Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧ ಹಿಮ್ಮುಖ ಚಲನೆ ಮಾಡಿದಾಗ ಈ ಬದಲಾವಣೆ ಕಾಣಬಹುದು, ಈ 3 ರಾಶಿಯವರಿಗೆ ಧನಾತ್ಮಕವಾಗಿದೆ
ಜ್ಯೋತಿಷ್ಯವು ಬುಧ ಗ್ರಹ ನಮ್ಮ ಬುದ್ಧಿ ಶಕ್ತಿ, ಆಲೋಚನೆ ಇವುಗಳ ಮೇಲೆ ಪ್ರಭಾವ ಬೀರುವ ಗ್ರಹವೆಂದು ಪರಿಗಣಿಸಲಾಗಿದೆ. ಬುಧ ನೇರ ಸಂಚಾರದಲ್ಲಿದ್ದಾಗ ಅದು ಶುಭ ಪ್ರಭಾವ ಬೀರಿದರೆ ಅದು ಹಿಮ್ಮುಖ ಚಲನೆ ಮಾಡಿದಾಗ ಅದರ ಪ್ರಭಾವ ಕೆಲವರಿಗೆ ಅಷ್ಟೊಂದು ಅನುಕೂಲಕರವಾಗಿರಲ್ಲ ಎಂದು ಹೇಳಲಾಗಿದೆ, ಇದೀಗ ನವೆಂಬರ್ 26ಕ್ಕೆ ಬುಧನು ವೃಶ್ಚಿಕ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ, ಈ ಸಂಚಾರ ಯಾವೆಲ್ಲಾ ರಾಶಿಗಳಿಗೆ ಅನುಕೂಲಲಕರ ಯಾರಿಗಲ್ಲ ಎಂದು ನೋಡೋಣ ಬನ್ನಿ:

ಫೈನಾನ್ಸ್ ಹಾಗೂ ಬ್ಯುಸ್‌ನೆಸ್ ನಡೆಸುವವರಿಗೆ
ಎಕ್ಸ್‌ಪೋರ್ಟ್ ಕಂಪನಿ ನಡೆಸುತ್ತಿರುವವರೆಗೆ ಹಣ ಬರಲು ವಿಳಂಬವಾಗಬಹುದು
ಬ್ಯುಸ್‌ನೆಸ್ ಮಾಡುತ್ತಿದ್ದಾರೆ ಈ ಅವಧಿಯಲ್ಲಿ ಬ್ಯುಸ್‌ನೆಸ್ ಸ್ವಲ್ಪ ನಿಧಾನವಾಗಬಹುದು.
ಅಲ್ಲದೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಸಂಬಂಧ ಹಾಳಾಗುವ ಸಾಧ್ಯತೆ ಇದೆ, ಹಾಗಾಗಿ ಯಾವುದೇ ಹೂಡಿಕೆಯಾಗಿದ್ದರೂ ನಿಖರ ದಾಖಲೆಗಳ ಮೂಲಕ ವ್ಯವಹಾರ ಮಾಡುವುದು ಒಳ್ಳೆಯದು.
ಕೆಮಿಕಲ್ ಇಂಡಸ್ಟ್ರಿ, ದಿ ಪಬ್ಲಿಕ್ ಸೆಕ್ಟರ್, ಔಷಧ ಈ ಕ್ಷೇತ್ರದಲ್ಲಿರುವವರು ಪ್ರಗತಿಯನ್ನು ಕಾಣಬಹುದು. ಅದೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರಿಗೆ ಬುಧನ ಹಿಮ್ಮುಖ ಚಲನೆ ಅನುಕೂಲಕರವಲ್ಲ ಎಂದು ಹೇಳಲಾಗುವುದು.
ಬುಧನ ಹಿಮ್ಮುಖ ಚಲನೆ ಕೆಲ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗರಲಿದೆ
ಬುಧನ ಹಿಮ್ಮುಖ ಚಲನೆ ಕೆಲ ರಾಶಿಯವರ ಮೇಲೆ ಋಣಾತ್ಮಕ ಪ್ರಭಾವ ಬೀರಿದರೆ, ಇನ್ನು ಕೆಲವು ರಾಶಿಯವರಿಗೆ ತುಂಬಾ ಧನಾತ್ಮಕ ಪರಿಣಾಮ ಬೀರಲಿದೆ.
ಬುಧನ ಹಿಮ್ಮುಖ ಚಲನೆ ಈ ರಾಶಿಗಳಿಗೆ ಅನುಕೂಲಕರವಾಗಿರಲಿದೆ:
ವೃಷಭ ರಾಶಿ
ವೃಷಭ ರಾಶಿಯಲ್ಲಿ ಬುಧನು 7ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ.. ಈ ಸಂಚಾರದ ಸಮಯದಲ್ಲಿ ವೃಷಭ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಟೀಚರ್, ಕೋಚ್, ಥೆರಾಪಿಸ್ಟ್, ಸಲಹೆಗಾರರು, ಜರ್ನಲಿಸ್ಟ್, ಬ್ಲಾಗರ್, ಲಾಯರ್ ಈ ರೀತಿಯ ಕ್ಷೇತ್ರದಲ್ಲಿ ಇರುವವರು ಮತ್ತಷ್ಟು ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಬುಧ 4ನೇ ಮನೆಯಲ್ಲಿಹಿಮ್ಮುಖ ಚಲನೆ ಮಾಡುತ್ತಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ, ಈ ಅವಧಿಯಲ್ಲಿ ಹಣಕಾಸು ಚೆನ್ನಾಗಿರಲಿದೆ, ನೀವು ಮನೆ ಅಥವಾ ಆಸ್ತಿ ಖರೀದಿಗೆ ಪ್ರಯತ್ನ ಮಾಡಿದರೆ ಈ ಅವಧಿಯಲ್ಲಿ ನಿಮ್ಮಾಸೆ ಈಡೇರಲಿದೆ. ತಾಯಿ ಕಡೆಯಿಂದ ಲಾಭ ಗಳಿಸುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ 1ನೇ ಮನೆಯಲ್ಲಿ ಬುಧ ಹಿಮ್ಮುಖ ಚಲನೆ ಮಾಡುತ್ತದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ,ನಿಮ್ಮ ಖ್ಯಾತಿ ಹೆಚ್ಚಾಗಲಿದೆ, ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿಯೂ ಹೊಸ ಅವಕಾಶ ದೊರೆಯಲಿದೆ. ನೀವು ಏನಾದರು ಸಮಸ್ಯೆ ಎದುರಿಸುತ್ತಿದ್ದರೆ ಅದು ಬಗೆಹರಿಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications