Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷ ರಾಶಿಯಲ್ಲಿ ಬುಧ-ಸೂರ್ಯ ಸಂಯೋಗ: ಈ 3 ರಾಶಿಯವರ ಅದೃಷ್ಟ ಬದಲು..!
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಗ್ರಹಗಳಿಗೂ ತನ್ನದೇ ರಾಶಿ ಇದೆ. ಹಾಗೆ ಅವು ತನ್ನ ಸ್ಥಾನ ಪಲ್ಲಟಗೊಂಡಾಗ ಮಾನವರ ಜೀವನದ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹೆಚ್ಚಿನ ಸಮಯದಲ್ಲಿ ಧನಾತ್ಮಕ ಬದಲಾವಣೆಗಳು ಹಾಗೆ ಋಣಾತ್ಮಕ ಬದಲಾವಣೆಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಹಾಗೆ ಗ್ರಹಗಳು ತನ್ನ ರಾಶಿಗಳ ಬದಲಾಯಿಸುವಾಗ ಚಲನೆಯಲ್ಲಿದ್ದಾಗ ಮತ್ತೊಂದು ಗ್ರಹದ ಸಂಯೋಗವಾಗುವುದು ಸಹ ಸಾಮಾನ್ಯ ಪ್ರಕ್ರಿಯೆ. ಆದ್ರೆ ಈ ಸಂಯೋಗದಿಂದ ಉಂಟಾಗುವ ಯೋಗ ಅಪರೂಪವಾಗಿರುತ್ತದೆ. ಯಾವ ರಾಶಿಯಲ್ಲಿ ಯಾವ ದಿನದಂದು ಯಾವ ಯಾವ ಗ್ರಹಗಳ ಸಂಯೋಗವಾಗಿದೆ ಎಂಬುದರ ಆಧಾರದಲ್ಲಿ ಯೋಗ ಉಂಟಾಗುತ್ತದೆ.

ನಾವಿಂದು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾದ ಸೂರ್ಯನು ತನ್ನ ಸ್ಥಾನ ಬದಲಾಯಿಸುತ್ತಿದ್ದಾನೆ. ಸೂರ್ಯ ಏಪ್ರಿಲ್ 14ರಂದು ಮೇಷ ರಾಶಿಗೆ ಚಲಿಸಲಿದ್ದಾನೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದಾಗ ವಾತಾವರಣದಲ್ಲಿನ ಬದಲಾವಣೆ ಸಹ ನೋಡಬಹುದು. ಹಾಗೆ ಸೂರ್ಯ ಮೇಷ ರಾಶಿಗೆ ಚಲಿಸಿದಾಗ ಆ ರಾಶಿಯಲ್ಲಿರುವ ಬುಧನೊಂದಿಗೆ ಸಂಯೋಗ ಆಗುವುದು ನೋಡಬಹುದು. ಈ ಸಂಯೋಗವು ಬುಧಾದಿತ್ಯಾ ಯೋಗಕ್ಕೆ ಕಾರಣವಾಗಲಿದೆ. ಇದರಿಂದ ಹಲವು ರಾಶಿಗಳ ಮೇಲೆ ಪ್ರಭಾವ ಬೀರುವುದು ನೋಡಬಹುದು.
ಬುಧ ಹಾಗೂ ಸೂರ್ಯ ಪ್ರಭಾವಶಾಲಿ ಗ್ರಹಗಳಾಗಿದ್ದು, ಈ ಸಂಯೋಗವು ಹಲವು ರೀತಿಯಲ್ಲಿ ಪ್ರಭಾವ ಉಂಟು ಮಾಡಲಿದೆ. ಹಲವರಲ್ಲಿ ಅನೇಕ ರೀತಿಯ ಬದಲಾವಣೆ ನೋಡಬಹುದು. ಹಾಗಾದ್ರೆ ಈ ಬುಧಾದಿತ್ಯ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗುತ್ತಿದೆ. ಯಾರಿಗೆ ಇದು ಶುಭ ತರಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯ 11ನೇ ಮನೆಯಲ್ಲಿ ಸೂರ್ಯ ಮತ್ತು ಬುಧ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ ಮಿಥುನ ರಾಶಿ ಮಂದಿ ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ಕಾಣುತ್ತಾರೆ. ಅವರಿಗೆ ಹಲವು ವಿಧಗಳಿಂದ ಬಹಳಷ್ಟು ಹಣ ಗಳಿಸುವ ಅವಕಾಶ ಸಿಗುತ್ತದೆ. ಸೂರ್ಯನ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಎಲ್ಲಾ ಕೆಲಸದಲ್ಲೂ ನೀವು ಎಚ್ಚರಿಕೆಯ ಹೆಜ್ಜೆ ಇಡುತ್ತೀರಿ. ಇದರಿಂದ ನಿಮ್ಮ ಜೀವನದ ಕಷ್ಟಗಳಿಂದ ನೀವು ಪಾರಾಗುತ್ತೀರಿ. ಕೆಲಸಗಳಲ್ಲಿ ಅಡೆತಡೆಗಳ ನಿವಾರಣೆಯಾಗುವ ಮೂಲಕ ನೀವು ಬಹಬೇಗ ಕೆಲಸಗಳ ಮುಗಿಸುತ್ತೀರಿ. ಈಗಾಗಲೆ ಹೊಸ ವಸ್ತು ಖರೀದಿಯ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ನಿಮಗೆ ಆ ಕುರಿತ ಯಶಸ್ಸು ಸಿಗಬಹುದು. ವ್ಯಾಪಾರಿಗಳು ಕೂಡ ಲಾಭದಾಯಕ ದಿನಗಳ ನೋಡಲಿದ್ದಾರೆ.
ಸಿಂಹ ರಾಶಿ
ಸಿಂಹ ರಾಶಿಯ 9 ನೇ ಮನೆಯಲ್ಲಿ ಈ ಬುಧ ಹಾಗೂ ಸೂರ್ಯನ ಸಂಯೋಗವು ಹತ್ತಾರು ಲಾಭಕ್ಕೆ ಕಾರಣವಾಗಲಿದೆ. ನೀವು ಉದ್ಯೋಗ ಬದಲಿಸುವ ಕಾರ್ಯದಲ್ಲಿದ್ದರೆ ನಿಮಗೆ ಈ ಸಮಯದಲ್ಲಿ ಅತ್ಯಂತ ಶುಭಕರ ಅವಕಾಶ ಸಿಗಲಿದೆ. ನಿಮ್ಮ ಆದಾಯದಲ್ಲಿ ನಿರೀಕ್ಷೆಗೂ ಮೀರಿದ ಲಾಭ ನೋಡಬಹುದು. ಹಾಗೆ ವ್ಯಾಪಾರದಲ್ಲಿ ಹೊಸ ರೀತಿಯ ಪ್ರಗತಿ ನೋಡಬಹುದು. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಹೊಸ ರೀತಿ ಬದಲಾವಣೆಯಿಂದ ಸಂತಸ ತರಲಿದೆ. ಹಾಗೆ ನಿಮ್ಮ ಕೆಲಸಕ್ಕೆ ತಕ್ಕೆ ಪ್ರತಿಫಲ ಸಿಗಲಿದೆ.
ಮೀನ ರಾಶಿ
ಮೀನ ರಾಶಿಯ ಎರಡನೇ ಮನೆಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದ ಕಾಲಕಾಲಕ್ಕೆ ಹಠಾತ್ ಆರ್ಥಿಕ ಲಾಭಗಳ ನೋಡಬಹುದು. ಕೌಟುಂಬಿಕ ವಿಚಾರವಾಗಿ ನಿಮ್ಮಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಹಲವು ದಿನಗಳಿಂದ ನೀವು ಅನುಭವಿಸಿದ್ದ ಸಂಕಷ್ಟ ದೂರಾಗಬಹುದು. ಹಣಕಾಸಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮಲ್ಲಿ ಯಶಸ್ಸು ಸಿಗಲಿದೆ. ನೀವು ಯಾವುದಾದರು ಚರ್ಮ ಸಂಬಂಧಿ ಸಮಸ್ಯೆಗೆ ತುತ್ತಾಗಿದ್ದರೆ ಈ ಸಮಯದಲ್ಲಿ ಬಗೆಹರಿಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications