Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಬುಧ ಸಂಚಾರ: ಮೇ 10ರಿಂದ ಈ 6 ರಾಶಿಯವರು ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣುವಿರಿ
ಮೇ ತಿಂಗಳಲ್ಲಿ ಪ್ರಮುಖ ಗ್ರಹಗಳ ಚಲನೆಯಲ್ಲಿ ಬುಧ ಗ್ರಹದ ಚಲನೆ ಕೂಡ ಇದೆ. ಈ ಗ್ರಹ ಸಂಚಾರ ಕೆಲ ರಾಶಿಗಳಿಗೆ ಧನಾತ್ಮಕ ಫಲಿತಾಂಶ ನೀಡಿದರೆ ಇನ್ನು ಕೆಲವರಿಗೆ ಋಣಾತ್ಮಕ ಪ್ರಭಾವ ಬೀರಲಿದೆ. ಬುಧ ಮೇ 10, 2024 ರಂದು ಸಂಜೆ 06:39 ಕ್ಕೆ ಮೀನ ರಾಶಿ ಬಿಟ್ಟು ಮೇಷ ರಾಶಿಗೆ ಸಂಚರಿಸಲಿದೆ.
ಜ್ಯೋತಿಷ್ಯದಲ್ಲಿ ಬುಧನ ಸ್ಥಾನ
ಬುಧನನ್ನು ಬುದ್ಧಿವಂತಿಕೆ ಹಾಗೂ ಸಂವಹನದ ಮೇಲೆ ಪ್ರಭಾವ ಬೀರುವ ಗ್ರಹವೆಂದು ಹೇಳಲಾಗುವುದು. ಬುಧ ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಧನಾತ್ಮಕ ಫಲಿತಾಂಶ ನೀಡಲಿದೆ. ಮೇ. 10ಕ್ಕೆ ಬುಧ ಮೇಷ ರಾಶಿಗೆ ಸಂಚರಿಸಿದಾಗ ಈ ರಾಶಿಯವರಿಗೆ ತುಂಬಾನೇ ಒಳ್ಳೆಯದು.

ಮೇಷ ರಾಶಿ
ಮೇಷ ರಾಶಿಯಲ್ಲಿ ಮೂರನೇ ಮತ್ತು ಆರನೇ ಮನೆಯ ಅಧಿಪತಿ. ಅದೀಗ ಮೇ 10ರಿಂದ ಮೇಷ ರಾಶಿಗೆ ಸಂಚರಿಸಿದಾಗ ಅದು ನಿಮ್ಮ ಲಗ್ನ ಮನೆಯಲ್ಲಿದೆ. ಬುಧವು ಮೇಷ ರಾಶಿಗೆ ಸಂಚರಿಸಿದಾಗ ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ಈ ಸಮಯದಲ್ಲಿ ಕೆಲಸದಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ.
ಮಿಥುನ ರಾಶಿ
ಬುಧ ಮಿಥುನ ರಾಶಿಯಲ್ಲಿ 11ನೇ ಮನೆಯಲ್ಲಿ ಇರಲಿದೆ. ವೃತ್ತಿ ಕ್ಷೇತ್ರದಲ್ಲಿ ಧನ ಲಾಭವನ್ನು ಪಡೆಯುತ್ತಾರೆ. ಈ ಸಾಗಣೆ ನಿಮಗೆ ತುಂಬಾ ಅದ್ಭುತವಾಗಿರಲಿದೆ. ನಿಮ್ಮ ವೃತ್ತಿ ಬದುಕಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಈ ಸಮಯದಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ. ಬಡ್ತಿಯನ್ನು ಪಡೆಯುತ್ತೀರಿ, ಈ ಬುಧ ಸಂಚಾರ ನಿಮಗೆ ತುಂಬಾನೇ ಅನುಕೂಲಕರವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಬುಧ 9ನೇ ಮನೆಯಲ್ಲಿ ಇರಲಿದೆ, ಈ ಮನೆ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ವೃತ್ತಿ ಬದುಕಿನಲ್ಲಿ ಆರ್ಥಿಕ ಪ್ರಗತಿ ಉಂಟಾಗಲಿದೆ. ಈ ಸಮಯದಲ್ಲಿ ನೀವು ಹಾಕು ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ, ಇದರಿಂದಾಗಿ ಯಶಸ್ಸು ಪಡೆಯುತ್ತೀರಿ, ಕೆಲಸದಲ್ಲಿ ತೃಪ್ತಿ ಇರಲಿದೆ.
ಕನ್ಯಾರಾಶಿ
ಬುಧನು ಮೇಷ ರಾಶಿಗೆ ಸಂಚರಿಸಿದಾಗ ಬುಧ ನಿಮ್ಮ ರಾಶಿಯ 8ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ವೃತ್ತಿ ಜೀವನದಲ್ಲಿ ಪ್ರಗತಿ ನೀಡಲಿದೆ. ಇನ್ನು ಉದ್ಯೋಗಕ್ಕಾಗಿ ಕೆಲಸ ಹುಡುಕುತ್ತಿದ್ದರೆ ನೀವು ಬಯಸಿದ ಉದ್ಯೋಗ ದೊರೆಯಲಿದೆ. ಕೆಲಸದಲ್ಲಿ ತೃಪ್ತಿ ಇರಲಿದೆ.
ತುಲಾ ರಾಶಿ
ಬುಧನು ನಿಮ್ಮ 7ನೇ ಮನೆಯಲ್ಲಿ ಇರಲಿದೆ. ಈ ಸ್ಥಾನ ಕೂಡ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ನೀವು ಕೆಲಸ ಬದಲಾವಣೆಗೆ ಶ್ರಮಿಸುತ್ತಿದ್ದರೆ ಇದರೊಂದಿಗೆ ನೀವು ಇತರ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.
ಮಕರ ರಾಶಿ
ಬುಧನ 4ನೇ ಸ್ಥಾನ ವೃತ್ತಿ ಬದುಕಿಗೆ ತುಂಬಾನೇ ಅನುಕೂಲಕರವಾಗಿದೆ. ನೀವು ವರ್ಗಾವಣೆಗೆ ಶ್ರಮಿಸಿದರೆ ವರ್ಗಾವಣೆ ಸಿಗಲಿದೆ. ನಿಮ್ಮ ವೃತ್ತಿ ಅಥವಾ ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ಸಿಗುವ ಫಲಿತಾಂಶ ನಿಮಗೆ ಖುಷಿ ನೀಡಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ಮತ್ತಷ್ಟು ಬೆಳೆಯಲು ಸಾಧ್ಯವಾಗುವುದು.
ಈ ಮಂತ್ರ ಪಠಿಸಿ
ಗಾಯತ್ರಿ ಮಂತ್ರ
ॐ ಸೌಮ್ಯ-ರೂಪಾಯ ವಿದಾಮಹೇ ವಣೇಶಾಯ ಧೀಮಹಿ ತನ್ನೋ ಸೌಮ್ಯಃ ಪ್ರಚೋದಯಾತ್ ॥
ಓಂ ಸೌಮ್ಯ ರೂಪೇ ವಿಧ್ಮಹೇ ವನೇಶಾಯ ಧೀಮಹಿ ತನ್ನೋ: ಸೌಮ್ಯ ಪ್ರಚೋದಯಾತ್
ಮಂತ್ರದ ಆಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಬುದ್ಧ ಮಂತ್ರದ ಇನ್ನೊಂದು ಆವೃತ್ತಿ
ॐ ಗಜಧ್ವಜಾಯ ವಿದ್ಮಹೇ ಸುಖಸ್ತಾಯ ಧೀಮಹಿ ತನ್ನೋ ಬುಧ: ಪ್ರಚೋದಯಃ ಪ್ರಚೋದಯಾತಃ ಓಂ ಗಜಧ್ಮಹಯಃ ದಯಾತ್
ಬುಧ್ ಬೀಜ್ ಮಂತ್ರ
ॐ ಬ್ರಾಂ ಬ್ರಿಂ ಬ್ರೌಂ ಸಃ ಬುಧಾಯ ನಮಃ ॥
ಓಂ ಬ್ರಾಂ ಬ್ರೀಂ ಬ್ರೌಂ ಸಹ: ಬುಧಾಯ ನಮಃ:
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications