ಫೆಬ್ರವರಿಯಲ್ಲಿ 5 ಬಾರಿ ಬುಧನ ಪಥ ಬದಲು: ಮೂರು ರಾಶಿಯವರ ಜೀವನ ಬದಲಾಗೋ ಸಮಯ.!!

Mercury Transits 5 Times In February: ಈ ಫೆಬ್ರವರಿಯಲ್ಲಿ ಹಲವು ಗ್ರಹಗತಿಗಳ ಬದಲಾವಣೆಯು ಹಲವು ಯೋಗಗಳಿಗೆ ಕಾರಣವಾಗುತ್ತಿದೆ. ಗ್ರಹಗಳ ರಾಜ ಎಂದು ಕರೆಯಲ್ಪಡುವ ಬುಧನು ಈ ಫೆಬ್ರವರಿಯಲ್ಲಿ ಸುಮಾರು 5 ಬಾರಿ ಸಂಚಾರ ಮಾಡಲಿದೆ. ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಅದರಲ್ಲೂ ಬುಧನ ಚಲನೆ ಯಾವ ಯಾವ ರಾಶಿಯವರ ಮೇಲೆ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತದೆ ನೋಡೋಣ.

9 ಗ್ರಹಗಳು ಕೂಡ ಅವುಗಳ ಚಲನೆಯ ಕಾರಣದಿಂದಾಗಿ 12 ರಾಶಿಗಳಲ್ಲಿ ಶುಭ ಮತ್ತು ಲಾಭದ ಪರಿಣಾಮ ನೋಡಬಹುದು. ಈ 9 ಗ್ರಹಗಳ ಪೈಕಿ ಬುಧನು ಅತ್ಯಂತ ವೇಗವಾಗಿ ಚಲಿಸುವ ಗ್ರಹ ಅಂದರೆ ಬಹಳ ಬೇಗ ತನ್ನ ರಾಶಿಗಳ ಬದಲಾಯಿಸುತ್ತದೆ. ಅಲ್ಲದೆ ಹೆಚ್ಚು ಪರಿಣಾಮಕ್ಕೂ ಕಾರಣವಾಗಲಿದೆ. ಬುಧನು ವ್ಯವಹಾರದ ದೃಷ್ಟಿಯಿಂದ ಶುಭ ತರುವ ಗ್ರಹ ಎಂದು ಪರಿಗಣಿಸಲಾಗಿದೆ.

Mercury Brings Luck For These 3 Zodiac Sign

ಬುಧನು ಕನ್ಯಾ ಮತ್ತು ಮಿಥುನ ರಾಶಿಯ ಅಧಿಪತಿ. ಈ ಫೆಬ್ರವರಿಯಲ್ಲಿ 5 ಬಾರಿ ಪಥ ಬದಲಾವಣೆ ಪ್ರಕ್ರಿಯೆಯು ಹಲವು ರೀತಿ ಬದಲಾವಣೆಗೆ ಕಾರಣವಾಗುತ್ತಿದೆ. ಫೆಬ್ರವರಿ 7 ರಂದು ಬುಧನು ಧನಿಷ್ಠ ನಕ್ಷತ್ರಕ್ಕೆ ಚಲಿಸುತ್ತಾನೆ. ಹಾಗೆ ಫೆಬ್ರವರಿ 11ರಂದು ಕುಂಭ ರಾಶಿಗೆ, ಫೆಬ್ರವರಿ 15ರಂದು ಶತಭಿಷ ನಕ್ಷತ್ರಕ್ಕೆ ಹಾಗೂ ಫೆಬ್ರವರಿ 22ರಂದು ಪೂರ್ವ ಬಾದ್ರಪದ ನಕ್ಷತ್ರಕ್ಕೆ ಹಾಗೂ ಅಂತಿಮವಾಗಿ ಬುಧನು ಫೆಬ್ರವರಿ 27 ಮೀನ ರಾಶಿಗೆ ಬುಧನು ಸಂಚರಿಸುತ್ತಾನೆ.

ಬುಧನ ಈ ರೀತಿಯ ಸಂಚಾರದಿಂದ ಹಲವು ರಾಶಿಯವರಲ್ಲಿ ಹಲವು ಬಗೆಯ ಲಾಭ ನಾವು ನೋಡಬಹುದು. ಹಾಗಾದ್ರೆ ಬುಧನಿಂದ ಯಾರಿಗೆಲ್ಲ ಲಾಭದಾಯಕ ದಿನಗಳು ಕಾದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಫೆಬ್ರವರಿಯಲ್ಲಿ ಬುಧ ಗ್ರಹದ ಸಂಚಾರದಿಂದ ವಿವಿಧ ಲಾಭಗಳ ನೋಡಬಹುದು. ಬುಧ ವ್ಯಾಪಾರ ವೃದ್ಧಿಗೆ ಸಂಬಂಧಿಸಿದ ಗ್ರಹ ಆಗಿರುವುದರಿಂದ ಮೇಷ ರಾಶಿ ಜನರು ವ್ಯಪಾರ ಮಾಡುತ್ತಿದ್ದವರಾಗಿದ್ದರೆ ನಿಮ್ಮಲ್ಲಿ ಏಕಾಏಕಿ ಧನ ಲಾಭದ ನಿರೀಕ್ಷೆ ಮಾಡಬಹುದು. ಲಾಭದಾಯಕ ಹುದ್ದೆಗಳು, ಕೆಲಸಗಳು, ವಸ್ತುಗಳು ನಿಮ್ಮ ಕೈಸೇರಬಹುದು. ಹಾಗೆ ವಿದೇಶ ಪ್ರಯಾಣದಂತಹ ಐಷಾರಾಮಿ ಯೋಗಗಳಿಗೂ ಇದು ಕಾರಣವಾಗಬಹುದು. ಈ ಫೆಬ್ರವರಿಯಲ್ಲಿ ನೀವು ಧನಾತ್ಮಕ ಕಾರ್ಯಗಳಲ್ಲಿ ತೊಡಗುತ್ತೀರಿ. ಹೆಚ್ಚಿನ ಆದಾಯ ಗಳಿಸುತ್ತ ಗಮನ ಇಡುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಈ ಫೆಬ್ರವರಿ ಧನಾತ್ಮಕತೆಯಿಂದ ಕೂಡಿರಲಿದೆ. ನಿಮ್ಮ ಖರ್ಚು ಹೆಚ್ಚಾದರು ಕೂಡ ಈ ತಿಂಗಳಿನಿಂದ ಒಂದಿಷ್ಟು ಹಣ ಹೂಡಿಕೆ, ಉಳಿತಾಯಕ್ಕೆ ನೀವು ಮೀಸಲಿಡುತ್ತೀರಿ. ಭವಿಷ್ಯದ ಕುರಿತ ಬಹುದೊಡ್ಡ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯಲಿದೆ. ಹಾಗೆ ಕುಟುಂಬದಲ್ಲಿ ನಿಮ್ಮ ಕುರಿತ ಭಾವನೆಗಳು ಬದಲಾಗುವ ಸಮಯವಿದು. ಶುಭ ಕಾರ್ಯಗಳಲ್ಲಿ ನೀವು ಹೆಚ್ಚಾಗಿ ಭಾಗಿಯಾಗಬಹುದು.

ಕನ್ಯಾರಾಶಿ

ಫೆಬ್ರವರಿಯಲ್ಲಿ ಬುಧನ ಸಂಚಾರದಿಂದ ಕನ್ಯಾ ರಾಶಿಯವರು ಅನೇಕ ಸಕಾರಾತ್ಮಕ ಪ್ರಯೋಜನಗಳ ಪಡೆಯುತ್ತಾರೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಕೂಡ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಿಮ್ಮ ಪರವಾದ ಗೆಲುವು ಇರಲಿದೆ. ಸರ್ಕಾರಿ ಕೆಲಸ ಕಾರ್ಯಗಳು, ವಾಹನ ಖರೀದಿಯಂತಹ ಸಮಯದಲ್ಲಿನ ಅಡೆತಡೆಗಳು ನಿವಾರಣೆಯಾಗಲಿದೆ. ಹಲವು ದಿನಗಳಿಂದ ನೀವು ಬಾಕಿ ಉಳಿಸಿಕೊಂಡಿದ್ದ ಕೆಲಸವೊಂದು ಮುಕ್ತಾಯವಾಗಲಿದೆ. ಹಣಕಾಸು ವಿಚಾರದಲ್ಲಿ ನೀವು ಸದೃಢರಾಗುತ್ತೀರಿ. ಸಾಲ ತೀರಿಸಿ ಋಣಮುಕ್ತರಾಗುವ ಸಾಧ್ಯತೆ ಅಧಿಕವಾಗಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Transits 5 Times In February: Mercury Brings Luck For These 3 Zodiac Sign

Among the 9 planets, Mercury is the fastest moving planet, meaning it changes its signs very quickly. It also causes a lot of impact. Mercury is considered an auspicious planet in terms of business.
X
Desktop Bottom Promotion