Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಆಡಳಿತದ ರಾಶಿಗೆ ಬುಧ ಸಂಚಾರ: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಹಿನ್ನಡೆ, ಅಡೆತಡೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ತಿಂಗಳು ಬಹಳ ಅದೃಷ್ಟವಂತೆ. ಈ ಸಮಯದಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಾಯಿಸುವುದು ನೋಡಬಹುದು. ಫೆಬ್ರವರಿ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿ ಬದಲಾಯಿಸುತ್ತವೆ. ಇದು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಗಳ ಮೇಲೆಯೂ ಸಹ ಪರಿಣಾಮ ಉಂಟು ಮಾಡುವುದು ನೋಡಬಹುದು. ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವು ಬುಧನು ಕೂಡ ಈ ಸಮಯದಲ್ಲಿ ತನ್ನ ಸ್ಥಾನ ಬದಲಾಸುತ್ತಿದ್ದಾನೆ.
ಈ ಬುಧನು ಬುದ್ಧಿಶಕ್ತಿ ಮಾತು, ಅಧ್ಯಯನ ಮತ್ತು ವ್ಯವಹಾರ ಸಂಬಂಧವಾಗಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗುವ ಅಂಶವಾಗಿದ್ದಾನೆ. ಹಾಗೆ ಬುಧನು ಮಿಥುನ ರಾಶಿ ಮತ್ತು ಕನ್ಯಾ ರಾಶಿ ಅಧಿಪತಿ. ಹಾಗೆ ಈಗ ಬುಧನು ಫೆಬ್ರವರಿ 03ರಂದು ಕುಂಭ ರಾಶಿಗೆ ಸ್ಥಳಾಂತರವಾಗುತ್ತಾನೆ. ಕುಂಭ ರಾಶಿಯ ಅಧಿಪತಿ ಶನಿ. ಈಗ ಶನಿಯ ಆಡಳಿತದ ರಾಶಿಗೆ ಬುಧ ಚಲಿಸುವುದು ಹಲವು ರೀತಿಯಲ್ಲಿ ಪರಿಣಾಮಕಾರಿ.

ಈ ಬುಧನ ಸಂಚಾರದಿಂದ ಎಲ್ಲಾ 12 ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟಾಗುವುದು ನೋಡಬಹುದು. ಇದು ಹಲವರಿಗೆ ಶುಭವಾದರೆ ಮತ್ತೆ ಕೆಲವರಿಗೆ ಅಶುಭ ಯೋಗಕ್ಕೂ ಕಾರಣವಾಗಲಿದೆ. ವಿಶೇಷವಾಗಿ 3 ರಾಶಿ ಜನರಿಗೆ ತಮ್ಮ ವೃತ್ತಿಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಮತ್ತು ಈ ಬುಧ ಸಂಚಾರದಿಂದಾಗಿ ಅವರ ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಹಲವರಲ್ಲಿ ಈ ಗ್ರಹ ಸಂಚಾರವು ಒತ್ತಡದ ದಿನಗಳು, ಗೊಂದಲ, ಚಿಂತೆ, ಸಮಸ್ಯೆಗಳು, ಆರ್ಥಿಕ ಹಿನ್ನಡೆಯಂತಹ ದೊಡ್ಡ ಮಟ್ಟದ ಸಮಸ್ಯೆಗಳನ್ನು ಸಹ ತರಬಹುದು. ಹಾಗಾದ್ರೆ ಇದು ಯಾವ ರಾಶಿಯವರಿಗೆ ಅನಾನುಕೂಲವರನ್ನು ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
ಬುಧನು ಕರ್ಕಾಟಕದ 8ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಕರ್ಕ ರಾಶಿಯ ಜನರಲ್ಲಿ ಹಲವು ರೀತಿ ಅಡ್ಡಿಗಳು, ಅನಾನುಕೂಲಕ್ಕೆ ಕಾರಣವಾಗಲಿದೆ. ಸಣ್ಣ ಕೆಲಸಗಳನ್ನು ಸಹ ಕಷ್ಟದಿಂದ ಮಾಡಬೇಕಾಗಬಹುದು. ಹೂಡಿಕೆ ಮಾಡುವುದು ಅಥವಾ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು. ಅತಿಯಾದ ಕೆಲಸದ ಹೊರೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಡಹುಟ್ಟಿದವರೊಂದಿಗೆ ವಾದಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ದಾಂಪತ್ಯ ವಿಚಾರವಾಗಿ ಮನಸ್ತಾಪಗಳು ಮೂಡುವ ಸಾಧ್ಯತೆ ಇದೆ.
ಧನು ರಾಶಿ
ಬುಧನು ಧನು ರಾಶಿಯ 3ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರಿಗೆ ಅನಾನುಕೂಲವಿದೆ. ಸಂವಹನ ಸಮಸ್ಯೆಗಳು ಉದ್ಭವಿಸಬಹುದು. ವ್ಯವಹಾರದಲ್ಲಿ ನಿಧಾನಗತಿಯು ಸಮಸ್ಯೆಗಳನ್ನು ಉಂಟುಮಾಡಬಹುದು. ಸಹೋದ್ಯೋಗಿಗಳು ಮತ್ತು ಕೆಲಸದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರಬಹುದು. ಹೂಡಿಕೆ ಮಾಡುವಾಗ ಅನುಭವಿ ಜನರ ಸಲಹೆಯನ್ನು ಪಡೆಯಬೇಕು. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಮುಂದಕ್ಕೆ ಹೋಗಬಹುದು.
ಮಕರ ರಾಶಿ
ಬುಧನು ಮಕರ ರಾಶಿಯ 2ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರ ವೈಯಕ್ತಿಕ ಜೀವನದಲ್ಲಿ ಹಲವು ರೀತಿ ಏರುಪೇರು ನೋಡಬಹುದು. ನಿಮ್ಮ ಹಳೆಯ ಅನಾರೋಗ್ಯ ಅಥವಾ ದೀರ್ಘಕಾಲದ ಅನಾರೋಗ್ಯ ಕಾಡಬಹುದು. ನಿಮ್ಮ ಆರ್ಥಿಕ ವಿಚಾರದಲ್ಲಿ ಹಿನ್ನಡೆ ನೋಡಬಹುದು. ಆಪ್ತರೊಬ್ಬರ ಕೆಲಸದಲ್ಲಿ ನಿಮಗೆ ಹಣಕಾಸಿನ ಬೇಡಿಕೆ ಬರಲಿದೆ. ಆಸ್ತಿ, ಮನೆ ಕುರಿತಾದ ವಿಚಾರಗಳಲ್ಲಿ ನಿಧಾನಗತಿ ಇರಲಿದೆ. ತಾಳ್ಮೆ ಕಳೆದುಕೊಳ್ಳುವ ಘಟನೆಗಳು ನಡೆಯಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications