Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
30 ವರ್ಷದ ಬಳಿಕ ಬುಧ-ಶನಿ ಸಂಯೋಗ: ಮೂರು ರಾಶಿಯವರಲ್ಲಿ ಅನಿರೀಕ್ಷಿತ ಲಾಭಗಳು!!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರ ಮತ್ತು ಸಂಯೋಗವು ಬಹಳ ಮುಖ್ಯವಾಗಿದೆ. ಪ್ರತಿಯೊಂದು ಗ್ರಹಗಳ ಚಲನೆಯು ಆಯಾ ರಾಶಿಗಳಲ್ಲಿ ಶುಭ ಲಾಭಕ್ಕೆ ಕಾರಣವಾಗುತ್ತವೆ. ಅದರಲ್ಲೂ ಹಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗವಾಗುವುದು ಹಾಗೆ ಅಪರೂಪದ ಸಂಯೋಗಗಳು ಕೂಡ ವ್ಯಕ್ತಿಯೊಬ್ಬರ ಜೀವನ ಬದಲಿಸಬಹುದು.
ಇನ್ನು ಬುಧ ಗ್ರಹ ಹಾಗೂ ಶನಿ ಸಂಯೋಗವಾಗುತ್ತಿದೆ. 30 ವರ್ಷಗಳ ಬಳಿಕ ಈ ಸಂಯೋಗ ಉಂಟಾಗುತ್ತಿದೆ. ಫೆಬ್ರವರಿ 25ರಂದು ಈ ಎರಡು ಗ್ರಹಗಳು ಸಂಯೋಗವಾಗಿದ್ದು, ಹಲವು ರಾಶಿಯವರಿಗೆ ಇದು ಶುಭ ಫಲದ ಸಂಕೇತವಾಗುತ್ತಿದೆ. ಹಾಗಾದ್ರೆ ಬುಧ ಹಾಗೂ ಶನಿಯ ಸಂಯೋಗವು ಯಾರಿಗೆ ಶುಭ ತರಲಿದೆ ಅನ್ನೋದನ್ನು ತಿಳಿದುಕೊಳ್ಳಿ.

ಕನ್ಯಾ ರಾಶಿ
30 ವರ್ಷಗಳ ನಂತರ ಕನ್ಯಾ ರಾಶಿಯವರ ಆರನೇ ಮನೆಯಲ್ಲಿ ಬುಧ-ಶನಿ ಸಂಯೋಗವಾಗುತ್ತಿದೆ. ಇದು ಕನ್ಯಾ ರಾಶಿಯವರ ಆರ್ಥಿಕ ಸಮ್ಯಸ್ಯೆಗಳ ದೂರ ಮಾಡಲಿದೆ. ಅದರಲ್ಲೂ ನಿಮ್ಮ ಎಲ್ಲಾ ರೀತಿಯ ತೊಡಕುಗಳಿಗೆ ಪರಿಹಾರ ಸಿಗಲಿದೆ. ವ್ಯಾಪಾರಿಗಳು, ಉದ್ಯಮಿಗಳು, ಬಹಳಷ್ಟು ಲಾಭ ಗಳಸುತ್ತಾರೆ. ಉದ್ಯೋಗ ಬದಲಿಸಲು ಮುಂದಾಗುವವರಿಗೆ ಇದು ಅತ್ಯಂತ ಶುಭಕರವಾದ ಲಾಭಕ್ಕೆ ಕಾರಣವಾಗುತ್ತಿದೆ. ವೃತ್ತಿಯಲ್ಲಿ ಪ್ರಗತಿ, ಹಲವು ಅನಾನುಕೂಲಗಳಿಂದ ಮುಕ್ತಿ ಪಡೆಯಲಿದ್ದೀರಿ. ಹೊಸ ಸಂಬಂಧಗಳಲ್ಲಿ ಗಟ್ಟಿತನ, ದಾಂಪತ್ಯದಲ್ಲಿ ಸಂತಸ ಏರ್ಪಡುವ ಸಾಧ್ಯತೆ ಇದೆ. ಅವಿವಾಹಿತರಲ್ಲಿ ಶುಭ ಸುದ್ದಿಗಳು ಕೇಳಿಬರಲಿದೆ. ನಿಮ್ಮ ಹಲವು ಕೆಲಸ ಕಾರ್ಯಗಳಿಗೆ ಅನಿರೀಕ್ಷಿತ ನೆರವು ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡುತ್ತೀರಿ.
ಮಕರ ರಾಶಿ
ಬುಧ ಹಾಗೂ ಶನಿಯ ಸಂಯೋಗವು ಮಕರ ರಾಶಿಯವರಲ್ಲಿ ಹಲವು ರೀತಿಯ ಲಾಭಕ್ಕೆ ಕಾರಣವಾಗುತ್ತಿದೆ. ಹಣಕಾಸು ವಿಚಾರವಾಗಿ ನಿಮ್ಮ ಎಚ್ಚರಿಕೆಯ ಹೆಜ್ಜೆಗಳು ನಿಮಗೆ ಲಾಭದಾಯಕವಾಗುತ್ತವೆ. ಹಾಗೆ ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಹಲವು ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಕುಟುಂಬದ ಕಡೆಯಿಂದ ನಿಮ್ಮ ಪರವಾದ ಬೆಂಬಲ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮ ಹಾಕುವುದರಿಂದ ಗೌರವ ಹಾಗೆ ಬಡ್ತಿಯಂತಹ ಲಾಭವೂ ನಿಮಗೆ ಒಲಿಯಲಿದೆ. ಅರ್ಧಕ್ಕೆ ನಿಲ್ಲಿಸಿರುವ ಹಲವು ಕೆಲಸಗಳು ಪೂರ್ಣಗೊಳ್ಳಯವ ಸಮಯವಿದು. ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ದೈನಂದಿನ ವ್ಯವಹಾರದಲ್ಲಿ ಉತ್ತಮ ಫಲ ಪಡೆಯಬಹುದು. ಸ್ನೇಹಿತರೊಂದಿಗೆ ಸಾಮರಸ್ಯ ಇರಲಿದೆ. ಆಸ್ತಿ ಸಂಬಂಧಿತ ಕೆಲಸಗಳಲ್ಲಿ ನಿಮ್ಮ ಪರವಾದ ಒಲವಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 3ನೇ ಮನೆಯಲ್ಲಿ ಬುಧ-ಶನಿ ಸಂಯೋಗವಾಗುತ್ತಿದೆ. ಹೀಗಾಗಿ ರಾಶಿಯವರಲ್ಲಿ ಅನುಕೂಲಕರ ಫಲಿತಾಂಶ ಪಡೆಯುತ್ತೀರಿ. ನಿಮ್ಮಲ್ಲಿ ವಾಹನ ಯೋಗ, ಆಸ್ತಿ ಯೋಗದ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಕಚೇರಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಮಾತುಗಳಿಗೆ ಬೆಂಬಲ, ಗೌರವ ಸಿಗಲಿದೆ. ಹಣಕಾಸು ವಿಚಾರದಲ್ಲಿ ನಿಮ್ಮ ಗೆಲುವಾಗಲಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ನಿಮಗೆ ಲಾಭದಾಯಕ ದಿನಗಳು ಬರಲಿವೆ. ಭೂಮಿಗೆ ಸಂಬಂಧಿಸದ ವ್ಯವಹಾರದಲ್ಲಿ ನಿಮ್ಮ ಗೆಲುವು ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











