Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬುಧ ಗೋಚಾರ ಫಲ: ಮೇಷ ರಾಶಿಯಲ್ಲಿ ಬುಧ ಸಂಚಾರ 12 ರಾಶಿಗಳಲ್ಲಿ ಯಾವ ರಾಶಿಗಳಿಗೆ ತುಂಬಾ ಶುಭವಾಗಿದೆ
ಅಕ್ಷಯ ತೃತೀಯದಂದೇ ಬುಧ ಸಂಚಾರವಾಗಲಿದೆ. ಬುಧ ನಮ್ಮ ವೃತ್ತಿ ಹಾಗೂ ಸಂವಹನಗಳ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಬುಧ ಮೇಷ ರಾಶಿಗೆ ಸಂಚರಿಸಿದಾಗ ಇದರ ಪ್ರಭಾವ 12 ರಾಶಿಗಳ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಬುಧ ನಿಮ್ಮದೇ ರಾಶಿಗೆ ಸಂಚರಿಸಲಿದೆ, ಬುಧ ಲಗ್ನ ಮನೆಯಲ್ಲಿ ಇದ್ದಾಗ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಂಡು ಬರಲಿದೆ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಜೀವನ ತುಂಬಾನೇ ಚೆನ್ನಾಗಿರಲಿದೆ. ಇನ್ನು ಕಾನೂನು ವಿಷಯವಿದ್ದರೆ ಜಾಗ್ರತೆವಹಿಸಿ.
ವೃಷಭ ರಾಶಿ
ಬುಧ ಮೇಷ ರಾಶಿಗೆ ಸಂಚರಿಸಿದಾಗ ನಿಮ್ಮ 12ನೇ ಮನೆಯಲ್ಲಿ ಇರಲಿದೆ, ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಹಣ ನಿಮ್ಮ ಸೌಕರ್ಯಕ್ಕಾಗಿ ಬಳಸಿಕೊಳ್ಳುತ್ತೀರಿ. ಇನ್ನು ಈ ಸಮಯದಲ್ಲಿ ಯಾರಿಗೂ ಸಾಲ ಕೊಡಲು ಹೋಗಬೇಡಿ, ಕೊಟ್ಟರೆ ಮರಳಿ ಸಿಗುವುದು ಕಷ್ಟ. ಇನ್ನು ವಿದೇಶಕ್ಕೆ ಓದಲು ಹೋಗ ಬಯಸುವ ವಿದ್ಯಾರ್ಥಿಗಳಿಗೆ ಈ ತಿಂಗಳು ಅನುಕೂಲಕರವಾಗಿದೆ, ವೈವಾಹಿಕ ಜೀವನದ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ಬುಧ 11ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆದಾಯ ಉತ್ತಮವಾಗಿರಲಿದೆ. ನವ ದಂಪತಿಗಳು ಈ ಸಮಯದಲ್ಲಿ ಸಿಹಿ ಸುದ್ದಿ ಪಡೆಯುತ್ತೀರಿ. ನೀವು ಯಾವುದೇ ರೀತಿಯ ದೊಡ್ಡ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಗ್ರಹಗಳ ಸ್ಥಾನ ಅನುಕೂಲಕರವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಬುಧ 10ನೇ ಮನೆಯಲ್ಲಿ ಇರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಇನ್ನು ಈ ಸಮಯದಲ್ಲಿ ನೀವು ಹನದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದಿಂದ ಉತ್ತಮ ಫಲ ಸಿಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭ ದೊರೆಯಲದಿಎ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಇನ್ನು ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ವ್ಯಾಪಾರ ಯೋಜನೆ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಕನ್ಯಾ ರಾಶಿ
ಬುಧ 8ನೇ ಮನೆಯಲ್ಲಿ ಇರಲಿದೆ. ಆರ್ಥಿಕವಾಗಿ ಈ ಅವಧಿ ನಿಮಗೆ ತುಂಬಾ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ನೀವು ಯಾರಿಗೂ ಸಾಲ ನೀಡಲು ಹೋಗಬೇಡಿ. ಇನ್ನು ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಮತ್ತಷ್ಟು ಹೆಚ್ಚಾಗುವುದು, ಈ ಅವಧಿಯಲ್ಲಿ ಕೋಪದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ ರಾಶಿ
ತುಲಾ ರಾಶಿಯಲ್ಲಿ ಬುಧ 7ನೇ ಮನೆಯಲ್ಲಿ ಇರಲಿದೆ. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ನೀವು ತಾಳ್ಮೆಯಿಂದ ವರ್ತಿಸಬೇಕು, ವೃತ್ತಿ ಬದುಕು ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಬುಧ 6ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆವಹಿಸಬೇಕು. ಇನ್ನು ನೀವು ಈ ಅವಧಿಯಲ್ಲಿ ಶತ್ರುಗಳ ಬಗ್ಗೆ ಜಾಗ್ರತೆವಹಿಸಬೇಕು. ಇನ್ನು ಯಾರನ್ನೂ ಹೆಚ್ಚು ನಂಬಲು ಹೋಗಬೇಡಿ. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಲು ಸಲಹೆ ನೀಡಲಾಗುವುದು.
ಧನು ರಾಶಿ
ಧನು ರಾಶಿಯಲ್ಲಿ ಬುಧ 5ನೇ ಮನೆಯಲ್ಲಿ ಇರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಪ್ರೀತಿಯನ್ನು ಮನೆಯಲ್ಲಿ ಹೇಳಲು ಈ ಅವಧಿ ಅನುಕೂಲಕರವಾಗಿದೆ. ನವ ದಂಪತಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ಮಕರ ರಾಶಿ
ಬುಧ 4ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿವೆ. ನೀವು ಯಾವುದೇ ರೀತಿಯ ಹೊಸ ಕೆಲಸಕ್ಕೆ ಸಂದರ್ಶನ ನೀಡಿದ್ದರೆ ಆ ಕೆಲಸ ಸಿಗುವ ಸಾಧ್ಯತೆ ಇದೆ. ಕುಟುಂಬ ಬದುಕು ಇರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಬುಧ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಇನ್ನು ನಿಮ್ಮ ಬಗ್ಗೆ ಅಸೂಯೆ ಪಡುವವರ ಬಗ್ಗೆ ಜಾಗ್ರತೆವಹಿಸಿ.
ಮೀನ ರಾಶಿ
ಕುಂಭ ರಾಶಿಯಲ್ಲಿ ಬುಧ 2ನೇ ಮನೆಯಲ್ಲಿ ಇರಲಿದೆ. ನಿಮಗೆ ಬರಬೇಕಾಗಿರುವ ಹಣ ಕೈ ಸೇರಲಿದೆ. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯುತ್ತವೆ ಆದರೆ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಕುಟುಂಬದಲ್ಲಿ ಹೊಸ ಅತಿಥಿಯ ಆಗಮನದಿಂದ ಮನೆಯ ವಾತಾವರಣ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
