Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ ಸ್ಥಿತಿ; ಯಾವ ರಾಶಿಯವರಿಗೆ ಶುಭ? ಯಾರ ಅದೃಷ್ಟ ಬದಲು
ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಬುಧನನ್ನು ಬುದ್ಧಿಶಕ್ತಿ, ವ್ಯವಹಾರ, ವ್ಯಾಪಾರ, ಐಷಾರಾಮಿ ವಸ್ತುಗಳು, ದಾಂಪತ್ಯ ಸಂಬಂಧದಲ್ಲಿ ವಿಶೇಷ ಶುಭ ತರುವ ಅಂಶವೆಂದು ಪರಿಗಣಿಸಲಾಗಿದೆ. ಬುಧ ಒಂದು ತಿಂಗಳಲ್ಲಿ 2 ಕ್ಕೂ ಹೆಚ್ಚು ಬಾರಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ ಮತ್ತು ಎಲ್ಲಾ ರಾಶಿ ಜನರ ಜೀವನದ ಮೇಲೆ ಪರಿಣಾಮ ಬೀರುವುದು ನೋಡಬಹುದು.
ಅದೂ ಸಹ ಕೆಲವೊಮ್ಮೆ ಬುಧ ಅಸ್ತಮಿಸುತ್ತಾನೆ ಮತ್ತು ಉದಯಿಸುತ್ತಾನೆ. ಈ ಸಂದರ್ಭದಲ್ಲಿ ಬುಧ ನವೆಂಬರ್ 12 ರಂದು ವೃಶ್ಚಿಕದಲ್ಲಿ ಸ್ಥಾಯಿಸುತ್ತಾನೆ. ಅದರ ನಂತರ ನವೆಂಬರ್ 27 ರಂದು ಬುಧ ಉದಯಿಸುತ್ತಾನೆ. ಈ ರೀತಿ ಅಸ್ತಮಿಸುತ್ತಿದ್ದಂತೆ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿ ಜನರ ಜೀವನದಲ್ಲಿಯೂ ಪ್ರಭಾವ ಕಂಡುಬರುವುದು ನೋಡಬಹುದು.

ಬುಧನ ಈ ಅಸ್ತಮ ಸ್ಥಿತಿಯಲ್ಲಿ ಹಲವು ರಾಶಿಗಳ ಮೇಲೆ ಪರಿಣಾಮ ಉಂಟಾಗುವುದು ನೋಡಬಹುದು. ಇದು ಹಲವರ ಜೀವನದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗಲಿದೆ. ಹಾಗೆ ಪ್ರಮುಖವಾಗಿ ಶುಭ ಗಳಿಗೆಗಳಿಗೆ ಸಾಕ್ಷಿಯಾಗಲಿದೆ. ಹಾಗಾದ್ರೆ ಬುಧನ ಅಸ್ತಮಿಸುವ ಈ ಸಮಯದಲ್ಲಿ ಯಾರಿಗೆ ಅದೃಷ್ಟದಾಯಕ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಕರ ರಾಶಿ
ಬುಧ ಮಕರ ರಾಶಿಯ 11 ನೇ ಮನೆಯಲ್ಲಿ ಅಸ್ತಮ ಸ್ಥಿತಿಯಲ್ಲಿರುತ್ತಾನೆ. ಹೀಗಾಗಿ ಮಕರ ರಾಶಿಯ ಜನರಲ್ಲಿ ಈ ಸ್ಥಿತಿಯಿಂದ ಶುಭಕರವಾಗಲಿದೆ. ನಿಮ್ಮ ದೀರ್ಘಕಾಲದ ಆಸೆಗಳು ಈಡೇರುವುದು ನೋಡಬಹುದು. ನಿತ್ಯ ಕೆಲಸ ಮಾಡುವ ಮಂದಿಗೆ ಈ ಸಮಯದಲ್ಲಿ ಅಧಿಕ ಲಾಭವಿದೆ. ನಿಮ್ಮ ಹಲವು ಕೆಲಸಗಳನ್ನು ಅಚ್ಚರಿಯ ರೀತಿ ಪರಿಹರಿಸುವಿರಿ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಆಪ್ತರಿಂದ ಬರಬೇಕಿದ್ದ ಹಣವನ್ನು ಪಡೆಯಲು ಇದು ಸೂಕ್ತ ಸಮಯ ಆಗಿರಲಿದೆ. ನೀವು ಹೊಸದಾಗಿ ವ್ಯವಹಾರ ಆರಂಭಿಸುವುದು ಅಥವಾ ವ್ಯಾಪಾರ ಪ್ರಗತಿಗೆ ಮುಂದಾಗುತ್ತಿದ್ದರೆ ಈ ಸಮಯದಲ್ಲಿ ಶುಭವಾಗಲಿದೆ. ನಿಮ್ಮಲ್ಲಿದ್ದ ವ್ಯವಹಾರ ಸಂಬಂಧಿತ ಅಡ್ಡಿಯೊಂದನ್ನು ನಿವಾರಿಸಿಕೊಳ್ಳುವ ನಿಮ್ಮ ಹಲವು ದಿನದ ಬಯಕೆ ಈಡೇರಲಿದೆ.
ಕನ್ಯಾ ರಾಶಿ
ಬುಧನು ಕನ್ಯಾ ರಾಶಿಯ 3ನೇ ಮನೆಯಲ್ಲಿ ನೆಲೆಸುತ್ತಾನೆ. ಇದು ಈ ರಾಶಿ ಜನರಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಪ್ರತಿಯೊಂದು ಕೆಲಸವು ವೇಗವಾಗಿ ಪೂರ್ಣಗೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ದೀರ್ಘಕಾಲದಿಂದ ಎದುರಿಸುತ್ತಿರುವ ಕೆಲಸದ ಹೊರೆ ಕಡಿಮೆಯಾಗುತ್ತದೆ. ನೀವು ಪ್ರತಿಯೊಂದು ಕೆಲಸವನ್ನು ಉತ್ತಮವಾಗಿ ಪೂರ್ಣಗೊಳಿಸುತ್ತೀರಿ. ಉದ್ಯಮಿಗಳು ಉತ್ತಮ ಲಾಭವನ್ನು ತರುವ ಹೊಸ ವಸ್ತು ಅಥವಾ ವಿಚಾರವನ್ನು ಪಡೆಯಲಿದ್ದೀರಿ. ದಾಂಪತ್ಯದಲ್ಲಿದ್ದ ದೊಡ್ಡ ಮನಸ್ತಾಪಗಳು, ಮುನಿಸುಗಳು ನಿವಾರಣೆಯಾಗಲಿದೆ. ನಿಮ್ಮ ಹಲವು ಪ್ರಯಾಣಗಳಲ್ಲಿ ಶುಭವಾಗುತ್ತದೆ. ಸಂಬಂಧಿಕರಲ್ಲಿದ್ದ ಮನಸ್ತಾಪವೊಂದು ನಿವಾರಣೆಯಾಗಲಿದೆ.
ಮೀನ ರಾಶಿ
ಬುಧನು ಮೀನ ರಾಶಿಯ 9ನೇ ಮನೆಯಲ್ಲಿ ನೆಲೆಸುತ್ತಾನೆ. ಇದರಿಂದಾಗಿ ನಿಮ್ಮಲ್ಲಿ ಹಲವರಿಗೆ ಶುಭ ಸುದ್ದಿಗಳು ಬರಲಿವೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಯಶಸ್ಸು ಪಡೆಯಲಿದ್ದಾರೆ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ತಪ್ಪು ತಿಳುವಳಿಕೆ ಮತ್ತು ಸಮಸ್ಯೆಗಳು ಬಗೆಹರಿಯುತ್ತವೆ. ಕೆಲಸದ ಸ್ಥಳದಲ್ಲಿನ ಒತ್ತಡ ನಿವಾರಣೆಯಾಗಲಿದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುವ ಸಮಯವಿದು. ನಿಮ್ಮಲ್ಲಿದ್ದ ದೊಡ್ಡ ಅಡೆತಡೆಯೊಂದು ನಿವಾರಣೆಯಾಗಲಿದೆ. ಆಪ್ತರಿಂದ ಪಡೆದ ಹಣ ಮರಳಿ ನೀಡಬೇಕಾದ ಕಾರಣ ಒತ್ತಡವಿದ್ದರೂ ಅದನ್ನು ನಿಭಾಯಿಸುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications