Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2026ರಲ್ಲಿ ಬುಧನ ಹಿಮ್ಮುಖ ಚಲನೆ: ಈ ರಾಶಿಯವರಲ್ಲಿ ಜಾಕ್‌ಪಾಟ್, ನೀವು ಅಂದುಕೊಂಡಿದ್ದ ಕೆಲಸ ಯಶಸ್ಸು!
ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಬುಧನ ಸಂಚಾರವು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಒಂಬತ್ತು ಗ್ರಹಗಳಲ್ಲಿ, ಬುಧನು ವ್ಯವಹಾರ, ಬುದ್ಧಿವಂತಿಕೆ ಮತ್ತು ವಾಕ್ಚಾತುರ್ಯ, ಸ್ವಂತ ಪ್ರಗತಿಯಂತಹ ವಿಚಾರದಿಂದ ಶುಭ ಎನಿಸಿಕೊಳ್ಳುತ್ತಾನೆ. ವ್ಯಕ್ತಿಯೊಬ್ಬನ ಜಾತಕದಲ್ಲಿ ಬುಧನು ಬಲವಾಗಿದ್ದರೆ ಅವರ ಜೀವನವು ಸಕಾರಾತ್ಮಕ ಬದಲಾವಣೆಗಳಿಂದ ತುಂಬಿರಲಿದೆ.
ಬುಧನ ರಾಶಿ ಬದಲಾವಣೆಯು ಹಲವು ರಾಶಿಗಳಿಗೆ ಬದಲಾವಣೆಗಳ ತರಲಿದೆ. ಹಾಗೆ ಬುಧನು ಧನಾತ್ಮಕ ಮನೆಯಲ್ಲಿ ಸಂಚರಿಸಿದರೆ ವ್ಯಕ್ತಿಯ ಜೀವನ ಸಮೃದ್ಧಿಯಿಂದ ಕೂಡಿರಲಿದೆ. ಹಾಗೆ ಋಣಾತ್ಮಕ ಮನೆಯಲ್ಲಿದ್ದರೆ ಒಂದಿಷ್ಟು ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಈಗ ಫೆಬ್ರವರಿ 2026 ರಲ್ಲಿ ಬುಧ ಕುಂಭ ರಾಶಿಗೆ ಸಾಗುತ್ತಾನೆ, ಆದರೆ ಫೆಬ್ರವರಿ 26 ರಂದು ಬುಧ ವಕ್ರ ಮಾರ್ಗದಲ್ಲಿ ಚಲಿಸುತ್ತಾನೆ.

ಜ್ಯೋತಿಷ್ಯದಲ್ಲಿ ಬುಧನ ಈ ಸಂಚಾರವು ಬಹಳ ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗಿದೆ. ಈ ಬುಧನ ಸಂಚಾರವು ಕೆಲವು ರಾಶಿ ಜನರ
ಜೀವನದಲ್ಲಿ ವಿವಿಧ ಬದಲಾವಣೆಗಳನ್ನು ತರಲಿದೆ. ಹಾಗೆ ಇಂತಹ ಬದಲಾವಣೆಗಳಿಂದ ವ್ಯಕ್ತಿಯ ಜೀವನದಲ್ಲಿ ಸುಖವಿರಲಿದೆ. ಹಾಗಾದ್ರೆ ಯಾರಿಗೆಲ್ಲಾ ಇದು ಲಾಭದಾಯಕ ಬುಧನ ಸಂಚಾರವು 2026ರಲ್ಲಿ ಯಾರನ್ನು ನೆಮ್ಮದಿ ಜೀವನಕ್ಕೆ ದಾರಿ ಮಾಡಿಕೊಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಬುಧನ ವಕ್ರ ಚಲನೆಯಿಂದಾಗಿ ವೃಷಭ ರಾಶಿ ಜನರಿಗೆ ಸಕಾರಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಅವರ ಸಂಪತ್ತು ಮತ್ತು ಸೌಕರ್ಯ ಹೆಚ್ಚಾಗುತ್ತದೆ. ಇದರಿಂದಾಗಿ ವಾಹನಗಳು ಮತ್ತು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಅವಕಾಶಗಳಿವೆ. ಉದ್ಯೋಗದಲ್ಲಿರುವವರು ಬಡ್ತಿ ಮತ್ತು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ನಿಮ್ಮ ವ್ಯವಹಾರಗಳು ಅದೃಷ್ಟದಿಂದ ಕೂಡಿರಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಶುಭವಾಗುತ್ತಿದೆ. ಜೀವನದಲ್ಲಿ ಸಂತೋಷದ ದಿನಗಳ ಅನುಭವಿಸಬಹುದು, ಹಾಗೆ ಮಕ್ಕಳ ಕುರಿತಾದ ಚಿಂತೆಗಳು ದೂರಾಗಲಿವೆ. ನಿಮ್ಮ ಹಣಕಾಸು ಕುರಿತ ವಿಚಾರವಾಗಿ ದೊಡ್ಡ ಸಮಸ್ಯೆಗಳಿವೆ.
ಮಿಥುನ ರಾಶಿ
ಬುಧನು ಮಿಥುನ ರಾಶಿಯ ಅಧಿಪತಿ, ಆದ್ದರಿಂದ ಈ ಬುಧನ ಸಂಚಾರವು ಅವರಿಗೆ ಅನೇಕ ದೊಡ್ಡ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ವೃತ್ತಿಪರ ಜೀವನದ ದೊಡ್ಡ ಲಾಭಗಳ ಅನುಭವಿಸಬಹುದು. ನಿರುದ್ಯೋಗಿಗಳು ಈ ವರ್ಷದಲ್ಲಿ ಶುಭ ಅಥವಾ ಅವರು ಬಯಸಿದ ಉದ್ಯೋಗ ಪಡೆಯಬಹುದು. ಅವಿವಾಹಿತರಿಗೆ ಅಡ್ಡಿಯಾಗಿದ್ದ ವಿಚಾರವೊಂದು ದೂರಾಗಲಿದೆ. ಹಣಕಾಸು ವಿಚಾರವಾಗಿ ಬಹಳ ಸಮಯದಿಂದ ಇದ್ದಂತಹ ಅಡ್ಡಿಯೊಂದು ನಿವಾರಣೆಯಾಗಲಿದೆ. ಹೊಸ ಜವಾಬ್ದಾರಿಗಳು ನಿಮಗೆ ದೊಡ್ಡ ಕೆಲಸಗಳ ತರಬಹುದು. ವ್ಯವಹಾರ ಒಪ್ಪಂದಗಳು ಲಾಭದಾಯಕವಾಗಬಹುದು.
ಕರ್ಕಾಟಕ ರಾಶಿ
ಈ ಬುಧನ ಹಿಮ್ಮುಖ ಸ್ಥಿತಿಯಿಂದ ಕರ್ಕಾಟಕ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳು ದೊರೆಯಲಿವೆ. ಇದರಿಂದಾಗಿ ಕರ್ಕಾಟಕ ರಾಶಿಯವರ ಜೀವನದಲ್ಲಿ ಭಾರಿ ಆರ್ಥಿಕ ಲಾಭ ಮತ್ತು ವೃತ್ತಿಜೀವನದ ಯಶಸ್ಸಿನ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ವ್ಯಕ್ತಿತ್ವ ಸುಧಾರಣೆಯಾಗಲಿದೆ. ಉದ್ಯೋಗದಲ್ಲಿನ ಬಡ್ತಿ ಅಥವಾ ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗಲಿದೆ. ಕುಟುಂಬದಲ್ಲಿನ ಸಮಸ್ಯೆಗಳನ್ನು ನೀವು ನಿವಾರಿಸಿಕೊಳ್ಳುವಿರಿ.
ತುಲಾ ರಾಶಿ
ಬುಧನ ಹಿಮ್ಮುಖ ಸಂಚಾರವು ತುಲಾ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ತರಲಿದೆ. ಈ ಅವಧಿಯಲ್ಲಿ ನೀವು ಜೀವನದಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವೃತ್ತಿ ಜೀವನದ ಯಶಸ್ಸಿನ ಉತ್ತುಂಗಕ್ಕೆ ಏರಬಹುದು. ಉದ್ಯಮಿಗಳು ಸಕಾರಾತ್ಮಕ ಬೆಳವಣಿಗೆಗಳು ಮತ್ತು ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಅವಕಾಶಗಳಿವೆ. ವೈಯಕ್ತಿಕ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











