Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ವರ್ಷದ ಮೊದಲ ಗ್ರಹ ಸಂಚಾರ: ಬುಧ ಸಂಚಾರ ಈ 3 ರಾಶಿಯವರಿಗೆ ಎಲ್ಲಾ ವಿಷಯದಲ್ಲಿಯೂ ಶುಭ ಫಲ ನೀಡಲಿದೆ
ಈ ವರ್ಷದ ಮೊದಲ ಗ್ರಹ ಸಂಚಾರ ಜನವರಿ 4ಕ್ಕೆ ನಡೆಯಲಿದೆ. ಗ್ರಹಗಳ ರಾಜಕುಮಾರ ಬುಧನು ರಾಶಿ ಬದಲಾವಣೆ ಮಾಡಲಿದ್ದಾನೆ. ಬುಧನು ಧನು ರಾಶಿಗೆ ಸಂಚರಿಸಲಿದೆ. ಬುಧನು ಧನು ರಾಶಿಗೆ ಜನವರಿ 4 ಬೆಳಗ್ಗೆ 11:55ಕ್ಕೆ ಸಂಚಾರ ಮಾಡಲಿದ್ದಾನೆ.
ಧನು ರಾಶಿಯಲ್ಲಿ ಬುಧ ಸಂಚಾರ ಮಾಡಿದಾಗ ಕೆಲ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿರಲಿದೆ, ಇನ್ನು ಕೆಲ ರಾಶಿಯವರು ಜಾಗ್ರತೆವಹಿಸಬೇಕು.ಧನು ರಾಶಿಯಲ್ಲಿ ಬುಧ ಸಂಚಾರ ಈ ರಾಶಿಯವರಿಗೆ ಲಾಭ ತರಲಿದೆ:

ಮೇಷ ರಾಶಿ
ಮೇಷ ರಾಶಿಯಲ್ಲಿ ಬುಧನು 3ನೇ ಮನೆಯಲ್ಲಿ ಇರಲಿದ್ದಾನೆ. ಮೂರನೇಯ ಮನೆಯಲ್ಲಿ ಬುಧನ ಸಂಚಾರ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದ್ದಾನೆ. ಈ ಅವಧಿ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ನೀವು ಮಾಡುತ್ತಿರುವ ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಇನ್ನು ಈ ಸಮಯದಲ್ಲಿ ತೀರ್ಥಯಾತ್ರೆ ಮಾಡಬಹುದು. ವ್ಯಾಪಾರಸ್ಥರಿಗೆ ಅನುಕೂಲಕರವಾಗಿರಲಿದೆ. ವೃತ್ತಿ ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಬುಧನು 7ನೇ ಮನೆಯಲ್ಲಿ ಇರುತ್ತಾನೆ. 7ನೇ ಮನೆಯಲ್ಲಿ ಬುಧನ ಸ್ಥಾನ ಕೂಡ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಇನ್ನು ಆಸ್ತಿ ಖರೀದಿಸಬೇಕೆಂದು ಬಯಸಿದ್ದರೆ ಅಥವಾ ವಾಹನ ಖರೀದಿ ಮಾಡಬೇಕೆಂದು ಬಯಸಿದ್ದರೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವಿಸ್ತರಿಸಬೇಕೆಂದು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಒಟ್ಟಿನಲ್ಲಿ ಬುಧನ ಸಂಚಾರ ನಿಮಗೆ ಎಲ್ಲಾ ರೀತಿಯಿಂದಲೂ ಅನುಕೂಲಕವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಬುಧನು 5ನೇ ಮನೆಗೆ ಸಂಚರಿಸಲಿದೆ. ಸಿಂಹ ರಾಶಿಯಲ್ಲಿ ಬುಧ ಸಂಚಾರ ಹೆಚ್ಚು ಹಣ ಖರ್ಚು ಮಾಡಿಸಬಹುದು. ಮಕ್ಕಳ ಪ್ರಗತಿಗೆ ಹಣ ಖರ್ಚು ಮಾಡುವಿರಿ, ಆದರೆ ಇದೆಲ್ಲವೂ ಒಳಿತಿಗಾಗಿ ಮಾಡುವ ಖರ್ಚಾಗಿರುತ್ತದೆ. ಇನ್ನು ಹೂಡಿಕೆ ಮಾಡುವವರಿಗೆ, ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರಿಗೆ ಈ ಅವಧಿ ಅನುಕೂಲಕರವಾಗಿದೆ. ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅನುಕೂಲಕರ ಪ್ರಯೋಜನ ಪಡೆಯುತ್ತೀರಿ. ಬುಧನು ನಿಮ್ಮ ಕುಟುಂಬ ಮೇಲೆ ಅನುಕೂಲಕರ ಪ್ರಯೋಜನ ಬೀರುತ್ತಾನೆ. ಒಟ್ಟಿನಲ್ಲಿ ಬುಧ ಸಂಚಾರ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದ್ದಾನೆ.
ಬುಧನು ಧನು ರಾಶಿಗೆ ಸಂಚರಿಸಿದಾಗ ಈ 2 ರಾಶಿಯವರು ಜಾಗ್ರತೆವಹಿಸಿ
ವೃಷಭ ರಾಶಿ
ಬುಧನು ನಿಮ್ಮ ಎಂಟನೇ ಮನೆಯಲ್ಲಿ ಇರಲಿದ್ದಾನೆ. ಅಷ್ಟಮ ಮನೆಯಲ್ಲಿ ಬುಧನ ಸ್ಥಾನ ಅನುಕೂಲಕರ ಫಲಿತಾಂಶ ನೀಡುವುದಿಲ್ಲ, ವೃತ್ತಿ ಬದುಕಿನಲ್ಲಿ ಕೆಲ ಬದಲಾವಣೆಗಳಾಗಬಹುದು. ಆರ್ಥಿಕವಾಗಿಯೂ ತುಂಬಾನೇ ಜಾಗ್ರತೆವಹಿಸಬೇಕು, ಹಣ ನಷ್ಟವಾಗಬಹುದು
ಕರ್ಕ ರಾಶಿ
ಕರ್ಕ ರಾಶಿಯಲ್ಲಿ 6ನೇ ಮನೆಯಲ್ಲಿ ಬುಧ ಇರಲಿದ್ದಾನೆ. 6ನೇ ಮನೆಯಲ್ಲಿ ಬುಧ ಬಂದಾಗ ಅವನು ಕೆಲ ಸಮಸ್ಯೆಗಳನ್ನುಂಟು ಮಾಡಬಹುದು. ಹಣದ ತೊಂದರೆಗಳು ಬರಬಹುದು, ಸಾಲ ಮಾಡಿದ್ದರೆ ಸಾಲ ಮರು ಪಾವತಿಸಲು ಒತ್ತಾಯ ಬರಬಹುದು. ಇನ್ನು ಈ ಅವಧಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕೂಡ ಕಷ್ಟವಾಗುವುದು. ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ ಎಂದು ಸಲಹೆ ನೀಡಲಾಗುವುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











