Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಮೂಲ ನಕ್ಷತ್ರಕ್ಕೆ ಬುಧ ಸಂಚಾರ: ಈ ರಾಶಿಯವರಿಗೆ ವರ್ಷಾಂತ್ಯದಿಂದ ಅದೃಷ್ಟಕರ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರವನ್ನು ಕೂಡ ಪ್ರಮುಖ ವಿದ್ಯಮಾನ ಎಂಬುದಾಗಿ ವಿವರಿಸಲಾಗಿದೆ. ಅದ್ರಲ್ಲೂ ಹಲವು ಗ್ರಹಗಳು ಅಪರೂಪದ ಯೋಗಗಳ ರೂಪಿಸುವ ಸ್ಥಿತಿಯಲ್ಲಿ ಚಲಿಸುವುದು ಕೂಡ ನೋಡಬಹುದು. ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ಪ್ರಮುಖ ರಾಶಿಗೆ ಚಲಿಸಿದರೆ ಹಾಗೆ ನಕ್ಷತ್ರವನ್ನು ಸಹ ಬದಲಾಯಿಸುವುದು ನೋಡಬಹುದು. ಗ್ರಹಗಳ ಸ್ಥಾನದಲ್ಲಿನ ಈ ಬದಲಾವಣೆಗಳು ಹಲವು ರಾಶಿ ಜನರ ಜೀವನದ ಮೇಲೂ ಪರಿಣಾಮ ಬೀರುತ್ತವೆ.
ಗ್ರಹಗಳ ರಾಜಕುಮಾರ ಬುಧ ಪ್ರಸ್ತುತ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಡಿಸೆಂಬರ್ 29 ರಂದು ಬುಧ ತನ್ನದೇ ನಕ್ಷತ್ರವಾದ ಜ್ಯೇಷ್ಠ ನಕ್ಷತ್ರದಿಂದ ಕೇತುವಿನ ಆಳ್ವಿಕೆಯ ಮೂಲ ನಕ್ಷತ್ರಕ್ಕೆ ಚಲಿಸುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಕೇತು ನೆರಳಿನ ಗ್ರಹವಾಗಿದೆ, ಸೂರ್ಯನ ಪ್ರಭಾವ ಹೊಂದಿರುವ ಕೇತುವಿನ ಚಲನೆಯು ಕೂಡ ಬುಧನ ಮೇಲೆ ಪರಿಣಾಮ ಉಂಟು ಮಾಡಲಿದೆ.

2025 ರ ಕೊನೆಯಲ್ಲಿ ಬುಧನು ಕೇತುವಿನ ನಕ್ಷತ್ರಕ್ಕೆ ಚಲಿಸುತ್ತಿದ್ದಂತೆ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುವುದು ನೋಡಬಹುದು. ಕೆಲವು ರಾಶಿ ಜನರಿಗೆ ವಿಶೇಷ ಪ್ರಯೋಜನಗಳನ್ನು ಪಡೆಯಲಿವೆ. ಈ ಪೋಸ್ಟ್‌ನಲ್ಲಿ ಬುಧನ ಈ ನಕ್ಷತ್ರ ಬದಲಾವಣೆಯಿಂದ ಯಾವ ರಾಶಿ ಜನರಿಗೆ ಅನುಕೂವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಬುಧನ ನಕ್ಷತ್ರ ಬದಲಾವಣೆಯು ಮೇಷ ರಾಶಿ ಜನರಿಗೆ ಅಪಾರ ಪ್ರಗತಿ ತರಲಿದೆ. ನೀವು ನಿಮ್ಮ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ನಕ್ಷತ್ರ ಬದಲಾವಣೆಯೊಂದಿಗೆ ನೀವು ಅದೃಷ್ಟದ ದಿನವನ್ನು ನೋಡಬಹುದು. ನಿಮ್ಮ ಆರ್ಥಿಕ ವಿಚಾರದಲ್ಲಿ ನಿಮ್ಮ ಹಲವು ಕಷ್ಟಗಳು ಸುಧಾರಿಸಲಿದೆ. ಅದ್ರಲ್ಲೂ ಸಾಲಕ್ಕಾಗಿ ನೀವು ಓಡಾಟ ನಡೆಸುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಶುಭವಿದೆ. ನಿಮ್ಮ ಹಲವು ರೀತಿಯ ವ್ಯವಹಾರಗಳಲ್ಲಿ ಲಾಭದಾಯಕ ದಿನಗಳ ನೋಡಬಹುದು. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ. ದಾಂಪತ್ಯ ವಿಚಾರದಲ್ಲಿ ಮುನಿಸುವಗಳು ಶಮನವಾಗಲಿದೆ.
ಧನು ರಾಶಿ
ಬುಧನ ಸಂಚಾರವು ಅವರ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಖ್ಯಾತಿಗಳು ಹೆಚ್ಚಾಗುತ್ತದೆ. ಹಾಗೆ ನಿರುದ್ಯೋಗಿಗಳು ಈ ಸಮಯದಲ್ಲಿ ಬಯಸಿದ ಉದ್ಯೋಗ ಪಡೆಯಬಹುದು. ಅಲ್ಲದೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಲಾಭದಾಯಕವಾಗಲಿದೆ. ವ್ಯಾಪಾರಗಳು ಬಹಳ ಸಮಯದಿಂದ ಅನುಭವಿಸಿದ್ದ ಅಡ್ಡಿಗಳು ನಿವಾರಣೆಯಾಗಬಹುದು. ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ, ಆದ್ದರಿಂದ ಧೈರ್ಯದಿಂದ ಕ್ಷೇತ್ರಕ್ಕೆ ಪ್ರವೇಶಿಸಿ. ನೀವು ಹೂಡಿಕೆ ಮಾಡಿದ್ದಕ್ಕಿಂತ ಎರಡು ಪಟ್ಟು ಲಾಭ ಪಡೆಯಬಹುದು. ಆರೋಗ್ಯದ ವಿಷಯದಲ್ಲಿ ಇದು ಅನುಕೂಲಕರ ಸಮಯ. ನಿಮ್ಮ ಪೂರ್ವ ನಿಯೋಜಿತ ಕೆಲಸದಲ್ಲಿ ಯಶಸ್ಸುಗಳಿವೆ.
ಕುಂಭ ರಾಶಿ
ಕುಂಭ ರಾಶಿಯವರು ಬುಧನ ಸಂಚಾರದಿಂದಾಗಿ ತಮ್ಮ ವೃತ್ತಿಪರ ಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸಲಿದ್ದಾರೆ. ಈ ಅವಧಿಯಲ್ಲಿ ವ್ಯವಹಾರದಲ್ಲಿನ ನಷ್ಟದಿಂದ ಹೊರಬರಲಿದ್ದೀರಿ. ನಿಮ್ಮ ಐಷಾರಾಮಿ ಜೀವನದಿಂದ ಸಂತಸವಿದೆ. ಆರ್ಥಿಕವಾಗಿ ಈ ಅವಧಿಯು ಅನಿರೀಕ್ಷಿತ ದೊಡ್ಡ ಲಾಭಗಳನ್ನು ನೀಡುತ್ತದೆ. ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಸಹ ಅನುಭವಿಸಬಹುದು. ಮಕ್ಕಳ ಕುರಿತಾಗಿ ನೀವು ಬಹಳ ಸಮಯದಿಂದ ಎದುರಿಸುತ್ತಿದ್ದ ಚಿಂತೆಯೊಂದು ನಿವಾರಣೆಯಾಗಲಿದೆ. ಹೊಸ ವ್ಯವಹಾರಗಳು ಲಾಭಾಯಕವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











