August 2025 Horoscope: ಈ ತಿಂಗಳು ಯಾರಿಗೆಲ್ಲ ಅದೃಷ್ಟ ಒಲಿಯುವ ಸಮಯ?

ಆಗಸ್ಟ್ 2025ರ ನಿಮ್ಮ ಮಾಸಿಕ ರಾಶಿಫಲ

ಮೇಷ ರಾಶಿ

ಮೇಷ ರಾಶಿಯ ಮಂದಿಗೆ ಈ ತಿಂಗಳು ಮಿಶ್ರ ಫಲಗಳ ಅನುಭವಿಸುವ ತಿಂಗಳು ಎನ್ನಬಹುದು. ನಿಮ್ಮ ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಕಳೆದ ಕೆಲವು ದಿನಗಳಿಂದ ನೀವು ಭೂಮಿ, ಕಟ್ಟಡ, ವೃತ್ತಿ, ವ್ಯವಹಾರ ಇತ್ಯಾದಿಗಳ ಬಗ್ಗೆ ಚಿಂತಿತರಾಗಿದ್ದಲ್ಲಿ, ಈ ಸಮಯದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಪಡೆಯಲಿದ್ದೀರಿ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ನೋಡಬಹುದು. ತಿಂಗಳ ಕೊನೆಯಲ್ಲಿ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಆಪ್ತರ ಭೇಟಿ ಹಾಗೂ ವಿವಾಹಿತರಲ್ಲಿ ಶುಭ ಸುದ್ದಿ ನೋಡುವಿರಿ. ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ. ಉಳಿತಾಯ ಹೆಚ್ಚಿಸುವ ನಿಮ್ಮ ಬಯಕೆ ಈಡೇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಸ್ವಂತ ಉದ್ಯೋಗ ಮಾಡುವವರಿಗೂ ಈ ಸಮಯದಲ್ಲಿ ಉತ್ತಮ ಲಾಭ ನೋಡಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಆಗಸ್ಟ್ ತಿಂಗಳು ಸರಾಸರಿ ಆಗಿರಲಿದೆ. ನೀವು ಪ್ರಯಾಣಗಳಲ್ಲಿ ಹೆಚ್ಚು ಭಾಗಿಯಾಗುತ್ತೀರಿ. ಹಾಗೆ ಬಹಳಷ್ಟು ಖರ್ಚು ಮಾಡುತ್ತೀರಿ. ಅನಗತ್ಯ ವಿಚಾರಗಳಿಂದ ಆದಷ್ಟು ದೂರವಿರಿ. ನಿಮಗೆ ಬರಬೇಕಿದ್ದ ಹಣವು ಸಿಲುಕಬಹುದು. ಪ್ರಯಾಣಗಳಲ್ಲಿ ಮಿಶ್ರಫಲ ಇರಲಿದೆ. ಔದ್ಯೋಗಿಕ ವಿಚಾರದಲ್ಲಿ ನಿಮಗೆ ಉತ್ತಮ ಫಲ ಇರಲಿದೆ. ಗೃಹಿಣಿಯರಲ್ಲಿ ಈ ಸಮಯವು ಉತ್ತಮ ಕಾರ್ಯಗಳಿಗೆ ಸಾಕ್ಷಿಯಾಗಲಿದೆ. ಬಹಳಷ್ಟು ಸಮಯ ನೀವು ಮನೆಯಲ್ಲಿ ಕಳೆಯಲು ಇಷ್ಟಪಡುತ್ತೀರಿ. ಮಕ್ಕಳ ಕುರಿತಾಗಿ ಎಚ್ಚರಿಕೆ ವಹಿಸುವುದು ಉತ್ತಮ.

Monthly Horoscope 2025 August 2025 Monthly Horoscope In Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಆಗಸ್ಟ್ ತಿಂಗಳು ಬಹಳ ಅನುಕೂಲಕರ. ನಿಮ್ಮ ಅಧಿಪತಿ ಬುಧನಿಂದಾಗಿ ನಿಮಗೆ ವ್ಯವಹಾರದಲ್ಲಿ ಲಾಭ ನೋಡುತ್ತೀರಿ. ನಿಮ್ಮ ಕಾನೂನು, ಸರ್ಕಾರಿ ದಾಖಲಾತಿಗಳಂತಹ ವಿಚಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರತೆ ಇರುತ್ತದೆ. ಕೆಲಸದ ಸ್ಥಳದಲ್ಲಿ, ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಲಾಭ ನೋಡುವಿರಿ. ಹಣದ ವಿಚಾರವಾಗಿ ಖರ್ಚು ಹೆಚ್ಚಾಗಿರಲಿದೆ. ಮಕ್ಕಳ ಭವಿಷ್ಯದ ಕುರಿತಾಗಿ ನೀವು ಬಹಳ ಚಿಂತೆಗೊಳಗಾಗುತ್ತೀರಿ. ಆದಾಯದ ಮೂಲ ಹೆಚ್ಚಾಗುವ ಸಂಭವವಿದೆ. ಮನೆಯ ಹಿರಿಯರ ಆರೋಗ್ಯದ ಕಡೆಗೂ ಗಮನವಿಡಿ. ನಿಮ್ಮ ಪರಿಶ್ರಮಗಳು ವ್ಯರ್ಥವಾಗುವುದಿಲ್ಲ.

ಕರ್ಕ ರಾಶಿ

ಆಗಸ್ಟ್ ತಿಂಗಳ ಆರಂಭವು ಕರ್ಕ ರಾಶಿ ಜನರಿಗೆ ಒತ್ತಡಗಳಿಂದ ತುಂಬಿದ ತಿಂಗಳು ಎನ್ನಬಹುದು. ಈ ತಿಂಗಳು ನಿಮ್ಮ ಮಾತು ಮತ್ತು ನಡವಳಿಕೆಯು ಕೆಲಸಗಳನ್ನು ಪೂರ್ಣಗೊಳಿಸುವುದಲ್ಲದೆ ಅವುಗಳನ್ನು ಹಾಳುಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ. ಈ ತಿಂಗಳ ಕೊನೆಯ 15 ದಿನಗಳಲ್ಲಿ ನೀವು ಪ್ರಯಾಣಗಳಲ್ಲಿ ಹೆಚ್ಚು ಭಾಗಿಯಾಗುತ್ತೀರಿ. ಆರ್ಥಿಕವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಸಂಕಷ್ಟ ತರಬಹುದು, ಹೀಗಾಗಿ ಖರ್ಚುಗಳ ಮೇಲೆ ಗಮನವಿಡಿ. ದೇವಾಲಯ, ಪುಣ್ಯಕ್ಷೇತ್ರಗಳ ಭೇಟಿ ಮಾಡುವಿರಿ. ಪ್ರಯಾಣಗಳಲ್ಲಿ ಎಚ್ಚರಿಕೆ ವಹಿಸಿ. ನವವಿವಾಹಿತರಿಗೆ ಈ ತಿಂಗಳು ಬಹಳ ಉತ್ತಮವಾಗಿರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ತಿಂಗಳು ಅದೃಷ್ಟದ ತಿಂಗಳು. ತಿಂಗಳ ಆರಂಭದಲ್ಲಿ ವೆಚ್ಚಗಳು ಮತ್ತು ಲಾಭಗಳು ಎರಡೂ ಸಮಾನವಾಗಿರಲಿದೆ. ವ್ಯಾಪಾರಸ್ಥರು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಹಳ ದೂರ ಪ್ರಯಾಣಿಸಬೇಕಾಗಬಹುದು. ನಿಮ್ಮ ಸ್ವಂತ ಉದ್ಯೋಗವು ಲಾಭದತ್ತ ತೆರಳಬಹುದು, ನೀವು ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದರೆ ಈ ತಿಂಗಳಲ್ಲಿ ಸುಧಾರಣೆ ಇರಲಿದೆ. ಆಸ್ತಿ, ಮನೆ ನಿರ್ಮಾಣದ ವಿಚಾರದಲ್ಲಿ ನಿಮಗೆ ಶುಭದಾಯಕ ಸಮಯ. ಸರ್ಕಾರಿ ನೌಕರರ ವೇತನ ಸಂಬಂಧಿ ಸಮಸ್ಯೆ ಬಗೆಹರಿಯಲಿದೆ. ನಿಮಗೆ ಈ ತಿಂಗಳು ಸಂತಸ ತರುವಂತಹ ತಿಂಗಳು. ಪ್ರೀತಿಯ ವಿಚಾರದಲ್ಲಿ ನಿಮ್ಮ ನಡೆಗಳು ಅದೃಷ್ಟ ತರಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲದ ಸಮಯ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ನೀವು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು, ಮಾತಿನ ಮೂಲಕ ಷರತ್ತು ಹಾಕುವ ಮುನ್ನ ಎಚ್ಚರ. ಹಣಕಾಸಿನ ವಿಚಾರವಾಗಿ ನಿಮಗೆ ಶುಭಕರವಾಗಿದ್ದರೂ ವ್ಯವಹಾರಗಳಿಗೆ ಅಗತ್ಯ ಸಮಯದಲ್ಲಿ ನಿಮ್ಮ ಕೈಯಲ್ಲಿ ಹಣ ಖಾಲಿಯಾಗಬಹುದು. ಕುಟುಂಬಸ್ಥರಲ್ಲಿ ಸಾಮರಸ್ಯ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ. ದಾಂಪತ್ಯ ವಿಚಾರವಾಗಿ ಸಣ್ಣಪುಟ್ಟ ಮನಸ್ತಾಪಗಳು ಇರಬಹುದು. ತಿಂಗಳ ಕೊನೆಯಲ್ಲಿ ಖಚ್ಚು ಕಡಿಮೆ ಮಾಡುವುದು ಒಳಿತು. ನಿಮ್ಮ ದೊಡ್ಡ ಕೆಲಸವೊಂದು ಬಾಕಿಯಾಗಿ ಉಳಿದುಬಿಡಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಆಗಸ್ಟ್ ತಿಂಗಳು ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಆರ್ಥಿಕ ಲಾಭಗಳ ತರಲಿದೆ. ಮನೆಗಾಗಿ ದುಬಾರಿ ವಸ್ತು ಖರೀದಿಸಬಹುದು. ಹಾಗೆ ವಾಹನ ಖರೀದಿಗೆ ಈ ತಿಂಗಳು ಬಹಳ ಅನುಕೂಲಕರ ತಿಂಗಳು. ನಿಮ್ಮ ವ್ಯವಹಾರಗಳಿಗೆ ಹಣಕಾಸಿನ ವಿಚಾರವಾಗಿ ಆಪ್ತರೊಬ್ಬರಿಂದ ಸಹಕಾರ ಪಡೆಯಲಿದ್ದೀರಿ. ದೊಡ್ಡ ಆಸೆ ಈಡೇರಿದಾಗ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಕಲಾವಿದರಿಗೆ ಈ ತಿಂಗಳು ಬಹಳ ಉತ್ತಮ ಸಮಯ.

ವೃಶ್ಚಿಕ ರಾಶಿ

ಈ ರಾಶಿಯ ಜನರಿಗೆ ಈ ಸಮಯವು ಬಹಳ ಅನುಕೂಲಕರ. ನಿಮ್ಮ ಅನೇಕ ಕೆಲಸಗಳಲ್ಲಿ ಲಾಭದಾಯಕ ದಿನಗಳ ನೋಡುತ್ತೀರಿ. ಪ್ರವಾಸಗಳು, ಆಪ್ತರ ಭೇಟಿ, ಸಂಬಂಧಿಕರ ಭೇಟಿಯಲ್ಲಿ ನೀವು ಸಮಯ ಕಳೆಯುತ್ತೀರಿ. ನಿಮ್ಮ ಬಹಳ ದಿನಗಳ ಕನಸೊಂದನ್ನು ಈಡೇರಿಸಿಕೊಳ್ಳಬಹುದು. ಹಣವನ್ನು ಬಹಳ ಬುದ್ದಿವಂತಿಕೆಯಿಂದ ಖರ್ಚು ಮಾಡಿ. ನಿಮ್ಮ ಮಾನಸಿಕ ನೆಮ್ಮದಿ ಉಂಟು ಮಾಡುವಂತಹ ಹಲವು ಕೆಲಸಗಳಲ್ಲಿ ಭಾಗಿಯಾಗುತ್ತೀರಿ, ಇದರಿಂದ ಕುಟುಂಬದಲ್ಲಿಯೂ ಶಾಂತಿ ಇರಲಿದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.

ಧನು ರಾಶಿ

ಆಗಸ್ಟ್ ತಿಂಗಳ ಮೊದಲಾರ್ಧವು ಧನು ರಾಶಿಯ ಜನರಿಗೆ ಶುಭ ಮತ್ತು ಅದೃಷ್ಟಶಾಲಿಯಾಗಲಿದೆ. ನಿಮ್ಮ ಮನೆಯಲ್ಲಿ ಶಾಂತಿ ಇರಲಿದೆ. ಕೃಷಿಕರಿಗೆ ಲಾಭ ಮಾಡುವ ಸಮಯ. ಸಂಬಂಧಿಕರಿಂದ ಶುಭ ಸುದ್ದಿಗಳು ಬರಲಿವೆ. ವೃತ್ತಿ ಹಾಗೂ ವ್ಯವಹಾರ ಸಂಬಂಧವಾಗಿ ನಿಮಗೆ ಉತ್ತಮ ದಿನಗಳಿವೆ. ಕೆಲಸದಲ್ಲಿನ ಶ್ರಮವು ನಿಮಗೆ ಉತ್ತಮ ಫಲಿತಾಂಶ ತಂದು ಕೊಡಲಿವೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ವ್ಯಾಪಾರಿ ವರ್ಗಕ್ಕೆ ಲಾಭದಾಯಕ ದಿನಗಳಿವೆ. ನಿಮ್ಮ ವ್ಯವಹಾರದಲ್ಲಿನ ಪ್ರಗತಿಗೆ ನೀವು ಹೊಸ ಯೋಜನೆಗಳ ರೂಪಿಸಬಹುದು.

ಮಕರ ರಾಶಿ

ನಿಮ್ಮ ಕಠಿಣ ಪರಿಶ್ರಮಗಳು ಈ ತಿಂಗಳಲ್ಲಿ ಉತ್ತಮ ಫಲಿತಾಂಶ ತರಲಿವೆ. ನಿಮ್ಮ ಮಕ್ಕಳಿಂದ ನಿಮಗೆ ನೆಮ್ಮದಿ ಇರಲಿದೆ. ಪ್ರಯಾಣಗಳಲ್ಲಿ ನಿಮಗೆ ಶುಭಕರ ಫಲಿತಾಂಶ ಪಡೆಯುತ್ತೀರಿ. ವಾಹನ ಖರೀದಿ ಹಾಗೆ ಖರ್ಚು ಕೂಡ ಹೆಚ್ಚಾಗುವ ಸಂಭವವಿದೆ. ಸೋಮಾರಿತನ ಬಿಟ್ಟು ಈ ತಿಂಗಳೂ ಕೆಲಸ ಮಾಡುವಿರಿ. ಗೃಹಿಣಿಯರಿಗೆ ಅತ್ತೆ ಮನೆಯವರ ಕಡೆಯಿಂದ ಶುಭವಾಗುತ್ತಿದೆ. ಹೊಸ ಉದ್ಯೋಗ ಆರಂಭಿಸಲು ಸೂಕ್ತ ಸಮಯ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಸ್ವಂತ ಉದ್ಯೋಗದಲ್ಲಿ ಲಾಭವಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳು ಸರಾಸರಿಯಾಗಿರಲಿದೆ. ನಿಮ್ಮ ಅರ್ಧಕ್ಕೆ ನಿಂತ ದೊಡ್ಡ ಕಾರ್ಯವೊಂದನ್ನು ಪೂರ್ಣ ಮಾಡಲು ನಿಮಗೆ ಬಲ ಬರಲಿದೆ. ಕೆಲಸದ ಸ್ಥಳದಲ್ಲಿದ್ದ ಸಮಸ್ಯೆಯೊಂದು ಈ ತಿಂಗಳು ಬಗೆಹರಿಯಲಿದೆ. ವಾಹನ ಸಂಬಂಧವಾಗಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಪ್ರವಾಸಗಳ ಕೈಗೊಳ್ಳುತ್ತೀರಿ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಸಮಸ್ಯೆಗಳು ಬರಬಹುದು. ಈ ತಿಂಗಳ ನೀವು ಹಲವರ ವಿರೋಧ ಕಟ್ಟಿಕೊಳ್ಳುತ್ತೀರಿ.

ಮೀನ ರಾಶಿ

ಮೀನ ರಾಶಿಯವರಿಗೆ ಆಗಸ್ಟ್ ತಿಂಗಳು ಮಿಶ್ರ ಫಲಿತಾಂಶ ಇರಲಿದೆ. ಉತ್ಸಾಹದಿಂದ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ, ಅದರಿಂದ ನಂತರ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಣಕಾಸು ಸಮಸ್ಯೆಗಳು ದೊಡ್ಡದಾಗಬಹುದು. ಬ್ಯಾಂಕಿಂಗ್, ಫೈನಾನ್ಸ್ ವಿಚಾರದಲ್ಲಿನ ಅಡ್ಡಿಗಳು ಹೆಚ್ಚಾಗಬಹುದು. ನಿಮ್ಮ ಉಳಿತಾಯದಲ್ಲಿ ಇಳಿಕೆ ಹಾಗೆ ಅಗತ್ಯ ಸಮಯದಲ್ಲಿ ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಿಸಬಹುದು. ಮನೆಯಲ್ಲಿ ಹಲವು ವಿಚಾರವಾಗಿ ನಿಮ್ಮ ಮೇಲೆ ಒತ್ತಡ ಬರಬಹುದು. ತಿಂಗಳ ಅಂತ್ಯದಲ್ಲಿ ಅನಾರೋಗ್ಯ ಕಾಡಬಹುದು.

English summary

Monthly Horoscope 2025: August 2025 Monthly Horoscope In Kannada

August 2025 Monthly Horoscope in Kannada : Check August monthly horoscope for all 12 zodiac signs in Kannada.
Story first published: Tuesday, July 29, 2025, 17:45 [IST]
X
Desktop Bottom Promotion