Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೂರ್ವಾಷಾಢ ನಕ್ಷತ್ರಕ್ಕೆ ಬುಧ ಸಂಚಾರ: ಈ ರಾಶಿ ಜನರಿಗೆ ಹೆಚ್ಚಾಗಲಿದೆ ಸಮಸ್ಯೆ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹವು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಹಾಗೆ ಬುಧ ಗ್ರಹದ ಚಲನೆಯನ್ನು ಸಹ ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ಹೇಳಲಾಗಿದೆ. ಬುಧನನ್ನು ಐಶ್ವರ್ಯ, ಸಂಪತ್ತು, ಸಮೃದ್ಧಿ, ಧನ ಸಂಬಂಧಿತ ವಿಚಾರದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಇನ್ನು ಗ್ರಹಗಳ ರಾಜಕುಮಾರ ಎಂದು ಬುಧನನ್ನು ಕರೆಯಲಾಗಿದೆ. ಬುಧನ ಚಲಾವಣೆಯಲ್ಲಿನ ಬದಲಾವಣೆಯು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು.
ಜನವರಿ 7 ರಂದು ಬುಧ ಪೂರ್ವಾಷಾಢ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಆದ್ರೆ ಈ ನಕ್ಷತ್ರದ ಅಧಿಪತಿ ಶುಕ್ರನಾಗಿದ್ದಾನೆ. ಶುಕ್ರನು ಸೌಂದರ್ಯ, ಅದೃಷ್ಟದ ಗ್ರಹ. ಬುಧನ ಸಂಚಾರವು ಕೆಲವು ರಾಶಿ ಜನರಿಗೆ ಅನಾನುಕೂಲಕರ ದಿನಗಳ ತರಬಹುದು. ಹಾಗೆ ಆರ್ಥಿಕ ವಿಚಾರಗಳು, ಭೂಮಿ ಸಂಬಂಧಿತ ವಿಚಾರಗಳು, ಕೌಟುಂಬಿಕ ವಿಚಾರಗಳಲ್ಲಿಯೂ ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ.

ಹಾಗಾದ್ರೆ ಬುಧನ ಈ ನಕ್ಷತ್ರ ಬದಲಾವಣೆಯಿಂದ ಯಾವ ರಾಶಿಯವರಿಗೆ ದುರಾದೃಷ್ಟಕರ, ಯಾರಿಗೆ ಅಶುಭಕರ ಅನ್ನೋದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ಬುಧನ ಸಂಚಾರವು ನಿಮ್ಮ ಜೀವನದಲ್ಲಿ ಕೆಲವು ನಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಈ ಅವಧಿಯಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು, ಹೂಡಿಕೆ ಮಾಡುವ ಮೊದಲು ಅನುಭವಿ ಜನರನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಹಲವು ಕೌಟುಂಬಿಕ ವಿಚಾರದಲ್ಲಿ ಈ ಮೊದಲು ಇದ್ದಂತಹ ಕಠಿಣ ಸ್ಥಿತಿಗಳಲ್ಲಿ ಮತ್ತಷ್ಟು ಸಮಸ್ಯೆಗಳು ಬರಬಹುದು. ಹಲವರಲ್ಲಿ ಈ ದಿನ ಅಪಾಯಕಾರಿ ವಿಚಾರಗಳು ಅಥವಾ ಘಟನೆಗಳು ಎದುರಾಗಬಹುದು. ಪ್ರೇಮಿಗಳು ಅಥವಾ ಸಹೋದರರೊಂದಿಗೆ ನಿಮ್ಮ ಸಂಬಂದ ಬಿಕ್ಕಟ್ಟಿನಿಂದ ಕೂಡಬಹುದು. ಯಾರಿಗೂ ಈ ಸಮಯದಲ್ಲಿ ಸಾಲ ನೀಡುವುದು ಅಶುಭವಾಗಬಹುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ ಜನರು ಬುಧನ ಸಂಚಾರದಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ನೀವು ಕೆಲಸದಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸಬಹುದು, ಆದ್ದರಿಂದ ಈ ಸಮಯದಲ್ಲಿ ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿಗಳಿವೆ. ಪೋಷಕರಿಂದ ನೀವು ಪ್ರತಿಕೂಲ ಸಮಯ ಎದುರಿಸಬಹುದು. ವ್ಯಾಪಾರಿಗಳು ನಷ್ಟದಿಂದ ಹೊರಬರುವುದು ಕಷ್ಟವಾಗಬಹುದು. ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ಮತ್ತೆ ಸಿಲುಕಬಹುದು. ವಸ್ತುಗಳ ಖರೀದಿ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕುಟುಂಬದಲ್ಲಿ ಇದ್ದ ಹಣಕಾಸು ಒತ್ತಡ ನಿವಾರಣೆಯಾಗಲಿದೆ. ನಿಮ್ಮ ಪ್ರವಾಸಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ನಿಮ್ಮ ಹಲವು ವಿಚಾರದಲ್ಲಿ ದಾಂಪತ್ಯ ಸಂಬಂಧಿತ ಸಮಸ್ಯೆಗಳು ದೊಡ್ಡದಾಗಬಹುದು.
ಮಕರ ರಾಶಿ
ಮಕರ ರಾಶಿಯವರು ಈ ನಕ್ಷತ್ರ ಬದಲಾವಣೆಯನ್ನು ಸಾಮಾಜಿಕವಾಗಿ ತಮ್ಮ ಖ್ಯಾತಿಯಲ್ಲಿ ಆರೋಪಗಳು ಕಾಣಿಸಿಕೊಳ್ಳಬಹುದು. ಹಿತ ಶತ್ರುಗಳಿಂದ ನಿಮಗೆ ಸಮಸ್ಯೆಗಳು ಬರಬಹುದು. ಸವಾಲುಗಳನ್ನು ನಿಭಾಯಿಸಲು ಮತ್ತು ಅವಕಾಶಗಳಿಂದ ವಂಚಿತರಾಗಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಯಾರಿಂದಾದರು ಹಣ ಪಡೆಯವ ನಿಮ್ಮ ಆಲೋಚನೆಗಳು ಫಲ ನೀಡದೆ ಇರಬಹುದು. ಕುಟುಂಬ ವಿಚಾರಗಳಲ್ಲಿ ನೀವು ನಿರಂತರ ಸಮಸ್ಯೆಗಳ ಎದುರಿಸಬಹುದು. ಅದ್ರಲ್ಲೂ ವಾಹನ ವಿಚಾರವಾಗಿ ಮನಸ್ತಾಪಗಳು ಬರಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಆರೋಗ್ಯ ಸಮಸ್ಯೆಗಳು ಅಡ್ಡಿಯಾಗಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ಕೈ ತಪ್ಪಬಹುದು. ನಿಮ್ಮ ಕೆಲಸದಲ್ಲಿ ಮೂರನೇ ವ್ಯಕ್ತಿಯ ಆಗಮನದಿಂದ ಸಮಸ್ಯೆಗಳು ಎದುರಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications