ಫೆಬ್ರವರಿಯಲ್ಲಿ 2ಕ್ಕಿಂತ ಹೆಚ್ಚು ಬಾರಿ ಬುಧ ಸಂಕ್ರಮಣ: ಯಾವ ರಾಶಿಗೆ ಇದು ಲಾಭ..?

ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ಬಹಳ ಮಹತ್ವವಿದೆ. ಗ್ರಹಗಳ ‍ರಾಜ ಎಂಬುದಾಗಿ ಬುಧನನ್ನು ಸಂಭೋದಿಸಲಾಗಿದೆ. ಏಕೆಂದರೆ ಬುಧನ ಚಲನೆಯಿಂದ 12 ರಾಶಿಗಳ ಮೇಲೆ ಪ್ರಭಾವ ಬೀರುವ ಜೊತೆಗೆ ಹಲವು ರೀತಿಯ ಯೋಗಗಳನ್ನು ಬುಧನು ಉಂಟು ಮಾಡುತ್ತಾನೆ. ಹಾಗೆ ಬುಧನನ್ನು ಸಂಪತ್ತು, ಪ್ರಗತಿಗೆ ಹೋಲಿಸಲಾಗುತ್ತದೆ. ಯಾವ ರಾಶಿಯಲ್ಲಿ ಬುಧನ ಚಲನೆ ಇರಲಿದೆಯೋ ಆ ರಾಶಿಯವರ ಅದೃಷ್ಟವೇ ಬದಲಾಗಲಿದೆ.

ಹಾಗೆ ಈ ಫೆಬ್ರವರಿಯಲ್ಲಿ ಬುಧ ಎರಡು ಬಾರಿ ತನ್ನ ದಿಕ್ಕು ರಾಶಿ ಬದಲಿಸಲಿದ್ದಾನೆ. ಇದರಿಂದ ಹಲವು ಯೋಗಗಳ ಜೊತೆಗೆ ಸಂಕ್ರಮಣಗಳ ಕಾರಣದಿಂದ ಹಲವರಿಗೆ ಲಾಭದಾಯಕವಾಗುತ್ತಿದೆ. ಫೆಬ್ರವರಿಯಲ್ಲಿ ಎರಡು ಬಾರಿ ತನ್ನ ನಕ್ಷತ್ರವನ್ನೂ ಬದಲಿಸಲಿದ್ದಾನೆ. ಈ ನಿರಂತರ ಬದಲಾವಣೆಗಳು ಹಲವರಿಗೆ ಲಾಭದಾಯಕವಾಗುತ್ತಿವೆ. ಹಾಗಾದ್ರೆ ಈ ರೀತಿ ಬುಧನ ಸಂಕ್ರಮಣವು ಯಾವೆಲ್ಲ ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

Find Out Which Zodiac Sign Will Benefit

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಬುಧ ಗ್ರಹದ ಈ ಸಂಚಾರದಿಂದ ಹಲವು ರೀತಿಯ ಲಾಭಕ್ಕೆ ಕಾರಣವಾಗಿತ್ತಿದೆ. ಫೆಬ್ರವರಿಯಲ್ಲಿ ನಮಗೆ ಅಚ್ಚರಿಯ ರೀತಿಯ ಹಣಕಾಸಿನ ಪ್ರಗತಿ ನೋಡಬಹುದು. ಈ ಸಮಯದಲ್ಲಿ ನಿಮ್ಮ ಅದಾಯ ಹೆಚ್ಚಳವಾಗುವುದರಿಂದ ನಿಮ್ಮ ಅಡ್ಡಿ ಆತಂಕಗಳು ದೂರಾಗುತ್ತವೆ. ನಿಮ್ಮ ಕೆಲವೊಂದು ಕೆಲಸ ಕಾರ್ಯಗಳಿಗೆ ಬೇಕಾಗಿದ್ದ ಹಣಕಾಸಿನ ನೆರವು ಸುಲಭವಾಗಿ ನಿಮಗೆ ಸಿಗುಯವಂತಾಗುತ್ತದೆ. ಸಂಬಂಧಿಕರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಆಸ್ತಿ ವಿಚಾರ, ಮನೆ, ಕುಟುಂಬದ ಕೆಲವೊಂದು ವಿಚಾರಗಳಲ್ಲಿ ನಿಮ್ಮ ಕಡೆ ಒಲವಿರಲಿದೆ. ಈ ಸಮಯದಲ್ಲಿ ನೀವು ದುಬಾರಿ ವಸ್ತು ಖರೀದಿಯ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಬುಧ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ವಿಶೇಷ ಲಾಭ ತರಲಿದೆ. ನಿಮ್ಮ ದಾಂಪತ್ಯದಲ್ಲಿ ಹೊಸ ರಿತಿಯ ಚೈತನ್ಯ ತರುವಂತಹ ಕಾರ್ಯಗಳು ನಡೆಯಲಿವೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ಅರ್ಧಕ್ಕೆ ನಿಂತಿರುವ ಹಲವು ಕೆಲಸಗಳು ಪೂರ್ಣವಾಗಲಿದೆ. ನೀವು ಉದ್ಯೋಗ ಬದಲಿಸುವ ಯೋಚನೆಯಲ್ಲಿದ್ದರೆ ಈ ಸಮಯದಲ್ಲಿ ಬಹಳ ಸುಲಭವಾಗಿ ಹಾಗೆ ನಿಮ್ಮ ಬಯಕೆಯಂತೆ ಉತ್ತಮ ಕೆಲಸ ಸಿಗಲಿದೆ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಲಿದೆ.

ಮೇಷ ರಾಶಿ

ಮೇಷ ರಾಶಿಯವರಿಗೆ ಬುಧ ಅದೃಷ್ಟ ತರುವ ಗ್ರಹವಾಗಲಿದೆ. ನಿಮ್ಮಲ್ಲಿ ಈ ಸಮಯದಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದಾಗಿದೆ. ವಿದೇಶ ಪ್ರವಾಸದ ಲಾಭವಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರಲಿದೆ. ಹಲವು ವರ್ಷದಿಂದ ನೀವು ಮಾಡಬೇಕಿದ್ದ ಕೆಲಸಗಳು ಪೂರ್ಣವಾಗಲಿದೆ. ಅವಿವಾಹಿತರು ಶುಭ ಸುದ್ದಿಗಳನ್ನು ಕೇಳಲಿದ್ದಾರೆ. ಹಲವು ವರ್ಷದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ಸುಧಾರಿಸಲಿದೆ. ಇದು ನಿಮ್ಮ ವೈಯಕ್ತಿಕ ಪ್ರಗತಿಗೆ ಕಾರಣವಾಗುತ್ತದೆ. ಕಚೇರಿ ಕಾರ್ಯಗಳಲ್ಲಿ ನಿಮಗೆ ಯಶಸ್ಸಾಗಲಿದೆ. ಕುಟುಂಬಸ್ಥರೊಂದಿಗೆ ಇದ್ದ ಬಹುದೊಡ್ಡ ಮನಸ್ಥಾಪಗಳು ನಿವಾರಣೆಯಾಗುತ್ತವೆ. ಮಕ್ಕಳ ಭವಿಷ್ಯದ ಕುರಿತು ನಿಮ್ಮಲ್ಲಿ ಇದ್ದ ಭಯ ಅಥವಾ ಕೊರತೆಯಿಂದು ನಿವಾರಣೆಯಾಗುತ್ತದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Transits Twice in February: Find Out Which Zodiac Sign Will Benefit

Mercury will change its direction twice in February. This is beneficial to many due to transits along with many yogas. He will also change his star twice in February.
Story first published: Monday, January 20, 2025, 7:09 [IST]
X
Desktop Bottom Promotion