Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಮೂರು ಬಾರಿ ಬುಧ ಹಿಮ್ಮುಖ ಚಲನೆ: ಈ ರಾಶಿಯವರಿಗೆ ಕಾದಿದೆ ಅಪಾಯ, ಹಣಕಾಸಿನ ಸಂಕಷ್ಟ
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಗೆ ಬಹಳ ಮುಖ್ಯವಾದ ಸ್ಥಾನ ನೀಡಲಾಗುತ್ತದೆ. ಹಾಗೆ ಗ್ರಹಗಳ ಅಧಿಪತಿಯಾದ ಬುಧನ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಕರೆಯಲಾಗುತ್ತದೆ. ಸದ್ಯ ಈಗ ಬುಧನು 2026ರಲ್ಲಿ ಮೂರು ಬಾರಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. ಅದ್ರಲ್ಲೂ ಮೊದಲ ಬಾರಿಗೆ ಫೆಬ್ರವರಿಯಿಂದ ಮಾರ್ಚ್ ವರೆಗೆ ಎರಡನೆಯದಾಗಿ ಜೂನ್‌ನಿಂದ ಜುಲೈ ವರೆಗೆ ಹಾಗೆ ಕೊನೆಯ ಬಾರಿಗೆ ಅಕ್ಟೋಬರ್‌ನಿಂದ ನವೆಂಬರ್‌ವರೆಗೂ ಹಿಮ್ಮುಖವಾಗಿ ಚಲಿಸಲಿದ್ದಾನೆ.
ಜ್ಯೋತಿಷಿಗಳ ಪ್ರಕಾರ ಬುಧನ ಹಿಮ್ಮುಖ ಚಲನೆಯು ಕೆಲವು ರಾಶಿ ಜನರಿಗೆ ಶುಭ ಹಾಗೂ ಮತ್ತೆ ಕೆಲವು ರಾಶಿಗಳಿಗೆ ಅಶುಭ ಕಾರಕವಾಗಿ ಬದಲಾಗುತ್ತದೆ. ಬುಧನು ಬುದ್ಧಿವಂತಿಕೆ, ಮಾತು, ವ್ಯವಹಾರ, ಸಂವಹನ ಅಂಶಗಳಿಗೆ ಪೂರಕ ಬಲ ನೀಡುವ ಗ್ರಹವೆಂದು ಕರೆಯಲಾಗಿದೆ. ಅದ್ರಲ್ಲೂ ಬುಧನ ಹಿಮ್ಮುಖ ಚಲನೆಯು ವಿವಿಧ ರೂಪದಲ್ಲಿ ಅಡ್ಡಿಗಳನ್ನು ತರಲಿದೆ ಎಂದು ಹೇಳಲಾಗಿದೆ. ಬುಧನ ಹಿಮ್ಮುಖ ಚಲನೆಯು ಕೆಲಸದಲ್ಲಿ ಅಡೆತಡೆಗಳು, ತಪ್ಪು ತಿಳುವಳಿಕೆಗಳು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

ಹಾಗಾದ್ರೆ ಬುಧನ ಈ ಹಿಮ್ಮುಖ ಚಲನೆಯು ಯಾವೆಲ್ಲಾ ರಾಶಿಗಳಿಗೆ ಅನಾನುಕೂಲವನ್ನು ತರಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಬುಧನ ಹಿಮ್ಮುಖ ಚಲನೆಯು ಹಲವು ರೀತಿಯಲ್ಲಿ ಅನಾನುಕೂಲಗಳ ತರಲಿದೆ. ಅದ್ರಲ್ಲೂ ನಿಮ್ಮ ಕೌಟುಂಬಿಕ ವಿಚಾರದಲ್ಲಿ ಇದ್ದಂತಹ ಬಿಕ್ಕಟ್ಟುಗಳು ದೊಡ್ಡದಾಗುತ್ತವೆ. ನಿಮ್ಮಲ್ಲಿ ಉದ್ಯೋಗ ಅಥವಾ ವೃತ್ತಿ ಸಂಬಂಧಿತ ಒತ್ತಡವು ಹೆಚ್ಚಾಗುವುದು ನೋಡಬಹುದು. ಹಾಗೆ ಹಣಕಾಸಿನ ವಿಚಾರದಲ್ಲಿ ನಿಮಗೆ ಸವಾಲುಗಳಿವೆ. ನಿಮ್ಮ ದೊಡ್ಡ ಮೊತ್ತವೊಂದು ಕೈ ಸೇರದೆ ಇರಬಹುದು, ಅಥವಾ ಕೈ ಸೇರಿದರು ಸರಿಯಾದ ಕೆಲಸಕ್ಕೆ ಅದನ್ನು ವಿನಿಯೋಗಿಸುವಲ್ಲಿ ನೀವು ವಿಫಲರಾಗಬಹುದು. ವ್ಯಾಪಾರಿಗಳು ಸ್ಪರ್ಧಿಗಳಿಂದಾಗಿ ನಷ್ಟ ಅನುಭವಿಸಬಹುದು. ಪ್ರಯಾಣಗಳ ಮಾಡುವುದು ನಿಮಗೆ ಸಮಸ್ಯೆಗಳ ಹೆಚ್ಚಾಗಿಸಲು ಮತ್ತೊಂದು ಕಾರಣ ಆಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರು ಎಚ್ಚರಿಕೆಯಿಂದಿರಬೇಕಾದ ಸಮಯ ಇದು. ದೊಡ್ಡ ಖರ್ಚುಗಳು ಹೊರೆಯಾಗುತ್ತವೆ. ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ ಮತ್ತು ನಿಮ್ಮ ಮಾನಸಿಕೆ ನೆಮ್ಮದಿ ಹಾಳಾಗಬಹುದು. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರು, ಕುಟುಂಬಸ್ಥರೊಂದಿಗೆ ನಿಮ್ಮ ಸಂಬಂಧ ಮತ್ತಷ್ಟು ಹದಗೆಡಬಹುದು. ನಿಮ್ಮ ಗುರಿಗಳಿಂದ ನೀವು ಮತ್ತಷ್ಟು ದೂರಾಗಬಹುದು. ವಿವಾಹಿತರಲ್ಲಿ ಹೊಸ ರೀತಿಯಾದ ವೈವಾಹಿಕ ಸಮಸ್ಯೆಗಳ ನೋಡಬಹುದು. ಗೃಹಿಣಿಯರಲ್ಲಿ ಕಳವಳಗಳು, ಕಲಹಗಳು ಹೆಚ್ಚಾಗುವ ಸಮಯ ಇದಾಗಿರಲಿದೆ.
ವೃಶ್ಚಿಕ ರಾಶಿ
ಬುಧನ ಹಿಮ್ಮುಖ ಚಲನೆಯಿಂದಾಗಿ ವೃಶ್ಚಿಕ ರಾಶಿ ಜನರಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳಿವೆ. ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳು ಇರಲಿದೆ. ಹಿರಿಯ ಮತ್ತು ಕಿರಿಯರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೀವ್ರ ಎಚ್ಚರಿಕೆ ವಹಿಸುವುದು ಸೂಕ್ತ. ನಿಮ್ಮ ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಲಿವೆ. ಹಾಗೆ ಆನ್‌ಲೈನ್ ಫ್ರಾಡ್, ಹಣಷ ಹೂಡಿಕೆಯಂತ ವಿಚಾರಗಳು ಒಂದಿಷ್ಟು ಸಮಸ್ಯೆಗಳ ತರಬಹುದು. ಬಡ್ಡಿ ವ್ಯವಹಾರ ಸಂಬಂಧವಾಗಿ ಮನಸ್ತಾಪಗಳು ಮೂಡಬಹುದು. ನಿಮ್ಮ ದೊಡ್ಡ ಆರ್ಥಿಕ ವಿಚಾರಗಳಲ್ಲಿ ಸಲಹೆಗಳ ಪಡೆದು ಮುನ್ನಡೆಯುವುದು ಉತ್ತಮ. ಆರೋಗ್ಯ ವಿಚಾರದಲ್ಲಿ ಹಿಂದೆ ಅನುಭವಿಸಿದ್ದ ಸಮಸ್ಯೆಗಳು ಮತ್ತೆ ಎದುರಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications