Latest Updates
-
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ
ಫೆಬ್ರವರಿ ಮಾಸದ ನಿಮ್ಮ ಆರೋಗ್ಯ ರಾಶಿಫಲ ಇಲ್ಲಿದೆ..! ಯಾರಿಗೆ ಈ ತಿಂಗಳು ಶುಭವಾಗುತ್ತೆ?
ವರ್ಷದ ಮೊದಲ ತಿಂಗಳು ಅಂತ್ಯಗೊಂಡು ಎರಡನೇ ತಿಂಗಳು ಆಗಮಿಸಿದೆ. ಈ ನಡುವೆ ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿ ತಿಂಗಳಲ್ಲೂ ಗ್ರಹಗತಿಗಳ ಸಂಚಾರದಲ್ಲಿನ ಬದಲಾವಣೆ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದನ್ನು ನಾವು ನೋಡಬಹುದು. ಅದರಲ್ಲೂ ಫೆಬ್ರವರಿಯಲ್ಲಿ ಹಲವು ಗ್ರಹಗಳ ಬದಲಾವಣೆ ಗಮನಿಸಬಹುದು.
ಹಾಗಾದ್ರೆ ಫೆಬ್ರವರಿಯ ಇಡೀ ತಿಂಗಳ ಆರೋಗ್ಯ ಭವಿಷ್ಯದಲ್ಲಿ ಏನಿದೆ? ಫೆಬ್ರವರಿ ಯಾರಿಗೆ ಒಳಿತು ತರುವಂತಹ ಮಾಸವಾಗಿ ಮಾರ್ಪಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ
ಫೆಬ್ರವರಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಈ ತಿಂಗಳಲ್ಲಿ ನಿಮ್ಮ ಆರೋಗ್ಯ ಸುಧಾರಣೆ ನೋಡಲಿದ್ದೀರಿ. ನೀವು ಈ ಹಿಂದೆ ಅನುಭವಿಸಿದ್ದ ಅನಾರೋಗ್ಯ ಮತ್ತೆ ಕಾಡದಿರಲು ನೀವು ಮಾಡಿದ ಯೋಚನೆ ಫಲ ನೀಡಲಿದೆ. ವಾಹನ ಮಾಲಿಕರು ಎಚ್ಚರಿಕೆ ವಹಿಸುವುದು ಅಗತ್ಯ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಫೆಬ್ರವರಿ ತಿಂಗಳು ಮಿಶ್ರ ಫಲಕ್ಕೆ ಕಾರಣವಾಗುತ್ತಿದೆ. ಆರಂಭದ ದಿನದಲ್ಲಿ ನಿಮ್ಮ ಪರವಾದ ಕೆಲಸಗಳು ಬಹುಬೇಗ ಮುಕ್ತಾಯವಾಗುತ್ತವೆ. ಅನಾರೋಗ್ಯದಂತಹ ಸಮಸ್ಯೆಗೆ ಒಳಗಾಗಬಹುದು. ಮಾತಿನಿಂದ ಬಗೆಹರಿಯಬೇಕಿದ್ದ ವಿಚಾರ ಮತ್ತಷ್ಟು ದೊಡ್ಡದಾಗಬಹುದು. ಹಾಗೆ ಆಸ್ಪತ್ರೆ, ಚಿಕಿತ್ಸೆ ಸಂಬಂಧ ಖರ್ಚು ಹೆಚ್ಚಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಫೆಬ್ರವರಿ ತಿಂಗಳಲ್ಲಿ ಅದರಲ್ಲೂ ಆರೋಗ್ಯದ ವಿಚಾರವಾಗಿ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ. ನಿಮ್ಮ ಬಹು ದಿನಗಳಿಂದ ಕಾಡಿದ ಸಮಸ್ಯೆ ದೂರಾಗಬಹುದು. ನಿಮ್ಮ ಕುಟುಂಬದವರಿಂದ ಬೆಂಬಲ, ಪ್ರೋತ್ಸಾಹ ಪಡೆಯುತ್ತೀರಿ.
ಕರ್ಕ
ಕರ್ಕಾಟಕ ರಾಶಿಯವರು ಫೆಬ್ರವರಿಯಲ್ಲಿ ಹೆಚ್ಚು ಒತ್ತಡ ಎದುರಿಸಬೇಕಾಗಬಹುದು, ಆದರೆ ಕೊನೆಯಲ್ಲಿ ನಿಮ್ಮಲ್ಲಿ ಶಾಂತಿ ನೆಲಸುವಂತಹ ಕೆಲಸಕ್ಕೆ ಕೈ ಹಾಕಲಿದ್ದೀರಿ. ಉತ್ತಮ ಆರ್ಥಿಕ ಪ್ರಗತಿಗೆ ನೀವು ಸಾಕ್ಷಿಯಾಗಲಿದ್ದೀರಿ. ಅವಿವಾಹಿತರಿದ್ದರೆ ಈ ತಿಂಗಳು ಶುದ್ದಿಗಳ ಕೇಳುತ್ತೀರಿ. ನಿಮ್ಮ ಪ್ರಾಮಾಣಿಕ ಕೆಲಸವು ನಿಮ್ಮ ಗೌರವ, ಘನತೆ ಹೆಚ್ಚಿಸಲಿದೆ. ಆರೋಗ್ಯದ ಕಡೆ ಹೆಚ್ಚು ಗಮನವಿಡುವುದು ಒಳಿತು.
ಸಿಂಹ ರಾಶಿ
ಸರ್ಕಾರಿ ಹುದ್ದೆಯಲ್ಲಿರುವ ಮಂದಿಗೆ ಈ ತಿಂಗಳ ಅತ್ಯುತ್ತಮ ಫಲಿತಾಂಶ ನೀಡಲಿದೆ. ನೀವು ಯಾವುದಾದರು ಸಣ್ಣ ಪುಟ್ಟ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ತಿಂಗಳಲ್ಲಿ ವಿಮುಕ್ತರಾಗುತ್ತೀರಿ. ನಿಮ್ಮ ನಾಯಕತ್ವ ಗುಣದಿಂದ ನಿಮ್ಮಲ್ಲಿ ಜವಾಬ್ದಾರಿ ಹೆಚ್ಚುವ ಜೊತೆಗೆ ಯಶಸ್ಸು ಕೂಡ ಹುಡುಕಿ ಬರಲಿದೆ. ಹಾಗೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಈ ಫೆಬ್ರವರಿ ಮಿಶ್ರ ಫಲಕ್ಕೆ ಕಾರಣವಾಗುತ್ತಿದೆ. ನೀವು ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗೆ ತಿಂಗಳ ಕೊನೆಯಲ್ಲಿ ನಿಮ್ಮ ಅನಾರೋಗ್ಯದಲ್ಲಿ ಏರುಪೇರು ಕಂಡುಬರಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲು ನೀವು ಹೆಚ್ಚು ಶ್ರಮಿಸಬೇಕಿದೆ. ವಿಶ್ರಾಂತಿಯ ಇಲ್ಲದ ನಿಮಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದವರಿದ್ದರೆ ಎಚ್ಚರಿಕೆ ವಹಿಸಬೇಕಿದೆ. ಆದಷ್ಟು ಹೊರಗಡೆ ಊಟ, ತಿಂಡಿಯನ್ನು ಕಡಿಮೆ ಮಾಡಬೇಕಾಗುತ್ತದೆ. ಆಹಾರಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳಿಗೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿನ ಒತ್ತಡ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಈ ತಿಂಗಳಲ್ಲಿ ಉತ್ತಮ ಆರೋಗ್ಯ ಫಲ ನೋಡಬಹುದು. ನಿಮ್ಮಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ಸುಧಾರಿಸಲಿದೆ. ಆದರೆ ಕೆಲ ಸಣ್ಣಪುಟ್ಟ ಕಾಲೋಚಿತ ಅನಾರೋಗ್ಯ ನಿಮ್ಮನ್ನು ಕಾಡಬಹುದು. ಹೆಚ್ಚು ಕೆಲಸ ಮಾಡುವ ಜೊತೆಗೆ ವಿಶ್ರಾಂತಿ ಪಡೆದುಕೊಳ್ಳಿ.
ಧನು ರಾಶಿ
ಧನು ರಾಶಿಯವರಿಗೆ ಫೆಬ್ರವರಿಯಲ್ಲಿ ಮೂಳೆ ಸಂಬಂಧಿ ಸಮಸ್ಯೆಗೆ ಒಳಗಾಗಬಹುದು, ಕೀಲು ನೋವು, ಗಂಟು ನೋವಿನಂತಹ ಸಮಸ್ಯೆ ಕಾಡಬಹುದು. ಆದರೆ ತಿಂಗಳ ಕೊನೆಯಲ್ಲಿ ಆರೋಗ್ಯ ಸುಧಾರಣೆ ನೋಡಲಿದ್ದೀರಿ. ಅನಗತ್ಯ ಖರ್ಚು ನಿಮ್ಮಲ್ಲಿ ಒತ್ತಡ ಹೆಚ್ಚಾಗಿಸಬಹುದು.
ಮಕರ ರಾಶಿ
ಮಕರ ರಾಶಿ ಅವರಲ್ಲಿ ಈ ತಿಂಗಳು ದೊಡ್ಡ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ಅವರ ನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದ್ದ ಅನಾರೋಗ್ಯವೊಂದು ದೂರಾಗುತ್ತದೆ. ಬಹುಕಾಲದಿಂದ ನೀವು ಚಿಕಿತ್ಸೆ ಪಡೆಯುತ್ತಿದ್ದ ಸಮಸ್ಯೆಗೆ ಪರಿಹಾರ ಸಾಧ್ಯವಿದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಈ ತಿಂಗಳಿನಲ್ಲಿ ಹೆಚ್ಚು ಓಡಾಟ, ಒತ್ತಡದಿಂದ ಅನಾರೋಗ್ಯಕ್ಕೆ ಒಳಗಾಗಬಹುದು, ಅದರಲ್ಲೂ ಮಾನಸಿಕ ನೆಮ್ಮದಿ ಹಾಳಾಗುವುದು, ಹೆಚ್ಚು ಒತ್ತಡಕ್ಕೆ ಒಳಗಾಗುವುದು, ಸಿಟ್ಟು, ಕೋಪ ಹೆಚ್ಚಾಗಬಹುದು.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಫೆಬ್ರವರಿ ಉತ್ತಮ ತಿಂಗಳಾಗುತ್ತಿದೆ, ನಿಮ್ಮ ಆರೋಗ್ಯ ಸುಧಾರಿಸಲಿದೆ. ಇದಕ್ಕಾಗಿ ಆರೋಗ್ಯಕರ ಅಭ್ಯಾಸಗಳನ್ನು ಮುಂದುವರೆಸಿ. ಮನೆಯಲ್ಲಿ ಸದಸ್ಯರೊಬ್ಬರಿಗೆ ಇದ್ದ ಸಮಸ್ಯೆ ದೂರಾಗುತ್ತದೆ. ತಿಂಗಳಿನ ಅಂತ್ಯದಲ್ಲಿ ನೀವು ನೆಮ್ಮದಿ, ಶಾಂತಿ ನೆಲಸುವ ಕಾರ್ಯ ಮಾಡಲಿದ್ದೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











