ವೃಶ್ಚಿಕ ರಾಶಿಗೆ ಬುಧ ಸಂಚಾರ..! ಈ 3 ರಾಶಿಯವರಲ್ಲಿ ಹಣಕಾಸು ಸಮಸ್ಯೆ ಹೆಚ್ಚಳ..!

ಬುಧನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಬುಧ ಕಾಲಕಾಲಕ್ಕೆ ರಾಶಿ ಮತ್ತು ನಕ್ಷತ್ರಗಳ ಪುಂಜವನ್ನು ಬದಲಾಯಿಸುತ್ತಿರುತ್ತದೆ. ಆಗಾಗ ಹಿಮ್ಮುಖ ಮತ್ತು ನೇರ ಚಲನೆಯ ಕಾರಣದಿಂದಾಗಿ ಹಲವು ರಾಶಿಯವರಲ್ಲಿ ಬದಲಾವಣಗಳು, ಪರಿಣಾಮಗಳು ನಾವು ನೋಡಬಹುದಾಗಿದೆ. ಹಾಗೆ ಬುಧನನು ನವೆಂಬರ್ 26ರ ಮಂಗಳವಾರ ಬೆಳಿಗ್ಗೆ 8:11ಕ್ಕೆ ಹಿಮ್ಮುಖವಾಗಿ ಸಂಚಾರ ಮಾಡಲಿದೆ.

ಇನ್ನು ಡಿಸೆಂಬರ್ 16ರ ಮಧ್ಯಾಹ್ನ 1.52ಕ್ಕೆ ಬುಧ ಗ್ರಹವು ವೃಶ್ಚಿಕ ರಾಶಿ ಪ್ರವೇಶಿಸಲಿದೆ. ಇದರಿಂದ ಹಲವು ರಾಶಿಯವರಲ್ಲಿ ಹಲವು ರೀತಿಯ ಬದಲಾವಣೆಗಳು, ಹಲವು ರೀತಿಯ ಪರಿಣಾಮ ಉಂಟು ಮಾಡುವುದನ್ನು ನಾವು ನೋಡಬಹುದು. ಇದರ ಪರಿಣಾಮ 12 ರಾಶಿಗಳ ಜನರ ಜೀವನದ ಮೇಲೆಯೂ ಉಂಟಾಗಲಿದೆ. ಆದ್ರೆ ಕೆಲವೊಂದು ರಾಶಿಯವರಲ್ಲಿ ಇದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದೆ.

Mercury Transit Scorpio 2024 Will Impact These 3 Zodiac Signs

ಬುಧನು ವೃಶ್ಚಿಕ ರಾಶಿಯ ಪ್ರವೇಶಿಸುವುದರಿಂದ ಈ ರಾಶಿಯವರು ಹಣ ಕಾಸು ವ್ಯವಹಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗೆ ಹಲವು ರೀತಿಯಲ್ಲಿ ನಿಮಗೆ ಒಂದಿಷ್ಟು ಅಡೆತಡೆಗಳು, ಅಡ್ಡಿ ಆತಂಕಗಳು ಎದುರಾಗಬಹುದು. ಹಾಗಾದ್ರೆ ಯಾವ ರಾಶಿಯವರಿಗೆ ಈ ಬುಧ ಸಂಚಾರವು ಕೆಡುಕು ಉಂಟು ಮಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬುಧನನ್ನು ಸಂಪತ್ತು, ಆರ್ಥಿಕ ಶಕ್ತಿ, ಭೌತಿಕ ಸಾಮರ್ಥ್ಯದ ಗ್ರಹ ಎಂದು ಕರೆಯಲಾಗುವುದು. ನಿಮ್ಮ ಜಾತಕದಲ್ಲಿ ಬುಧನ ಯಾವ ಸ್ಥಾನದಲ್ಲಿದ್ದಾನೆ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ. ಈಗ ಬುಧನು ವೃಶ್ಚಿಕ ರಾಶಿಗೆ ಚಲಿಸುವುದು ಡಿಸೆಂಬರ್‌ನಲ್ಲಿ ಯಾವ ರಾಶಿಯವರಲ್ಲಿ ಪ್ರಭಾವ ಉಂಟು ಮಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಬುಧ ವೃಶ್ಚಿಕ ರಾಶಿಗೆ ಆಗಮಿಸುವುದರಿಂದ ಮೇಷ ರಾಶಿಯಲ್ಲಿ ಬುಧ 8ನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಹೀಗಾಗಿ ಮೇಷರಾಶಿಯವರಿಗೆ ಈ ತಿಂಗಳು ಸ್ವಲ್ಪ ಹಿನ್ನಡೆಯಾಗಬಹುದು. ಹಾಗೆ ನಿಮ್ಮಲ್ಲಿ ಅನಾರೋಗ್ಯ ಸಮಸ್ಯೆಯ ಲಕ್ಷಣಗಳು ಗೋಚರವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗಬಹುದು. ಅನಗತ್ಯ ಚರ್ಚೆಗಳು ನಿಮಗೆ ಮಾನಸಿಕ ನೆಮ್ಮದಿ ಹಾನಿಗೆ ಕಾರಣವಾಗಬಹುದು. ಅಲ್ಲದೆ ವೃತ್ತಿಯಲ್ಲೂ ಹಲವು ಸಮಸ್ಯೆಗೆ ಎದುರಿಸಬೇಕಾಗಬಹುದು. ಹಲವರು ಕೆಲಸ ಬದಲಿಸುವ ಯತ್ನದಲ್ಲಿ ಕಷ್ಟ ಎದುರಿಸಬಹುದು. ಅನಗತ್ಯ ಖರ್ಚು ವೆಚ್ಚಗಳು ನಿಮಗೆ ಸಮಸ್ಯೆ ತರಬಹುದು, ಇದು ಸಾಲಕ್ಕೆ ಕಾರಣವಾಗಬಹುದು.

ವೃಷಭ ರಾಶಿ

ಬುಧನು ವೃಷಭ ರಾಶಿಯ 7ನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಹೀಗಾಗಿ ಈ ರಾಶಿಯವರು ಅತ್ಯಂತ ಹೆಚ್ಚು ಜಾಗರುಕರಾಗಿರಬೇಕು. ಅವಿವಾಹಿತರಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಬಹುದು. ಹಾಗೆ ನಿಮ್ಮ ಆರೋಗ್ಯದಲ್ಲಿಯೂ ಏರುಪೇರಾಗಬಹುದು. ಹಣಕಾಸು ವಿಚಾರದಲ್ಲಿ ನೀವು ಸಂಕಷ್ಟಕ್ಕೆ ಸಿಲುಕಬಹುದು. ನಿಮ್ಮ ವ್ಯವಹಾರದಲ್ಲೂ ಸ್ವಲ್ಪ ಆರ್ಥಿಕ ನಷ್ಟ ಅನುಭವಿಸಬಹುದು. ದಾಂಪತ್ಯದಲ್ಲಿ ವೈಮನಸ್ಸು ಹೆಚ್ಚಾಗಬಹುದು. ಅವಶ್ಯ ವಿಚಾರಗಳಿಗಾಗಿ ನಿಮ್ಮಿಂದ ಖರ್ಚು ಹೆಚ್ಚಾಗಲಿದೆ. ಆದ್ರೆ ಇದು ಅವಶ್ಯವಾಗಿ ನಿಮ್ಮಿಂದ ನಡೆಯುವ ಕಾರ್ಯವಾಗಲಿದೆ.

ಸಿಂಹ ರಾಶಿ

ಬುಧನು ಸಿಂಹ ರಾಶಿಯ 4ನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಇದರಿಂದಾಗಿ ಈ ರಾಶಿಯವರು ತೆಗೆದುಕೊಳ್ಳುವ ನಿರ್ಧಾರಗಳು ಅವರಿಗೆ ಸಮಸ್ಯೆ ತರಬಹುದು, ಹಾಗೆ ನಿಮ್ಮ ಹಣದ ವ್ಯವಹಾರಗಳಲ್ಲಿ ಕೈ ಸುಟ್ಟುಕೊಳ್ಳುವ ಸಂಭವವಿದೆ. ಹಣದ ವಿಚಾರದಲ್ಲಿ ಕುಟುಂಬ ಸದಸ್ಯರೊಂದಿಗೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ತಿಂಗಳ ಕೊನೆಯಲ್ಲಿ ಈ ಸಮಸ್ಯೆಗಳಿಂದ ನೀರು ದೂರಾಗಬಹುದು. ಹಾಗೆ ಉದರ ಸಂಬಂಧಿ ಸಮಸ್ಯೆಗೆ ನೀವು ಒಳಗಾಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Transit Scorpio 2024: Will Impact These 3 Zodiac Signs

Mercury is called the planet of wealth, financial power, and physical strength. Your future is determined by the position of Mercury in your horoscope.
Story first published: Wednesday, November 27, 2024, 13:52 [IST]
X
Desktop Bottom Promotion