ಡಿಸೆಂಬರ್‌ನಲ್ಲಿ ವೃಶ್ಚಿಕ ರಾಶಿಗೆ ಬುಧ ಸಂಚಾರ: 4 ರಾಶಿಗೆ ಬಂಪರ್ ಅವಕಾಶ, ಯಾರಿಗೆಲ್ಲಾ ಅಶುಭ?

ವೈದಿಕ ಜ್ಯೋತಿಷ್ಯದಲ್ಲಿ ಬಹಳಷ್ಟು ಗ್ರಹಗಳ ಸಂಚಾರಗಳಲ್ಲಿ ಶುಭ ಹಾಗೂ ಅಶುಭ ಸೂಚಕ ಗ್ರಹಗಳ ಸಂಚಾರ ನೋಡುತ್ತಿರುತ್ತೇವೆ. ಅದ್ರಲ್ಲೂ ಎಲ್ಲಾ ಗ್ರಹಗಳು ನಿಗದಿತ ಸಮಯದಲ್ಲಿ ನಿಗದಿತ ರಾಶಿಯನ್ನು ಬದಲಾಯಿಸುವುದ ಸಾಮಾನ್ಯ ಪ್ರಕ್ರಿಯೆ. ಈಗ ಡಿಸೆಂಬರ್ ತಿಂಗಳಿನಲ್ಲಿಯೂ ಕೂಡ ಹಲವು ಗ್ರಹಗಳು ಹಲವು ರಾಶಿಗಳಲ್ಲಿ ಬದಲಾವಣೆಯಾಗುವುದು ನೋಡಲಿದ್ದೇವೆ.

ಈಗ ಡಿಸೆಂಬರ್‌ನಲ್ಲಿ ಬುಧನು ತನ್ನ ರಾಶಿ ಬದಲಾಯಯಿಸುತ್ತಾನೆ. ಬುಧನನ್ನು ಬುದ್ಧಿವಂತಿಕೆ, ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಬಲವಾದ ಬುಧವು ವ್ಯವಹಾರ, ಶಿಕ್ಷಣ ಮತ್ತು ಸಂವಹನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.

Mercury Transits Scorpio In December Lucky Zodiac Signs In Money And Wealth

ಮಿಥುನ ಮತ್ತು ಕನ್ಯಾರಾಶಿಯಲ್ಲಿ ಬುಧನ ಅನುಕೂಲಕರ ಪರಿಣಾಮಗಳನ್ನು ಬೀರುತ್ತದೆ, ಆದರೆ ಮೀನ ರಾಶಿಯಲ್ಲಿ ಅದರ ದುರ್ಬಲ ಸ್ಥಾನವು ಕೆಲವೊಮ್ಮೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಬುಧನ ಸಂಚಾರವು ವ್ಯಕ್ತಿಯ ಜೀವದನದ ಮೇಲೆ ಆಳವಾದ ಪ್ರಭಾವ ಉಂಟು ಮಾಡಲಿದೆ. ಈಗ ಡಿಸೆಂಬರ್ 6 ರಂದು, ಬುಧ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಜ್ಯೋತಿಷ್ಯದ ಪ್ರಕಾರ ಬುಧನು ಯಾರ ಜಾತಕದಲ್ಲಿ ಉತ್ತಮ ಫಲದಾಯಕ ಮನೆಯಲ್ಲಿ ಚಲಿಸಲಿದ್ದಾನೋ ಅವರ ಆರೋಗ್ಯದಲ್ಲಿ ಉನ್ನತ ಸ್ಥಿತಿ ತಲುಪುತ್ತಾರೆ. ಹಾಗೆ ಬುಧನಿಂದಾಗಿ ನಿಮ್ಮ ಹಲವು ಕೆಲಸ ಕಾರ್ಯಗಳು ಸಮಯದೊಳಗೆ ಮುಗಿಯುವುದು, ಸಂಪತ್ತನ ಹೆಚ್ಚಳಕ್ಕೆ ಆತ ಕಾರಣನಾಗುತ್ತಾನೆ. ಹಾಗಾದ್ರೆ ಬುಧನು ವೃಶ್ಚಿಕ ರಾಶಿಗೆ ಚಲಿಸುವುದು ಯಾರಿಗೆಲ್ಲಾ ಲಾಭವಾಗುತ್ತಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಮೂರನೇ ಮತ್ತು ಆರನೇ ಮನೆಗಳ ಅಧಿಪತಿ ಬುಧ ಈಗ ಎಂಟನೇ ಮನೆಗೆ ಸಾಗಲಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಮನೆ ಸಂಬಂಧಿತ ವಿಚಾರಗಳಲ್ಲಿ ಒಂದಿಷ್ಟು ಸಮಸ್ಯೆಗಳ ಎದುರಿಸಬಹುದು. ಮನೆಯ ಹಣಕಾಸು ವಿಚಾರ ಅಸಮತೋಲನದಿಂದ ಕೂಡಿರಲಿದೆ. ನಿಮ್ಮ ವೃತ್ತಿಜೀವನಕ್ಕೆ ದೀರ್ಘ ಪ್ರಯಾಣ ಅಥವಾ ಹೊಸ ಜವಾಬ್ದಾರಿಗಳು ನಿರ್ಣಾಯಕವಾಗಬಹುದು. ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು, ಇದು ನಿಮ್ಮ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಆರ್ಥಿಕವಾಗಿ ನೀವು ಹಣವನ್ನು ಉಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಅದ್ರಲ್ಲೂ ಸಾಲದ ಕುರಿತಾದ ಸಮಸ್ಯೆಗಳು ದೊಡ್ಡದಾಗಬಹುದು. ಕುಟುಂಬ ಸಂತೋಷಗಳ ಮೇಲೆ ನಿಮ್ಮ ಮಾತುಗಳು ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಎರಡನೇ ಮತ್ತು ಐದನೇ ಮನೆಗಳ ಅಧಿಪತಿ ಬುಧ ಈಗ ನಿಮ್ಮ ಏಳನೇ ಮನೆಯಲ್ಲಿ ಸಾಗುತ್ತಿದ್ದಾನೆ. ಖರ್ಚುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಹೆಚ್ಚಿನ ಸಮಸ್ಯೆಗಳ ಎದುರಿಸಬಹುದು. ಉದ್ಯೋಗ ಸಂಬಂಧಿತ ಒತ್ತಡಗಳು ನಿವಾರಣೆಯಾಗುವ ಬದಲಾಗಿ ಮತ್ತಷ್ಟು ಬಿಕ್ಕಟ್ಟು ತರಬಹುದು. ವ್ಯವಹಾರದಲ್ಲಿ ಸರಾಸರಿ ಲಾಭವನ್ನು ಪಡೆಯುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ಶ್ರಮ ಹಾಕಬೇಕಾಗುತ್ತದೆ. ಪ್ರವಾಸಗಳಲ್ಲಿ ಭಾಗಿಯಾಗುವ ಮೂಲಕ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳ ತರಬಹುದು.

ಮಿಥುನ ರಾಶಿ

ಮಿಥುನ ರಾಶಿಯ ಮೊದಲ ಮತ್ತು ನಾಲ್ಕನೇ ಮನೆಗಳ ಅಧಿಪತಿ ಬುಧ ಈಗ ನಿಮ್ಮ ಆರನೇ ಮನೆಯಲ್ಲಿ ಸಾಗುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ಮಕ್ಕಳಿಂದ ನಿಮಗೆ ಸಂತೋಷ ಮತ್ತು ಬೆಂಬಲ ಸಿಗಬಹುದು. ಕೆಲವು ಕೆಲಸಗಳಲ್ಲಿ ಅಧಿಕ ಲಾಭ ನೋಡಬಹುದು. ನಿಮ್ಮ ಉದ್ಯೋಗದಲ್ಲಿ ಅವಕಾಶಗಳು ಸಹ ಲಭ್ಯವಾಗಬಹುದು. ಊಹಾತ್ಮಕ ಅಥವಾ ಸಾಮಾನ್ಯ ವ್ಯವಹಾರವು ಹೆಚ್ಚಿನ ಲಾಭವನ್ನು ನೀಡುತ್ತದೆ. ನಿಮ್ಮ ಪ್ರೇಮ ಜೀವನವು ಸಂತೋಷವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಮೂರನೇ ಮತ್ತು ಹನ್ನೆರಡನೇ ಮನೆಗಳ ಅಧಿಪತಿ ಬುಧ ಈಗ ನಿಮ್ಮ ಐದನೇ ಮನೆಯಲ್ಲಿ ಸಾಗುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ಮಕ್ಕಳ ಪ್ರಗತಿ ಮತ್ತು ಭವಿಷ್ಯದ ಬಗ್ಗೆ ನೀವು ಚಿಂತಿತರಾಗಬಹುದು. ಕೆಲಸದ ಸ್ಥಳದ ವಾತಾವರಣವು ಪ್ರತಿಕೂಲವಾಗಿರುತ್ತದೆ. ಕುಟುಂಬ ಸಂಬಂಧಿತ ಖರ್ಚುಗಳು ಹೆಚ್ಚಾಗುತ್ತದೆ, ಅದ್ರಲ್ಲೂ ಆಸ್ಪತ್ರೆ ಸಂಬಂಧಿತ ಖರ್ಚುಗಳು ಹೆಚ್ಚಾಗಬಹುದು. ಆಪ್ತರಿಂದ ನಿಮಗೆ ಹಣಕಾಸಿನ ನೆರವು ಪಡೆಯುವ ಬಯಕೆ ದೂರಾಗಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Mercury Transits Scorpio In December: Lucky Zodiac Signs In Money And Wealth

On December 6, Mercury will enter Scorpio. According to astrology, those whose horoscope Mercury will transit in a good and fruitful house will reach a high level of health.
Story first published: Thursday, November 27, 2025, 13:58 [IST]
X
Desktop Bottom Promotion