ವೃಶ್ಚಿಕ ರಾಶಿಗೆ ಬುಧನ ಸಂಚಾರ: ಈ ಸಂಚಾರ ಯಾವ ರಾಶಿಗೆ ಹೇಗೆ ಪ್ರಭಾವ ಬೀರಲಿದೆ?

ಪ್ರತಿ ತಿಂಗಳು ಬುಧ ರಾಶಿ ಬದಲಾಯಿಸುತ್ತಲೇ ಇರುತ್ತದೆ, ಕೆಲವೊಂದು ತಿಂಗಳಿನಲ್ಲಿ ಎರಡು ಬಾರಿ ರಾಶಿ ಬದಲಾವಣೆ ಮಾಡುತ್ತದೆ. ಬುಧದ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುವುದು. ಬುಧ ರಾಶಿ ಬದಲಾವಣೆ ಮಾಡಿದಾಗ ಅದು ಯಾವ ರಾಶಿಯಲ್ಲಿ ಯಾವ ಸ್ಥಾನದಲ್ಲಿ ಇರುತ್ತದೆಯೋ ಅದರಂತೆ ಫಲ ನೀಡುವುದು. ನವೆಂಬರ್‌ 6ಕ್ಕೆ ಬುಧ ವೃಶ್ಚಿಕ ರಾಶಿಗೆ ಸಂಚರಿಸಲಿದೆ. ಈ ಸಂಚಾರ ಯಾವ ರಾಶಿಗೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

Mercury Transit in Scorpio 2023

ಮೇಷ ರಾಶಿ
ಮೇಷ ರಾಶಿಯಲ್ಲಿ ಬುಧ 8ನೇ ಮನೆಗೆ ಸಂಚರಿಸಿದೆ. ಈ ಸಂಚಾರವು ಅನುಕೂಲಕರವಾಗಿಲ್ಲ. ಆದರೆ ಮಂಗಳನ ಪ್ರಭಾವದಿಂದ ಹಾನಿಕಾರಕ ಪರಿಣಾಮ ಉಂಟಾಗುವುದಿಲ್ಲ. ಈ ಅವಧಿಯಲ್ಲಿ ಮಾತಿನ ಕಡೆಗೆ ತುಂಬಾನೇ ಜಾಗ್ರತೆವಹಿಸಬೇಕು. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ. ಈ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದಂತೆ ನಿಮಗೆ ಸಲಹೆ ನೀಡಲಾಗುವುದು. ಈ ಅವಧಿಯಲ್ಲಿ ಹಠಾತ್ ವೆಚ್ಚಗಳು ಹೆಚ್ಚಾಗಬಹುದು.
ಪರಿಹಾರ: ಮಂಗಳಮುಖಿಯರಿಗೆ ಹಸಿರು ಬಣ್ಣದ ಬಟ್ಟೆಗಳನ್ನು ದಾನ ಮಾಡಿ, ಅವರ ಆಶೀರ್ವಾದ ಪಡೆಯಿರಿ.

ವೃಷಭ ರಾಶಿ
ವೃಷಭ ರಾಶಿಯಲ್ಲಿ 7ನೇ ಮನೆಯಲ್ಲಿದೆ.ಈ ಅವಧಿಯು ಅನುಕೂಲಕರವಾಗಿರುತ್ತದೆ, ನಿಮ್ಮ ಸಂಬಂಧ ಬಲವಾಗುವುದು. ವೃಶ್ಚಿಕ ರಾಶಿಯಲ್ಲಿ ಬುಧ ಸಂಕ್ರಮಣವು ಪ್ರೇಮವಿವಾಹ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ. ವಿವಾಹಿತ ದಂಪತಿಗಳು ತಮ್ಮ ಸಂಬಂಧದಲ್ಲಿ ಪ್ರೀತಿ, ಆಕರ್ಷಣೆಯನ್ನು ಆನಂದಿಸುವಿರಿ. ನೀವು ಕುಟುಂಬದ ಸದಸ್ಯರೊಂದಿಗೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಪರಿಹಾರ: ಬುಧ ಬೀಜ ಮಂತ್ರ ಪ್ರತಿದಿನ ಪಠಿಸಿ.

ಮಿಥುನ ರಾಶಿ
ಮಿಥುನ ರಾಶಿಯಲ್ಲಿ 6ನೇ ಮನೆಯಲ್ಲಿದೆ. ಈ ಅವಧಿಯಲ್ಲಿ ನಿಮ್ಮ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ. ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರವು ಕೌಟುಂಬಿಕ ಸಮಸ್ಯೆಗಳನ್ನು ತರಬಹುದು. ಈ ಕಾರಣದಿಂದಾಗಿ, ನಿಮ್ಮ ಕುಟುಂಬದಲ್ಲಿ ನೀವು ಕೆಲವು ವಿವಾದಗಳನ್ನು ಎದುರಿಸಬೇಕಾಗಬಹುದು. ಸ್ವಂತ ವ್ಯವಹಾರವನ್ನು ನೋಡಿಕೊಳ್ಳುತ್ತಿರುವವರು ದೊಡ್ಡ ರಿಸ್ಕ್‌ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು, ನಿಮ್ಮ ಖರ್ಚುಗಳು ಸಹ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು.
ಪರಿಹಾರ: ಬುಧವಾರದಂದು 5-6 ಕ್ಯಾರೆಟ್ ಪಚ್ಚೆಯನ್ನು ಬೆಳ್ಳಿ ಅಥವಾ ಚಿನ್ನದ ಉಂಗುರದಲ್ಲಿ ಧರಿಸುವುದು ಮಿಥುನ ರಾಶಿಯವರಿಗೆ ಮಂಗಳಕರವಾಗಿರುತ್ತದೆ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ 5ನೇ ಮನೆಯಲ್ಲಿ ಇರಲಿದೆ. ಬುಧದ ಸಂಚಾರವು ಕರ್ಕ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಅದ್ಭುತವಾಗಿದೆ. ವಿದೇಶಿ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಾವು ಬಯಸಿದ ಸಂಸ್ಥೆಯಲ್ಲಿ ಕಲಿಯುವ ಅವಕಾಶ ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಸಂಬಂಧದಲ್ಲಿ ಕೆಲವು ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ, ಹೀಗಾದರೆ ಮುಕ್ತ ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ಅವಧಿಯಲ್ಲಿ ಗರ್ಭಿಣಿಯರು ಜಾಗ್ರತೆವಹಿಸಿ.
ಪರಿಹಾರ: ಅಗತ್ಯವಿರುವ ಮತ್ತು ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ.

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಬುಧ ನಾಲ್ಕನೇ ಮನೆಯಲ್ಲಿ ಇರಲಿದೆ. ಬುಧ ನಾಲ್ಕನೇ ಮನೆಯಲ್ಲಿ ಇರುವಾಗ ಹಣಕಾಸಿನ ಸಮಸ್ಯೆ ಇರಲ್ಲ. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಹಣವನ್ನು ಖರ್ಚು ಮಾಡಬಹುದು, ಮನೆಗೆ ಹೊಸ ಉಪಕರಣಗಳನ್ನು ಖರೀದಿಸಬಹುದು. ನಿಮ್ಮ ವೃತ್ತಿಪರ ಜೀವನಕ್ಕೆ ವಿಶೇಷವಾಗಿ ರಿಯಲ್ ಎಸ್ಟೇಟ್ ಅಥವಾ ಆಸ್ತಿ ಏಜೆಂಟ್‌ಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಅನುಕೂಲಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ.
ಪರಿಹಾರ: ಪ್ರತಿದಿನ ತುಳಸಿ ಗಿಡಕ್ಕೆ ದೀಪ ಹಚ್ಚಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ 3ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಬುಧನ ಸ್ಥಾನ ನಿಮ್ಮ ಸಂವಹನದ ಮೇಲೆ ಪ್ರಭಾವ ಬೀರುತ್ತದೆ. ಕನ್ಯಾ ರಾಶಿಯ ಪತ್ರಕರ್ತರು, ಮಾಧ್ಯಮದವರು, ಬರಹಗಾರರು, ಸಲಹೆಗಾರರು, ಚಲನಚಿತ್ರ ನಿರ್ದೇಶಕರು, ನಿರೂಪಕರು ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಾಗಿ ಕೆಲಸ ಮಾಡುವವವವರು ಅತ್ಯುತ್ತಮ ಫಲಿತಾಂಶಗಳನ್ನು ಕಾಣಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ನೀವು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೆಚ್ಚು ಒಲವು ತೋರುತ್ತೀರಿ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಬುಧವಾರದಂದು 5-6 ಕ್ಯಾರೆಟ್ ಪಚ್ಚೆಯನ್ನು ಬೆಳ್ಳಿ ಅಥವಾ ಚಿನ್ನದ ಉಂಗುರದಲ್ಲಿ ಧರಿಸಿದರೆ ಮಂಗಳಕರವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಲ್ಲಿ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ. ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರವು ಆರ್ಥಿಕ ಜೀವನಕ್ಕೆ ಯಾವುದೇ ವಿಶೇಷ ಫಲಿತಾಂಶಗಳನ್ನು ತರುವುದಿಲ್ಲ. ಈ ಸಮಯದಲ್ಲಿ, ನಿಮ್ಮ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ವೃತ್ತಿಪರ ಜೀವನದಲ್ಲೂ ಕೆಲವು ಬದಲಾವಣೆಯಾಗಲಿದೆ. ಆದರೆ ತುಂಬಾ ರಿಸ್ಕ್‌ ತೆಗೆದುಕೊಳ್ಳಬೇಡಿ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕೂಡ ಜಾಗ್ರತೆವಹಿಸಿ.
ಪರಿಹಾರ: ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ, ಒಂದು ಎಲೆಯನ್ನು ನಿಯಮಿತವಾಗಿ ಸೇವಿಸಿ.

ವೃಶ್ಚಿಕ ರಾಶಿ
ಬುಧ ವೃಶ್ಚಿಕ ರಾಶಿಗೆ ಸಂಚರಿಸಿದೆ. ಈ ಸಂಚಾರ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡು ಬರಬಹುದು. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ವ್ಯಾಪರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭ ಗಳಿಸಬಹುದು.
ಪರಿಹಾರ: ಬುಧ ಗ್ರಹದ ಬೀಜ ಮಂತ್ರವನ್ನು ಪ್ರತಿದಿನ ಜಪಿಸಿ.

ಧನು ರಾಶಿ
ಧನು ರಾಶಿಯಲ್ಲಿ ಬುಧ 12ನೇ ಮನೆಯಲ್ಲಿ ಇರಲಿದೆ. ಹನ್ನೆರಡನೇ ಮನೆಯಲ್ಲಿ ಬುಧ ಸಂಕ್ರಮಣದ ಪರಿಣಾಮವಾಗಿ ನಿಮಗೆ ವಿದೇಶದಿಂದ ಉದ್ಯೋಗಾವಕಾಶಗಳು ದೊರೆಯಬಹುದು. ಅಲ್ಲದೆ ಈ ಅವಧಿಯಲ್ಲಿ ಖರ್ಚುಗಳೂ ಅದಿಕವಿರಲಿದೆ. ಆರೋಗ್ಯದ ವಿಷಯದಲ್ಲಿ, ವೃಶ್ಚಿಕ ರಾಶಿಯಲ್ಲಿ ಬುಧದ ಸಂಚಾರವು ನಿಮಗೆ ಏರಿಳಿತಗಳಿಂದ ಕೂಡಿದೆ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯು ನಿಮ್ಮನ್ನು ಕಾಡುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ, ಇಲ್ಲದಿದ್ದರೆ ಆ ಸಮಸ್ಯೆಯು ಗಂಭೀರ ಸ್ವರೂಪವನ್ನು ಪಡೆಯಬಹುದು . ಸಂಗಾತಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು.
ಪರಿಹಾರ: ಗಣಪತಿಗೆ ಗರಿಕೆ ಅರ್ಪಿಸಿ ಪೂಜಿಸಿ.

ಮಕರ ರಾಶಿ
ಮಕರ ರಾಶಿಯಲ್ಲಿ ಬುಧ 11ನೇ ಮನೆಯಲ್ಲಿ ಇರಲಿದೆ. ಬುಧ ಹನ್ನೊಂದನೇ ಮನೆಯಲ್ಲಿದ್ದಾಗ ಶತ್ರುಗಳೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸಲು ಅನುಕೂಲಕರವಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಥವಾ ಯಾವುದೇ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ಮಕರ ರಾಶಿಯ ವಿದ್ಯಾರ್ಥಿಗಳಿಗೆ ವೃಶ್ಚಿಕ ರಾಶಿಯಲ್ಲಿ ಬುಧ ಸಂಕ್ರಮಣವು ಅದ್ಭುತವಾಗಿರುತ್ತದೆ. ವ್ಯಾಪಾರಸ್ಥರಿಗೂ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಈಗಾಗಲೇ ನಿರೀಕ್ಷಿಸಿದ್ದ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಸಹ ನೀವು ನೋಡುತ್ತೀರಿ.
ಪರಿಹಾರ: ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸಿ ಅಥವಾ ಪ್ರತಿದಿನ ಬುಧ ಬೀಜ ಮಂತ್ರ ಪಠಿಸಿ.

ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಬುಧ 10ನ ಮನೆಯಲ್ಲಿ ಇರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯಲಿದೆ. ಈ ಅವಧಿಯಲ್ಲಿ, ಹಣಕಾಸಿನ ವಹಿವಾಟುಗಳು ಮತ್ತು ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳು ನಿಮಗೆ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ತಾಯಿಯ ಬೆಂಬಲ ಸಿಗುವುದು, ನಿಮ್ಮ ಮನೆಯ ವಾತಾವರಣವೂ ಉತ್ತಮವಾಗಿರುತ್ತದೆ.
ಪರಿಹಾರ: ಕೆಲಸದ ಸ್ಥಳದಲ್ಲಿ ಬುಧ ಯಂತ್ರವನ್ನು ಸ್ಥಾಪಿಸಿ.

ಮೀನ ರಾಶಿ
ಮೀನ ರಾಶಿಯವರಲ್ಲಿ 9ನೇ ಮನೆಯಲ್ಲಿ ಇರಲಿದೆ. ಮೀನ ರಾಶಿಯವರಿಗೆ ಈ ಅವಧಿಯು ಉತ್ತಮವಾಗಿದೆ. ವೃಶ್ಚಿಕ ರಾಶಿಯಲ್ಲಿ ಬುಧದ ಸಂಚಾರವು ನಿಮ್ಮ ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಅಥವಾ ಈಗಾಗಲೇ ಯೋಜಿಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಇಷ್ಟೇ ಅಲ್ಲ, ಈ ಅವಧಿಯು ತೀರ್ಥಯಾತ್ರೆ ಕೈಗೊಳ್ಳಲು ಅಥವಾ ನಿಮ್ಮ ಕುಟುಂಬದೊಂದಿಗೆ ದೂರದ ಪ್ರಯಾಣಕ್ಕೆ ಉತ್ತಮವಾಗಿದೆ. ನಿಮ್ಮ ಮನೆಯವರು ಅವರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ ಮತ್ತು ಪ್ರತಿ ಹಂತದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ.
ಪರಿಹಾರ: ಗಣಪತಿಗೆ ಗರಿಕೆ ಅರ್ಪಿಸಿ ಪೂಜಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Transit in Scorpio 2023: Affects On 12 Zodiac Signs In Kannada

Mercury Transit in Scorpio 2023: What are the affects on 12 zodiac signs, read on....
X
Desktop Bottom Promotion