ಕುಂಭ ರಾಶಿಯಲ್ಲಿ ಬುಧ ಉದಯ: ಫೆ.22ರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ತರಲಿದೆ ಗೊತ್ತಾ?

ಬುಧ ಗ್ರಹವನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಏಕೆಂದರೆ ಬುಧನ ಸ್ಥಾನವು ಯಾವ ರಾಶಿಯಲ್ಲಿರುತ್ತದೆಯೋ ಆ ರಾಶಿಯವರಲ್ಲಿ ಅನೇಕ ಲಾಭ ನೋಡಬಹುದು. ಹಾಗೆ ಬುಧನ ಅತ್ಯಂತ ವೇಗವಾಗಿ ಚಲಿಸುವುದರಿಂದಾಗಿ ಎಲ್ಲಾ ರಾಶಿಯಲ್ಲು ಕೆಲವೇ ದಿನಗಳ ಕಾಲ ಬುಧನ ಚಲನೆ ನೋಡಬಹುದು. ಹಾಗೆ ಎಲ್ಲಾ 12 ಗ್ರಹಗಳ ಮೇಲೆಯೂ ಇದರ ಪ್ರಭಾವ ಬೀರುವುದು ನೋಡಬಹುದು.

ಆದರೆ ಈ ಬುಧನು ಕುಂಭ ರಾಶಿಯಲ್ಲಿ ಉದಯಿಸುತ್ತಿದ್ದಾನೆ. ಬುಧ ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿದ್ದಾನೆ. ಆದರೆ ಕುಂಭ ರಾಶಿಯಲ್ಲಿ ಉದಯಿಸುತ್ತಿರುವುದು ಎಲ್ಲಾ ರಾಶಿಗಳಿಗೂ ಅದೃಷ್ಟ ಖುಲಾಯಿಸಲಿದೆ. ಬುದ್ಧಿಶಕ್ತಿ, ವ್ಯವಹಾರ, ಐಶ್ವರ್ಯದ ವಿಚಾರದಲ್ಲಿ ಬುಧನ ಪರಿಣಾಮ ನೋಡಬಹುದು. ಬುಧನು ಕುಂಭ ರಾಶಿ ಪ್ರವೇಶಿಸುವಾಗ ಅಸ್ತಮನಾದ ಸ್ಥಿತಿಯಲ್ಲಿತ್ತು.

Mercury Rising In Aquarius Will Leads To Good Luck For These Zodiac Sign From Feb

ಬುಧನು ಅಸ್ತಮವಾಗಿರುವ ಸ್ಥಿತಿಯಲ್ಲಿಯೇ ಕುಂಭ ರಾಶಿ ಪ್ರವೇಶಿಸಿದೆ. ಹಾಗೆ ಈಗ ಕುಂಭ ರಾಶಿಯಲ್ಲಿಯೇ ಉದಯವಾಗುತ್ತಿದೆ. ಹೀಗಾಗಿ ಹಲವು ರಾಶಿಯವರಿಗೆ ಇದು ಅನುಕೂಲಕರವಾಗುತ್ತಿದೆ. ಬುಧನು ಇದೇ ಫೆಬ್ರವರಿ 22ರಂದು ಉದಯಿಸಲಿದ್ದಾನೆ. ನಾವಿಂದು ಯಾವೆಲ್ಲಾ ರಾಶಿಯವರಲ್ಲಿ ಬುಧ ಉದಯಿಸುತ್ತಿರುವುದು ಲಾಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯ 11 ನೇ ಮನೆಯಲ್ಲಿ ಬುಧ ಸಂಚರಿಸಲಿದೆ. ಇದು ಈ ರಾಶಿಯ ಜನರಲ್ಲಿ ಅನೇಕ ವೈಯಕ್ತಿಕ ಸಮಸ್ಯೆಗಳ ನಿವಾರಣೆಗೆ ಕಾರಣವಾಗುತ್ತಿದೆ. ಹಲವು ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಪೂರ್ಣ ಆಗಲಿವೆ. ಹಾಗೆ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಾರ್ಗವು ಕೂಡ ಸಿಗಲಿದೆ. ಅನಿರೀಕ್ಷಿತ ಮೂಲದಿಂದ ನಿಮಗೆ ಧನ ಲಾಭದ ನಿರೀಕ್ಷೆ ಇದೆ. ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗಿದ್ದರೆ ಈ ಸಮಯದಲ್ಲಿ ಲಾಭವಾಗುತ್ತದೆ.

ಮಿಥುನ ರಾಶಿ

ಬುಧ ಗ್ರಹವು ಮಿಥುನ ರಾಶಿಯ 9ನೇ ಮನೆಯಲ್ಲಿ ಉದಯಿಸಲಿದೆ. ಹೀಗಾಗಿ ಮಿಥುನ ರಾಶಿಯವರಲ್ಲಿ ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ನೀವು ಅಂದುಕೊಂಡಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ಶ್ರಮಕ್ಕೆ ತಕ್ಕಂತಹ ಪ್ರತಿಫಲ ನೋಡಬಹುದು. ಬಾಳ ಸಂಗಾತಿಯೊಂದಿಗಿನ ಮನಸ್ಥಾಪ ಕಡಿಮೆಯಾಗಲಿದೆ. ಹಾಗೆ ನಿಮ್ಮ ಆಸ್ತಿ ಸಂಬಂಧಿತ ಸಮಸ್ಯೆಗಳು, ಮನೆಯ ಸಮಸ್ಯೆಗಳು ಬಗೆಹರಿಯಲಿವೆ. ಕುಟುಂಬಸ್ಥರಿಂದ ದೊಡ್ಡ ವಿಚಾರದಲ್ಲಿ ನಿಮಗೆ ಬೆಂಬಲ ಸಿಗಲಿದೆ. ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಶುಭ ಸೂಚನೆಗಳ ನೋಡಬಹುದು. ಇದು ನಿಮ್ಮ ಲಾಭವನ್ನು ದ್ವಿಗುಣ ಮಾಡಬಹುದು.

ಕುಂಭ ರಾಶಿ

ಕುಂಭ ರಾಶಿಯ ಮೊದಲ ಮನೆಯಲ್ಲಿ ಬುಧ ಉದಯಿಸುತ್ತಾನೆ. ಹೀಗಾಗಿ ನಿಮ್ಮಲ್ಲಿ ಆರ್ಥಿಕ ಪ್ರಗತಿಗೆ ಕಾರಣರಾಗುತ್ತೀರಿ. ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸಮಯವಾಗುತ್ತಿದೆ. ವೃತ್ತಿಪರರು ಹಾಗೆ ವ್ಯಾಪಾರಸ್ಥರಿಗೂ ಕೂಡ ಇದು ಲಾಭದಾಯಕ ದಿನವಾಗುತ್ತಿದೆ. ನಿಮ್ಮ ಬಹಳ ವರ್ಷದ ಕನಸುಗಳು ನನಸಾಗಿಸಲು ಈ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರು ಈ ಸಮಯದಲ್ಲಿ ಹೆಚ್ಚಿನ ಲಾಭ ನೋಡಬಹುದು. ಸರ್ಕಾರಿ ನೌಕರರಿಗೆ ಒಳ್ಳೆಯ ಕಾಲವಾಗುತ್ತದೆ. ವ್ಯಾಪಾರಸ್ಥರು ಈ ಸಮಯದಲ್ಲಿ ಉಳಿತಾಯ, ಹೂಡಿಕೆಯಂತಹ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಫಲ ನೀಡಲಿದೆ. ರಾಜಕಾರಣದಲ್ಲಿ ಹೆಸರು ಮಾಡಲು ಹೊರಟವರಿಗೆ ಇದು ನಿಮ್ಮ ಸಾಮರ್ಥ್ಯ ತೋರಿಸಲು ಇರುವ ಉತ್ತಮ ಸಮಯವಾಗುತ್ತದೆ. ನಿಮ್ಮ ಗೌರವ ಘನತೆ ಹೆಚ್ಚಾಗುವ ಸಮಯವಾಗಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Rising In Aquarius Will Leads To Good Luck For These Zodiac Sign From Feb

Mercury has entered Aquarius while it is in a waning state. So now it is rising in Aquarius. Therefore, it is becoming favorable for many zodiac signs. Mercury is going to rise on February 22nd.
Story first published: Thursday, February 20, 2025, 14:45 [IST]
X
Desktop Bottom Promotion