Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವೃಶ್ಚಿಕ ರಾಶಿಗೆ ಬುಧ ಸಂಚಾರ; 100 ವರ್ಷದ ಬಳಿಕ ಸೂರ್ಯ-ಶುಕ್ರನೊಂದಿಗೆ ಡಬಲ್ ರಾಜಯೋಗ ಸೃಷ್ಟಿ!
ಜ್ಯೋತಿಷ್ಯದ ಪ್ರಕಾರ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಚಂದ್ರನ ನಂತರ ವೇಗವಾಗಿ ತನ್ನ ರಾಶಿ ಬದಲಾಯಿಸುವ ಗ್ರಹದಲ್ಲಿ ಬುಧನು ಸಹ ಒಬ್ಬ. ಬುಧ ವೇಗವಾಗಿ ಚಲಿಸುವ ಕಾರಣ ಆತ ಎಲ್ಲಾ ರಾಶಿಗಳನ್ನು ಬಹುಬೇಗ ಸುತ್ತುಬರಲಿದ್ದಾನೆ, ಹಾಗೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುತ್ತಾನೆ. ಹೀಗಾಗಿ ಬುಧನ ಸಂಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.
ಬುಧನನ್ನು ಬುದ್ದಿವಂತಿಕೆ, ಮಾತು, ಅದೃಷ್ಟ, ವ್ಯಾಪಾರ, ದಾಂಪತ್ಯ ವಿಚಾರದಲ್ಲಿ ಬುಧನ ಆಶೀರ್ವಾದ ಬಹಳ ಮುಖ್ಯವಾಗುತ್ತೆ. ಅದ್ರಲ್ಲೂ ಬುಧನಿಂದ ನಿಮಗೆ ಹಲವು ರೀತಿಯ ಶುಭಗಳನ್ನು ನೋಡಬಹುದು. ಈಗ ಡಿಸೆಂಬರ್‌ನಲ್ಲಿ ಬುಧನು ವೃಶ್ಚಿಕ ರಾಶಿಗೆ ಚಲಿಸಿದ್ದಾನೆ. ಹೀಗಾಗಿ ಬುಧನು ವೃಶ್ಚಿಕ ರಾಶಿಯಲ್ಲಿ ಚಲಿಸುವಾಗ ಎರಡು ಯೋಗಗಳ ದೃಷ್ಟಿಸಲಿದ್ದಾನೆ.

ಆದರೆ ಬುಧನು ವೃಶ್ಚಿಕ ರಾಶಿಯಲ್ಲಿದ್ದಾಗ ಸೂರ್ಯ ಹಾಗೂ ಶುಕ್ರನೊಂದಿಗೆ ಸಂಯೋಗವಾಗುತ್ತಾನೆ. ಇದು ಎರಡು ಪ್ರಮುಖ ಯೋಗವನ್ನು ರೂಪಿಸಲು ಕಾರಣವಾಗುತ್ತಿದೆ. ಬುಧನು ಸೂರ್ಯನೊಂದಿಗೆ ಸಂಯೋಗವಾದಾಗ ಬುಧಾದಿತ್ಯ ಯೋಗ ಹಾಗೆ ಶುಕ್ರನೊಂದಿಗೆ ಸಂಯೋಗವಾದಾಗ ಲಕ್ಷ್ಮಿ ನಾರಾಯಣ ಯೋಗವನ್ನು ರೂಪಿಸಲಿದ್ದಾನೆ.
ಈ ಎರಡು ಯೋಗಗಳು ಮೇಷ ರಾಶಿಯಿಂದ ಮೀನ ರಾಸಿಯವರೆಗೂ ಪ್ರಭಾವ ಉಂಟು ಮಾಡಲಿವೆ. ಹಾಗೆ ವಿಶೇಷವಾಗಿ ಈ ಡಬಲ್ ರಾಜಯೋಗವು ಮೂರು ರಾಶಿಯ ಜನರಿಗೆ ಅದೃಷ್ಟಕರವಾಗಿದೆ. ಅಲ್ಲದೆ ಹಲವರಲ್ಲಿ ಇದು ಬದಲಾವಣೆಯ ದಿನಗಳನ್ನ ತರಲಿದೆ. ಹಾಗೆ ಜೀವನದ ಪ್ರಮುಖ ಪ್ರಗತಿಯ ಸಮಯವಾಗಿಯೂ ನೋಡಬಹುದು. ಬುಧನ ಈ ಸಂಚಾರದಿಂದ ರೂಪುಗೊಳ್ಳುವ ಎರಡು ಯೋಗದಿಂದ ಯಾರಿಗೆಲ್ಲಾ ಶುಭದಾಯಕ ಎಂಬುದನ್ನು ತಿಳಿದುಕೊಳ್ಳಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಮೊದಲ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ಯೋಗಗಳು ರೂಪುಗೊಳ್ಳುತ್ತವೆ. ಇದು ನಿಮ್ಮ ಗೌರವ ಹೆಚ್ಚಾಗುವ ಸಮಯ ಆಗಿರಲಿದೆ. ಈ ಯೋಗಗಳಿಂದ ನಿಮ್ಮಲ್ಲಿದ್ದ ಸಮಸ್ಯೆಗಳು ದೂರಾಗಲಿದೆ. ಶತ್ರುಗಳು ನಿಮ್ಮಿಂದ ದೂರಾಗುತ್ತಾರೆ. ವ್ಯವಹಾರ ದೃಷ್ಟಿಯಲ್ಲಿ ಇದ್ದಂತಹ ಹಲವು ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮ ಉದ್ಯೋಗದಲ್ಲಿನ ಹಲವು ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಪ್ರಮುಖ ನಿರ್ಧಾರಗಳ ತೆಗೆದುಕೊಳ್ಳುವಿರಿ, ಇದು ಬಡ್ತಿ, ವರ್ಗಾವಣೆ ಕುರಿತಾದ ವಿಚಾರದಲ್ಲಿ ಸಮಸ್ಯೆಗಳ ನಿವಾರಣೆಯಾಗಲಿದೆ. ಹಣ ಉಳಿತಾಯದ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಆಧ್ಯಾತ್ಮಿಕವಾಗಿ ನಿಮಗೆ ಒಳಿತಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರ 4 ನೇ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗಗಳು ರೂಪುಗೊಂಡರೆ, ಸಿಂಹ ರಾಶಿಯವರು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಾರೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳು ಇರುತ್ತವೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಕುಟುಂಬ ಮತ್ತು ಸಂಬಂಧಿಕರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ದಾಂಪತ್ಯ ವಿಚಾರವಾಗಿ ಇದ್ದಂತಹ ಎಲ್ಲ ಸಮಸ್ಯೆಗಳು, ಮನಸ್ತಾಪಗಳು ನಿವಾರಣೆಯಾಗಲಿದೆ. ನಿಮ್ಮ ಉದ್ಯೋಗದಲ್ಲಿನ ಪ್ರಗತಿಗೆ ಉತ್ತಮ ದಿನಗಳಿವೆ.
ಮೀನ ರಾಶಿ
ಮೀನ ರಾಶಿಯವರ 9 ನೇ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗಗಳು ರೂಪುಗೊಂಡರೆ, ಮೀನ ರಾಶಿಯವರ ಅದೃಷ್ಟವು ಬೆಳಗುತ್ತದೆ. ನೀವು ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವಿರಿ. ವಿದೇಶ ಪ್ರಯಾಣಕ್ಕೆ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿನ ಪ್ರಗತಿಗಳು ಇರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ನಿಮಗೆ ಶುಭವಿದೆ. ಹಲವು ಕಾಲದ ನ್ಯಾಯಾಲಯ ವಿಚಾರಗಳಲ್ಲಿ ನಿಮಗೆ ಶುಭವಿದೆ. ವಿದ್ಯಾರ್ಥಿಯ ಜೀವನದಲ್ಲಿ ಬದಲಾವಣೆಗಳು ಬರುವ ಸಮಯ. ಕುಟುಂಬದಲ್ಲಿ ಸಂತೋಷ ಇರಲಿದೆ. ಆಪ್ತರೊಬ್ಬರಿಂದ ನಿಮಗೆ ಬರುಬೇಕಿದ್ದ ಹಣ ಕೈ ಸೇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











