Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಕುಂಭ ರಾಶಿಗೆ ಬುಧ ಸಂಚಾರ: ಈ ಮೂರು ರಾಶಿಯವರಲ್ಲಿ ಆರ್ಥಿಕ ಲಾಭದ ಯೋಗ!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಬುದ್ದಿಶಕ್ತಿ, ವ್ಯವಹಾರ, ಐಶ್ವರ್ಯ, ಆರೋಗ್ಯದ ಪ್ರತೀಕ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬುಧ ಗ್ರಹವನ್ನು ಜ್ಯೋತಿಷ್ಯದಲ್ಲಿ ಪ್ರಮುಖ ಎಂದು ಹೇಳಲಾಗಿದೆ. ಹಾಗೆ ಬುಧನು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಕೂಡ ಆಗಿದೆ. ಬುಧ ಹಲವು ಬಾರಿ ರಾಶಿ ಬದಲಿಸುತ್ತಾನೆ.
ಇನ್ನು ಇದೇ ಫೆಬ್ರವರಿ 11ರಂದು ಬುಧನು ಕುಂಭ ರಾಶಿ ಪ್ರವೇಶಿಸುತ್ತಿದೆ. ಆದ್ರೆ ಕುಂಭ ರಾಶಿಯಲ್ಲಿ ಈಗಾಗಲೇ ಶನಿ ಗ್ರಹದ ಸಂಚಾರವಿದೆ. ಇದು ಶನಿ ಹಾಗೂ ಬುಧ ಶನಿ ಸಂಕ್ರಮಣಕ್ಕೆ ಕಾರಣವಾಗುತ್ತಿದೆ. ಹೀಗೆ ಬುಧನು ಕುಂಭ ರಾಶಿ ಪ್ರವೇಶಿಸುವ ಕಾರಣ ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟು ಮಾಡುತ್ತದೆ. ಪ್ರಮುಖವಾಗಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ.

ಕುಂಭ ರಾಶಿಗೆ ಬುಧ ಸಂಚಾರ ಯಾವೆಲ್ಲಾ ರಾಶಿಗಳಿಗೆ ಶುಭಕರವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ರೀತಿ ಗ್ರಹ ಸಂಚಾರವು ಯಾರಿಗೆ ಶುಭಕರವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಬುಧ ಗ್ರಹವು ಮೇಷ ರಾಶಿಯವರ ವೃತ್ತಿಜೀವನದ 11 ನೇ ಮನೆಗೆ ಚಲಿಸುತ್ತದೆ. ಪರಿಣಾಮವಾಗಿ ಈ ರಾಶಿ ಜನರು ಎಲ್ಲಾ ಪ್ರಯತ್ನದಲ್ಲು ಯಶಸ್ಸು ಸಾಧಿಸುತ್ತಾರೆ. ನೀವು ಮಾಡಬೇಕಿದ್ದ ಕೆಲಸಗಳು ಬಹುಬೇಗ ಮುಕ್ತಾಯವಾಗುತ್ತವೆ. ಎಲ್ಲ ಕೆಲಸಗಳಲ್ಲೂ ನೀವು ಅಂದುಕೊಂಡ ಫಲಿತಾಂಶ ಪಡೆಯಬಹುದು. ಈ ಸಮಯದಲ್ಲಿ ನೀವು ವಿದೇಶದಲ್ಲಿ ಕೆಲಸ ಹುಡುಕುವ ಯತ್ನಕ್ಕೆ ಮುಂದಾಗಬಹುದು. ಪ್ರೀತಿಯ ಜೀವನ ಕೂಡ ಸುಮಧುರವಾಗಿರಲಿದೆ. ವ್ಯಾಪಾರಿಗಳಲ್ಲಿ ಲಾಭ ಹೆಚ್ಚಾಗಬಹುದು. ಅದರಲ್ಲೂ ರಸ್ತೆ ಬದಿ ವ್ಯಾಪಾರಿಗಳು ಹೊಸ ವ್ಯವಹಾರಕ್ಕೆ ಕೈಹಾಕಬಹುದು.
ಮಿಥುನ ರಾಶಿ
ಬುಧ ಗ್ರಹವು ಮಿಥುನ ರಾಶಿಯ 9ನೇ ಮನೆಗೆ ಚಲಿಸುತ್ತದೆ. ಮಿಧುನ ರಾಶಿಯವರಲ್ಲಿ ಫೆವ್ರವರಿ ಹಣಕಾಸಿನ ತಿಂಗಳಾಗಿ ಬದಲಾಗುತ್ತದೆ. ನೀವು ಊಹಿಸದ ರೀತಿ ನಿಮ್ಮ ಹಣಕಾಸು ವ್ಯವಹಾರಗಳು ಧನಾತ್ಮಕವಾಗಿರಲಿದೆ. ನಿಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗಿದ್ದ ಒಂದಿಷ್ಟು ಸಮಸ್ಯೆಗಳು ದೂರಾಗಲಿವೆ. ಎಲ್ಲಾ ಕೆಲಸಗಳಲ್ಲಿ ಸಕಾರಾತ್ಮಕ ಬದಲಾವಣೆಗಳ ನೀವು ನೋಡಬಹುದು. ವ್ಯವಹಾರಗಳು ಲಾಭದಾಯಕವಾಗಿ ಬದಲಾಗುತ್ತವೆ. ಹೆಚ್ಚಿನ ಲಾಭಗಳು, ಆರೋಗ್ಯದಲ್ಲಿ ಸುಧಾರಣೆ ನೀವು ಅನುಭವಿಸಬಹುದು.
ಕನ್ಯಾ ರಾಶಿ
ಬುಧ ಗ್ರಹವು ಕನ್ಯಾರಾಶಿಯ 6ನೇ ಮನೆಯಲ್ಲಿ ಸಂಚರಿಸಲಿದೆ. ಹೀಗಾಗಿ ಈ ರಾಶಿ ಜನರಲ್ಲಿ ಅತ್ಯುತ್ತಮ ಲಾಭ ನೋಡಬಹುದು. ನೀವು ಬಹಳಷ್ಟು ಕಷ್ಟದ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಖಂಡಿತ ಫಲ ಸಿಗಲಿದೆ. ದೂರ ಪ್ರಯಾಣದಂತಹ ವಿಚಾರದಲ್ಲಿ ಈ ತಿಂಗಳ ನಿಮಗೆ ಕಷ್ಟ ಎನಿಸಬಹುದು. ಆದರೆ ಇದರಿಂದ ಲಾಭದಾಯಕ ದಿನಗಳು ಮುಂದೆ ಬರಲಿವೆ. ವಾಹನ ಮಾಲಿಕರಿಗೆ ಲಾಭವಾಗುವ ನಿರೀಕ್ಷೆ ಇದೆ. ಆಸ್ತಿ, ರಿಯಲ್ ಎಸ್ಟೇಟ್, ಷೇರು, ಹೂಡಿಕೆ ಇಂತಹ ಕೆಲಸದಲ್ಲಿ ತೊಡಗಿರುವವರಿಗೆ ಇದು ಒಳ್ಳೆಯ ಕಾಲವಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications