ಮೇ ತಿಂಗಳಲ್ಲಿ ಎರಡು ಬಾರಿ ರಾಶಿ ಬದಲಾಯಿಸಲಿದೆ ಬುಧ ಗ್ರಹ..! ಯಾರಿಗಿದು ಶುಭಕರ?

ಜ್ಯೋತಿಷ್ಯದಲ್ಲಿ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿ ಬದಲಾಯಿಸುವುದು ಸಾಮಾನ್ಯ. ಹಾಗೆ ಅವುಗಳ ಗ್ರಹ, ನಕ್ಷತ್ರ ಬದಲಾವಣೆಯಾದಾಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಬೀರುವುದು ಕೂಡ ನೋಡಬಹುದು. ಅದರಲ್ಲೂ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಚಲಿಸಿದಾಗ ಅಲ್ಲಿ ಉಂಟಾಗುವ ಅಪರೂಪದ ಸಂಯೋಗವು ಹಲವು ರೀತಿಯಲ್ಲಿ ಲಾಭದಾಯಕವಾಗಲಿದೆ.

ಇನ್ನು ನಾವು ಮೇ ತಿಂಗಳನಲ್ಲಿ ಹಲವು ಗ್ರಹಗಳು ತಮ್ಮ ದಿಕ್ಕು, ರಾಶಿ, ನಕ್ಷತ್ರವನ್ನು ಬದಲಾಯಿಸುತ್ತಿರುವುದು ನೋಡಬಹುದು ಅದರಲ್ಲಿ ಪ್ರಮುಖವಾಗಿ ಬುಧ ಗ್ರಹ ಮೇಷ ರಾಶಿಯಲ್ಲಿ ಚಲಿಸಲಿದೆ. ಒಂದೇ ತಿಂಗಳಲ್ಲಿ ಬುಧನು ಎರಡು ಗ್ರಹ ಬದಲಾಯಿಸಲಿದೆ. ಮೊದಲು ಮೇ 7ರಂದು ಮೇಷ ರಾಶಿಗೆ ಹಾಗೆ ಮೇ 23ರಂದು ವೃಷಭ ರಾಶಿಗೆ ಚಲಿಸಲಿದೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.

Mercury Will Change Signs Twice In May Will Leads Luck For These Sings

ಬುಧ ಗ್ರಹವು ವ್ಯವಹಾರ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಉತ್ತಮ ಸಂವಹನವನ್ನು ಪ್ರತಿನಿಧಿಸುವ ಒಂದು ಗ್ರಹವಾಗಿದೆ. ಬುಧ ಗ್ರಹವು ಅನುಕೂಲಕರ ಸ್ಥಾನದಲ್ಲಿರುವುದರಿಂದ ಹಲವು ರಾಶಿಗಳಲ್ಲಿ ಬದಲಾವಣೆಗಳ ನೋಡಬಹುದು. ಹಾಗಾದ್ರೆ ಬುಧನ ಸಂಚಾರವು ಯಾವೆಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗೆ ಯಾವ ರೀತಿಯಲ್ಲಿ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇ ತಿಂಗಳಲ್ಲಿ ಬುಧನ ಎರಡು ಬಾರಿಯ ತನ್ನ ರಾಶಿಯನ್ನು ಬದಲಾಯಿಸುವುದು ಮೇಷ ರಾಶಿಯವರಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಮೇ 23ರಂದು ಬುಧನು ಮೇಷ ರಾಶಿಗೆ ಚಲಿಸುತ್ತಾನೆ. ಆದರೆ ಬುಧನಿಂದಾಗುವ ಲಾಭವು ನಿಮಗೆ ಮೇ 7ರಿಂದಲೇ ಆರಂಭವಾಗಲಿದೆ. ನೀವು ಆಸ್ತಿ ಸಂಬಂಧ ಸಾಲಕ್ಕೆ ಮುಂದಾದರೆ ಈ ಸಮಯದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ಈ ಹಣದಿಂದ ನಿಮ್ಮ ಆಸ್ತಿ ಮತ್ತಷ್ಟು ವೃದ್ಧಿಯಾಗಲಿದೆ. ನಿಮ್ಮ ನಾಯಕತ್ಬದ ಗುಣವು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಹಲವರಿಗೆ ಇದು ಶುಭಕರವಾಗುತ್ತದೆ. ಮನೆಯ ಪರಿಸ್ಥಿತಿ ಸುಧಾರಿಸಲಿದೆ. ಹಲವು ವರ್ಷಗಳಿಂದ ನೀವು ಅರ್ಧಕ್ಕೆ ನಿಲ್ಲಿಸುವುದ ವಿಚಾರವೊಂದು ನಿಮ್ಮಲ್ಲಿ ಬದಲಾವಣೆಗೆ ಕಾರಣವಾಗಲಿದೆ. ರಿಯಲ್ ಎಸ್ಟೇಟ್ ಹಾಗೂ ಮಳಿಗೆ ಬಾಡಿಗೆ ನೀಡಿದವರಲ್ಲಿ ಅತ್ಯಧಿಕ ಲಾಭ ನೋಡಬಹುದು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಹುದ್ದೆಯಲ್ಲಿರುವವರಿಗೆ ಈ ಸಮಯದಲ್ಲಿ ಲಾಭದಾಯಕ. ನಿಮ್ಮ ಆರೋಗ್ಯದಲ್ಲೂ ಸುಧಾರಣೆ ನೋಡಬಹುದು.

ಕರ್ಕ ರಾಶಿ

ಈ ಎರಡು ಬಾರಿ ಬುಧ ಗ್ರಹದ ಸಂಚಾರವು ಕರ್ಕ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಹತ್ತನೇ ಮನೆಯಲ್ಲಿ ಬುಧ ಸಾಗುತ್ತಿರುವುದರಿಂದ, ಕರ್ಕ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಹೊರಜಗತ್ತಿಗೆ ನಿಮ್ಮ ಬಲ ತಿಳಿಯಲಿದೆ. ನೀವು ಎಷ್ಟರ ಮಟ್ಟಿಗೆ ಕಠಿಣ ನಿರ್ಧಾರ ತೆಗೆದುಕೊಂಡು ಬೆಳೆಯುತ್ತೀರಿ ಎನ್ನುವುದನ್ನು ಅರಿಯಬಹುದು. ಭೂ ಸಂಬಂಧಿ ಸಮಸ್ಯೆಗಳಿದ್ದರೆ ದೂರಾಗಲಿದೆ. ಹಾಗೆ ಕೆಲಸದ ಸ್ಥಳದಲ್ಲಿದ್ದ ದೊಡ್ಡ ಅಡೆತಡೆಯೊಂದು ನಿವಾರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಮಾತಿನ ಮೂಲಕ ಹಲವು ಕೆಲಸಗಳನ್ನು ಸುಲಭವಾಗಿ ಮುಗಿಸಲಿದ್ದೀರಿ. ಹಾಗೆ ನಿಮ್ಮ ಮಾತುನಿಂದ ಹೊಸ ಉದ್ಯೋಗದ ಕಡೆಗೆ ನೀವು ಪ್ರಯಾಣಿಸಹುದು.

ಸಿಂಹ ರಾಶಿ

ಈ ಬುಧ ಗ್ರಹವು ಎರಡು ಬಾರು ತನ್ನ ರಾಶಿ ಬದಲಾಯಿಸುತ್ತಿರುವುದು ಸಿಂಹ ರಾಶಿಯವರಲ್ಲಿ ಆರ್ಥಿಕ ಸಮಸ್ಯೆಗಳು ಹಾಗೂ ವ್ಯಾಪಾತಾತ್ಮಕ ವಲಯದಲ್ಲಿನ ಸಂಕಷ್ಟದ ಪರಿಸ್ಥಿತಿ ಸುಧಾರಿಸಲಿದೆ. ಈ ಅವಧಿಯಲ್ಲಿ ಅವರ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಕೆಲಸದಲ್ಲಿ ಬಡ್ತಿ ವರ್ಗಾವಣೆ ನೋಡಬಹುದು. ಪ್ರೀತಿ ಹಾಗೂ ದಾಂಪತ್ಯದ ವಿಚಾರದಲ್ಲಿ ನಿಮ್ಮ ಪರವಾಗಿ ಒಲವು ಹೆಚ್ಚುತ್ತದೆ. ನೀವು ಯಾರಿಗಾದರು ಹಣ ನೀಡಿದ್ದರೆ ಅದನ್ನು ಮರಳಿ ಪಡೆಯುತ್ತೀರಿ. ಹಾಗೆ ಅದನ್ನು ಸರಿಯಾದ ಕೆಲಸಕ್ಕೆ ಬಳಸುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Will Change Signs Twice In May Will Leads Luck For These Sings

Mercury is a planet that represents business, analytical skills, and good communication. Since Mercury is in a favorable position, changes can be seen in many zodiac signs.
Story first published: Thursday, April 17, 2025, 17:40 [IST]
X
Desktop Bottom Promotion