Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಡಿಸೆಂಬರ್ 06ರಂದು ಮಂಗಳನ ರಾಶಿಗೆ ಬುಧ ಸಂಚಾರ: ಬದಲಾಗುತ್ತೆ ಜೀವನ, ಧನಲಾಭದ ನಿರೀಕ್ಷೆ!
ವೈದಿಕ ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಬುಧನು ಬುದ್ದಿ ಶಕ್ತಿ, ಮಾತುಗಾರಿಕೆ, ಆದಾಯ, ಸಂಪತ್ತು, ವ್ಯವಹಾರ ಸಂಬಂಧಿ ವಿಚಾರದಲ್ಲಿ ಪರಿಣಾಮಕಾರಿಯಾದ ಗ್ರಹವಾಗಿದೆ. ಹಾಗೆ ಬುಧನು ಕನ್ಯಾ ಮತ್ತು ಮಿಥುನ ರಾಶಿಯ ಅಧಿಪತಿ. ಚಂದ್ರನಿಗೆ ಅತ್ಯಾಪ್ತ ಗ್ರಹವೂ ಕೂಡ ಬುಧ ಆಗಿರಲಿದೆ. ಹಾಗೆ ಬುಧನು ವೇಗವಾಗಿ ಚಲಿಸುವ ಗ್ರಹವಾಗಿದ್ದು, ಎಲ್ಲಾ ರಾಶಿಗಳಲ್ಲಿಗೂ ಚಲನೆ ನೋಡಬಹುದು.
ಸದ್ಯ ಬುಧ ಚಲಿಸುವಾಗ ಹಲವು ಗ್ರಹಗಳೊಂದಿಗೆ ಸಂಯೋಗವಾಗುವ ಮೂಲಕ ಹಲವು ರೀತಿಯ ಯೋಗಗಳ ಸೃಷ್ಟಿಸಲಿದ್ದಾನೆ. ಈ ರೀತಿ ಈ ಡಿಸೆಂಬರ್ 6ರಂದು ಚಂದ್ರನು ವೃಶ್ಚಿಕ ರಾಶಿಗೆ ಚಲಿಸುತ್ತಿದ್ದಾನೆ. ಸುಮಾರು 12 ತಿಂಗಳ ಬಳಿಕ ಬುಧ ಈ ರಾಶಿಗೆ ಪ್ರವೇಶಿಸುತ್ತಿದ್ದಾನೆ. ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಆಗಿದೆ. ಹೀಗಾಗಿ ಚಂದ್ರನು ಮಂಗಳನ ರಾಶಿಗೆ ಚಲಿಸಲಿದ್ದಾನೆ.

ಚಂದ್ರ ಮಂಗಳನ ರಾಶಿಗೆ ಚಲಿಸುವುದು ಹಲವು ರೀತಿಯಲ್ಲಿ ಬದಲಾವಣೆಗಳ ತರಲಿದೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿ ವರೆಗೂ ಈ ಪ್ರಭಾವವನ್ನು ನಾವು ನೋಡಬಹುದು. ಅದ್ರಲ್ಲೂ ಕೆಲವೊಂದು ರಾಶಿಯವರಿಗೆ ಚಲನೆಯಿಂದಾಗಿ ಅತ್ಯುತ್ತಮ ಲಾಭಗಳು ಉಂಟಾಗುವುದು ಖಚಿತ. ಇನ್ನು ಯಾವ ರಾಶಿಯವರಿಗೆ ಚಂದ್ರನ ಈ ಚಲನೆ ಶುಭಯೋಗವಾಗಿ ಬದಲಾಗಲಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಹಾಗೆ ಮಂಗಳನ ಆಶೀರ್ವಾದ ಮತ್ತು ಚಂದ್ರನ ಬಲ ಪಡೆಯುವ ರಾಶಿಗಳು ಯಾವುದು? ಅದರಿಂದ ಶುಭಕರ ಬದಲಾವಣೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವೃಶ್ಚಿಕ ರಾಶಿ
ಬುಧನು ವೃಶ್ಚಿಕ ರಾಶಿಯ ಮೊದಲ ಮನೆಗೆ ಸ್ಥಳಾಂತರಗೊಳ್ಳಲಿದ್ದಾನೆ. ಇದು ನಿಮ್ಮ ಗೌರವ ಹಾಗೆ ಘನತೆಯನ್ನು ಹೆಚ್ಚಿಸುವುದು ನೋಡಬಹುದು. ಆತ್ಮವಿಶ್ವಾಸ ಹೆಚ್ಚಾಗುವ ಸಮಯವಿದು. ನೀವು ಉದ್ಯೋಗದಲ್ಲಿದ್ದರೆ ಬುಧನ ಆಶೀರ್ವಾದದ ಕಾರಣ ಈ ಸಮಯದಲ್ಲಿ ಬಡ್ತಿ, ಸಂಬಳ, ವರ್ಗಾವಣೆ ಸಂಬಂಧವಾಗಿ ಬಹುದೊಡ್ಡ ಲಾಭವಿದೆ. ಮಕ್ಕಳ ಕುರಿತಾದ ವಿಚಾರದಲ್ಲಿ ಅದ್ರಲ್ಲೂ ಉದ್ಯೋಗ ಅಥವಾ ವಿದ್ಯಾಭ್ಯಾಸದ ವಿಚಾರವಾಗಿ ಧನಾತ್ಮಕ ವಿಚಾರಗಳು ನಡೆಯುವುದು ನೋಡಬಹುದು. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಅವಿವಾಹಿತರು ತಮ್ಮ ಸಂಗಾತಿಯನ್ನು ಭೇಟಿಯಾಗಬಹುದು. ಜಂಟಿ ವ್ಯವಹಾರ ಮಾಡುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಕುಂಭ ರಾಶಿ
ಬುಧನು ಕುಂಭ ರಾಶಿಯ 10 ನೇ ಮನೆಗೆ ಸ್ಥಳಾಂತರಗೊಳ್ಳಲಿದ್ದಾನೆ. ಇದರಿಂದ ಕುಂಭ ರಾಶಿಯವರಲ್ಲಿ ಅನೇಕ ಲಾಭಗಳಿವೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಇರಲಿದೆ. ನೀವು ಬಟ್ಟೆ, ಕಬ್ಬಿಣ, ವ್ಯವಹಾರದಲ್ಲಿದ್ದರೆ ನಿಮ್ಮ ಲಾಭಾಂಶ ಹೆಚ್ಚಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು ನೋಡಬಹುದು. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಉದ್ಯೋಗ ಒಲಿದು ಬರಲಿದೆ. ಬಡ್ತಿ, ವೇತನ ಹೆಚ್ಚಳದ ಅವಕಾಶಗಳಿವೆ. ವಾಹನ ಖರೀದಿಯ ನಿಮ್ಮ ಬಯಕೆಯಲ್ಲಿ ಒಂದಾಗಿದ್ದರೆ ಅದನ್ನು ಈಡೇರಿಸಿಕೊಳ್ಳುವತ್ತ ನೀವು ದೊಡ್ಡ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ.
ಮಕರ ರಾಶಿ
ಬುಧನು ಮಕರ ರಾಶಿಯ 11 ನೇ ಮನೆಗೆ ಸ್ಥಳಾಂತರಗೊಳ್ಳಲಿದ್ದಾನೆ. 11ನೇ ಮನೆ ಆದಾಯದ ಮನೆಯಾಗಿದೆ. ಹೀಗಾಗಿ ಈ ಸಮಯದಲ್ಲಿ ನೀವು ಹಣ ಗಳಿಸಲು ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲು ಅವಕಾಶಗಳಿವೆ. ನೀವು ಹೊಸದಾಗಿ ಮನೆ ಕಟ್ಟುವುದು, ನಿವೇಶನ ಖರೀದಿ, ಆಸ್ತಿ ಖರೀದಿ, ವಾಹನ ಖರೀದಿ, ಶುಭ ಸಮಾರಂಭ ಮಾಡಲು ಆಲೋಚಿಸುವುದು ಸೇರಿ ಹಲವು ಕಾರ್ಯಗಳಲ್ಲಿ ಧನಾತ್ಮಕ ವಿಚಾರಗಳನ್ನು ನೋಡುತ್ತೀರಿ. ಕುಟುಂಬದಲ್ಲಿನ ದೊಡ್ಡ ಹಣಕಾಸು ಬೇಡಿಕೆಯೊಂದು ಅಥವಾ ಒತ್ತಡದೊಂದು ನಿವಾರಣೆಯಾಗಲಿದೆ. ದೀರ್ಘಕಾಲದ ಅನಾರೋಗ್ಯದಿಂದ ನೀವು ಮುಕ್ತರಾಗುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications