Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 31ಕ್ಕೆ ಬುಧ ವೃಷಭ ರಾಶಿಗೆ ಸಂಚರಿಸಿದಾಗ ಈ 5 ರಾಶಿಗಳಿಗೆ ಆರ್ಥಿಕವಾಗಿ ಶುಭವಲ್ಲ
ಮೇ 31ಕ್ಕೆ ಬುಧನು ವೃಷಭ ರಾಶಿಗೆ ಸಂಚರಿಸಲಿದೆ, ಇದೇ ರಾಶಿಯಲ್ಲಿ ಶುಕ್ರನೂ ಇದೆ.ಈ ಬುಧ ಸಂಚಾರ ಕೆಲ ರಾಶಿಗಳಿಗೆ ಆರ್ಥಿಕವಾಗಿ ಒಳ್ಳೆಯದಲ್ಲ, ಇದು ಶುಕ್ರನ ಪ್ರಭಾವವನ್ನು ತಡೆಯುತ್ತದೆ.
ಬುಧನು ವೃಷಭ ರಾಶಿಗೆ ಸಂಚರಿಸಿದಾಗ ಈ ರಾಶಿಗಳಿಗೆ ಆರ್ಥಿಕವಾಗಿ ಅನುಕೂಲಕರವಲ್ಲ, ಆದ್ದರಿಂದ ಜಾಗ್ರತೆವಹಿಸಿ:
ಮೇಷ ರಾಶಿ
ಈ ಅವಧಿಯಲ್ಲಿ ನಿಮಗೆ ಹಾಗೂ ಉಳಿತಾಯು ಸಮತೋಲನ ಮಾಡಲು ಕಷ್ಟವಾಗುವುದು. ಹಣದ ಚಿಂತೆ ತುಂಬಾ ಕಾಡುವುದು, ಹೆಚ್ಚುತ್ತಿರುವ ಖರ್ಚು ನಿಮ್ಮ ಚಿಂತೆಯನ್ನೂ ಹೆಚ್ಚಿಸಬಹುದು. ನೀವು ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಲೇಬೇಕು, ಇಲ್ಲದಿದ್ದರೆ ದೊಡ್ಡ ಆರ್ಥಿಕ ಸಮಸ್ಯೆ ಉಂಟಾಗುವುದು. ಈ ಅವಧಿಯಲ್ಲಿ ಆರ್ಥಿಕ ಯೋಜನೆಗಳನ್ನು ತೊಡಗಿಕೊಳ್ಳಬೇಡಿ, ಯಾವುದೇ ಹೂಡಿಕೆ ಮಾಡಲು ಹೋಗಬೇಡಿ.

ಮಿಥುನ ರಾಶಿ
ಬುಧನ ಸಂಚಾರ ಆರ್ಥಿಕ ದೃಷ್ಟಿಯಿಂದ ಮಿಥುನ ರಾಶಿಯವರಿಗೂ ಒಳ್ಳೆಯದು,ಈ ಸಮಯದಲ್ಲಿ ಅತಿಯಾದ ಖರ್ಚು ಬರಬಹುದು, ಹಣ ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಬಹುದು. ಹಣದ ಕೊರತೆಯಿಂದಾಗಿ ನಿಮ್ಮ ಕೆಲಸಗಳಿಗೆ ಅಡೆತಡೆ ಉಂಟಾಗಬಹುದು. ಆರ್ಥಿಕ ಸಮಸ್ಯೆ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುವುದು.
ಸಿಂಹ ರಾಶಿ
ಈ ಅವಧಿ ಹಣದ ವಿಷಯದಲ್ಲಿ ಶುಭವಲ್ಲ, ಆದ್ದರಿಂದ ಈ ಅವಧಿಯಲ್ಲಿ ನೀವು ತುಂಬಾನೇ ಜಾಗ್ರತೆವಹಿಸಬೇಕು. ಖರ್ಚುಗಳ ನಿಯಂತ್ರಣಕ್ಕೆ ನೀವು ಗಮನಹರಿಸಬೇಕು. ಈ ಅವಧಿಯಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು, ಇಲ್ಲದಿದ್ದರೆ ನಷ್ಟದ ಸಾಧ್ಯತೆಯಿದೆ. ಹಣ ಸಂಪಾದಿಸುವಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ಸೂರ್ಯ ಮಿಥುನ ರಾಶಿಗ ಸಂಚರಿಸುವವರಿಗೆ ನೀವು ಆರ್ಥಿಕ ಸಂಕಷ್ಟ ಅನುಭವಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೂ ಹಣದ ವಿಷಯದಲ್ಲಿ ಈ ದಿನ ಹೆಚ್ಚು ಅನುಕೂಲಕರವಲ್ಲ. ನಿಮ್ಮ ವೆಚ್ಚಗಳು ಬಹಳಷ್ಟು ಹೆಚ್ಚಾಗಲಿವೆ ಮತ್ತು ಈ ವೆಚ್ಚಗಳನ್ನು ಪೂರೈಸಲು ನಿಮಗೆ ಕಷ್ಟವಾಗುತ್ತದೆ. ಇದರಿಂದಾಗಿ ನೀವು ಹೆಚ್ಚಿನ ಒತ್ತಡಕ್ಕೆ ಒಳಗಾಗಬಹುದು. ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಹಣಕಾಸಿನ ಚಿಂತೆಗಳು ಹೆಚ್ಚಾಗಲಿವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.. ನೀವು ಹಣವನ್ನು ಉಳಿಸುವತ್ತ ಗಮನ ಹರಿಸಬೇಕು, ನಿಮ್ಮ ಬಜೆಟ್ ರೂಪಿಸಿ,ಅದರಂತೆ ಖರ್ಚು ಮಾಡಿ ಇಲ್ಲದಿದ್ದರೆ ಕಷ್ಟವಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ. ಈ ಸಮಯದಲ್ಲಿ ಹಣಕಾಸಿನ ಚಿಂತೆಗಳು ಹೆಚ್ಚಾಗಲಿವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಹಣ ನಷ್ಟವಾಗಬಹುದು. ನೀವು ಹಣವನ್ನು ಉಳಿಸುವತ್ತ ಗಮನ ಹರಿಸಬೇಕು ಮತ್ತು ಆರ್ಥಿಕ ಯೋಜನೆಯನ್ನು ರೂಪಿಸಬೇಕು. ಹಣಕಾಸಿನ ಪರಿಸ್ಥಿತಿಯನ್ನು ಸಮತೋಲನಗೊಳಿಸಲು ನೀವು ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications