Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮೀನ ರಾಶಿಗೆ ಶುಕ್ರ ಸಂಚಾರ: ಲಕ್ಷ್ಮಿ ಕೃಪೆಯಿಂದ ಬಗೆಹರಿಯಲಿದೆ ಹಣಕಾಸಿನ ಬಿಕ್ಕಟ್ಟು!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯು ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಆದ್ರೆ ವಿಶೇಷ ದಿನಗಳ ಸಮಯದಲ್ಲಿ ಹಲವು ಗ್ರಹಗಳ ಚಲನೆಯನ್ನು ವಿಶೇಷ ವಿದ್ಯಮಾನವಾಗಿ ನೋಡಲಾಗಿದೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿ ಬದಲಾಯಿಸುತ್ತವೆ. ಇದು ಹಲವಾರು ರೀತಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೆ ರಾಶಿಯಿಂದ ರಾಶಿಗೆ ಬದಲಾವಣೆಗಳ ತರುವುದು ನೋಡಬಹುದು. ಒಂದೇ ರಾಶಿಯಲ್ಲಿ ಒಂದು ಗ್ರಹಕ್ಕಿಂತ ಹೆಚ್ಚಿನ ಗ್ರಹಗಳ ಸಂಯೋಗವು ಕೂಡ ಹಲವು ರೀತಿಯ ಯೋಗ ಸೃಷ್ಟಿಸಲಿವೆ.
ಹಾಗೆ ಗ್ರಹಗಳ ಸಾಲಿನಲ್ಲಿ ಪ್ರಮುಖವಾಗಿ ಶುಕ್ರನ ಚಲನೆಯನ್ನು ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಗ್ರಹ ಸ್ಥಾನಪಲ್ಲಟ ಎಂದು ಕರೆಯಲಾಗಿದೆ. ಮಾರ್ಚ್ 2 ರಂದು ಶುಕ್ರ ಮೀನ ರಾಶಿಗೆ ಚಲಿಸುತ್ತಾನೆ. ಈ ಬದಲಾವಣೆಯು ಎಲ್ಲಾ ರಾಶಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಇದು ಕೆಲವು ರಾಶಿಯವರಿಗೆ ಶುಭವಾದರೆ ಮತ್ತೆ ಕೆಲವು ರಾಶಿಯವರಿಗೆ ಅಶುಭವೂ ಹೌದು.

ಹಾಗಾದ್ರೆ ಶುಕ್ರ ಗ್ರಹವು ಮೀನ ರಾಶಿಗೆ ಚಲಿಸುವುದು ಯಾವ ರಾಶಿಯವರಿಗೆ ಅನುಕೂಲಕರ ಅನ್ನೋದನ್ನು ತಿಳಿದುಕೊಳ್ಳೋಣ. ಈ ಗ್ರಹವು ಯಾರಿಗೆ ಶುಭ ಸಮಯವನ್ನು ತರುತ್ತಿದೆ ಎಂಬುದನ್ನು ತಿಳಿಯೋಣ.
ವೃಷಭ ರಾಶಿ
ಶುಕ್ರನು ವೃಷಭ ರಾಶಿಯ ಹನ್ನೊಂದನೇ ಮನೆಯಲ್ಲಿ ಚಲಿಸಲಿದ್ದಾನೆ. ಈ ಮನೆ ಲಾಭವನ್ನು ಸೂಚಿಸುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮಗೆ ಹಣಕಾಸು ಮತ್ತು ವ್ಯವಹಾರ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವ್ಯವಹಾರ ಸಂಬಂಧವಾಗಿ ಈ ಮೊದಲು ನೀವು ಆರಂಭಿಸಿದ್ದ ಕಾರ್ಯಗಳು ಪೂರ್ಣವಾಗಲಿದೆ. ಕುಟುಂಬದಲ್ಲಿ ಹಣಕಾಸು ಸಮಸ್ಯೆಗಳು ನಿವಾರಣೆಯಾಗಲಿದೆ. ವಿವಾಹ ಸಂಬಂಧಿತ ವಿಚಾರವಾಗಿ ಇದ್ದಂತಹ ಚಿಂತೆಗಳು ದೂರಾಗುವ ಸಂಭವಗಳಿವೆ. ಬಹು ಸಮಯದಿಂದ ನಿಮಗೆ ಸೇರಬೇಕಿದ್ದ ಹಣ ಕೈ ಸೇರಲಿದೆ. ದೊಡ್ಡ ಪ್ರಯತ್ನಗಳಲ್ಲಿ ನೀವು ಬಯಸಿದ ಫಲಿತಾಂಶಗಳ ಪಡೆಯಬಹುದು.
ಕರ್ಕಾಟಕ ರಾಶಿ
ಶುಕ್ರನು ಒಂಬತ್ತನೇ ಮನೆಯಲ್ಲಿ ಚಲಿಸುವುದರಿಂದ ಕರ್ಕ ರಾಶಿಯ ಜನರಲ್ಲಿ ಅನುಕೂಲಕರ ದಿನಗಳು ಬರಲಿವೆ. ಆಧ್ಯಾತ್ಮಿಕತೆಯ ಮನೆಯಲ್ಲಿ ಶುಕ್ರ ಸಾಗಲಿದ್ದಾನೆ. ಈ ಸಂಚಾರದಿಂದಾಗಿ ಅವರು ಅನಿರೀಕ್ಷಿತ ಪ್ರಯೋಜನಗಳನ್ನು ಅನುಭವಿಸಲಿದ್ದಾರೆ. ಈ ಅವಧಿಯು ತುಂಬಾ ಅನುಕೂಲಕರವಾಗಿರುತ್ತದೆ. ಬಹು ಸಮಯದ ಬಳಿಕ ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆಗಳಿವೆ. ಉದ್ಯೋಗ ಸಂಬಂಧಿತ ವಿಚಾರದಲ್ಲಿನ ದೊಡ್ಡ ಅಡ್ಡಿಗಳು ನಿವಾರಣೆಯಾಗಲಿದೆ, ಅದರಲ್ಲೂ ನಿಮಗೆ ಬಡ್ತಿ, ವರ್ಗಾವಣೆ, ವೇತನ ಕುರಿತಾದ ವಿಚಾರದಲ್ಲಿ ಶುಭವಾಗುವುದು ನೋಡಬಹುದು. ವೈವಾಹಿಕ ಜೀವನವು ಅನೇಕ ಸಂತೋಷದ ಕ್ಷಣಗಳಿಂದ ತುಂಬಿರುತ್ತದೆ.
ಧನು ರಾಶಿ
ಶುಕ್ರನು ಧನು ರಾಶಿಯವರ ಸಂತೋಷದ ಮನೆಯಲ್ಲಿ ಸಾಗಲಿದ್ದಾನೆ. ಇದು ನಿಮ್ಮ ಜೀವನದಲ್ಲಿ ಉತ್ತಮ ಪ್ರಯೋಜನಗಳನ್ನು ತರಲಿದೆ. ಈ ಅವಧಿಯಲ್ಲಿ ಎಲ್ಲಾ ಪ್ರಯತ್ನಗಳಲ್ಲಿ ಅದೃಷ್ಟ ಅವರ ಜೊತೆಗಿರುತ್ತದೆ ಮತ್ತು ಅವರು ತಮ್ಮ ವೃತ್ತಿಪರ ಜೀವನದಲ್ಲೂ ಯಶಸ್ವಿಯಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ಪ್ರವಾಸಗಳು, ಭೇಟಿಗಳಲ್ಲಿ ಶುಭವಾಗುತ್ತಿದೆ. ಹೊಸ ಉದ್ಯೋಗ ಆರಂಭಿಸುವುದು, ವ್ಯವಹಾರದಲ್ಲಿ ಭಾಗಿಯಾಗುವುದು ಹೂಡಿಕೆಯಲ್ಲಿ ತೊಡಗುವುದು ನಿಮಗೆ ಲಾಭದಾಯಕವಾಗಿರಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಮಯವೂ ಇದಾಗಲಿದೆ. ಮನೆ ನಿರ್ಮಾಣ ಸಂಬಂಧಿತ ವಿಚಾರದಲ್ಲಿ ಶುಭವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications