಮ್ಮ ಸ್ಥಾನ ಬಲಗೊಳ್ಳುತ್ತದೆ. ನಿಮ್ಮ ಹಳೆಯ ಬಾಕಿ ವಸೂಲಿ ಆಗಲಿದೆ. ಕೆಲಸದ ಸಂಬಂಧವಾಗಿ ನೀವು ಪ್ರಗತಿ ನೋಡುವಿರಿ. ಔದ್ಯೋಗಿಕ ಕಷ್ಟಗಳು ದೂರಾಗಲಿದೆ. ಕುಟುಂಬ ಸದಸ್ಯರು ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸಹಕರಿಸಬಹುದು. ಹಾಗೆ ಕೇತುವಿನ ಸಂಚಾರದಿಂದಾಗಿ ಇಷ್ಟು ಅಡ್ಡಿಯಾಗಿದ್ದ ಕೆಲಸವು ಪೂರ್ಣವಾಗಲಿದೆ.

ಅದೃಷ್ಟ ಬಣ್ಣ: ಗಾಢ ಕೆಂಪು
ಅದೃಷ್ಟ ಸಂಖ್ಯೆ: 9

ಧನು ರಾಶಿ

ಧನು ರಾಶಿಯವರು ಈ ತಿಂಗಳ ಬಹಳ ಲಾಭ ನೋಡಬಹುದು. ನಿಮ್ಮ ಆಲೋಚನೆಯಂತೆ ಕೆಲಸಗಳು ಪೂರ್ಣ ಆಗಲಿದೆ. ಉದ್ಯೋಗ ಮತ್ತು ವ್ಯವಹಾರವು ತುಂಬಾ ಸ್ಪರ್ಧಾತ್ಮಕವಾಗಿರುತ್ತದೆ. ಮೇಧುಮೇಹ ಸಮಸ್ಯೆ ಹೊಂದಿರುವವರಿಗೆ ಈ ತಿಂಗಳ ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಈ ತಿಂಗಳ ಬಹುತೇಕ ದಿನ ನೀವು ಶ್ರದಾಯಕ ಕೆಲಸದಲ್ಲಿ ಭಾಗಿಯಾಗಬೇಕಾಗುತ್ತದೆ. ತಿಂಗಳ ದ್ವಿತಿಯಾರ್ಧದಲ್ಲಿ ಬಹಳ ಸುಖಕರ ದಿನಗಳ ನೋಡಬಹುದು. ದಾಂಪತ್ಯ ಜೀವನದಲ್ಲಿ ಇದ್ದ ಮನಸ್ತಾಪವು ನಿವಾರಣೆಗಾಲಿದೆ. ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಗೆಲುವಾಗಬಹುದು.

ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 3

ಮಕರ ರಾಶಿ

ಮಕರ ರಾಶಿಯವರಿಗೆ ಈ ತಿಂಗಳ ಅನುಕೂಲಕರ ದಿನ ಎನ್ನಬಹುದು. ನಿಮ್ಮೆ ಬಹುದಿನಗಳ ಸಮಸ್ಯೆಯೊಂದು ಈ ತಿಂಗಳ ಆರಂಭದಲ್ಲಿ ಪರಿಹಾರವಾಗಬಹುದು. ಹಾಗೆ ಹಣಕಾಸು ವಿಚಾರದಲ್ಲಿ ತಿಂಗಳ ಆರಂಭ ಶುಭಕರವಾಗಲಿದೆ. ಆದ್ರೆ ದ್ವಿತಿಯಾರ್ಧದಲ್ಲಿ ಅತೀಯಾದ ಖರ್ಚು ನಿಮಗೆ ಸಮಸ್ಯೆಗಳ ತರಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಕೆಲಸದ ಮೇಲಿನ ಏಕಾಗೃತೆ ಹೆಚ್ಚಾಗಲಿದೆ. ರಾಜಕಾರಣಿಗಳು, ಸಮಾಜ ಸೇವೆಯಲ್ಲಿರುವವರಿಗೆ ಈ ತಿಂಗಳ ಶುಭಕರವಾಗಲಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದವರಿಗೆ ಬಹಳ ಶುಭವಾಗಲಿದೆ.

ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆ: 8

ಕುಂಭ ರಾಶಿ

ಕುಂಭ ರಾಶಿಯವರು ಈ ತಿಂಗಳಲ್ಲಿ ಸವಾಲಿನ ಕೆಲಸಗಳ ಮಾಡಬಹುದು. ಅದರಿಂದ ನಿಮಗೆ ಯಶಸ್ಸು ಕೂಡ ಸಿಗಲಿದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ನೀವು ಹೊಸ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸಬಹುದು. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧಗಳು ಅತ್ಯುತ್ತಮವಾಗಿರುತ್ತವೆ. ನಿಮ್ಮ ಬಹಳ ಸಮಯದ ಆಸೆಯನ್ನು ಈ ತಿಂಗಳಲ್ಲಿ ಈಡೇರಿಸಿಕೊಳ್ಳಬಹುದು. ನಿಮ್ಮ ಮನಃಶಾಂತಿ ಹಾಳು ಮಾಡುವ ಹಲವು ಘಟನೆಗಳು ನಡೆಯಬಹುದು. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುತ್ತದೆ. ಅದರಲ್ಲೂ ನೀವು ಸಾಲ ನೀಡುವುದರಿಂದ ಕೈ ಸುಟ್ಟುಕೊಳ್ಳಬಹುದು. ಮನೆಯಲ್ಲಿ ಶುಭ ಕಾರ್ಯ ವಿಚಾರವಾಗಿ ಕಲಹ ಇರಬಹುದು.

ಅದೃಷ್ಟ ಬಣ್ಣ: ಗಾಢ ಬಣ್ಣ
ಅದೃಷ್ಟ ಸಂಖ್ಯೆ: 17

ಮೀನ ರಾಶಿ

ಮೀನ ರಾಶಿಯವರಿಗೆ ಈ ತಿಂಗಳ ಬಹಳ ಅನುಕೂಲಕರವಾಗಿರಲಿದೆ. ಕುಟುಂಬದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ವ್ಯವಹಾರ ಹೆಚ್ಚಿಸಲು ನೀವು ಹೂಡಿಕೆಯಿಂದ ಸಹಾಯ ಪಡೆಯಬಹುದು. ಸಂದರ್ಶನಗಳಲ್ಲಿ ಭಾಗಿಯಾಗುವ ಮಂದಿಗೆ ಈ ತಿಂಗಳ ಬಹಳ ಶುಭವಾಗಲಿದೆ. ವೈವಾಹಿಕ ಜೀವನದಲ್ಲಿ ಸಹಕಾರ ಹೆಚ್ಚಾಗಲಿದೆ. ಜಂಟಿ ಉದ್ಯಮಿಗಳಲ್ಲಿ ಲಾಭಾಂಶ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ದುಂದು ವೆಚ್ಚಗಳ ಕಡಿಮೆಯಾಗಲಿದೆ.

ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 3, 14

English summary

Monthly Horoscope 2025: July 2025 Monthly Horoscope In Kannada

July 2025 Monthly Horoscope in Kannada : Check July monthly horoscope for all 12 zodiac signs in Kannada.
Story first published: Wednesday, June 25, 2025, 17:22 [IST]
X
Desktop Bottom Promotion