Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Miss World 2025: ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಥೈಲ್ಯಾಂಡ್ ಸುಂದರಿ: ಯಾರೀಕೆ ಗೊತ್ತಾ?
72ನೇ ವಿಶ್ವ ಸುಂದರಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಥೈಲ್ಯಾಂಡ್‌ನ ಓಪಲ್ ಸುಚಾಟಾ ಚುವಾಂಗ್‌ಸ್ರಿ ಈ ಬಾರಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮೇ 31ರಂದು ಹೈದರಾಬಾದ್‌ನಲ್ಲಿ ನಡೆದಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ ಅವರು 72ನೇ ವಿಶ್ವನೇ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಹೈದರಾಬಾದ್‌ನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ನಡೆದ ಅಂತಿಮ ಸುತ್ತು ಹಾಗೂ ಸಮಾರಂಭದಲ್ಲಿ 2024ರ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಕ್ಜೋವಾ ಅವರು ಹೊಸ ವಿಶ್ವ ಸುಂದರಿ ಕಿರೀಟ ಧರಿಸಿದರು.
ಹಾಗೆ ಈ ಬಾರಿಯ ಮೊದಲ ರನ್ನರ್ ಅಪ್ ಆಗಿ ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಹೊರಹೊಮ್ಮಿದರೆ, ಪೋಲೆಂಡ್‌ನ ಮಾಜಾ ಕ್ಲಾಜ್ಡಾ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾಗವಹಿಸಲಿದ್ದರು. ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿಗೆ 24 ಮಂದಿ ಸುಂದರಿಯರು ಆಯ್ಕೆಯಾಗಿದ್ದರು.

ಭಾರತದಿಂದ ಈ ಸ್ಪರ್ಧೆಗೆ ನಂದಿಗೆ ಗುಪ್ತಾ ಭಾಗಿಯಾಗಿದ್ದರು. ರಾಜಸ್ಥಾನ ಮೂಲದ ಅವರು 2023ರಲ್ಲಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿದ್ದರು, ಈ ಬಾರಿ ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಹಾಗೆ ಅಂತಿಮ ಸುತ್ತಿಗೂ ಅವರು ಅರ್ಹತೆ ಪಡೆದಿದ್ದರು. ಆದ್ರೆ 72ನೇ ವಿಶ್ವ ಸುಂದರಿ ಪಟ್ಟವನ್ನು ಅವರು ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ.
ಯಾರು ಈ ವಿಶ್ವ ಸುಂದರಿ ಓಪಲ್ ಸುಚಾಟಾ ಚುವಾಂಗ್‌ಸ್ರಿ?
ಈ ಬಾರಿಯ ವಿಶ್ವ ಸುಂದರಿ ಪಟ್ಟ ಅಲಂಕರಿಸಿರುವ ಈ ಓಪಲ್ ಸುಚಾಟಾ ಥೈಲ್ಯಾಂಡ್‌ನವರು. ಆಕೆ ಫುಕೆಟ್ ಪ್ರದೇಶದಲ್ಲಿ ಬೆಳೆದವರು. ಹಾಗೆ ರೂಪದರ್ಶಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಅವರು ಸ್ತನ ಕ್ಯಾನ್ಸರ್ ಜಾಗೃತಿ ಸಂಬಂಧಿಸದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದಾರೆ. ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು ಎಂಬುದು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಅನಂತರ ಅವರು ಚಿಕಿತ್ಸೆಗೆ ಒಳಗಾಗಿದ್ದಲ್ಲದೆ ಸ್ತನ ಕ್ಯಾನ್ಸರ್ ಸಂಬಂಧ ಅವರು ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಮುಂದಾದರು.
ಹಾಗೆ ಅವರು 2024ರಲ್ಲಿ ಮೆಕ್ಸಿಕೋ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಓಪಲ್ ಥೈಲ್ಯಾಂಡ್ ಅನ್ನು ಪ್ರತಿನಿಧಿಸಿದರು, ಹಾಗೆ ಅಲ್ಲಿ ಮೂರನೇ ರನ್ನರ್ ಅಪ್ ಆಗಿ ಪ್ರಶಸ್ತಿ ಗಳಸುವ ಜೊತೆಗೆ ಖ್ಯಾತಿ ಗಳಿಸಿದ್ದರು, ಇದಾದ ಒಂದು ವರ್ಷದ ಬಳಿಕ ಈ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾರೆ.
ವಿಶ್ವ ಸುಂದರಿ ವಿಜೇತೆಗೆ ಸಿಗುವ ಬಹುಮಾನ ಎಷ್ಟು ಗೊತ್ತಾ?
ಮಿಸ್ ವರ್ಲ್ಡ್ ವಿಜೇತರಿಗೆ ಸುಮಾರು 8.5 ಕೋಟಿ ರೂಪಾಯಿ ನಗದು ಬಹುಮಾನವಾಗಿ ಸಿಗಲಿದೆ. ಹಾಗೆ ಒಂದು ವರ್ಷದ ವರೆಗೂ ಅವರು ಉಚಿತವಾಗಿ ವಿಶ್ವ ಪರ್ಯಟನೆ ಮಾಡಬಹುದು. ಈ ಎಲ್ಲಾ ಖರ್ಚುಗಳನ್ನು ವಿಶ್ವ ಸುಂದರಿ ಸ್ಪರ್ಧೆಯ ಆಯೋಜಕರು ಭರಿಸಬೇಕಾಗುತ್ತದೆ. ಹಾಗ ಅವರು ಒಂದು ವರ್ಷದ ವರೆಗೂ ಮಿಸ್ ವಲ್ಲ್ಡ್ ಆಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡಬೇಕಾಗುತ್ತದೆ.
ಇನ್ನು ಭಾರತವು 6 ಬಾರಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜಯ ದಾಖಲಿಸಿದೆ. ಹಾಗೆ ವೆನುಜುವೆಲಾ ಕೂಡ 6 ಬಾರಿ ಪ್ರಶಸ್ತಿ ಗೆದ್ದು ಅಗ್ರ ಸ್ಥಾನವನ್ನು ಸಮನಾಗಿ ಹಂಚಿಕೊಂಡಿವೆ. ಈ ಬಾರಿ ಭಾರತಕ್ಕೆ ಈ ಪ್ರಶಸ್ತಿ ಒಲಿದಿದ್ದರೆ ಅತೀ ಹೆಚ್ಚು ಬಾರಿ ವಿಶ್ವ ಸುಂದರಿ ಪಟ್ಟಿ ಅಲಂಕರಿಸಿದ್ದ ದೇಶ ಎಂಬ ಹೆಗ್ಗಳಿಕೆ ಪಡೆಯುತ್ತಿತ್ತು.
ಭಾರತಕ್ಕೆ ಮೊದಲ ಬಾರಿಗೆ 1966ರಲ್ಲಿ ರೀಟಾ ಫಾರಿಯಾ ಪೊವೆಲ್ ವಿಶ್ವ ಸುಂದರಿ ಪ್ರಶಸ್ತಿ ತಂದುಕೊಟ್ಟರು ಅನಂತರ ಐಶ್ವರ್ಯಾ ರೈ, ಡಿಯಾನಾ ಹೇಡನ್, ಯುಕ್ತಾ, ಪ್ರಿಯಾಂಕಾ ಚೋಪ್ರಾ, ಮಾನುಷಿ ಚಿಲ್ಲರ್ ಭಾರತದ ಪರವಾಗಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
